ವಿಷಯಕ್ಕೆ ಹೋಗು

ಡಿಮಾಟ‍್ ಖಾತೆ ಮತ್ತು ನ್ಯಾಸಧಾರಿ ಸೇವೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಂಪೆನಿಯ ಶೇರು ಅಥವಾ ಸಾಲ ಪತ್ರಗಳನ್ನು ಕಂಪನಿಯ ಮೊಹರನ್ನು ಒಳಗೊಂಡು ಭೌಥಿಕ ರೂಪದಲ್ಲಿ ಅಂದರೆ ಕಾಗದ ಪ್ರಮಾಣಪತ್ರದಲ್ಲಿ ನೀಡಲಾಗುತ್ತಿತ್ತು . ಆದರೆ ಈ ಪ್ರಮಾಣಪತ್ರಗಳ ವರ್ಗಾವಣೆ ಮತ್ತು ಅದಕ್ಕನ್ನುಸಾರವಾಗಿ ದಾಖಲೆಗಳನ್ನು ಮಾಡಲು ಹೆಚ್ಚು ಸಮಯ ಮತ್ತು ಪರಿಶ್ರಮ ಒಳಗೊಂಡಿರುತ್ತಿತ್ತು. ಬಂಡವಾಳ ಪತ್ರಗಳನ್ನು ಭೌಥಿಕ ರೂಪದಲ್ಲಿ ಇಟ್ಟುಕೊಳ್ಳುವ ಪದ್ದತಿಯು ಅನಾನುಕುಲವಾಗಿದ್ದು ವೆಚ್ಚದಾಯಕವಾಗಿದೆ. ಅಲ್ಲದೆ ಒಬ್ಬ ಹೊಡಿಕೆದಾರನಿಂದ ಇನ್ನೊಬ್ಬ ಹೊಡಿಕೆದಾರನಿಗೆ ವರ್ಗಾವಣೆ ಮಾಡಲು ಹೆಚ್ಚು ಸಮಯ ತಗಲುತ್ತಿತ್ತು.೧೯೮೬ ನೇ ಇಸವಿಯ ಮೊದಲು ಭಾರತದಲ್ಲಿ ಬಂಡೌಆಳ ಪತ್ರಗಳನ್ನು ಭೌತಿಕ ರೂಪದಲ್ಲಿ ಇಟ್ಟುಕೊಳ್ಳುವ ಪದ್ದತಿ ಇತ್ತು.ಈ ತೊಂದರೆಗಳನ್ನು ತಪ್ಪಿಸಲು ಅಭೌತೀಕರಣ ಅಥವಾ ಡಿಮಾಟ್ ಎಂದರೆ ಹೂಡಿಕೆದಾರನ ಕಾಗದದ ದಾಖಲೆ ಅಥವಾ ದಸ್ತಾವೇಜುಗಳನ್ನು ರದ್ದುಪಡಿಸಿ ನ್ಯಾಸಧಾರಿಯೊಡನೆ ವಿದ್ಯುನ್ಮಾನ ರೂಪದಲ್ಲಿ ಇರಿಸಿದ ಡಿಮಾಟ್ ಖಾತೆಗೆ ಜಮಾ ಮಾಡುವುದಾಗಿದೆ. ಸಂಕ್ಷಿಪ್ತವಾಗಿ,ಡಿಮಾಟ್ ಎಂದರೆ ಭೌತಿಕ ರೂಪದಲ್ಲಿರಿಸಿದ ಬಂಡವಾಳ ಪತ್ರಗಳನ್ನು ವಿದ್ಯುನ್ಮಾನ ರೂಪಕ್ಕೆ ಪರಿವರ್ತಿಸುವುದಾಗಿದೆ.ಡಿಮಾಟ್ ಖಾತೆ ಎಂದರೆ ಕಾಗದದ ರೂಪದಲ್ಲಿದ್ದ ಪ್ರಮಾಣ ಪತ್ರಗಳನ್ನು ಅಭೌತೀಕರಣ ಎಂಬ ಪ್ರಕ್ರಿಯೆಯಿಂದ ರದ್ದುಪಡಿಸಿ ವಿದ್ಯುನ್ಮಾನ ರೂಪದಲ್ಲಿ ಇಡಲಾಗುವ ಖಾತೆ. ನ್ಯಾಸಧಾರಿ ಅಂದರೆ ಹೂಡಿಕೆದಾರನ ಬಂಡವಾಳ ಪತ್ರಗಳನ್ನು ವಿದ್ಯುನ್ಮಾನ ರೂಪದಲ್ಲಿ ಇಟ್ಟುಕೊಳ್ಳುವ ಹಣಕಾಸಿನ ಮಧ್ಯವರ್ತಿ.ಪ್ರಸ್ತುತ,ಭಾರತ ದೇಶದಲ್ಲಿ ಎರಡು ನ್ಯಾಸಧಾರಿಗಳು ಕಾರ್ಯನಿರ್ವಹಿಸುತ್ತವೆ.ಅವುಗಲಳೆಂದರೆ:- ೧ ರಾಷ್ಟ್ರೀಯ ಬಂಡವಾಳ ಪತ್ರಗಳ ನ್ಯಾಸಧಾರಿ ನಿಯಮಿತ. ೨ ಕೇಂದ್ರೀಯ ನ್ಯಾಸಧಾರಿ ಸೇವೆಗಳು (ಭಾರತ)ನಿಯಮಿತ.ಹೂಡಿಕೆದಾರನು ತನ್ನ ನ್ಯಾಸಧಾರಿಯೊಡನೆ ,ನ್ಯಾಸಧಾರಿ ಭಾಗಿದಾರ ಜಾಲದ ಮೂಲಕ ಸಂಪರ್ಕವನ್ನು ಪಡೆಯಬಹುದು.

ನ್ಯಾಸಧಾರಿ ಭಾಗಿದಾರ :- ನ್ಯಾಸಧಾರಿ ಭಾಗೀದಾರನು,ನ್ಯಾಸಧಾರಿಯ ನಿಯೋಗಿಯಾಗಿದ್ದು ಅವರ ಮೂಲಕ ಹೂಡಿಕೆದಾರನು ತನ್ನ ಡಿಮಾಟ್ ಖಾತೆಯನ್ನು ನಿರ್ವಹಿಸುತ್ತಾನೆ.ಯಾವುದೇ ಹಣಕಾಸಿನ ಪೂರೈಕೆದಾರರು ಅಂದರೆ ಹಣಕಾಸಿನ ಸಂಸ್ಥೆಗಳು,ಬ್ಯಾಂಕುಗಳು, ಶೇರು ದಲ್ಲಾಳಿ ಮೊದಲಾದವರು ಸೆಬಿಯ ನಿಯಮಗಳನ್ನು ಅನುಸರಿಸಿ ನೋಂದಾಯಿಸಿಕೊಂಡು ನ್ಯಾಸಧಾರಿ ಭಾಗಿದಾರರಾಗಿ ಕಾರ್ಯನಿರ್ವಹಿಸಬಹುದು.

Philippine-stock-market-board

ನ್ಯಾಸದಾರಿ ಸೇವೆಗಳು

೧.ನ್ಯಾಸಧಾರಿಯು ಭೌತಿಕ ರೂಪದಲ್ಲಿರುವ ಬಂಡವಾಳವನ್ನು ವಿದ್ಯುನ್ಮಾನ ರೂಪಕ್ಕೆ ಪರಿವರ್ತಿಸಲು ಸಹಾಯ ಮಾಡುತ್ತದೆ.

೨.ಇದು ಹೂಡಿಕೆದಾರರ ಬಂಡವಾಳ ಪತ್ರಗಳಿಗೆ ರಕ್ಷಣೆಯನ್ನು ಒದಗಿಸುತ್ತದೆ.

೩.ಭೌತಿಕ ಪ್ರಮಾಣ ಪತ್ರದಲ್ಲಿರುವ ನಷ್ಟಭಯಗಳಾದ ಕಳ್ಳತನ, ಮೋಸ,ವಂಚನ ಮುಂತಾದವುಗಳನ್ನು ಹೋಗಲಾಡಿಸುತ್ತದೆ.

೪.ಇದು ಬ್ರೋಕರೇಜ್ ಖರ್ಚನ್ನು ಬಹಳಷ್ಟು ಕಡಿಮೆ ಮಾಡುತ್ತದೆ.

೫.ಕಾಗದದ ಕೆಲಸವಿಲ್ಲದಿರುವುದರಿಂದ ಪ್ರತಿಯೊಂದು ವ್ಯವಹಾರವನ್ನು ಪೂರ್ಣಗೊಳಿಸಲು ಇದು ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತದೆ.

೬.ಇದು ಹೂಡಿಕೆದಾರರಿಗೆ ಹೊಸ ಶೇರುಗಳ ನೀಡಿಕೆಯಲ್ಲಿ ಅರ್ಜಿ ಸಲ್ಲಿಸಲು ಸಹಾಯ ಮಾಡುತ್ತದೆ.ಏಕೆಂದರೆ,ಪ್ರಸ್ತುತ ಎಲ್ಲಾ ಸಾರ್ವಜನಿಕ ಶೇರು ನೀಡಿಕೆಯು ಡಿಮಾಟ್ ಕ್ರಮದಲ್ಲೇ ನಡೆಯುತ್ತದೆ.

೭.ಕಂಪನಿಯು ನೀಡುವ ಹಕ್ಕಿನ ಶೇರು ,ಬೋನಸ್ ಶೇರುಗಳನ್ನು ನೇರವಾಗಿ ಹೂಡಿಕೆದಾರರ ಡಿಮಾಟ್ ಖಾತೆಗೆ ಜಮೆಯಾಗುತ್ತದೆ.

೮.ಕಂಪನಿಯು ಹೂಡಿಕೆದಾರರಿಗೆ ಲಾಭಾಂಶವನ್ನು ಡಿಮಾಟ್ ಖಾತೆಯಲ್ಲಿ ನೋಂದಣಿಯಾದ ಬ್ಯಾಂಕ್ ಖಾತೆಗೆ ಜಮೆಮಾಡುತ್ತದೆ.

Stock exchange investments in theory and practice; with chapters on the constitution and operations of the Bank of England and the national and local debts of the United Kingdom (1909) (14586834578)

೯.ಡಿಮಾಟ್ ಕ್ರಮದಲ್ಲಿ ಬಂಡವಾಳ ಪತ್ರಗಳ ವರ್ಗಾವಣೆ ಮಾಡುವಾಗ ಸ್ಟಾಂಪು ಖರ್ಚು ಇರುವುದಿಲ್ಲ.

೧೦.ಇದು ಹೂಡಿಕೆದಾರರಿಗೆ ಡಿಮಾಟ್ ಖಾತೆಯಲ್ಲಿನ ಜಮಾ ಅಥವಾ ಖರ್ಚುಗಳ ಕುರಿತು ಎಸ್.ಎಂ.ಎಸ್.ಕಳಿಸುತ್ತದೆ.ಇದರಿಂದ ಹೂಡಿಕೆದಾರರಿಗೆ ತಮ್ಮ ವ್ಯವಾಹರಗಳ ಮೇಲೆ ನಿಗಾ ಇಡಬಹುದು.

೧೧.ಹೂಡಿಕೆದಾರರು ಶೇರುಗಳನ್ನು ಅಡಮಾನವಿಟ್ಟು ಸಾಲವನ್ನು ಪಡೆಯಲು ಸುಲಭವಾದ ವಿಧಾನವನ್ನು ಒದಗಿಸುತ್ತದೆ.

೧೨.ಇದು ಹೂಡಿಕೆದಾರರಿಗೆ ಇ-ವ್ಯಾಪಾರವನ್ನು ಮಾಡಲು ಅನುವು ಮಾಡಿಕೊಡುತ್ತದೆ.ಇದರಿಂದ ಹೂಡಿಕೆದಾರರು ಅಂತರ್ಜಲದ ಮೂಲಕ ಬಂಡವಾಳ ಪತ್ರಗಳ ಖರೀದಿ ಮತ್ತು ಮಾರಾಟ ಮಾಡಬಹುದು.

೧೩.ಕಂಪನಿಯ ಎಲ್ಲಾ ಪತ್ರವ್ಯವಹಾರಗಳು -ವಾರ್ಷಿಕ ವರದಿ,ವಾರ್ಷಿಕ ಸಾಮಾನ್ಯ ಸಭೆಯ ನೋಟೀಸ್ ಇತ್ಯಾದಿ -ಡಿಮಾಟ್ ಖಾತೆಯಲ್ಲಿ ಇದ್ದು ಹೂಡಿಕೆದಾರರ ವಿಳಾಸಕ್ಕೆ ಬಟವಾಡೆಯಾಗುತ್ತದೆ.ಹಾಗಾಗಿ, ತಪ್ಪು ವಿಳಾಸಕ್ಕೆ ಬಟವಾಡೆಯಾಗುವುದಿಲ್ಲ.

೧೪.ಹೂಡಿಕೆದಾರನು ಶೇರುಗಳನ್ನು ವರ್ಗಾವಣೆ ಮಾಡುವಾಗ ಬೇರೆ ಬೇರೆ ಕಂಪನಿಗಳ ಶೇರುಗಳು ಇದ್ದಾಗಲೂ ಒಂದೇ ಬಟವಾಡೆ ಸೂಚನಾ ಆದೇಶ ನಮೂನೆಯನ್ನು ಉಪಯೋಗಿಸಬಹುದು.