ವಿಷಯಕ್ಕೆ ಹೋಗು

ಡಾ. ಬಿ. ಬಿ. ಬಿರಾದಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ.ಬಿ.ಬಿ.ಬಿರಾದಾರರು ೧೮.೪.೧೯೪೯ರಲ್ಲಿ ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಕತ್ನಳ್ಳಿಯಲ್ಲಿ ಜನಿಸಿದ್ದಾರೆ.

ಸಾಹಿತ್ಯ

[ಬದಲಾಯಿಸಿ]

‘ಉತ್ತರ ಕರ್ನಾಟಕದ ಹಂತಿ ಒಂದು ಜಾನಪದ ಅಧ್ಯಯನ’ ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ೧೯೯೨ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಹಾಗೇ ಜನಪದದ ಬಗ್ಗೆ ೮ ಕೃತಿಗಳನ್ನು ಪ್ರಕಟಿಸಿದ್ದಾರೆ. ಬೆತ್ತಲೆ ಗಾದೆಗಳು (೧೯೮೧) ಬೆತ್ತಲೆ ಹೋಳಿ ಹಾಡುಗಳು (೧೯೮೩ ಸಮಾಜ ಪುಸ್ತಕಾಲಯ, ಧಾರವಾಡ) ಆರು ಅಧ್ಯಾಯಗಳನ್ನೊಳಗೊಂಡ ಬೆತ್ತಲೆ ಹೋಳಿ ಹಾಡುಗಳ ಸಂಗ್ರಹ ಇದರಲ್ಲಿವೆ. ಜಾನಪದ ಜಾಣ್ಮೆ (೧೯೮೨) ಜಾನಪದ ನಿಧಿ (೧೯೯೬) ಜಾನಪದ ಸಿರಿ (೧೯೯೭) ‘ಹೋಳಿ’ ಜಾನಪದ ನಾಟಕ, ಶೃಂಗಾರ ಲಾವಣಿಗಳು (೧೯೯೮ ಜ್ಯೋತಿ ಪ್ರಕಾಶನ, ಧಾರವಾಡ) ಇದು ೪೬ ಶೃಂಗಾರ ಲಾವಣಿಗಳನ್ನು ಒಳಗೊಂಡ ಸಂಗ್ರಹ ಕೃತಿ. ಸಹಜ ಶೃಂಗಾರ ಲಾವಣಿಗಳು, ವಿಪ್ರಲಂಭ ಶೃಂಗಾರ ಲಾವಣಿಗಳು, ಸಂಭೋಗ ಶೃಂಗಾರ ಲಾವಣಿಗಳು ಇವೆ. ಜನಪದ ಗಣಿತ (೨೦೦೦) ಅಲ್ಲದೆ ೩೦ಕ್ಕೂ ಹೆಚ್ಚು ಜಾನಪದ ಸಂಶೋಧನ ಲೆಖನಗಳನ್ನು ಹೊರತಂದಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಇಲ್ಲಿಯವರೆಗೆ ೩ ಜನ ಪಿಎಚ್.ಡಿ ಪದವಿ ಹಾಗೂ ೭ ಜನ ಎಂಫಿಲ್ ಪದವಿ ಪಡೆದಿದ್ದಾರೆ. ಈಗ ಕರ್ನಾಟಕ ವಿಶ್ವವಿದ್ಯಾಲಯ ಡಾ. ಆರ್. ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.