ವಿಷಯಕ್ಕೆ ಹೋಗು

ಡಾ. ಎಚ್ ಎಲ್ ಪುಷ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜನನ, ವಿದ್ಯಾಭ್ಯಾಸ, ಉದ್ಯೋಗ

ಕನ್ನಡದ ಕವಯತ್ರಿ, ನಾಟಕಕಾರ್ತಿ ಮತ್ತು ವಿಮರ್ಶಕಿ ಡಾ. ಎಚ್ ಎಲ್ ಪುಷ್ಪ ಅವರು ದೊಡ್ಡಬಳ್ಳಾಪುರದ ಹೊಸಹಳ್ಳಿ ಉಜ್ಜನಿಯಲ್ಲಿ ೧೮ ಸೆಪ್ಟಂಬರ್ ೧೯೬೨ರಂದು ಜನಿಸಿದರು. ಇವರ ತಾಯಿ ಕಮಲಮ್ಮ, ತಂದೆ ಲಕ್ಷ್ಮಣಗೌಡ. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಭಾಷಾ ವಿಷಯದಲ್ಲಿ ತೌಲನಾತ್ಮಕ ಅಧ್ಯಯನ ಕುರಿತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ.'ಕನ್ನಡ ನಾಟಕಗಳಲ್ಲಿ ಮೈಮನಸ್ಸುಗಳ ಸಂಬಂಧ' ವಿಷಯವಾಗಿ ಪ್ರಬಂಧ ಮಂಡಿಸಿ, ಹಂಪಿ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಕವನ ರಚನೆಯಲ್ಲಿ ಅತೀವ ಆಸಕ್ತಿ ಇರುವ ಇವರು ಅಮೃತಮತಿ ಸ್ವಗತ ಕೃತಿಯ ಮೂಲಕ ಕಾವ್ಯ ಕ್ಷೇತ್ರ ಪ್ರವೇಶಿಸಿದರು. ಕನ್ನಡ ಉಪನ್ಯಾಸಕರಾಗಿ ೧೯೮೪ ರಿಂದ ಸೇವೆ ಸಲ್ಲಿಸಿ, ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ, ಈಗ ನಿವೃತ್ತಿ ಹೊಂದಿದ್ದಾರೆ. ತಮ್ಮ ಪತಿ, ಆರ್ ಜಿ ಹಳ್ಳಿ ನಾಗರಾಜ್ ಅವರ ‘ಅನ್ವೇಷಣೆ ಸಾಹಿತ್ಯ ಪತ್ರಿಕೆ’ಗೆ ಗೌರವ ಸಂಪಾದಕರಾಗಿ ಕೆಲಸ ಮಾಡುತ್ತಿರುವ ಡಾ. ಹೆಚ್ ಎಲ್ ಪುಷ್ಪ, ಇದೀಗ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿ(ಅವಧಿ: ೨೦೨೨-೨೦೨೫) ಸಾಹಿತ್ಯ ಸೇವೆ ಸಲ್ಲಿಸುತ್ತಿದ್ದಾರೆ.


ಪ್ರಕಟಿತ ಕೃತಿಗಳು

[ಬದಲಾಯಿಸಿ]

ಕವನ ಸಂಕಲನಗಳು

[ಬದಲಾಯಿಸಿ]
  • ಅಮೃತಮತಿಯ ಸ್ವಗತ - ೧೯೯೨
  • ಗಾಜುಗೋಳ - ೨೦೦೦
  • ಲೋಹದ ಕಣ್ಣು - ೨೦೦೯
  • ಸೋಲಾಬರಸ್ ಹುಡಗರು ಹಾಗೂ ಎಕ್ಕದ ಬೀಜ - ೨೦೨೦
  • ಮದರಂಗಿ ವೃತ್ತಾಂತ (ಸಮಗ್ರ ಕಾವ್ಯ) - ೨೦೨೦


ನಾಟಕಗಳು

[ಬದಲಾಯಿಸಿ]
  • ಭೂಮಿಯಲ್ಲ ಇವಳು - ೨೦೦೪
  • ಸ್ಯಾಫೋ – ಒಂದು ನೀಲಾಗ್ನಿ (ಗ್ರೀಕ್ ಕವಯತ್ರಿ ಸ್ಯಾಫೋ ಬದುಕು, ಬರಹ ಕುರಿತಾದ ನಾಟಕ)
  • ಗೆಲ್ಲಲಾರ್ಕುಮೆ ಮೃತ್ಯುರಾಜನಂ
  • ಪರ್ವಾಪರ್ವ


ವಿಮರ್ಶಾ ಕೃತಿಗಳು

[ಬದಲಾಯಿಸಿ]
  • ವಚನ ಸಾಹಿತ್ಯ ಹಾಗೂ ಸ್ತ್ರೀತ್ವದ ಕಲ್ಪನೆ - ೨೦೦೫
  • ಗಂಧಗಾಳಿ - ೨೦೦೬
  • ಸ್ತ್ರೀ ಎಂದರೆ ಅಷ್ಟೇ ಸಾಕೆ - ೨೦೧೪


ಸಂಪಾದಿತ ಕೃತಿಗಳು

[ಬದಲಾಯಿಸಿ]
  • ಕವಿತೆ – ೧೯೯೨ ಪ್ರಕಟಣೆ : ಕರ್ನಾಟಕ ಸಾಹಿತ್ಯ ಅಕಾಡೆಮಿ
  • ಗಂಗಾಧರ ಚಿತ್ತಾಲರ ಸಮಗ್ರ ಕಾವ್ಯ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ
  • ರಂಗಭೂಮಿ ಮತ್ತು ಮಹಿಳೆ – ೨೦೧೫ ಪ್ರಕಟಣೆ: ಕರ್ನಾಟಕ ನಾಟಕ ಅಕಾಡೆಮಿ
  • ಮಾನವಿಕಗಳು-೧೫ - ಕನ್ನಡ ಸಾಹಿತ್ಯ ಚರಿತ್ರೆ, ಪ್ರಕಟಣೆ: ಕನ್ನಡ ಸಾಹಿತ್ಯ ಪರಿಷತ್ತು


ಜೀವನ ಚರಿತ್ರೆ

[ಬದಲಾಯಿಸಿ]
  • ವಚನಕಾರ್ತಿ ಅಕ್ಕ ನಾಗಮ್ಮ


ಪ್ರಶಸ್ತಿಗಳು

[ಬದಲಾಯಿಸಿ]
  • ಅಮೃತಮತಿ ಸ್ವಗತ (ಕವನ ಸಂಕಲನ)

೧) ಆರ್ಯಭಟ ಪ್ರಶಸ್ತಿ – ೧೯೯೨
೨) ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ವಿದ್ಯಾವರ್ಧಕ ಸಂಘ, ಧಾರವಾಡ-೧೯೯೨
೩) ಉದಯ ಭಾರತಿ ರಾಷ್ಟ್ರೀಯ ಪ್ರಶಸ್ತಿ – ರಾತ್ರಿರಾಣಿ ಕವನಕ್ಕೆ (ಒರಿಸ್ಸಾ ಸರ್ಕಾರ ಮಾನವ ಸಂಪನ್ಮೂಲ ಇಲಾಖೆ ಮತ್ತು ಭಾರತ ಸರ್ಕಾರದ ಸಹಯೋಗದಲ್ಲಿ) - ೦೧.೧೦.೧೯೯೪


  • ಗಾಜುಗೋಳ (ಕವನ ಸಂಕಲನ)

೧) ಕಡಂಗೋಡ್ಲು ಶಂಕರಭಟ್ಟರ ಕಾವ್ಯ ಪ್ರಶಸ್ತಿ -೨೦೦೦
೨) ಡಾ.ಪು.ತಿ.ನ ಕಾವ್ಯ ಪುರಸ್ಕಾರ -೨೦೦೦
೩) ಸಾರಂಗಮಠ ಪಾಟೀಲ ಪ್ರಶಸ್ತಿ -ಹುನಗುಂದ-೨೦೦೦


  • ಭೂಮಿಯಲ್ಲ ಇವಳು (ನಾಟಕ)

೧) ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ -೨೦೦೪


  • ಲೋಹದ ಕಣ್ಣು (ಕವನ ಸಂಕಲನ)

೧) ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ -೨೦೦೯
೨) ದಿನಕರ ದೇಸಾಯಿ ಕಾವ್ಯ ಪುರಸ್ಕಾರ -೨೦೦೯


  • ಸ್ತ್ರೀ ಎಂದರೆ ಅಷ್ಟೇ ಸಾಕೆ (ವಿಮರ್ಶೆ)

೧) ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ -೨೦೧೫


  • ಒಟ್ಟು ಸಾಹಿತ್ಯಕ್ಕಾಗಿ

೧) ನಾಡಚೇತನ ಪ್ರಶಸ್ತಿ -೨೦೦೯
೨) ಮಂತ್ರಂ ಅಚೀವ್ಮೆಂಟ್ ಅವಾಡ್ರ್ಸ್ ಫಾರ್ ವುಮೆನ್ ಇನ್ ದ ಆಟ್ರ್ಸ್ ಅಂಡ್ ಲೆಟರ್ಸ್ -೨೦೧೪ (ಆಫ್ರಿಕಾದ ಪ್ರಸಿದ್ಧ ಕವಯಿತ್ರಿ ಮಾಯಾ ಏಂಜಲೋ ಹೆಸರಿನಲ್ಲಿನ ಪ್ರಶಸ್ತಿ) ೩) ಸಾಹಿತ್ಯಶ್ರೀ ಪ್ರಶಸ್ತಿ – ಕರ್ನಾಟಕ ಸಾಹಿತ್ಯ ಅಕಾಡೆಮಿ ೪) ಪಂಕಜಶ್ರೀ ಪ್ರಶಸ್ತಿ - ಕನ್ನಡ ಸಾಹಿತ್ಯ ಪರಿಷತ್ತು


ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾದ ಕೃತಿಗಳು

[ಬದಲಾಯಿಸಿ]

ಡಾ. ಹೆಚ್ ಎಲ್ ಪುಷ್ಪ ಅವರ 'ಅಮೃತಮತಿ ಸ್ವಗತ' ಕವನ ಸಂಕಲನವು ಬೆಳಗಾವಿ ಮತ್ತು ಶಿವಮೊಗ್ಗ ವಿಶ್ವವಿದ್ಯಾಲಯಗಳ ಪದವಿ ತರಗತಿಗಳಿಗೆ ಪಠ್ಯವಾಗಿದೆ. ಮತ್ತು ಮೈಸೂರು ವಿಶ್ವವಿದ್ಯಾಲಯದಲ್ಲಿ 'ಅಮೃತಮತಿ ಸ್ವಗತ' ಕವಿತೆಯು ಪದವಿ ತರಗತಿಗಳಿಗೆ ಪಟ್ಯವಾಗಿತ್ತು.
ಹಾಗೂ ಇವರು ರಚಿಸಿದ 'ಗೆಲ್ಲಲಾರ್ಕುಮೆ ಮೃತ್ಯುರಾಜನಂ' ನಾಟಕವು ಬೆಂಗಳೂರು ವಿಶ್ವದ್ಯಾಲಯದಲ್ಲಿ ಐದು ವರ್ಷಗಳ ಕಾಲ ಪಠ್ಯವಾಗಿತ್ತು.