ಡಿಜಿಟಲ್ ಮಾರ್ಕೆಟಿಂಗ್

ವಿಕಿಪೀಡಿಯ ಇಂದ
Jump to navigation Jump to search


ಡಿಜಿಟಲ್ ಮಾರ್ಕೆಟಿಂಗ್ ಎನ್ನುವುದು ಹಲವು ಉತ್ಪನ್ನಗಳ ಮತ್ತು ಸೇವೆಗಳನ್ನು ಗ್ರಾಹಕರಿಗೆ ವಿವಿಧ ತಂತ್ರಜ್ಞಾನಗಳ ಮೂಲಕ, ಮೊಬೈಲ್ ಫೋನ್ ಹಾಗು ಪ್ರದರ್ಶನ ಜಾಹೀರತಿನ ಮೂಲಕ ಮಾರ್ಕೆಟಿಂಗ್ ಮಾಡುವುದಕ್ಕೆ ಕರೆಯುತ್ತಾರೆ. ಈ ಎರಡು ದಶಕಗಳಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಸೌಲಭ್ಯವು ಬಹಳ ಮುಂದುವರೆದಿದ್ದು ಅದನ್ನು ಹಲವು ಬ್ರ್ಯಾಂಡ್ ಮತ್ತು ವ್ಯಾಪಾರಗಳು ತಮ್ಮ ಉತ್ಪನ್ನಗಳ ಮಾರುಕಟ್ಟೆಗೆ ತಂತ್ರಜ್ಞಾನದ ಮೂಲಕ ಚೆನ್ನಾಗಿ ಬಳಸಿಕೊಂಡಿದೆ. ಡಿಜಿಟಲ್ ಮಾರ್ಕೆಟಿಂಗ್ ಶಿಬಿರಗಳು ಬಹಳ ಪ್ರಚಲಿತಗೊಂಡಿದ್ದು ಹಾಗೂ ಅದರ ಉಪಯೋಗಗಳು ಸಹಾಯಕವಾಗಿವೆ, ಡಿಜಿಟಲ್ ವೇದಿಕೆಗಳು ಮತ್ತು ಸೌಲಭ್ಯಗಳು ಧೈನಂದಿನ ವ್ಯವಹಾರಗಳಲ್ಲಿ ಬಳಸಿಕೊಳ್ಳಲಾಗಿದೆ ಮತ್ತು ಗ್ರಾಹಕರು ಕೂಡ ಅಂಗಡಿಗಳಿಗೆ ಹೋಗದೆ ಡಿಜಿಟಲ್ ಸೌಲಭ್ಯಗಳ ಮೂಲಕವೇ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದಾರೆ.[೧]

ಇತಿಹಾಸ[ಬದಲಾಯಿಸಿ]

೨೦೦೦ರ ದಶಕದಲ್ಲಿ ಈ ಸೌಲಭ್ಯವನ್ನು ಮೊದಲು ಬೆಳಕಿಗೆ ತರಲಾಯಿತು ಹಾಗು ಅದನ್ನು ಬಳಸಲಾಯಿತು.[೨] ೨೦೧೦ರ ದಶಕದಲ್ಲಿ ಅದಿನ್ನು ಅತ್ಯಾಧುನಿಕವಾಗಿ ಬೆಳೆದು ಪ್ರತಿಯೊಬ್ಬರು ಸುಲಭವಾಗಿ ಬಳಸಬಹುದಾದ ಸಾಧನವಾಯಿತು.[೩] ಇದರಿಂದ ಗ್ರಾಹಕರಿಗೆ ಮಾತ್ರವಲ್ಲದೆ ನಿರ್ಮಾಪಕರಿಗು ತಮ್ಮ ಉತ್ಪನ್ನಗಳ ಜಾಹೀರತನ್ನು ಕಮ್ಮಿ ವೆಚ್ಛದಲ್ಲಿ ಮಾಡುವ ಅವಕಾಶ ದೊರಕಿತು. ೨೦೧೨-೨೦೧೩ರ ಅಂಕಿಅಂಶಗಳ ಪ್ರಕಾರ ಡಿಜಿಟಲ್ ಮಾರ್ಕೆಟಿಂಗ್ ಇನ್ನು ಬೆಳೆಯುವ ಕ್ಷೇತ್ರವಾಗಿ ಕಂಡುಬಂದಿದೆ.[೪] ಡಿಜಿಟಲ್ ಮಾರ್ಕೆಟಿಂಗ್ ಬಳಕೆಯನ್ನು 'ಆನ್ಲೈನ್ ಮಾರ್ಕೆಟಿಂಗ್' ಅಥವಾ 'ವೆಬ್ ಮಾರ್ಕೆಟಿಂಗ್' ಅಥವಾ ಟೆಲಿ ಮಾರ್ಕೆಟಿಂಗ್ ಎಂದೂ ಕರೆಯುತ್ತಾರೆ. ಹಲವು ದೇಶಗಳಲ್ಲಿ ೨೦೧೦ರ ನಂತರ ಡಿಜಿಟಲ್ ಮಾರ್ಕೆಟಿಂಗ್ ಬಳಕೆಯು ಜನಪ್ರಿಯತೆಗೊಂಡಿದೆ. ಯು.ಎಸ್.ಎ ರಾಷ್ಟ್ರದಲ್ಲಿ 'ಆನ್ಲೈನ್ ಮಾರ್ಕೆಟಿಂಗ್' ಎಂದೇ ಪ್ರಚಲಿತವಾದರೆ ಇಟಲಿ ದೇಶದಲ್ಲಿ ಅದು 'ವೆಬ್ ಮಾರ್ಕೆಟಿಂಗ್' ಎಂದು ಹೆಸರುವಾಸಿಯಾಗಿದೆ. ಯು.ಕೆ ದೇಶದಲ್ಲಿ ೨೦೧೩ರ ನಂತರ ಅತ್ಯಂತ ಸಾಮನ್ಯ ಶಬ್ದವಾಗಿ ಎಲ್ಲಾ ಕಡೆ ಹಬ್ಬಿದೆ.

ಇತ್ತೀಚಿನ ಬೆಳವಣಿಗೆ ಮತ್ತು ತಂತ್ರಗಳು[ಬದಲಾಯಿಸಿ]

ಸಾಂಪ್ರದಾಯಿಕ ವ್ಯಾಪರೋಧ್ಯಮದಲ್ಲಿ ದೊಡ್ಡ ಬದಲಾವಣೆ ಎಂದರೆ 'ಡಿಜಿಟಲ್ ಮಾರ್ಕೆಟಿಂಗ್' ಬಳಕೆಯ ಹುಟ್ಟುವಿಕೆ. ಇದರಿಂದ ಹಲವಾರು ಮಾರ್ಕೆಟಿಂಗ್ ತಂತ್ರಗಳು ಪುನಃನಿರ್ಮಾಣಗೊಂಡಿತು. ಡಿಜಿಟಲ್ ಮಾರ್ಕೆಟಿಂಗ್ ಅಸ್ಥಿತ್ವವು ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದ್ದು ಅದು ಬಹು ವೇಗವಾಗಿ ಬದಲಾಗುತ್ತಿದ್ದು, ವಿಕಾಸಗೊಂಡಿದೆ, ಹಳೆಯ ತಂತ್ರಗಳೆ ಇದರಲ್ಲಿಯೂ ನಿರೀಕ್ಷಿಸಲಾಗಿದೆ. ವಿಭಜನೆ - ವಿಭಜನೆಯ ಅಂಗದಲ್ಲಿ ಬಹಳ ಗಮನವನ್ನು ಡಿಜಿಟಲ್ ಮಾರ್ಕೆಟಿಂಗ್ ಕೊಟ್ಟಿದ್ದು, ಪ್ರತೀ ಚಿಕ್ಕ ಮಾರುಕಟ್ಟೆಯ ಗುರಿಯನ್ನು ತಲುಪುವ ಸಲುವಾಗಿ ಅಂದರೆ ಬಿಟುಬಿ ಮತ್ತು ಬಿಟುಸಿ ಮಾರುಕಟ್ಟೆಯನ್ನು ಅದು ಗುರಿಯಾಗಿಸಿಗೊಂಡಿದೆ.

ಅನ್ಲೈನ್ ವರ್ತನೆಯ ಮಾರ್ಕೆಟಿಂಗ್ - ಈ ಅಭ್ಯಾಸವು ಬಳಕೆದಾರರ ಮಾಹಿತಿಯ ಸಂಗ್ರಹ ಮಾಡುವಲ್ಲಿ, ಅವರು ಬಳಸುವ ವಿವಿಧ ತಂತ್ರಜ್ಞಾನಗಳ, ವಿವಿಧ ವೆಬ್ಸೈಟ್ ಗಳ ವಿವರದಿಂದ ತಮ್ಮ ಉತ್ಪನ್ನಗಳ ಜಾಹೀರಾತನ್ನು ಬಳಕೆದಾರರ ಸಲುವಾಗಿ ಅವರ ಆಧ್ಯತೆಯ ಪ್ರಕಾರ ಪ್ರಕಟಿಸುತಾರೆ.[೫]

ಮರುಮಾರ್ಕೆಟಿಂಗ್ - ಮರುಮಾರ್ಕೆಟಿಂಗ್ ಬಹು ದೊಡ್ಡ ನಿರ್ವಹಣೆಯೊಂದನ್ನು ಹೊರಿಸಿಕೊಂಡಿದೆ. ಈ ತಂತ್ರವು ಆಸಕ್ತಿ ವರ್ಗ ಅಥವಾ ವ್ಯಾಖ್ಯಾನಿಸಲಾಗಿದೆ ಪ್ರೇಕ್ಷಕರ ಸಲುವಾಗಿ ಅವರು ವಿಕ್ಷಿಸುವ ಹಲವು ವೆಬ್ಸೈಟ್ ನ ಮುಖಾಂತರ ಅವರಿಗೆ ಮತ್ತೆ ಮತ್ತೆ ಮರು ಪ್ರದರ್ಶಿಸುವ ಸಾಧನವಾಗಿ ಕಂಡು ಬಂದಿದೆ. ಬಳಕೆದಾರರು ತಮಗೆ ಬೇಕಾಗಿರುವ ವಸ್ತುಗಳ ಖರೀದಿಗೆ ಆನ್ಲೈನ್ ಸೌಲಭ್ಯ ಆಯ್ಕೆಯದಲ್ಲಿ ನಿರ್ವಾಹಕರು ತಮ್ಮ ಉತ್ಪನ್ನಗಳ ಮರು ಜಾಹಿರಾತಿಗೆ ಈ ತಂತ್ರವನ್ನು ಉಪಯೋಗಿಸುತ್ತಾರೆ.

ಅನುಕೂಲಗಳು[ಬದಲಾಯಿಸಿ]

೧) ಇಂಟರ್ನೆಟ್ ಮೂಲಕ ಜಾಹಿರಾತುಗಳನ್ನು ಪ್ರಕಟಿಸುವುದು ಮುದ್ರಣ ಜಾಹಿರಾತಿಗಿಂತಲೂ ಬಹು ಕಮ್ಮಿ ವೆಚ್ಛದಲ್ಲಿ ನಿರ್ವಹಿಸಲು ಸಾಧ್ಯವಗುವುದು ಮತ್ತು ಇದು ಗ್ರಾಹಕರು ಮತ್ತು ನಿರ್ವಾಹಕರು ಇಬ್ಬರಿಗೂ ಬಹಳ ಅನುಕೂಲವಾಗುವಂತ ಸೌಲಭ್ಯವಗಿ ಕಂಡು ಬಂದಿದೆ. ೨) ಇದು ವ್ಯಪಾರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲೂ ಯವುದೇ ಅಡಚಣೆಯಿಲ್ಲದೆ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಇಂಟರ್ನೆಟ್ ಮುಖಾಂತರ ನಿರ್ವಹಿಸಬಹುದು. ೩) ಈ ಸೌಲಭ್ಯವು ಪ್ರತೀ ದಿನವು ೨೪ ಗಂಟೆಯೂ ಕೆಲಸ ಮಾಡುವುದು ಹಾಗೂ ಗ್ರಾಹಕರು ಯಾವುದೇ ಸ್ಥಳದಲ್ಲಿಂದ ಬೇಕಾದರೂ ತಮಗೆ ಬೇಕಾದ ಉತ್ಪನ್ನಗಳನ್ನು ಖರೀದಿಸಬಹುದು. ಈ ಸೌಲಭ್ಯದಿಂದ ಗ್ರಾಹಕರು ತಾವು ಖರೀದಿಸುವ ಉತ್ಪನ್ನಗಳ ಕಂಪನಿಯ ವೆಬ್ಸೈಟ್ ಗೆ ನೇರವಾಗಿ ವೀಕ್ಷಿಸಬಹುದು. ೪) ಗ್ರಾಹಕರಿಗೆ ಉತ್ಪನ್ನಗಳ ಅಪ್ಡೆಟ್ ಗಳನ್ನು ಇ-ಮೇಲ್ ಮುಖಾಂತರ ನಿರ್ವಾಹಕರು ಅತೀ ವೇಗದಲ್ಲಿ ಕಳುಹಿಸಲು ಈ ತಂತ್ರಜ್ಞಾನ ಉಪಯೋಗವಾಗಿದೆ.

ಅನಾನುಕೂಲಗಳು[ಬದಲಾಯಿಸಿ]

೧) ಈ ವೇದಿಕೆಯು ಗ್ರಾಹಕರಿಗೆ ಹಳತಾದ ಮಾಹಿತಿಗಳನ್ನು ಕೊಡುವುದು ಹಾಗೂ ಅಪ್ಡೇಟ್ ಸಮಯ ವಿಮರ್ಶಾತ್ಮಕ ವಿಷಯವಾಗಿ ರೂಪುಗೊಂಡು ಗ್ರಾಹಕರಿಗೆ ಸಹಿ ಮಾಹಿತಿ ನೀಡುವಲ್ಲಿ ವಿಫಲವಾಗಿದೆ. ೨) ಹಲವು ಗ್ರಾಹಕರು ವೆಬ್ಸೈಟ್ ಗಳಲ್ಲಿ ಉಚಿತವಾಗಿ ಸೇವೆಯನ್ನು ಅಥವ ಉತ್ಪನ್ನಗಳನ್ನು ನಿರೀಕ್ಷಿಸುತ್ತಾರೆ. ಆದರೆ ಉಚಿತವಾಗಿ ಸಿಗುವುದು ಕಷ್ಟ ಸಾಧ್ಯವಾಗಿದೆ. ೩) ಈ ವೇದಿಕೆಯು ಬಹಳ ಮುಂದುವರೆದಿದ್ದು ಇಲ್ಲಿ ಸ್ಪರ್ಧೆಯು ಬಹಳ ಕಠಿಣವಾಗಿದೆ. ಗ್ರಾಹಕರು ಯಾವುದಾದರು ಉತ್ಪನ್ನಗಳ ಖರೀದಿಸುವ ಸಲುವಾಗಿ ಅವರು ಹಲವಾರು ಲಿಂಕ್ ಗಳಿಗೆ ಪ್ರವೇಶ ನೀಡಿರುತ್ತಾರೆ, ಅವರು ಹೋಗಬೇಕಾದ ವೆಬ್ಸೈಟ್ ತಲುಪುವ ವೇಳೆಗೆ ಅವರು ತಮ್ಮ ವಸ್ತುವನ್ನು ಖರೀದಿರಿಸುತ್ತಾರೆ. ೪) ಡಿಜಿಟಲ್ ಮಾರ್ಕೆಟಿಂಗ್ ಬಳಕೆಯಲ್ಲಿ ಬಹಳ ಇರಿಸು ಮುರುಸು ಇದದ್ದು ಹಾಗೂ ಅದರ ಬಳಕೆ ಮಾಡುವಲ್ಲಿ ನಿರ್ವಾಹಕರು ಬಹಳ ಯೋಚನೆಯ ನಂತರ ಸೃಜನಶೀಲವಾದ ತಂತ್ರವನ್ನು ಅಳವಡಿಸಬೇಕು.

ಉಲೇಖಗಳು[ಬದಲಾಯಿಸಿ]