ವಿಷಯಕ್ಕೆ ಹೋಗು

ಡಿ.ಎಚ್.ಎಲ್ ಎಕ್ಸ್ಪ್ರೆಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಿ.ಎಚ್.ಎಲ್

ಡಿ.ಎಚ್.ಎಲ್ ಎಕ್ಸ್ಪ್ರೆಸ್ ಜರ್ಮನ್ನ ಜಾರಿ ಸಂಸ್ಥೆಯ ಡಾಯ್ಚ ಅಂಚೆ.ಡಿ.ಎಚ್.ಎಲ್ಅಂತರಾಷ್ಟ್ರೀಯ ಎಕ್ಸ್ಪ್ರೆಸ್ ಅಂಚೆ ಸೇವೆಗಳು ಒದಗಿಸುವ ವಿಭಾಗವಾಗಿದೆ.ಡಾಯ್ಚ ಅಂಚೆ ಡಿ.ಎಚ್.ಎಲ್ ವಿಶ್ವದಾದ್ಯಂತ ಮತ್ತು ವಿಶ್ವದ ಅತಿದೊಡ್ಡ ಸಂಸ್ಥೆ ವಿಶೇಷವಾಗಿ ಸಮುದ್ರ ಮತ್ತು ಗಾಳಿ ಅಂಚೆಗಳಿಂದ ಜಾರಿಗೆ ಬಂದಿತ್ತು.ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಹೊನೊಲುಲು ನಡುವೆ ದಾಖಲೆಗಳನ್ನು ತಲುಪಿಸಲು ೧೯೬೯ರಲ್ಲಿ ಮೂಲತಃ ಸಂಸ್ಥಾಪಿಸಲ್ಪಟ್ಟ ಈ ಸಂಸ್ಥೆಯು ೧೯೭೦ರಲ್ಲಿ ವಿಶ್ವದಾದ್ಯಂತ ತನ್ನ ಸೇವೆಯನ್ನು ವಿಸ್ತರಿಸಿದೆ.ಡಿ.ಎಚ್.ಎಲ್ ಸಂಸ್ಥೆಯು ಕಡಲಾಚೆಯು ಹಾಗೂ ಭೂಖಂಡದ ನಡುವೆ ವಿತರಣಾ ಸೇವೆಗಳನ್ನು ಪ್ರಧಾನವಾಗಿಸಿದೆ.ಆದರೆ ೧೯೮೩ರಲ್ಲಿ ಫೆಡೆಕ್ಸ್ನ್ ಯಶಸ್ಸನ್ನು ಕುರಿತು ಅದು ಅಮೇರಿಕಾದ ಆಂತರಿಕ ವಿಸ್ತರಣೆಯನ್ನು ಆರಂಭಿಸಿತು.ಡಿ.ಎಚ್.ಎಲ್ ಸಂಸ್ಥೆಯು ನಾನಾ ದೇಶಗಳಲ್ಲಿ ತನ್ನ ವಿತರಣಾ ಸೇವೆಯ ಸಂಸ್ಥೆಯನ್ನು ಪ್ರಾರಂಭಿಸಿತು ಅವುಗಳೆಂದರೆ ಕ್ಯೂಬಾ,ಸೋವಿಯತ್,ಈಸ್ಟರ್ನ್ ಬ್ಲಾಕ್,ಇರಾಕ್,ಇರಾನ್,ಚೀನಾ,ವಿಯೆಟ್ನಾಂ ಮತ್ತು ಉತ್ತರಕೊರಿಯಾ.೧೯೮೮ರಲ್ಲಿ ಡಾಯ್ಚ್ ಅಂಚೆಯ ಸಂಸ್ಥೆಯು ಡಿ.ಎಚ್.ಎಲ್ನ್ ಷೇರು ಬಂಡವಾಳವನ್ನು ಸ್ವಾಧೀನಪಡಿಸಿಕೊಳ್ಳಲು ಆರಂಭಿಸಿತು.೨೦೦೧ರಲ್ಲಿ ಡಾಯ್ಚ್ ಅಂಚೆ ಅಂತಿಮವಾಗಿ ಬಹುತೇಕ ಮಾಲೀಕತ್ವವನ್ನು ತಲುಪಿತು,ಹಾಗು ೨೦೦೨ರಲ್ಲಿ ಖರೀದಿ ಮಾಡಿದ ನಂತರ ಪರಿಣಾಮಕಾರಿಯಾಗಿ ಡಿ.ಎಚ್.ಎಲ್ ಮುದ್ರೆಯ ಬಳಕೆಯನ್ನು ಇತರೆ ಡಾಯ್ಚ್ ಅಂಚೆ ವಿಭಾಗಗಳು,ವ್ಯಾಪಾರಘಟಕಗಳು ಮತ್ತು ಆಧೀನ ಹೆಚ್ಚಿಸುವುದರಲ್ಲಿ,ಅದರ ಎಕ್ಸ್ಪ್ರೆಸ್ ವಿಭಾಗವನ್ನು ಸೇರಿಕೊಳ್ಳುತ್ತದೆ.ಈಗ ಡಿ.ಎಚ್.ಎಲ್ ಎಕ್ಸ್ಪ್ರೆಸ್ ತನ್ನ ಡಿ.ಎಚ್.ಎಲ್ ಮುದ್ರೆಯನ್ನು ಇತರೆ ಡಾಯ್ಚ್ ಅಂಚೆಯ ವ್ಯಾಪಾರಘಟಕಗಳಿಗೆ ಪಾಲು ಮಾಡಿಕೊಂಡು,ಅದನ್ನು ಡಿ.ಎಚ್.ಎಲ್ ಗ್ಲೋಬಲ್ ಸಾಗಣಿ ಹಾಗೂ ಡಿ.ಎಚ್.ಎಲ್ ಸರಬರಾಜು ಸರಣಿ ಎಂದು ಕರೆಯಲಾಗುತ್ತಿದೆ.

ಇತಿಹಾಸ

[ಬದಲಾಯಿಸಿ]

ಲ್ಯಾರಿಹಿಲ್ ಬ್ಲೂಮ್ ಅವರು ತಮ್ಮ ಕಾನೂನು ಅಧ್ಯಯನದ ಶಿಕ್ಷನವನ್ನು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಮಾಡುತ್ತಿದ್ದಾಗ,೧೯೬೦ರಲ್ಲಿ ಬರ್ಕ್ಲಿ ಬೋಲ್ಟ್ ಹಾಲ್ ಸ್ಕೂಲ್ ಆಫ್ ಲಾ,ಅವರಿಗೆ ಒಂದು ಕೆಲಸ ವಿಮಾ ಸಂಸ್ಥೆ,ಮೈಕೆಲ್ ಪೋ ಮತ್ತು ಅಸೋಸಿಯೇಟ್ಸ್(ಎಂಪಿಎ)ರವರಿಂದ ಒಂದು ಅಂಚೆ ಸ್ವೀಕರಿಸಲಾಯಿತು.ಅವರು ಓಕ್ಲ್ಯಾಂಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಲಾಸ್ ಏಂಜಲ್ಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಡುವೆ ಅಂಚೆ ಕರ್ತವ್ಯ ನಡೆಯುವ ಪ್ರಾವಾಸ ದಿನದ ಕೊನೆಯ ವಿಮಾನ,ಹಾಗೂ ಮುಂಜಾನೆಯ ಬೆಳ್ಳಿಗೆ ಮೊದಲ ವಿಮಾನ ಪುನಃ ಪ್ರವಾಸ ಆರಂಭಿಸಿದರು.ಹೀಗೆ ಅವರು ವಾರಕ್ಕೆ ಐದು ಬಾರಿ ತಮ್ಮ ಕರ್ತವ್ಯವನ್ನು ಮುಂದುವರಿಸಬೇಕಾಯಿತು.ಅವರು ಪದವಿ ಪಡೆದ ನಂತರ, ಹಿಲ್ ಬ್ಲೂಮ್, ಎಂ.ಪಿ.ಎ ಸಂಸ್ಥೆಯ ಸೇಲ್ಸ್ಮ್ಯಾನ್ ಆಡ್ರಿಯನ್ ಡಾಲ್ಸಿ ಇವರಿಬ್ಬರು ಭೇಟಿಯಾದರು ಮತ್ತು ಅವರು ಇತರೆ ವ್ಯಾಪಾರ ಉದ್ಯಮಗಳಿಗೆ ವೇಗದ ವಿತರಣಾ ಯೋಜನೆಯನ್ನು ವಿಸ್ತರಿಸಲು ಎಂ.ಪಿ.ಎ ಕಲ್ಪನೆಯನ್ನು ಕೈಗೊಂಡರು.ಅವರು ಹೊನಲುಲು ಮತ್ತು ಲಾಸ್ ಎಂಜಲ್ಸ್ಗೆ ಹೋಗುವ ನಡುವೆ ಸಾಗಿಸುವ ವಿಧೇಯಕಗಳಿಗೆ ತಮ್ಮ ಮೊದಲ ಗ್ರಾಹಕರಾದ ಸೀಟ್ರೈನ್ ಲೈನ್ಸ್ ಜೊತೆ ಕೈಜೋಡಿಸಿದರು.

ಆರಂಭದ ಸಮಯಗಳು

[ಬದಲಾಯಿಸಿ]

ಹಿಲ್-ಬ್ಲಮ್ ಕಂಪನಿಯನ್ನು ಪ್ರಾರಂಭಿಸುವ ಮೊದಲಿಗೆ ಅವರು ತಮ್ಮ ವಿಧ್ಯಾರ್ಥಿಗಳೊಂದಿಗೆ ಸಾಲವನ್ನು ಪಡೆದುಕೊಂಡರು ಹಾಗು ತಮ್ಮ ಸ್ನೇಹಿತರಾದ ಆಡ್ರಿಯನ್ ಡ್ಯಾಲ್ಸಿ ಮತ್ತು ರಾಬರ್ಟ್-ಲಿನ್ ಅವರನ್ನು ಪಾಲುದಾರರಾಗಿ ತೆಗೆದುಕೊಂಡರು ಹಾಗು ಅವರ ಸಂಯೊಜಿತ ಮೊದಲಕ್ಷರಗಳನ್ನು ಇಟ್ಟು (ಡಿ.ಎಚ್.ಎಲ್)ಎಂದು ತಮ್ಮ ಸಂಸ್ಥೆಯನ್ನು ಆರಂಭಿಸಿದರು.ಅವರುಪೆಟ್ಟಿಗೆಗಳ ದಾಖಲೆಗಳನ್ನು ತೆಗೆದುಕಳ್ಳಲು ಸ್ಯಾನ್ ಫ್ರಾನ್ಸಿಸ್ಕೊ ಸುತ್ತ ಪ್ರಚೋದಿಸಿದ ಒಂದು ಪ್ಲೈಮೌತ್ ಡಸ್ಟರ್ ಸೆಡಾನ್ ಹಂಚಿಕೊಂಡರು.ನಂತರ ಅವರು ವಿಮಾನನಿಲ್ದಾಣಕ್ಕೆ ದಾವಿಸಿ ವಿಮಾನ ಪ್ರಯಣದ ರಸೀದಿ ಪಡೆಯಲು ಮತ್ತೊಂದು ಆವಿಷ್ಕಾರದ ಉಪಯೋಗದಿಂದ ಪಡೆದರು,ಅದು ಕಾರ್ಪೊರೇಟ್ ಕ್ರೆಡಿಟ್ ಕಾರ್ಡ್ನ್ ಸಹಾಯದಿಂದ.ಅವರ ವ್ಯಾಪಾರದ ಘಟಕ ಬೆಳೆದಂತೆ ಅವರು ಹೊಸ ಅಂಚೆಗಳನ್ನು ಅವರ ಸಂಸ್ಥೆಗೆ ನೇಮಕ ಮಾಡಿಕೊಂಡರು.ಅವರ ಸಂಸ್ಥೆಗೆ ಮೊದಲು ಸೇರ್ಪಡೆಯಾದವರು ಮ್ಯಾಕ್ಸ್ ಮತ್ತು ಬ್ಲಾಂಚೆ ಕ್ರಾಲ್, ಇವರು ಸೇರ್ಪಡೆಯಾದ ಸಂದರ್ಭದಲ್ಲಿ, ಇವರು ಹವಾಯಿ ಎಂಬ ಊರಿನ ಅಪಾರ್ಟ್ಮೆಂಟ್ನ್ಲ್ಲಿನೆಲೆಸಿದರು,ಆ ಅಪಾರ್ಟ್ಮೆಂಟ ನಂತರ ತಾತ್ಕಾಲಿಕ ಅಂಚೆ ಫ್ಲಪ್ ಹೌಸ್ ಆಯಿತು.

ದೇಶಿಯ ವಿಸ್ತರಣೆ

[ಬದಲಾಯಿಸಿ]

೧೯೭೦ರ ದಶಕದಲ್ಲಿ ಡಿ.ಎಚ್.ಎಲ್ ಒಂದು ಅಂತರಾಷ್ಟ್ರೀಯ ವಿತರಣಾ ಸಂಸ್ಥೆ.[೧]ಇದರ ಒಂದು ಅರ್ಪಣೆ ಎಂದರೆ ಅಂಚೆಯನ್ನು ಅಧಿಕ ಕತ್ತಲಾದಮೆಲು ವಿತರಣಾ ಸೇವೆ ಮಾಡುವುದು.ಫೆಡ್ ಎಕ್ಸ್ ಎಂಬ ಸಂಸ್ಥೆ ಈ ಸೇವೆಯನ್ನು ಒದಗಿಸವ ಹಾಗೂ ಡಿ.ಎಚ್.ಎಲ್ಗೆ ಪ್ರತಿಸ್ಪರ್ಧಿಯಾಗಿದೆ.ಫೆಡ್ ಎಕ್ಸ್ ತನ್ನ ಮೊದಲನೆ ಅಂತರಾಷ್ಟ್ರೀಯ ಸೇವೆಯನ್ನು ೧೯೮೧ರ ತನಕ ತೆರೆಯಲಿಲ್ಲ ಅದು ಟೂರಂಟೊ,ಮತ್ತು ಕೆನಡಾಗೆ ವಿಸ್ತರಿಸಿದೆ.ಆದರು ಡಿ.ಎಚ್.ಎಲ್ ಮೂರನೆ ಸ್ಧಾನ ಪಡೆದು ದೇಶಿಯ ಮಾರುಕಟ್ಟೆಯಲ್ಲಿ ಅತ್ಯಂತ ಲಾಭವನ್ನು ಪಡೆಯುತ್ತಿದೆ.ಆದರೆ ಒಂದನೇ ಹಾಗೂ ಎರಡನೇ ಸ್ಧಾನವನ್ನು ಫೆಡ್ ಎಕ್ಸ್ ಮತ್ತು ಯುಪಿಎಸ್ ಎಂಬ ಎರಡು ದೊಡ್ದ ಸಂಸ್ಥೆಗಳಿಗೆ ಲಭಿಸಿದೆ.

ಸೇವೆಗಳು

[ಬದಲಾಯಿಸಿ]

ಡಿ.ಎಚ್.ಎಲ್ ಎಕ್ಸ್ಪ್ರೆಸ್ನ್ ಜಾಗತಿಕ ಕೇಂದ್ರಕಾರ್ಯಲಯವು ಬಾನ್ನ್ ಅಂಚೆ ಕೇಂದ್ರಕಾರ್ಯಲಯದ ಪ್ರಧಾನ ಭಾಗವಾಗಿದೆ.[೨]ಅಮೇರಿಕಾದ ಕೇಂದ್ರಕಾರ್ಯಲಯವು ಪ್ಲಾಂಟೇಶನ್,ಫ್ಲೋರಿಡಾ,ಯು.ಎಸ್.ಎ,ಹಾಗೂ ಏಷ್ಯಾದ ಮಾರುಕಟ್ಟೆಯಲ್ಲಿ ಸಿಂಗಾಪುರ್, ಮಲೇಷ್ಯಾ, ಹಾಂಗ್ ಕಾಂಗ್ ಮತ್ತು ಚೀನಾ ಹಾಗೂ ಯೂರೋಪ್ನ್ ಹಬ್ನಲ್ಲಿ ಲೈಪ್ಜಿಗ್,ಜರ್ಮನಿ ಈ ಎಲ್ಲಾ ದೇಶಗಳಲ್ಲಿ ಡಿ.ಎಚ್.ಎಲ್ ವಿಸ್ತರಿಸಿದೆ ಆದರೆ ಡಿ.ಎಚ್.ಎಲ್ ಎಕ್ಸ್ಪ್ರೆಸ್ನ್ ಸಂಸ್ಥೆಯ ಎಲ್ಲಾ ವ್ಯವಹಾಅರಗಳು ಡಿ.ಎಚ್.ಎಲ್ ಅಂತರಾಷ್ಟ್ರೀಯ ಜಿ.ಎಂ.ಬಿ.ಎಚ್ನಲ್ಲಿ ಸ್ಥಾಪನೆಯಾಗಿದೆ.ಇದರ ಪ್ರಮುಖ ಸ್ಪರ್ಧಿಗಳೆಂದರೆ ಫೆಡ್ಎಕ್ಸ್,ಯು.ಪಿ.ಎಸ್,ಟಾಲ್,ಟಿ.ಎನ್.ಟಿ,ಮತ್ತು ರಾಷ್ಟ್ರೀಯ ಅಂಚೆ ಸೇವೆ ಅದು ಯುನೈಟೆಡ್ ಸ್ಟೇಟ್ಸ್ ಅಂಚೆ ಸೇವೆ ಮತ್ತು ರಾಯಲ್ ಅಂಚೆ.ಆದರೆ ಡಿ.ಎಚ್.ಎಲ್ ಯು.ಎಸ್.ಪಿ.ಎಸ್ನ್ ಜೊತೆ ಒಂದು ಕಿರುಪಾಲುದಾರಿಕೆಯನ್ನು ಅಂಚಿಕೊಂಡಿದೆ ಯು.ಎಸ್.ಪಿ.ಎಸ್ ಡಿ.ಎಚ್.ಎಲ್ಗೆ ತನ್ನ ಸಣ್ಣ ಅಂಚೆಗಳನ್ನು ಗ್ರಾಹಕರಿಗೆ ತಲುಪಿಸಲು ಅನುಮತಿಸುತ್ತಿದೆ,ಯು.ಎಸ್.ಪಿ.ಎಸ್ನ್ ದಾರಿಯನ್ನು ಡಿ.ಎಚ್.ಎಲ್ ಜಾಗತಿಕ ಅಂಚೆಯೆಂದು ತಿಳಿಯಲ್ಪಟ್ಟಿದ್ದು ಅದೀಗ ಡಿ.ಎಚ್.ಎಲ್ ಈ-ಕಾಮರ್ಸ್ ಎಂದು ಕರೆಯಲಾಗುತ್ತಿದೆ ಹಗೂ ಯು.ಎಸ್.ಪಿ.ಎಸ್ನ್ ಗ್ರಾಹಕರಾದ ಇರಾಕ್ ಹಾಗು ಅಫ್ಘಾನಿಸ್ಥಾನ ಎಂಬ ಎರಡು ರಾಜ್ಯಗಳ ಒಳಗೆ ಹಾಗೂ ಹೊರಗೆ ಅಂಚೆಯನ್ನು ವರ್ಗಾವಣೆಯ ಸೇವೆಯನ್ನು ಡಿ.ಎಚ್.ಎಲ್ ಒದಗಿಸತ್ತಿದೆ.ಡಿ.ಎಚ್.ಎಲ್ ವಿಶ್ವದಾದ್ಯಂತ ತನ್ನ ಸೇವೆಗಳನ್ನು ಒದಗಿಸತ್ತಿದೆ,ಸೇರಿದಂತೆ ಇರಾಕ್,ಅಫ್ಘಾನಿಸ್ಥಾನ ಮತ್ತು ಬುರ್ಮ ಮುಂತಾದ ರಾಜ್ಯಗಳಿಗೆ ತನ್ನ ಸೇವೆಯನ್ನು ಒದಗಿಸುತ್ತಿದೆ.

ಉಲ್ಲೇಖನ

[ಬದಲಾಯಿಸಿ]