ಎಮ್. ಎಲ್. ಹೇಮಲತಾ
ಹಾಡುವ-ವೈದ್ಯೆಯೆಂದೇ ಹೆಸರುಮಾಡಿರುವ ಡಾ. ಎಂ. ಎಲ್. ಹೇಮಲತಾರವರು ಬಿ. ಎಸ್ಸಿ; ಎಮ್. ಬಿ. ಬಿ. ಎಸ್ ; ಎಂ. ಡಿ; ಡಿ. ಸಿ. ಪಿ; ಪದವೀಧರೆ. ಕಲೆಗಳ ತವರೂರಾದ ಮೈಸೂರಿನ ಸಾಂಸ್ಕೃತಿಕ ವಲಯದಲ್ಲಿ 'The singing Docter,' ಎಂದು ಅವರು ಜನಪ್ರಿಯರಾಗಿದ್ದಾರೆ.
ಜನನ ಹಾಗೂ ಬಾಲ್ಯ
[ಬದಲಾಯಿಸಿ]ಹೇಮಲತಾರವರು, ಎ. ಎನ್. ಲಿಂಗಪ್ಪ ಮತ್ತು, ಕಮಲಮ್ಮ ದಂಪತಿಗಳ ಸುಪುತ್ರಿಯಾಗಿ ಜನಿಸಿದರು. ತಾಯಿ ಕಮಲಮ್ಮನವರು ಒಳ್ಳೆಯ ಹಾಡುಗಾರರು ಕಂಚಿನ ಕಂಠದ ಕಮಲಮ್ಮನವರು, ವೀಣೆ, ಜಲತರಂಗ್ ನಲ್ಲೂ ಪ್ರಾವೀಣ್ಯತೆ ಹೊಂದಿದ್ದಾರೆ. ತಂದೆಯವರು, 'ನಿವೃತ್ತ ಪೋಲೀಸ್ ಇನ್ಸ್ ಪೆಕ್ಟರ್', ೩ ಚಿನ್ನದ ಮೆಡಲುಗಳ ವಿಜೇತರು. ಹೇಮಲತಾರವರ ಒಬ್ಬಳೇ ಮಗಳು ’ರಷ್ಮಿ’ ಸಾಫ್ಟ್ವೇರ್ ಇಂಜಿನಿಯರ್ ಆಗಿರುತ್ತಾರೆ. ಅವರ ಪತಿ,ರಾಜೇಶ್ ಕೂಡಾ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು ಅಮೆರಿಕಾದಲ್ಲಿ ನೆಲೆಸಿದ್ದಾರೆ. ತಮ್ಮ ಕಾಲೇಜು ಶಾಲಾ ದಿನಗಳಿಂದಲೂ ಹಾಡುವುದನ್ನು ಅಭ್ಯಾಸಮಾಡಿಕೊಂಡಿರುವ ಹೇಮಲತಾರವರಿಗೆ ಹಾಡುಗಾರಿಕೆಯ ಕಲೆ,ಅವರ ತಾಯಿಯವರ ಬಳುವಳಿಯಾಗಿ ಬಂದಿದೆ.
ಗೀತ್ ಗಾತಾ ಚಲ್’ ಕನ್ನಡ,ಹಾಗೂ ಹಿಂದಿ ಚಲನಚಿತ್ರಗಳ ಸಂಗೀತ
[ಬದಲಾಯಿಸಿ]ಕಳೆದ ೧೦ ವರ್ಷಗಳಿಂದ ಮೈಸೂರಿನ ಸಂಗೀತ ಪ್ರೇಮಿಗಳ ಮನೆಮಾತಾಗಿರುವ ಸಂಗೀತಾಸಕ್ತ ಸಹೃದಯೀ ವೈದ್ಯ ಮಿತ್ರರುಗಳ ಸಂಗೀತ ಕಾರ್ಯಕ್ರಮ ವಾದ ’ಗೀತ್ ಗಾತಾ ಚಲ್’ ಅತ್ಯಂತ ಅನಪ್ರಿಯವಾಗಿದೆ. ಹಳೆಯ ಸುಮಧುರ ಕನ್ನಡ ಮತ್ತು ಹಿಂದಿ ಚಿತ್ರಗೀತೆಗಳನ್ನಾಧರಿಸಿದ ಈ ಕಾರ್ಯಕ್ರಮ ಅಪಾರ ಜನಮನ್ನಣೆಗಳಿಸಿತು. ಇದರ ಯಶಸ್ಸಿಗೆ ಈ ತಂಡದ ಮೂವರು ಸ್ಥಾಪಕ-ವೈದ್ಯ ಮಿತ್ರರುಗಳಲ್ಲಿ ಒಬ್ಬರಾದ ಹೇಮಲತಾ ರವರ ಕೊಡುಗೆ ಅಪಾರ. ಕೇವಲ ಆತ್ಮಸಂತೋಷ ಹಾಗೂ ಸಂಗೀತಾಭಿಮಾನಿಗಳ ಸೇವೆಗಾಗಿ. ಎರಡು ಸಿ.ಡಿಗಳನ್ನು ಹೊರತಂದಿದ್ದಾರೆ. ಮೈಸೂರಿನ ಪ್ರತಿಷ್ಠಿತ, ಮೈಸೂರು ಮೆಡಿಕಲ್ ಕಾಲೇಜ್ ಅಂಡ್ ರಿಸರ್ಚ್ ಇನ್ ಸ್ಟಿ ಟ್ಯೂಟ್ ನಲ್ಲಿ ರೋಗ ಲಕ್ಷಣ ವಿಭಾಗದ ಮುಖ್ಯಸ್ಥೆ, ವೃತ್ತಿಯಲ್ಲಿ ವೈದ್ಯೆ, ಪ್ರಾಧ್ಯಾಪಕಿಯಾಗಿರುವ ಹೇಮಲತಾರವರು ಪ್ರವೃತ್ತಿಯಿಂದ ಒಳ್ಳೆಯ ಗಾಯಕಿಯಾಗಿಯೂ ತಮ್ಮ ವಿದ್ವತ್ತನ್ನು ತೋರಿಸಿದ್ದಾರೆ. 'ಐ. ಎಮ್. ಎ' ಆಯೋಜಿಸಿದ್ದ ರಾಜ್ಯಮಟ್ಟದ ಮಹಿಳಾ ವೈದ್ಯೆಯರ ’ಶಟಲ್ ಬ್ಯಾಡ್ಮಿಂಟನ್ ಓಪನ್ ಸಿಂಗಲ್ಸ್ ಚಾಂಪಿಯನ್ ಶಿಪ್’ ನಲ್ಲಿ ವಿಜೇತರಾಗಿದ್ದಾರೆ.
ವೈದ್ಯಕೀಯ ವೃತ್ತಿಜೀವನದ ಜೊತೆಗೆ ಕಲಾರಾಧನೆ, ಹೇಮಲತಾರವರಿಗೆ ಮುದಕೊಟ್ಟಿದೆ
[ಬದಲಾಯಿಸಿ]ವೈದ್ಯಕೀಯ ಮಹಾವಿದ್ಯಾಲಯದಲ್ಲಿ ತಮ್ಮ ಬೋಧನಾವೃತ್ತಿಯ ಜೊತೆಗೆ ಅಲ್ಲಿನ 'ಸಾಂಸ್ಕೃತಿಕ ವೇದಿಕೆ,ಯ ಅಧ್ಯಕ್ಷೆ' ಯೂ ಅಗಿ, ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ, ಇವರ ಸಾಂಸ್ಕೃತಿಕ ಸೇವೆಯ ಶ್ರೇಷ್ಠತೆಯನ್ನು ಗುರುತಿಸಿ, ಕಳೆದ ವರ್ಷದ 'ಅಂತಾರಾಷ್ಟ್ರೀಯ ಮಹಿಳಾದಿನ' ದಂದು ’ಕಾಲೇಜಿನ ಸಾಧಕ ಮಹಿಳೆ’ಎಂದು ಗೌರವಿಸಿದೆ. [Women Achiever of MMCK & RI]
ವಿದೇಶದಲ್ಲಿಯೂ ಜನಪ್ರಿಯತೆ
[ಬದಲಾಯಿಸಿ]ಅಮೆರಿಕಕ್ಕೆ ಖಾಸಗಿ ಭೇಟಿನೀಡಿದಾಗ ಅಲ್ಲಿನ ’ಟೆಕ್ಸಾಸ್ ರಾಜ್ಯದ’ ’ಆಸ್ಟಿನ್ ನಗರ’ದ ಭಾರತೀಯ ಮೂಲದ ನಿವಾಸಿಗಳು ಏರ್ಪಡಿಸಿದ್ದ ಸಾಂಸ್ಕೃತಿಕ ಕೂಟದಲ್ಲಿ ಹೇಮಲತಾರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದೇ ಅಲ್ಲದೆ, ಅಲ್ಲಿ ನಡೆದ ಸಂಗೀತ ಸ್ಪರ್ಧೆಯ ಮುಖ್ಯ ತೀರ್ಪುಗಾರರಾಗಿಯೂ ಕಾರ್ಯನಿರ್ವಹಿಸಿ 'ಭಾರತೀಯ ಅಮೆರಿಕನ್ನರ' ಗೌರವಕ್ಕೆ ಪಾತ್ರರಾಗಿದ್ದಾರೆ.