ವಿಷಯಕ್ಕೆ ಹೋಗು

ಪಿ. ಕೇಶವ ಭಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಡಾ. ಪಿ. ಕೇಶವ ಭಟ್ ಇಂದ ಪುನರ್ನಿರ್ದೇಶಿತ)

(೩,ಜನವರಿ, ೧೯೪೦-೨೫, ಜುಲೈ, ೨೦೧೦)

ಹೆಸರಾಂತ 'ಸಸ್ಯ ಶಾಸ್ತ್ರಜ್ಞ', 'ಡಾ.ಪಿ.ಕೇಶವ ಭಟ್' ರವರ ಮನೆಯ ಹೆಸರು, 'ಪಳ್ಳತ್ತಡ್ಕ ಕೇಶವ ಭಟ್' ಎಂದು. ಆರೋಗ್ಯ ಸಮಸ್ಯೆಗಳಿಗೆ 'ನೈಸರ್ಗಿಕ ಪರಿಹಾರೋಪಾಯ'ಗಳನ್ನು ಕಂಡುಹಿಡಿದು ಅವನ್ನು ವಿಶ್ವದಾದ್ಯಂತ ಪ್ರಚುರಪಡಿಸಿ, ಪ್ರಸಿದ್ಧರಾಗಿದ್ದ ಭಟ್ಟರು, ಅಮೆರಿಕದ ’ವಯಾಮಿಂಗ್’ ನಲ್ಲಿ 'ಸಾತ್ವಿಕ ಆಹಾರದ ಸಮರ್ಥ ಪ್ರತಿಪಾದಕ', (Ethnobotatanist) ರಾಗಿಕೆಲಸಮಾಡುತ್ತಿದ್ದರು.

ಜನನ ಮತ್ತು ವಿದ್ಯಾಭ್ಯಾಸ

[ಬದಲಾಯಿಸಿ]

'ಕೇಶವ ಭಟ್', ’ಕಾಸರಗೋಡು ಜಿಲ್ಲೆ’ಯ ’ಪಳ್ಳತ್ತಡ್ಕ’ ದಲ್ಲಿ ೩, ಜನವರಿ, ೧೯೪೦ ರಲ್ಲಿ ಜನಿಸಿದರು. ಕೇಶವ ಭಟ್ ರವರ ತಂದೆ, 'ಪಳ್ಳತ್ತಡ್ಕ ಸುಬ್ರಾಯ ಭಟ್', ಮತ್ತು ತಾಯಿ, 'ಲಕ್ಷ್ಮಿ ಅಮ್ಮ. ’ಪೆರಡಾಲ’ದ ’ನವಜೀವನ ಪ್ರೌಢಶಾಲೆ'ಯಲ್ಲಿ ಕಲಿಕೆ. 'ಎಂ.ಜಿ.ಎಂ. ಕಾಲೇಜ್,' ಉಡುಪಿ,' ಯಲ್ಲಿ ಮುಂದಿನ ವಿದ್ಯಾಭ್ಯಾಸ. 'ಮದ್ರಾಸ್ ವಿ.ವಿ.ನಿಲಯ' ದಿಂದ 'ಬಿ.ಎಸ್.ಸ್ಸಿ', ಮತ್ತು 'ಎಂ.ಎಸ್ಸಿ' ಪದವಿಪಡೆದು 'ಸಸ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ' ಯನ್ನು ಖ್ಯಾತಶಾಸ್ತ್ರಜ್ಞ, 'ಡಾ. ಬಿ.ಜಿ.ಎಲ್.ಸ್ವಾಮಿ'ಯವರ ಮಾರ್ಗದರ್ಶನದಲ್ಲಿ ಪಡೆದಮೇಲೆ, ’ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜ್’ ನಲ್ಲಿ (೧೯೬೬-೬೮) 'ಸಂಶೋಧನ ಸಹಾಯಕ'ರಾಗಿ ಕೆಲಸಮಾಡಿದರು. ೧೯೬೮-೬೯ ರಲ್ಲಿ ’ಕೌನ್ಸಿಲ್ ಆಫ್ ಇಂಡಸ್ಟ್ರಿಯಲ್ ರಿಸರ್ಚ್’ ನ ’ಹಿರಿಯ ಫೆಲೋಶಿಪ್’ ಗಳಿಸಿದರು.

ಲ್ಯಾಟಿನ್ ಅಮೆರಿಕದಲ್ಲಿ ಅವರು ತಮ್ಮ ಕಾರ್ಯಕ್ಷೇತ್ರವನ್ನು ಗುರುತಿಸಿಕೊಂಡರು

[ಬದಲಾಯಿಸಿ]

೧೯೬೯-೧೯೮೭ ರ ವರೆಗೆ ದಕ್ಷಿಣ ಅಮೆರಿಕದ, ’ವೆನಿಝುವೆಲಾ’ ವಿ.ವಿ.ನಲ್ಲಿ ಹಿರಿಯ ಪ್ರಾಧ್ಯಾಪಕರಾಗಿ ಕೆಲಸಮಾಡಿದರು. ನಂತರ 'ಸಲಹೆಗಾರರಾಗಿ', 'ಸಂದರ್ಶಕ ಪ್ರಾಧ್ಯಾಪಕ'ರಾಗಿ, ’ಅಮೆರಿಕ’, ’ಕೆರೆಬಿಯನ್’, ’ಲ್ಯಾಟಿನ್ ಅಮೆರಿಕ’, ’ಚಿಲಿ’, ’ಪೆರು’, ’ಬೊಲಿವಿಯ’, ’ಕೆನಡ’, ’ಫ್ರಾನ್ಸ್’, ’ಸ್ಪೇನ್’, ’ಇಟಾಲಿ’, ’ಮೆಕ್ಸಿಕೊ’, ’ಅರ್ಜೆಂಟೀನ’, ’ಬ್ರೆಝಿಲ್’, ಹೀಗೆ ಜಗತ್ತಿನಾದ್ಯಂತ ಪ್ರವಾಸ ಮಾಡುತ್ತಿದ್ದರು. ನೈಸರ್ಗಿಕ ಆಹಾರಗಳನ್ನು ಬಳಸಲು ಸಲಹೆಮಾಡಿ ಅವನ್ನೆ ಪ್ರಚುರಪಡಿಸುತ್ತಿದ್ದರು, ಭಾರತೀಯ ಆರೋಗ್ಯ ಶಾಸ್ತ್ರಗಳನ್ನು ಸಮಯಬಂದಾಗಲೆಲ್ಲಾ ವಿವರಿಸುತ್ತಿದರು. ತಾವು ಹುಟ್ಟಿಬೆಳೆದ 'ಕರಾವಳಿ ಪ್ರದೇಶ'ದ ಅಗಾಧ ಸಸ್ಯಸಂಪತ್ತಿನಿಂದ ಪ್ರಭಾವಿತರಾಗಿದ್ದರು. ’ಮಣಿಪಾಲ್’ ನಲ್ಲಿ ಅವರ ಮನೆಯಿತ್ತು. ಭಾರತಕ್ಕೆ ಭೇಟಿ ಮಾಡಿದಾಗಲೆಲ್ಲ ಕರಾವಳಿ ತೀರಪ್ರದೇಶಗಳಿಗೆ ಭೇಟಿ ನೀಡಿ, ಜನಜಾಗೃತಿ ಮೂಡಿಸುವ ಉಪನ್ಯಾಸಗಳನ್ನು ನೀಡುತ್ತಿದ್ದರು. ಅಂತಾರಾಷ್ಟ್ರೀಯಮಟ್ಟದಲ್ಲಿ ಮನ್ನಣೆ ಪಡೆದ ವಿಜ್ಞಾನಿಯಾಗಿಯೂ, ಸಾಂಪ್ರದಾಯಕ ಸರಳ ಸಮಾರಂಭಗಳಿಗೂ ಹೋಗಿ, 'ನೈಸರ್ಗಿಕ ಪರಿಸರ ಪ್ರಜ್ಞೆ' ಹಾಗೂ ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡುತ್ತಿದ್ದರು.

’ವೆನೆಝುಯೆಲ ರಾಷ್ಟ್ರಾಧ್ಯಕ್ಷರ ಸಲಹೆಗಾರ’ರಾಗಿದ್ದರು

[ಬದಲಾಯಿಸಿ]

'ವಿನಾಶದ ಅಂಚಿನಲ್ಲಿದ್ದ ಔಷಧೀಯ ಸಸ್ಯಗಳ ಸಂರಕ್ಷಣೆ,' ಹಾಗೂ 'ಮಾನವಸ್ನೇಹಿ ಸಸ್ಯೌಷಧಗಳ ಪ್ರೋತ್ಸಾಹ'ಕ್ಕಾಗಿ, ಅಲ್ಲಿನ ಸರಕಾರವು ೨,೬೦೦ ಹೆಕ್ಟೇರ್, 'ವನ ಪ್ರದೇಶ'ವನ್ನಿತ್ತು ಸಸ್ಯಗಳನ್ನು ಬೆಳೆಯಲು ಪ್ರೋತ್ಸಾಹ ನೀಡಿದರು. 'ಡಾ. ಕೇಶವ ಭಟ್', 'ದೇವಕಿ'ಯವರನ್ನು ಮದುವೆಯಾದರು. "ಭಟ್ ದಂಪತಿ" ಗಳಿಗೆ ಜನಿಸಿದ ೪ ಮಕ್ಕಳೆಲ್ಲಾ, 'ವೆನೆಝುಯೆಲ', ದೇಶದ 'ಕುಮಾನ ನಗರ' ದಲ್ಲಿಯೇ.

ವಿಶ್ವದಲ್ಲೆಲ್ಲಾ ಪ್ರವಾಸಮಾಡಿ ಸಾತ್ವಿಕ ಆಹಾರದ ಪ್ರತಿಪಾದನೆಯನ್ನು ಮಾಡುತ್ತಾ ಬಂದಿದ್ದಾರೆ

[ಬದಲಾಯಿಸಿ]

'ಭಾರತೀಯ ವೈದ್ಯಪದ್ಧತಿಯ ಮಹತ್ವ'ಗಳನ್ನು ಹೋದೆಡೆಗಳಲ್ಲೆಲ್ಲಾ ಪ್ರಚುರಪಡಿಸಿದ್ದಾರೆ.ಸನ್, ೧೯೯೦ ಯಲ್ಲಿ ’ತಾಂಝನೀಯ’ನಲ್ಲಿ ಜರುಗಿದ ಔಷಧೀಯ ಸಸ್ಯಗಳ ಕುರಿತ ಸಮ್ಮೇಳನದಲ್ಲಿ ತಜ್ಞರ ಸಮಿತಿ ಸದಸ್ಯರಾಗಿ, ಆಯ್ಕೆಯಾದರು. ೧೯೯೨ ನಲ್ಲಿ ’ರೋಂ’ ನಲ್ಲಿ ನಡೆದ ಪೌಷ್ಟಿಕತೆ ಮತ್ತು ಆರೋಗ್ಯ ಕುರಿತ ಸಮ್ಮೇಳನದಲ್ಲಿ, ೧೯೯೮ ರಲ್ಲಿ ’ಬೆಂಗಳೂರಿನಲ್ಲಿ’ ನಡೆದ ಔಷಧೀಯ ಸಸ್ಯಗಳ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ’ಪ್ರಬಂಧ’ವನ್ನು ಮಂಡಿಸಿದ್ದರು. 'ಸ್ವಾವಲಂಬನೆ', 'ಸೂಕ್ತ ಶಿಕ್ಷಣ', 'ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆ', 'ಜೀವನಪದ್ಧ'ತಿಯಲ್ಲಿ ಸೂಕ್ತವಾದ ಬದಲಾವಣೆಗಳಿಂದ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದೆಂದು ಅವರ ಪ್ರತಿಪಾದನೆಯಾಗಿತ್ತು. 'ತರಕಾರಿ', 'ಹಣ್ಣು-ಹಂಪಲು'ಗಳನ್ನು ಬೇಯಿಸದೆ ತಿಂದರೆ, ಆರೋಗ್ಯಕ್ಕೆ ಉತ್ತಮವೆಂಬುದು ಅವರ ವಾದ. ಭಟ್ಟರು ಒಟ್ಟು, ೧೫ ಪುಸ್ತಕಗಳನ್ನು ಬರೆದಿದ್ದಾರೆ.

ಹಲವು ಭಾಷೆಗಳನ್ನು ಬಲ್ಲ ಪಂಡಿತರಾಗಿದ್ದರು

[ಬದಲಾಯಿಸಿ]

’ಕನ್ನಡ’, ’ತುಳು’, ’ಮಲೆಯಾಳಂ’, ’ತಮಿಳು’, ’ಜರ್ಮನ್’, ’ಫ್ರೆಂಚ್’, ’ಸ್ಪಾನಿಷ್’, ’ಇಂಗ್ಲೀಷ್’ ಭಾಷೆಗಳಲ್ಲಿ ಬರೆದಿದ್ದಾರೆ. ಕನ್ನಡದಲ್ಲಿ ಬರೆದ, ’ಸರಳ ಚಿಕಿತ್ಸೆಯಿಂದ ಸಮಗ್ರ ಚಿಂತನೆಯೆಡೆಗೆ, ಎಂಬ ಪುಸ್ತಕ ಬಹಳ ಪ್ರಸಿದ್ಧಿಯಾಗಿತ್ತು.

’ಸರಳ ಚಿಕಿತ್ಸೆಯಿಂದ ಸಮಗ್ರ ಚಿಂತನೆಯೆಡೆಗೆ-ಕನ್ನಡ ಭಾಷೆಯಲ್ಲಿ ರಚಿಸಿದ ಪುಸ್ತಕ

[ಬದಲಾಯಿಸಿ]

’ಸರಳ ಚಿಕಿತ್ಸೆಯಿಂದ ಸಮಗ್ರ ಚಿಂತನೆಯೆಡೆಗೆ-ಕನ್ನಡದಲಿ ಬೆಳಕು ಕಂಡ ಜನಪ್ರಿಯ ಕೃತಿ. ಸಸ್ಯಗಳ ಪರಿಚಯ, ಅವುಗಳ ಬಳಕೆ, ಬೆಳೆಯುವ ಕ್ರಮ, ಅದಕ್ಕೆ ಸಂಬಂಧಿಸಿದ ಸಿದ್ಧಾಂತಗಳು, ಆಹಾರ ಕ್ರಮಗಳ ಕುರಿತಾದ ’ಸ್ಪಾನಿಷ್’ ಭಾಷೆಯಲ್ಲಿ ಹಲವುಪುಸ್ತಕಗಳು ಪ್ರಕಟವಾಗಿದ್ದು ಅವುಗಳು ಆಂಗ್ಲ ಫ್ರೆಂಚ್ ಭಾಷೆಗಳಿಗೆ ತರ್ಜುಮೆಗೊಂಡಿವೆ. ’ಕಾಂತಾವರ ಕನ್ನಡ ಸಂಘ’ವು ’ಭಟ್ಟರ ಪರಿಚಯ ಪುಸ್ತಿಕೆ’ ಯೊಂದನ್ನು ಪ್ರಕಟಿಸಿದೆ.

ಆಹಾರ ಕ್ರಮದಲ್ಲಿ ಬದಲಾವಣೆ

[ಬದಲಾಯಿಸಿ]

ವಿಚಾರಸಂಕಿರಣಗಗಳ ಮೂಲಕ ಆರೋಗ್ಯ ಸಂರಕ್ಷಣೆಯ ಕಾಳಜಿಯ ಅರಿವನ್ನು ಹುಟ್ಟುಹಾಕುತ್ತಿದರು. ಜನರನ್ನು ಕಾಡುತ್ತಿರುವ ವಿವಿಧ ಪ್ರಮುಖ ಆರೋಗ್ಯ ಸಮಸ್ಯೆಯ ಪರಿಹಾರಕ್ಕೆ ಪೂರಕವಾಗಿ ನಮ್ಮ ಆಹಾರದಲ್ಲಿ ಆಗಬೇಕಾದ ಬದಲಾವಣೆಗಳನ್ನು ಸೂಚಿಸುತ್ತಿದ್ದರು. ತಮ್ಮ ಜೀವಿತಾವಧಿಯಲ್ಲಿ ಪರಿಸರ ಸಂರಕ್ಷಣೆ, ಬದುಕಿನಲ್ಲಿ ಆಹಾರ, ಇದರಿಂದ ಆರೋಗ್ಯ, ಮತ್ತು ತಾವು ಕಂಡುಕೊಂಡ ವಿಜ್ಞಾನದ ಹೊಸ ಸತ್ಯಗಳನ್ನು ವಿಶ್ವದಮುಂದೆ, ’ವಿವಾದಗಳು ಬಂದಾವು’ ಎಂಬ' ಜಾಗೃತಪ್ರಜ್ಞೆ'ಯಿಂದ 'ಬಿಚ್ಚಿಟ್ಟ ಹಿರಿಯ ಚೇತನ'.

೭೧ ವರ್ಷಪ್ರಾಯದ, 'ಡಾ. ಪಳ್ಳತ್ತಡ್ಕ ಕೇಶವ ಭಟ್' ರವರು, 'ಅಮೆರಿಕ ಸಂಯುಕ್ತ ಸಂಸ್ಥಾನ'ದ 'ವಯಾಮಿಂಗ್' ನಲ್ಲಿ ರವಿವಾರ, ೨೫, ಜುಲೈ, ೨೦೧೦ ರ ಬೆಳಿಗ್ಯೆ, ನಿಧನಹೊಂದಿದರು. ಮೃತರು, ತಮ್ಮ ಪತ್ನಿ, ದೇವಕಿ], ಪುತ್ರ, ಕುಮಾರ್ ಪ್ರಸಾದ್, ಮೂವರು ಪುತ್ರಿಯರನ್ನು ಅಗಲಿದ್ದಾರೆ.