ವಿಷಯಕ್ಕೆ ಹೋಗು

ಡಿಟಿಪಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಣಕಯಂತ್ರ ಮೂಲಕ ಪಠ್ಯ ಹಾಗೂ ರೇಖಾಚಿತ್ರಗಳನ್ನೋಳಗೊಂಡ ದಾಖಲೆ ಪುಸ್ತಕಗಳನ್ನು ದರ್ಶಕದ ಮೂಲಕ ವರ್ಣರಂಜಿತವಾಗಿ ತಯಾರಿಸುವುದನ್ನು ಡೆಸ್ಕ ಟಾಪ್ ಪಬ್ಲಿಷಿಂಗ್ ಎಂದು ಕರೆಯುತ್ತಾರೆ. ಈ ದಾಖಲೆಗಳನ್ನು ಬೇರೆ ಬೇರೆ ಅಳತೆಯ ಅಕ್ಷರಗಳನ್ನು ಬಳಸಿ ತಯಾರಿಸಬಹುದು.ಮುದ್ರಕವನ್ನು ಬಳಸಿ ಈ ದಾಖಲೆಗಳನ್ನು ಕಪ್ಪು-ಬಿಳುಪು ಹಾಗು ವಿವಿಧ ವರ್ಣಗಳಲ್ಲಿ ಮುದ್ರಿಸಬಹುದು.ಕಂಪ್ಯೂಟರ್ ನಲ್ಲಿ ಸಂಗ್ರಹವಾಗಿರುವುದರಿಂದ ಈ ದಾಖಲೆಗಳನ್ನು ಸುಲಭವಾಗಿ ತಿದ್ದುವ ಹಾಗೂ ತಂತಿಯ ಮೂಲಕ ಬೇರೆಡೆಗೆ ವಿಶ್ವಾದ್ಯಂತ ಒದಗಿಸುವ ಸೌಲಭ್ಯವಿರುತ್ತದೆ.ಈ ರೀತಿ ದರ್ಶಕದಲ್ಲಿ ಮೂಡಿಸಿದ ದಾಖಲೆಯನ್ನು ಮುದ್ರಿಸಲು ಸಾಮಾನ್ಯವಾಗಿ ಲೇಸರ್ ಮುದ್ರಕವನ್ನು ಬಳಸಲಾಗುತ್ತದೆ.ಈ ದಾಖಲೆಗಳಲ್ಲಿ ರೇಖಾಚಿತ್ರ, ಇತರ ದಾಖಲೆ,ಅಥವಾ ಕ್ಯಾಮರದಿಂದ ಪಡೆದ ಚಿತ್ರಗಳನ್ನು ಬೇಕಾದಲ್ಲಿ ಅಳವಡಿಸಬಹುದು. ಈ ರೀತಿಯ ದಾಖಲೆ ತಯಾರಿಸಲು ಹಲವಾರು ಸಿದ್ದಪಡಿಸಿದ ಪ್ರೋಗ್ರಾಮ್ ಗಳು ಲಭ್ಯವಿದೆ. ಇವುಗಳಲ್ಲಿ 'ವೆಂಚುರ' ಹಾಗೂ 'ಪೇಜ್ ಮೇಕರ್' ವಿಶ್ವಾದ್ಯಂತ ಜನಪ್ರಿಯ.

"https://kn.wikipedia.org/w/index.php?title=ಡಿಟಿಪಿ&oldid=1164284" ಇಂದ ಪಡೆಯಲ್ಪಟ್ಟಿದೆ