ಡಿಸೀಸ್ ಎಕ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಿಸೀಸ್ ಎಕ್ಸ್ ತೀವ್ರ ಉಸಿರಾಟದ ತೊಂದರೆಯ ಕೊರೊನಾವೈರಸ್-೨ ರ ಸ್ಕ್ಯಾನಿಂಗ್ ಚಿತ್ರ, ಇದು ೨೦೨೦ ರಲ್ಲಿ ಡಿಸೀಸ್ ಎಕ್ಸ್ ಅನ್ನು ಸೃಷ್ಟಿಸಿದ ಮೊದಲ ವೈರಸ್ ಎಂದು ಊಹಿಸಲಾಗಿದೆ.[೧][೨][೩]

ಡಿಸೀಸ್ ಎಕ್ಸ್ ಎನ್ನುವುದು ಭವಿಷ್ಯದ ಸಾಂಕ್ರಾಮಿಕಕ್ಕೆ ಕಾರಣವಾಗುವ ಒಂದು ಕಾಲ್ಪನಿಕ, ಅಪರಿಚಿತ ಸೋಂಕು. ಇದನ್ನು ಫೆಬ್ರವರಿ ೨೦೧೮ ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‍ಒ)ಯು ಕಾಯಿಲೆಗಳ ನೀಲನಕ್ಷೆಯ ಆದ್ಯತೆಯ ಕಿರುಪಟ್ಟಿಯಲ್ಲಿ ಸೇರಿಸಿ ಅಂಗೀಕರಿಸಿದೆ.[೪][೫] ಅಮೇರಿಕಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಲರ್ಜಿ ಮತ್ತು ಸೋಂಕಿತ ರೋಗಗಳ ನಿರ್ದೇಶಕ ಆಂಥೋನಿ ಫೌಸಿಯವರು ಡಿಸೀಸ್ ಎಕ್ಸ್ ಎಂಬ ಪರಿಕಲ್ಪನೆಯನ್ನು ಪ್ರೋತ್ಸಾಹಿಸಿದರು. ೨೦೨೦ ರಲ್ಲಿ, ಡಬ್ಲ್ಯೂಎಚ್‍ಒವು ಕೆಲವು ತಜ್ಞ ಸಲಹೆಗಾರರನ್ನು ಒಳಗೊಂಡಂತೆ, ತೀವ್ರ ಉಸಿರಾಟದ ತೊಂದರೆಯ ಕೊರೊನಾವೈರಸ್-೨ ಸ್ಟ್ರೈನ್‌ನಿಂದ ಕೋವಿಡ್-೧೯ ಉಂಟಾಗಿದೆ ಎಂದು ಊಹಿಸಿದ್ದಾರೆ.[೧][೨][೩]

ತಾರ್ಕಿಕ ವಿವರಣೆ[ಬದಲಾಯಿಸಿ]

ಜೆರೆಮಿ ಫರಾರ್, ಡಬ್ಲ್ಯುಎಚ್ಒ ಆರ್ & ಡಿ ನೀಲನಕ್ಷೆ ವೈಜ್ಞಾನಿಕ ಸಲಹಾ ಗುಂಪಿನ ಅಧ್ಯಕ್ಷರು[೬]

ಮೇ ೨೦೧೫ ರಲ್ಲಿ, ವೈರಸ್‍ಗಳನ್ನು ಗುರುತಿಸಲು, ಲಸಿಕೆಗಳ / ಚಿಕಿತ್ಸೆಗಳ ಅನುಮೋದನೆಯ ನಡುವಿನ ಸಮಯವನ್ನು ಕಡಿಮೆ ಮಾಡುವಂತಹ ವಿಚಾರಗಳನ್ನು ಸೃಷ್ಟಿಸಲು, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯಾಗಿ ಪರಿವರ್ತನೆ ಮಾಡಲು ಆರ್ & ಡಿ ನೀಲನಕ್ಷೆನ್ನು ರಚಿಸುವಂತೆ ವಿಶ್ವ ಆರೋಗ್ಯ ಸಂಘಟನೆಯನ್ನು ಸದಸ್ಯ ಸಂಸ್ಥೆಗಳು ಕೇಳಿಕೊಂಡವು.[೪][೭] ಕೆಲವು ತಡೆಗಟ್ಟಲಾಗುವ ಸಾಂಕ್ರಾಮಿಕ ರೋಗಗಳ (ಎಮರ್ಜಿಂಗ್ ಇನ್‌ಫೆಕ್ಟಸ್ ಡಿಸೀಸ್-ಇಐಡಿ ಗಳ) ಮೇಲೆ ಗಮನ ಹರಿಸಲಾಗಿದೆ.[೭][೮] ಹತ್ತು ನೀಲನಕ್ಷೆ ಆದ್ಯತೆಯ ಕಾಯಿಲೆಗಳ ಪಟ್ಟಿಯನ್ನು ರಚಿಸಲು ವಿಶ್ವ ಆರೋಗ್ಯ ಸಂಘಟನೆಯ ಜಾಗತಿಕ ತಜ್ಞರ ಗುಂಪು, ಆರ್ & ಡಿ ನೀಲನಕ್ಷೆ ಸೈಂಟಿಫಿಕ್ ಅಡ್ವೈಸರಿ ಗ್ರೂಪ್‍ನ್ನು ಒಟ್ಟುಗೂಡಿಸಿತು.[೯][೪][೫][೭]

೨೦೧೫ ರಿಂದ, ಇಐಡಿ ಗಳ ಕಿರುಪಟ್ಟಿಯನ್ನು ವಾರ್ಷಿಕವಾಗಿ ಪರಿಶೀಲಿಸಲಾಗಿದೆ ಮತ್ತು ಮೂಲತಃ ಐತಿಹಾಸಿಕವಾಗಿ ಸಾಂಕ್ರಾಮಿಕ ರೋಗಗಳಿಗೆ ಕಾರಣವಾದ ಎಬೋಲಾ ಮತ್ತು ಝಿಕಾ, ಭೌಗೋಳಿಕವಾಗಿ ತಿಳಿದಿರುವ ಹೆಸರುಗಳಾದ ಸಾರ್ಸ್ ಲಾಸ್ಸಾ ಜ್ವರ, ಮಾರ್ಬರ್ಗ್ ವೈರಸ್, ರಿಫ್ಟ್ ವ್ಯಾಲಿ ಜ್ವರ, ಮತ್ತು ನಿಪಾ ವೈರಸ್ ಇಂತಹ ಮುಂತಾದ ವ್ಯಾಪಕವಾಗಿ ತಿಳಿದಿರುವ ರೋಗಗಳನ್ನು ಒಳಗೊಂಡಿದೆ.[೫][೮] ಅಂದಿನಿಂದ, ಕೋವಿಡ್-೧೯ ಅನ್ನು ಈ ಪಟ್ಟಿಗೆ ಸೇರಿಸಲಾಗಿದೆ.[೧೦]

ಫೆಬ್ರವರಿ ೨೦೧೮ ರಲ್ಲಿ, ಜಿನೀವಾದಲ್ಲಿ ನಡೆದ ೨೦೧೮ ರ ಆರ್ & ಡಿ ಸಭೆಯ ನಂತರ, ಡಬ್ಲ್ಯುಎಚ್‌ಒ ತಿಳಿದಿರುವ ಅಜ್ಞಾತ ರೋಗದ ಸೋಂಕುಗಳಿಗೆ ಪ್ಲೇಸ್‌ಹೋಲ್ಡರ್ ಆಗಿ ಡಿಸೀಸ್ ಎಕ್ಸ್ ಅನ್ನು ಕಿರುಪಟ್ಟಿಗೆ ಸೇರಿಸಿದೆ. [೪][೧೧][೧೨] ಅಜ್ಞಾತ ರೋಗ ಸೋಂಕಿನಿಂದ ಉಂಟಾಗಬಹುದಾದ ಭವಿಷ್ಯದ ಸಾಂಕ್ರಾಮಿಕ ರೋಗದ ಸಾಧ್ಯತೆಯನ್ನು ಡಿಸೀಸ್ ಎಕ್ಸ್ ಪ್ಲೇಸ್‌ಹೋಲ್ಡರ್ ನಿಂದ ತಿಳಿಯಬಹುದು ಮತ್ತು ಡಬ್ಲ್ಯುಎಚ್‌ಒನ ಯೋಜನೆ ಮತ್ತು ಸಾಮರ್ಥ್ಯಗಳು ಅಂತಹ ಘಟನೆಗೆ ಹೊಂದಿಕೊಳ್ಳುತ್ತದೆ ಎಂದು ಖಚಿತಪಡಿಸಿತು. [೫][೧೩][೧೪]

೨೦೧೮ ರ ಪ್ರಕಟಣೆಯಲ್ಲಿ, ಡಬ್ಲ್ಯುಎಚ್‌ಒ ನೀಲನಕ್ಷೆ ಆದ್ಯತೆಯ ಕಾಯಿಲೆಗಳ ನವೀಕರಿಸಿದ ಕಿರುಪಟ್ಟಿಯ ಬಗ್ಗೆ ಹೀಗೆ ಹೇಳಿದೆ: "ಮನುಷ್ಯನಿಗೆ ತಿಳಿದಿಲ್ಲದ ರೋಗಕಾರಕದಿಂದ ಗಂಭೀರವಾದ ಸಾಂಕ್ರಾಮಿಕ ರೋಗವು ಉಂಟಾಗಬಹುದು ಎಂಬ ಜ್ಞಾನವನ್ನು ಡಿಸೀಸ್ ಎಕ್ಸ್ ಪ್ರತಿನಿಧಿಸುತ್ತದೆ".[೫][೧೧][೧೫] ಜಾನ್-ಅರ್ನೆ ರೊಟ್ಟಿಂಗನ್ ಹೀಗೆ ಹೇಳಿದರು : "ಮೊದಲು ನಾವು ನೋಡಿರದ ಒಂದು ದೊಡ್ಡ ಸಂಗತಿಯೊಂದನ್ನು ಏಕಾಏಕಿ ನಾವು ನೋಡುವ ಸಾಧ್ಯತೆಯಿದೆಯೆಂದು ಇತಿಹಾಸವು ಹೇಳುತ್ತದೆ ಮತ್ತು ರೋಗನಿರ್ಣಯ ಪರೀಕ್ಷೆಗಳ ವಿಷಯದಲ್ಲಿ ನಾವು ಸುಲಭವಾಗಿ ಲಸಿಕೆಗಳನ್ನು ತಯಾರಿಸುತ್ತೇವೆ ಮತ್ತು ಯೋಜಿಸುತ್ತೇವೆ ಆದರೆ ಅದನ್ನು ಖಚಿತಪಡಿಸಿಕೊಂಡು ಎಕ್ಸ್‌ನ್ನು ಸೇರಿಸುವುದು ಕಷ್ಟವೆನಿಸಬಹುದು".[೧೧][೮] ಯುಎಸ್ ತಜ್ಞ ಆಂಥೋನಿ ಫೌಸಿ ಹೀಗೆ ಹೇಳಿದರು: ಡಬ್ಲ್ಯುಎಚ್‌ಒ ವೇಗದಿಂದ ಪ್ಲಾಟ್‌ಫಾರ್ಮ್ ತಂತ್ರಜ್ಞಾನಗಳನ್ನು ರಚಿಸಬೇಕು ಮತ್ತು ಅಂತಹ ಪ್ಲ್ಯಾಟ್‌ಫಾರ್ಮ್‌ಗಳನ್ನು ಅಭಿವೃದ್ಧಿಪಡಿಸಲು ಡಬ್ಲ್ಯುಎಚ್‌ಒ ಫ್ಲೇವಿವೈರಸ್‌ಗಳನ್ನು ಸೇರಿದಂತೆ ಸಂಪೂರ್ಣ ವರ್ಗದ ವೈರಸ್‌ಗಳನ್ನು ಸಂಶೋಧಿಸಬೇಕು ಮತ್ತು ನೀವು ಅವುಗಳ ಸಾಮಾನ್ಯತೆಗಳ ಬಗ್ಗೆ ತಿಳುವಳಿಕೆಯನ್ನು ಬೆಳೆಸಿಕೊಂಡರೆ, ನೀವು ಹೆಚ್ಚು ವೇಗವಾಗಿ ಪ್ರತಿಕ್ರಿಯಿಸಬಹುದು".[೧೬]

ಜನಪ್ರಿಯ ಸಂಸ್ಕೃತಿ[ಬದಲಾಯಿಸಿ]

೨೦೧೮ರಲ್ಲಿ, ಲಂಡನ್ ಮ್ಯೂಸಿಯಂ "ಡಿಸೀಸ್ ಎಕ್ಸ್: ಲಂಡನ್‌ನ ಮುಂದಿನ ಸಾಂಕ್ರಾಮಿಕ?" ಎಂಬ ಶೀರ್ಷಿಕೆಯ ಪ್ರದರ್ಶನವನ್ನು ನಡೆಸಿತು, ಇದನ್ನು ೧೯೧೮ ರಿಂದ ಸ್ಪ್ಯಾನಿಷ್ ಜ್ವರ ಸಾಂಕ್ರಾಮಿಕದ ಶತಮಾನೋತ್ಸವಕ್ಕಾಗಿ ಆಯೋಜಿಸಲಾಗಿತ್ತು.[೧೭][೧೮]

ಈ ಪದವು ಜಾಗತಿಕ ಸಾಂಕ್ರಾಮಿಕ ರೋಗಗಳನ್ನು ಒಳಗೊಂಡಿರುವ ಹಲವಾರು ಕಾಲ್ಪನಿಕ ಪುಸ್ತಕಗಳ ಶೀರ್ಷಿಕೆಯಲ್ಲಿ ಒಳಗೊಂಡಿದೆ, ಉದಾಹರಣೆಗೆ ರೋಗ (೨೦೨೦), ಮತ್ತು ಡಿಸೀಸ್ ಎಕ್ಸ್: ದಿ ಔಟ್‍ಕವರ್.[೧೯][೨೦]

ತಂತ್ರ[ಬದಲಾಯಿಸಿ]

೨೦೨೨ ರಲ್ಲಿ ಪ್ರಕಟವಾದ ಪ್ರಬಂಧ, ಡಿಸೀಸ್ ಎಕ್ಸ್ ತಯಾರಿಗಾಗಿ ಈ ಕೆಳಗಿನ ತಂತ್ರಗಳನ್ನು ಪಟ್ಟಿಮಾಡಿದೆ:[೨೧]

  • ಸ್ಪಿಲ್‌ಓವರ್‌ನ ಪರಿಣಾಮವಾಗಿ ಮಾನವರಲ್ಲಿ ಹೊಸ ಕಾಯಿಲೆಯ ಹರಡುವಿಕೆಯ ಪರಿಚಯ ಮತ್ತು ಅದರ ಅಪಾಯವನ್ನು ಕಡಿಮೆ ಮಾಡುವ ಕ್ರಮಗಳು.
  • ಸಾಂಕ್ರಾಮಿಕ ಏಜೆಂಟ್ ಅನ್ನು ತ್ವರಿತವಾಗಿ ಪತ್ತೆಹಚ್ಚಲು ಮತ್ತು ಅನುಕ್ರಮಗೊಳಿಸಲು, ಮಾನವರು ಮತ್ತು ಪ್ರಾಣಿಗಳಲ್ಲಿ ರೋಗದ ಕಣ್ಗಾವಲು ಸುಧಾರಿಸುವುದು.
  • ವೈದ್ಯಕೀಯ ಪ್ರತಿತಂತ್ರಗಳ ಅಭಿವೃದ್ಧಿ ಮತ್ತು ಉತ್ಪಾದನೆಯ ನಡುವಿನ ಸಮಯದ ವಿಳಂಬವನ್ನು ಕಡಿಮೆ ಮಾಡಲು ಸಂಶೋಧನಾ ಕಾರ್ಯಕ್ರಮಗಳನ್ನು ಬಲಪಡಿಸುವುದು.
  • ದೊಡ್ಡ ಪ್ರಮಾಣದ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಔಷಧೀಯ (ಉದಾ:ವ್ಯಾಕ್ಸಿನೇಷನ್) ಮತ್ತು ಔಷಧೀಯವಲ್ಲದ (ಉದಾ:ಸಾಮಾಜಿಕ ಅಂತರ) ಕ್ರಮಗಳ ತ್ವರಿತ ಅನುಷ್ಠಾನ.
  • ಔಷಧಗಳು ಮತ್ತು ಲಸಿಕೆಗಳ ನ್ಯಾಯಯುತ ವಿತರಣೆ ಮತ್ತು ಜಾಗತಿಕ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ಅಂತರರಾಷ್ಟ್ರೀಯ ಪ್ರೋಟೋಕಾಲ್‌ಗಳನ್ನು ಅಭಿವೃದ್ಧಿಪಡಿಸಿವುದು.[೨೧]

ಇವುಗಳನ್ನು ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ Daszak, Peter (22 February 2020). "We Knew Disease X Was Coming. It's Here Now". The New York Times. Archived from the original on 16 March 2020. Retrieved 8 March 2020.
  2. ೨.೦ ೨.೧ Gale, Jason (22 February 2020). "Coronavirus May Be 'Disease X' Health Experts Warned About". Bloomberg News. Archived from the original on 5 March 2020. Retrieved 8 March 2020.
  3. ೩.೦ ೩.೧ Shi, Zhengli; Jiang, Shibo (2020). "The First Disease X is Caused by a Highly Transmissible Acute Respiratory Syndrome Coronavirus". Virologica Sinica. 35 (3): 263–265. doi:10.1007/s12250-020-00206-5. PMC 7091198. PMID 32060789.
  4. ೪.೦ ೪.೧ ೪.೨ ೪.೩ "List of Blueprint priority diseases". World Health Organization. 7 February 2018. Archived from the original on 1 March 2020. Retrieved 20 March 2020.
  5. ೫.೦ ೫.೧ ೫.೨ ೫.೩ ೫.೪ Editorial (13 March 2018). "What is Disease X?". Economist. Archived from the original on 24 September 2022. Retrieved 20 March 2020. By listing Disease X, an undetermined disease, the WHO is acknowledging that outbreaks do not always come from an identified source and that, as it admits, "a serious international epidemic could be caused by a pathogen currently unknown to cause human disease".
  6. "R&D Blueprint - Scientific Advisory Group members". World Health Organization. Archived (PDF) from the original on 22 January 2024. Retrieved 21 March 2020.
  7. ೭.೦ ೭.೧ ೭.೨ World Health Organization (6–7 February 2018). 2018 Annual review of diseases prioritized under the Research and Development Blueprint (Report). Geneva, Switzerland. pp. 17. http://origin.who.int/emergencies/diseases/2018prioritization-report.pdf. Retrieved 20 March 2020. 
  8. ೮.೦ ೮.೧ ೮.೨ Nuki, Paul; Shaikh, Alanna (10 March 2018). "Scientists put on alert for deadly new pathogen – 'Disease X'". The Daily Telegraph. Archived from the original on 2022-01-12. Retrieved 20 March 2018.
  9. "R&D Blueprint". World Health Organization. Archived from the original on 20 March 2020. Retrieved 21 March 2020.
  10. "Prioritizing diseases for research and development in emergency contexts (Published 2018, revision in progress 2023)". World Health Organization. Archived from the original on 25 October 2019. Retrieved 23 June 2023.
  11. ೧೧.೦ ೧೧.೧ ೧೧.೨ Barns, Tom (11 March 2018). "World Health Organisation fears new 'Disease X' could cause a global pandemic". The Independent. Archived from the original on 24 September 2022. Retrieved 20 March 2020.
  12. Shaikh, Alanna; Nuki, Paul (22 July 2019). "What is 'Disease X', the mystery killer keeping scientists awake?". The Daily Telegraph (in ಬ್ರಿಟಿಷ್ ಇಂಗ್ಲಿಷ್). ISSN 0307-1235. Archived from the original on 2022-01-12. Retrieved 18 January 2020.
  13. Lee, Bruce Y. (March 10, 2018). "Disease X is what may Become the Biggest Infectious Threat to our World". Forbes. Archived from the original on March 1, 2020. Retrieved March 11, 2018.
  14. "WHO | List of Blueprint priority diseases". WHO. Archived from the original on 10 September 2017. Retrieved 18 January 2020.
  15. Whittam Smith, Andreas (11 March 2018). "One hundred years on from the Spanish Flu, we are facing another major pandemic". The Independent. Archived from the original on 20 March 2020. Retrieved 20 March 2020.
  16. Scutti, Susan (12 March 2018). "World Health Organization gets ready for 'Disease X'". CNN. Archived from the original on 2018-03-12. Retrieved 20 March 2020.
  17. Addley, Esther (November 2018). "Queen Victoria's mourning dress among items in Disease X exhibition". The Guardian. Archived from the original on 5 October 2023. Retrieved 20 March 2020.
  18. "Disease X: London's next epidemic?". Museum of London. Archived from the original on 5 October 2023. Retrieved 20 March 2020.
  19. N. J. Croft (January 2020). Disease X. Sideways Books. ASIN B081XS6FN7.
  20. Burdette, Shannon C. (October 2019). DISEASE X: THE OUTBREAK. ISBN 978-1703667806.
  21. ೨೧.೦ ೨೧.೧ Mipatrini, Daniele; Montaldo, Chiara; Bartolini, Barbara; Rezza, Giovanni; Iavicoli, Sergio; Ippolito, Giuseppe; Zumla, Alimuddin; Petersen, Eskild (2022-10-17). "'Disease X'—time to act now and prepare for the next pandemic threat". The European Journal of Public Health. 32 (6): 841–842. doi:10.1093/eurpub/ckac151. ISSN 1101-1262. PMC 9713389. PMID 36250806.

ಬಾಹ್ಯ ಕೊಂಡಿಗಳು[ಬದಲಾಯಿಸಿ]