ಡಿಡಿ ರಾಜಸ್ಥಾನ
Type | ಪ್ರಸಾರ ದೂರದರ್ಶನ ಜಾಲ |
---|---|
Country | ಭಾರತ |
Availability | ಭಾರತ ಮತ್ತು ಏಷ್ಯಾದ ಕೆಲವು ಭಾಗಗಳು, ಚೀನಾ ಮತ್ತು ಗಲ್ಫ್ ದೇಶಗಳು. |
Founded | by ಭಾರತ ಸರ್ಕಾರ |
Headquarters | ಜೈಪುರ, ರಾಜಸ್ಥಾನ, ಭಾರತ |
Owner | ಪ್ರಸಾರ ಭಾರತಿ |
Launch date | ೧೯೯೪ (ದೂರದರ್ಶನ ಕೇಂದ್ರ ರಾಜಸ್ಥಾನವಾಗಿ) |
Former names | ದೂರದರ್ಶನ ಕೇಂದ್ರ ರಾಜಸ್ಥಾನ |
Official website | www.ddkRajasthan.tv |
ಡಿಡಿ ರಾಜಸ್ಥಾನ ದೂರದರ್ಶನ ಕೇಂದ್ರ ರಾಜಸ್ಥಾನದಿಂದ ಪ್ರಸಾರವಾಗುತ್ತಿರುವ ಸರ್ಕಾರಿ ಸ್ವಾಮ್ಯದ ಟಿವಿ ಚಾನೆಲ್ ಆಗಿದೆ. ಇದನ್ನು ಶೀಘ್ರದಲ್ಲೇ ಡಿಡಿ ಅರಾವಳಿ ಎಂದು ಪರಿಷ್ಕರಿಸಲಾಗುವುದು. ಉದ್ದೇಶಿತ ಡಿಡಿ ಅರಾವಳಿ ಚಾನೆಲ್‍ನನ್ನು ಡಿಡಿಕೆ ಜೈಪುರದಿಂದ ಪ್ರಸಾರ ಮಾಡಲಾಗುತ್ತದೆ. ಇದು ೨೪ ಗಂಟೆಗಳ ಕಾಲ ಪ್ರಸಾರವಾಗುವ ಚಾನಲ್ ಆಗಿರುತ್ತದೆ ಮತ್ತು ಡಿಟಿಎಚ್ ಮತ್ತು ಕೇಬಲ್ ನೆಟ್‌ವರ್ಕ್‌ಗಳಲ್ಲಿ ಲಭ್ಯವಿರುತ್ತದೆ. [೧]
ಇತಿಹಾಸ
[ಬದಲಾಯಿಸಿ]೧ ಆಗಸ್ಟ್ ೧೯೭೫ ರಂದು, ಮೊದಲ ದೂರದರ್ಶನ ಪ್ರಸಾರವನ್ನು ರಾಜಸ್ಥಾನದ ಜನರು ಕೋಟಾ, ಸವಾಯಿ ಮಾಧೋಪುರ್ ಮತ್ತು ಜೈಪುರ ಜಿಲ್ಲೆಗಳನ್ನು ಗುರಿಯಾಗಿಸಿಕೊಂಡು ಉಪಗ್ರಹ ಸೂಚನಾ ದೂರದರ್ಶನ ಪ್ರಯೋಗದ ಅಡಿಯಲ್ಲಿ ವೀಕ್ಷಿಸಿದರು.
ಜೈಪುರದಲ್ಲಿ ದೂರದರ್ಶನ ಕೇಂದ್ರವನ್ನು ೧ ಜೂನ್ ೧೯೮೭ ರಂದು ಝಲಾನಾ ದೂಂಗ್ರಿಯಲ್ಲಿ ಸ್ಥಾಪಿಸಲಾಯಿತು ಮತ್ತು ಪ್ರಸಾರವು ೬ ಜುಲೈ ೧೯೮೭ ರಂದು ಪ್ರಾರಂಭವಾಯಿತು. ಆರಂಭದಲ್ಲಿ ಈ ಕೇಂದ್ರವು ಕೇವಲ ೩೦ ನಿಮಿಷಗಳ ಕಾರ್ಯಕ್ರಮಗಳನ್ನು ತಯಾರಿಸಿತು ಮತ್ತು ಇದನ್ನು ಕ್ರಮೇಣ ಹೆಚ್ಚಿಸಲಾಯಿತು. ಪ್ರಸ್ತುತ ಕೇಂದ್ರವು ಪ್ರತಿದಿನ ಸುಮಾರು ನಾಲ್ಕು ಗಂಟೆಗಳ ಕಾರ್ಯಕ್ರಮಗಳನ್ನು ವೀಕ್ಷಿಸುವ ಅವಕಾಶ ನೀಡುತ್ತದೆ.[೨]
ಚಾನಲ್‍ನನ್ನು ಜನಸಂಖ್ಯೆಯ ಪ್ರಕಾರ ೭೯% ರಷ್ಟು ಜನರು ವೀಕ್ಷಿಸುತ್ತಾರೆ ಮತ್ತು ರಾಜಸ್ಥಾನದ ಪ್ರದೇಶದಿಂದ ೭೨% ಜನರು ವೀಕ್ಷಿಸುತ್ತಾರೆ.[೩]
ಸಹ ನೋಡಿ
[ಬದಲಾಯಿಸಿ]- ಡಿಡಿ ನ್ಯಾಷನಲ್ ಪ್ರಸಾರ ಮಾಡಿದ ಕಾರ್ಯಕ್ರಮಗಳ ಪಟ್ಟಿ
- ಆಲ್ ಇಂಡಿಯಾ ರೇಡಿಯೋ
- ಮಾಹಿತಿ ಮತ್ತು ಪ್ರಸಾರ ಸಚಿವಾಲಯ
- ಡಿಡಿ ಡೈರೆಕ್ಟ್ ಪ್ಲಸ್
- ದೇಶವಾರು ದಕ್ಷಿಣ ಏಷ್ಯಾದ ದೂರದರ್ಶನ ವಾಹಿನಿಗಳ ಪಟ್ಟಿ
ಉಲ್ಲೇಖಗಳು
[ಬದಲಾಯಿಸಿ]- ↑ "Lockdown: DD Rajasthan To Broadcast Classes For School Students From June 1". NDTV. Retrieved 13 June 2022.
- ↑ "DD Rajasthan Channel Will Now Teach Up To 12th Class, 200 Schools Will Benefit". Dainik Bhaskar. Retrieved 13 June 2022.
- ↑ "Program Page". www.ddindia.com. Archived from the original on 14 May 2012. Retrieved 2012-05-29.