ವಿಷಯಕ್ಕೆ ಹೋಗು

ವಿವೇಕ್ ಮೂರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಡಾ.ವಿವೇಕ್ ಮೂರ್ತಿ ಇಂದ ಪುನರ್ನಿರ್ದೇಶಿತ)
ಡಾ.ವಿವೇಕ್ ಮೂರ್ತಿ
Vivek Murthy seated facing a microphone with an audience behind him

Taking office
ಡಿಸೆಂಬರ್ ೨೦೧೪ ರಿಂದ ಕಾರ್ಯ ಪ್ರವೃತ್ತರಾಗಿದ್ದಾರೆ.
ರಾಷ್ಟ್ರಪತಿ ಬರಾಕ್ ಒಬಾಮ
Succeeding Boris Lushniak (Acting)
ವೈಯಕ್ತಿಕ ಮಾಹಿತಿ
ಜನನ ವಿವೇಕ್ ಹಲ್ಲೆಗೆರೆ ಮೂರ್ತಿ
ಟೆಂಪ್ಲೇಟು:Date of birth and age
ಹಡ್ಡರ್ಸ್ ಫೀಲ್ಡ್, ಯುನೈಟೆಡ್ ಕಿಂಗ್ಡಮ್
ರಾಜಕೀಯ ಪಕ್ಷ Democratic
ಅಭ್ಯಸಿಸಿದ ವಿದ್ಯಾಪೀಠ ಹಾರ್ವರ್ಡ್ ವಿಶ್ವವಿದ್ಯಾಲಯ
ಯೇಲ್ ವಿಶ್ವವಿದ್ಯಾಲಯ

ಡಾ|| ವಿವೇಕ್ ಮೂರ್ತಿ,೩೯ ವರ್ಷದ 'ಭಾರತೀಯ ಅಮೆರಿಕನ್ ವೈದ್ಯ'ರಾಗಿದ್ದು, ಅಮೆರಿಕದ ವೈದ್ಯಕೀಯ ಇಲಾಖೆಯ ಉನ್ನತ ಹುದ್ದೆಗೆ ಆಯ್ಕೆಯಾಗಿದ್ದಾರೆ.[] ವಿವೇಕ್ ಮೂರ್ತಿ, ಭಾರತೀಯ ಮೂಲದ ಈ ಹುದ್ದೆ ಅಲಂಕರಿಸಿದ ಮೊದಲ ಭಾರತೀಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಡಾ|| ವಿವೇಕ್ ಮೂರ್ತಿಯನ್ನು, ಅಮೆರಿಕ ಸೆನೆಟ್, ನಡೆಸಿದ ಮತದಾನದಲ್ಲಿ, ೫೧ ಮತಗಳ ಪೈಕಿ ವಿವೇಕ್ ಮೂರ್ತಿಯವರಿಗೆ ೪೩ ಮತಗಳನ್ನು ಹಾಸಿಲ್ ಮಾಡಿದ ಪ್ರಯುಕ್ತ, ವೈದ್ಯಕೀಯ ನಿರ್ದೇಶಕ ಹುದ್ದೆಗೆ (surgeon general)ಆಯ್ಕೆಗೊಂಡು,'ಅಮೆರಿಕ ಡಾಕ್ಟರ್‌' ಎಂಬ ಕೀರ್ತಿಯನ್ನು ಗಳಿಸಿದ್ದಾರೆ. 'ವೈದ್ಯಕೀಯ ನಿರ್ದೇಶಕ' ಹುದ್ದೆ, ವೈದ್ಯಕೀಯ ಇಲಾಖೆಯ ಮಹೋನ್ನತ ಹುದ್ದೆ ಎಂದು ಪರಿಗಣಿಸಲಾಗಿದೆ. ಡಾ.ವಿವೇಕ್, ೨೦೧೩ ರ ನವೆಂಬರ್ ೧೬ ರಂದೇ ಅಧ್ಯಕ್ಷ, ಬರಾಕ್ ಒಬಾಮರಿಂದ 'ಸೇವಾ ನಾಮನಿರ್ದೇಶನ' ಗೊಂಡಿದ್ದರು. ಆದರೆ, 'ರಿಪಬ್ಲಿಕನ್ ಪಕ್ಷದ ಪ್ರಬಲ ವಿರೋಧ,' ಮತ್ತು 'ಗನ್ ಲಾಬಿ' ಮಾಡುವ 'ರೈಫಲ್ ಅಸೋಸಿಯೇಷನ್ ವಿರೋಧ'ದಿಂದಾಗಿ ಮತದಾನ ಪ್ರಕ್ರಿಯೆ ವಿಳಂಬಗೊಂಡಿತು.('ಅಮೆರಿಕದ ರಾಷ್ಟ್ರೀಯ ಶಸ್ತ್ರಾಸ್ತ್ರ ನಿರ್ಮಾಣ ಸಂಸ್ಥೆಗಳ ಸಂಘದ ಪೂರ್ಣಬೆಂಬಲ'ವೂ ವಿವೇಕರಿಗೆ ದೊರೆತಿರಲಿಲ್ಲ.) ಹೀಗಾಗಿ ವಿವೇಕ್ ಅಲ್ಲಿನ ಲಾಬಿಯ ರಾಜಕೀಯದಲ್ಲೂ ತೀವ್ರ ವಿರೋಧವನ್ನು ಮನಗಾಣಬೇಕಾಯಿತು.[] 'ಡಾ|| ವಿವೇಕ್‌ಮೂರ್ತಿ,' ಈ ಉನ್ನತ ಹುದ್ದೆ ಅಲಂಕರಿಸುವ ಮೂಲಕ, ಅತಿ ಚಿಕ್ಕ ವಯಸ್ಸಿನ ಮತ್ತು ಮೊದಲ ಭಾರತೀಯನೆಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.[]

ಸರ್ಜನ್ ಜನರಲ್ ಹುದ್ದೆ

[ಬದಲಾಯಿಸಿ]

ಅಮೆರಿಕದ ಸಾರ್ವಜನಿಕರ ಒಟ್ಟಾರೆ ವೈದ್ಯಕೀಯ ಸೇವೆಗಳ ಮುಖ್ಯಸ್ಥ ; ಇವರ ಸೇವಾ ಅವಧಿ ೪ ವರ್ಷಗಳು. ಸಾರ್ವಜನಿಕ ಆರೋಗ್ಯ ಕುರಿತ ಮುಖ್ಯ ವಕ್ತಾರರು ಸಹಿತ. ಇವರ ಅಧೀನದಲ್ಲಿ ೬,೫೦೦ ಕ್ಕೂ ಹೆಚ್ಚು ವೈದ್ಯರ ಪಡೆಯಿದೆ. ಇವರೆಲ್ಲಾ ರಾಷ್ಟ್ರದ ಸಾರ್ವಜನಿಕ ವೈದ್ಯಕೀಯ ಅಭಿಯಾನದಲ್ಲಿ ಸಕ್ರಿಯವಾಗಿ ಕಾರ್ಯನಿರತರಾಗುತ್ತಾರೆ. ಡಾ.ವಿವೇಕ್ ಮೂರ್ತಿಯವರು, 'ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರ ಆಪ್ತ ಸರ್ಜನ್ ಜನರಲ್' ಆಗಿಯೂ ನಿಯೋಜಿತರಾಗಿದ್ದಾರೆ. 'ಭಾರತೀಯ ಯೋಗ ಪದ್ಧತಿ'ಯಲ್ಲಿ ವಿವೇಕ್ ಅಪಾರ ಗೌರವ ಹೊಂದಿದ್ದಾರೆ. ಏಪ್ರಿಲ್, ೨೩ ನೆಯ ತಾರೀಖು ಗುರುವಾರ,೨೦೧೫ ರಂದು ಅವರು ವಿಧ್ಯುಕ್ತವಾಗಿ ಭಗವದ್ಗೀತೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.[]

ಜನನ, ವಿದ್ಯಾಭ್ಯಾಸ, ವೃತ್ತಿಜೀವನ

[ಬದಲಾಯಿಸಿ]

'ವಿವೇಕ್', ಕರ್ನಾಟಕ ರಾಜ್ಯದ ಮಂಡ್ಯ ತಲ್ಲೂಕಿನ ಹಲ್ಲೇಗೆರೆ ಗ್ರಾಮದ ಮೂಲ ವಾಸಿ, ವೈದ್ಯ,'ಎಚ್.ಎನ್.ಲಕ್ಷ್ಮೀನರಸಿಂಹ ಮೂರ್ತಿ', ಮತ್ತು 'ಮೈತ್ರೇಯಿ' ದಂಪತಿ ಪ್ರೀತಿಯ ಮಗನಾಗಿ ಲಂಡನ್ ಬಳಿಯ 'ಹಡರ್ಸ್ ಫೀಲ್ಡ್' ನಲ್ಲಿ ೧೦,ಜುಲೈ,೧೯೭೭ ರಲ್ಲಿ, ಜನಿಸಿದರು. ವಿವೇಕ್ ಅವರ ತಾತ, 'ದಿವಂಗತ ಎಚ್.ಸಿ. ನಾರಾಯಣಮೂರ್ತಿ,' 'ವಿಕ್ರಾಂತ್ ಟಯರ್ಸ್,' ಮತ್ತು 'ಮೈಸೂರು ಷುಗರ್ಸ್ ನಿರ್ದೇಶಕ,'ರಾಗಿದ್ದರು. ಅವರು ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ (ಎಂಎಂಸಿ) ಹಳೆಯ ವಿದ್ಯಾರ್ಥಿ. ಮಂಡ್ಯದ 'ಅಸಿಟೇಟ್ ಫ್ಯಾಕ್ಟರಿ ಆಸ್ಪತ್ರೆ'ಯಲ್ಲಿ ಸ್ವಲ್ಪ ಕಾಲ ವೈದ್ಯರಾಗಿ ಕರ್ತವ್ಯ ನಿರ್ವಹಿಸಿದ್ದರು. ನಂತರ ಉನ್ನತ ಶಿಕ್ಷಣಕ್ಕಾಗಿ ಲಂಡನ್‌ಗೆ ತೆರಳಿದ್ದರು. ಲಕ್ಷ್ಮೀನರಸಿಂಹ ಮೂರ್ತಿ ದಂಪತಿ, ವಿವೇಕ್ ೩ ವರ್ಷದ ಮಗುವಿದ್ದಾಗಲೇ, ಅಮೆರಿಕ ರಾಷ್ಟ್ರದ 'ಫ್ಲಾರಿಡಾ' ರಾಜ್ಯದ 'ಮಯಾಮಿ'ಯಲ್ಲಿ ಬಂದು ನೆಲೆಸಿದರು. ವಿವೇಕ್ ವಿಶ್ವದ ಅತಿ ಹೆಸರಾಂತ ಎರಡು ವಿಶ್ವವಿದ್ಯಾಲಯಗಳಲ್ಲಿ ಪದವಿ ಗಳಿಸಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ತಮ್ಮ ಡಿಗ್ರಿಯನ್ನು ಗಳಿಸಿದ್ದರು. ನಂತರ ಸ್ನಾತಕೋತ್ತರ ಪದವಿಯನ್ನು 'ಯೇಲ್ ವಿಶ್ವವಿದ್ಯಾಲಯ'ದಲ್ಲಿ 'ಮೆಡಿಸಿನ್ ನಲ್ಲಿ ಡಾಕ್ಟರೇಟ್ ಪದವಿ' ಮತ್ತು ಎಮ್.ಬಿ.ಎ.ಗಳಿಸಿದರು. ಈಗ ಅವರು 'ಬಾಸ್ಟನ್ ನ ಫಿಸಿಶಿಯನ್ ಮತ್ತು ಇನ್ ಸ್ಟ್ರಕ್ಟರ್' ಆಗಿ 'ಬ್ರಿಘಮ್ ಮತ್ತು ವೆಮೆನ್ಸ್ ಹಾಸ್ಪಿಟಲ್,' ವೃತ್ತಿಪರರಾಗಿದ್ದಾರೆ. ೨೦೦೯ ರಲ್ಲಿ ಅವರು, ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನಲ್ಲಿ, 'ಡಾ ಆಫ್ ಅಮೆರಿಕ ಸಂಸ್ಥೆ'ಯನ್ನು ಗೆಳೆಯರ ಜೊತೆ ಸೇರಿ ಸ್ಥಾಪಿಸಿದರು. (Doctors for America), ಒಟ್ಟು ೧೬,೦೦೦ ನಿಷ್ಠಾವಂತ, ವೈದ್ಯರೆಲ್ಲಾ ಮತ್ತು ವೈದ್ಯಕೀಯ ವಿದ್ಯಾರ್ಥಿಗಳೂ ಜೊತೆಗೂಡಿ (“creating a better health care system”) ಅಧ್ಯಕ್ಷ ಬರಾಕ್ ಒಬಾಮರವರ 'ಹೆಲ್ತ್ ಕೇರ್ ಸಿಸ್ಟೇಮ್,' ಮತ್ತು 'ಹೆಲ್ತ್ ಇನ್ಶೂರೆನ್ಸ್ ಅಭಿಯಾನ'ದಲ್ಲಿ ನಲ್ಲಿ ತಮ್ಮ ಯೋಗದಾನ ಮಾಡುತ್ತಿದ್ದಾರೆ.

‘ವಿಶನ್ಸ್ ವರ್ಲ್ಡ್‌ವೈಡ್’ ಸ್ಥಾಪನೆ

[ಬದಲಾಯಿಸಿ]

ಹಾರ್ವರ್ಡ್ ವಿವಿಯಲ್ಲಿ ವೈದ್ಯಕೀಯ ಪದವಿ ಅಧ್ಯಯನ ಮಾಡುತ್ತಿದ್ದಾಗಲೇ ಮೂರ್ತಿಯವರು ಎಚ್‌ಐವಿ/ಏಡ್ಸ್ ರೋಗವನ್ನು ತಡೆಯುವ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ‘ವಿಶನ್ಸ್ ವರ್ಲ್ಡ್‌ವೈಡ್’ಎಂಬ ಸರಕಾರೇತರ ಸಂಘಟನೆಯೊಂದನ್ನು ಹುಟ್ಟುಹಾಕಿದ್ದರು. ಭಾರತದಲ್ಲಿ ಹಾಗೂ ಅಮೆರಿಕದ ವಿವಿಧೆಡೆ ಈ ಸಂಸ್ಥೆಯು ಏಡ್ಸ್ ಪೀಡಿತರ ಪುನರ್ವಸತಿ ಕಾರ್ಯಕ್ರಮಗಳನ್ನು ಕೂಡಾ ಆಯೋಜಿಸಿತ್ತು. ವಿವೇಕ್ ಮೂರ್ತಿ ಅವರ ತಾತ ಬಡ ರೈತರಾಗಿದ್ದು, ಭಾರತದ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿದ್ದರೆಂದು ಮೂರ್ತಿ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದರು.

‘ಸ್ವಾಸ್ಥ’ಸಾಮುದಾಯಿಕ ಸಂಸ್ಥೆ

[ಬದಲಾಯಿಸಿ]

ಇದಾದ ಬಳಿಕ ವಿವೇಕ್ ಕೆಲವು ಉತ್ಸಾಹಿ ಅಮೆರಿಕ ಕನ್ನಡಿಗರ ಜೊತೆಗೂಡಿ,‘ಸ್ವಾಸ್ಥ’ ಎಂಬ ಸಾಮುದಾಯಿಕ ಆರೋಗ್ಯ ಶಿಕ್ಷಣಸಂಸ್ಥೆಯನ್ನು ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಆರಂಭಿಸಿದರು. ಈ ಸಂಸ್ಥೆಯು ಗ್ರಾಮೀಣ ಜನರಿಗೆ ಮೂಲಭೂತ ಆರೋಗ್ಯ ಶಿಕ್ಷಣ, ಶುಶ್ರೂಷೆ ಮತ್ತು ಸಾಮಾಜಿಕ ಬೆಂಬಲವನ್ನು ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಸ್ವಾಸ್ಥ ಸಂಘಟನೆಯ ಚಟುವಟಿಕೆಗಳ ಮೂಲಕ ಅವರು ಸಾಮುದಾಯಿಕ ಆರೋಗ್ಯ ಕಾರ್ಯಕ್ರಮಗಳನ್ನು ಹೇಗೆ ಸಮರ್ಪಕವಾಗಿ ಸಂಘಟಿಸುವುದೆಂಬುದನ್ನು ಅರಿತುಕೊಂಡಿದ್ದಾಗಿ ವಿವೇಕ್ ಹೇಳಿದ್ದಾರೆ. ಪ್ರತಿ ಕುಟುಂಬವೂ ಆರೋಗ್ಯವಾಗಿರಲು ಬೇಕಾದ ವ್ಯವಸ್ಥೆಯನ್ನು ಅವರು ಮಾಡಿಕೊಡುತ್ತಾರೆ. ಮುಂದಿನ ಪೀಳಿಗೆಯು ರೋಗ ಮುಕ್ತಗೊಂಡು ಬಲಶಾಲಿಯಾಗಲು, 'ಎಬೋಲಾ'ದಂಥ ಹೊಸ ಹೊಸ ವ್ಯಾಧಿಗಳನ್ನು ನಿಯಂತ್ರಿಸಲು ಮೂರ್ತಿ ಶ್ರಮಿಸಲಿದ್ದಾರೆ' ‘ಡಾ.ವಿವೇಕ್ ಸರಳ ವ್ಯಕ್ತಿಯಾಗಿದ್ದು ಎಲ್ಲರೊಂದಿಗೂ ಉತ್ತಮ ಸಂಬಂಧ ಹೊಂದಿದ್ದಾರೆ. ಭಾರತೀಯ ಅಮೆರಿಕನ್‌ ಸಮುದಾಯ, ವೈದ್ಯ ಸಂಘಟನೆಗಳ ಅಪಾರ ಬೆಂಬಲ ಹೊಂದಿರುವ ಮೂರ್ತಿ ನೇಮಕಕ್ಕೆ ಅಮೆರಿಕ ಭಾರತೀಯರು ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ.

'ಒಬಾಮಾಕೇರ್‌ ಅಭಿಯಾನದಲ್ಲಿ ತೊಡಗಿದ್ದಾರೆ

[ಬದಲಾಯಿಸಿ]

ವೈದ್ಯರಾಗಿ, ಬೋಧಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ|| ವಿವೇಕ್‌ ಹಲ್ಲೇಗೆರೆ ಮೂರ್ತಿ, ಒಬಾಮಾ ಅವರ ಕನಸಿನ ಯೋಜನೆಯಾದ 'ಒಬಾಮಾಕೇರ್‌'ಗೆ ಪ್ರೋತ್ಸಾಹ ನೀಡುವ ಸಮಿತಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಡಾ|| ವಿವೇಕ್‌ ಅವರು 'ಡಾಕ್ಟರ್ ಫಾರ್‌ ಅಮೆರಿಕ' ಎಂಬ ಸಂಸ್ಥೆಯ ಸಹಸಂಸ್ಥಾಪಕ ಹಾಗೂ ಅಧ್ಯಕ್ಷರೂ ಆಗಿದ್ದಾರೆ. ಈ ಸಂಸ್ಥೆಗೆ ೧೫ ಸಾವಿರ ವೈದ್ಯರು, ವೈದ್ಯ ವಿದ್ಯಾರ್ಥಿಗಳು ಸದಸ್ಯರಾಗಿದ್ದಾರೆ. ಭಾರತ ಹಾಗೂ ಅಮೆರಿಕದಲ್ಲಿ ಎಚ್‌ಐವಿ/ಏಡ್ಸ್‌ ಶಿಕ್ಷಣದ ಕುರಿತು ಗಮನಕೇಂದ್ರೀಕರಿಸಿ ಸೇವೆ ಸಲ್ಲಿಸುತ್ತಿರುವ 'ವಿಷನ್ಸ್‌ ವರ್ಲ್ಡ್ವೈಡ್‌' ಎಂಬ ಸಂಸ್ಥೆಯನ್ನು ೧೯೯೫ ರಲ್ಲಿ ಸಹಸಂಸ್ಥಾಪಿಸಿದ ಡಾ||ವಿವೇಕ್‌ ಅವರು, ೧೯೯೫ ರಿಂದ ೨೦೦೦ ರವರೆಗೆ ಅಧ್ಯಕ್ಷರಾಗಿ, ೨೦೦೦ ರಿಂದ ಅಮೆರಿಕದಲ್ಲಿ ನೆಲೆಯೂರಿದ್ದಾರೆ.

ವಿವೇಕ್‌ ವೈದ್ಯಕೀಯ ಸೇವೆ, ಭಾರತದ ಮಂಡ್ಯದಲ್ಲಿ

[ಬದಲಾಯಿಸಿ]

ಆರೋಗ್ಯ ಶಿಬಿರ: ತಂದೆ ಹುಟ್ಟು ಹಾಕಿರುವ 'ಸ್ಕೋಪ್‌ ಫೌಂಡೇಷನ್‌' ಅಡಿ ಪ್ರತಿ ವರ್ಷ ಹಲ್ಲೇಗೆರೆ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರ ನಡೆಸುತ್ತಾ ಜನಸೇವೆಯಲ್ಲಿ ತೊಡಗಿಗೊಂಡಿದ್ದಾರೆ.ಪ್ರತಿವರ್ಷವೂ 'ವಿವೇಕ್' ತಮ್ಮ ಹುಟ್ಟಿದ ಊರಿಗೆ ಭೇಟಿ ನೀಡಿ ಸ್ಥಳೀಯ ಜನರಿಗೆ ಉಚಿತವಾಗಿ ವೈದ್ಯಕೀಯ ನೆರವನ್ನು ಕೊಡುತ್ತಾ ಬಂದಿದ್ದಾರೆ. ತಂದೆಯ ಸಹೋದರರು ಹಲ್ಲೇಗೆರೆಯಲ್ಲೇ ವಾಸವಿರುವ ಕಾರಣ ಡಾ|| ವಿವೇಕ್‌ ಪ್ರತಿ ವರ್ಷ ಇಲ್ಲಿಗೆ ಬರುತ್ತಿರುತ್ತಾರೆ. ತಂದೆ 'ಲಕ್ಷ್ಮೀ ನರಸಿಂಹಮೂರ್ತಿ ಸ್ಕೋಪ್‌ ಫೌಂಡೇಷನ್‌' ಹುಟ್ಟುಹಾಕಿ, ಅದರಡಿ ಹಲ್ಲೇಗೆರೆಯಲ್ಲಿ ಉಚಿತ ನೇತ್ರ ತಪಾಸಣೆ, ಆರೋಗ್ಯ ಮೇಳ ನಡೆಸುತ್ತಿದ್ದಾರೆ. ಇವರ ಕನಸಿನ ಆರೋಗ್ಯ ಯೋಜನೆ ಸಮಿತಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಸರ್ಜನ್‌ ಜನರಲ್‌ ಹುದ್ದೆಗೆ ಕಳೆದ ವರ್ಷವೇ ನಾಮಾಂಕಿತರಾಗಿದ್ದರೂ, ಸಂಸತ್ತಿನ ಅನುಮೋದನೆ ಸಿಕ್ಕಿದ್ದು ಈಗ. ಅಮೆರಿಕದ ಸೆನೆಟ್ ಅನುಮೋದನೆ ನೀಡಿದ ಕೂಡಲೇ ಮೂರ್ತಿ ಅವರು, ಹಂಗಾಮಿ 'ಸರ್ಜನ್ ಜನರಲ್ ರೇರ್ ಅಡ್ಮಿರಲ್ ಬೋರಿಸ್ ಡಿ. ಲಷ್ನಿಕ್' ಅವರಿಂದ ಅಧಿಕಾರ ಸ್ವೀಕರಿಸಿದ್ದಾರೆ. ೨೦೧೩ ರ, ಜುಲೈನಲ್ಲಿ 'ರೆಗಿನಾ ಬೆಂಜಮಿನ್' ಅವರ ಅಧಿಕಾರಾವಧಿ ಮುಗಿದ ನಂತರ 'ಲಷ್ನಿಕ್ ಹಂಗಾಮಿ ಸರ್ಜನ್ ಜನರಲ್' ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

೨೦೧೧ ರಲ್ಲಿ

[ಬದಲಾಯಿಸಿ]

೨೦೧೧ ರಲ್ಲಿ ಡಾ|| ಮೂರ್ತಿ ಅವರು ಅಮೆರಿಕದ ಅತ್ಯುನ್ನತ ಆರೋಗ್ಯ ಸಮಿತಿಯ ಸದಸ್ಯರಾಗಿ ಆಯ್ಕೆಯಾ­ಗಿದ್ದರು. ಸಮಿತಿಯಲ್ಲಿ ೨೦ ಮಂದಿ ತಜ್ಞ ವೈದ್ಯರಿದ್ದರು. ಸ್ವಗ್ರಾಮದ ನಂಟು: ಡಾ|| ಮೂರ್ತಿಯವರು ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಸ್ವಗ್ರಾಮದ ನಂಟು ಉಳಿಸಿಕೊಂಡಿದ್ದಾರೆ. ತಮ್ಮ ಗ್ರಾಮವೂ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಸುಮಾರು ಸರ್ಕಾರಿ ಶಾಲೆಗಳಿಗೆ ೧೦೦ ಕಂಪ್ಯೂಟರ್‌ಗಳನ್ನು ದೇಣಿಗೆ ಕೊಟ್ಟಿದ್ದಾರೆ. ಡಾ|| ಮೂರ್ತಿ ಅವರೇ ಸ್ವತಃ ಆಗಮಿಸಿ ವೈದ್ಯರ ತಂಡದೊಂದಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿದ್ದರು.

೨೦೧೪ ರಲ್ಲಿ

[ಬದಲಾಯಿಸಿ]

೨೦೧೪ ರ, ಡಿಸೆಂಬರ್ 8 ರಂದು ಪ್ರತಿಷ್ಠಾನದ ವತಿಯಿಂದ 'ನೇತ್ರ ತಪಾಸಣೆ ಶಿಬಿರ' ಆಯೋಜಿಸಲಾಗುತ್ತಿದೆ. ಶಿಬಿರದಲ್ಲಿ ಅವಶ್ಯಕತೆ ಇದ್ದವರಿಗೆ ಉಚಿತ ಕನ್ನಡಕಗಳನ್ನೂ ವಿತರಿಸಲಾಗುತ್ತಿದೆ.

ಪ್ರಶಸ್ತಿ, ಗೌರವಗಳು

[ಬದಲಾಯಿಸಿ]
  • 'ಪಾಲ್ ಅಂಡ್ ಡೈಸಿ ಸರೊಸ್ ಫೆಲೋಶಿಪ್ಸ್',[]
  • 'Person of the Year 2014' ಪ್ರಶಸ್ತಿ,[]

ಡಾ|| ವಿವೇಕ್ ಮೂರ್ತಿಯ ಸಂಶೋಧನೆಗಳು

[ಬದಲಾಯಿಸಿ]

ಡಾ|| ಮೂರ್ತಿಯವರು ಬೊಜ್ಜು ನಿವಾರಣೆ, ತಂಬಾಕು ಸೇವನೆ ಸಂಬಂಧಿತ ಕಾಯಿಲೆಗಳ ಬಗ್ಗೆ ಅಪಾರ ಸಂಶೋಧನೆ ನಡೆಸಿದ್ದಾರೆ. ಅಮೆರಿಕದಲ್ಲಿ ಶೇ. ೮೪ ರಷ್ಟು ಆರೋಗ್ಯ ವೆಚ್ಚವನ್ನು ಈ ಕಾಯಿಲೆಗಳಿಗೆ ವ್ಯಯಿಸಲಾಗುತ್ತಿದೆ. ಇವಕ್ಕೆಲ್ಲ ಒಂದು ಪರಿಹಾರವನ್ನು ಡಾ|| ಮೂರ್ತಿಯವರಿಂದ ನಿರೀಕ್ಷಿಸಬಹುದು ಎಂದು ಸೆನೆಟರ್ 'ಡಿಕ್ ಡರ್ಬನ್,'ಅಭಿಪ್ರಾಯಪಟ್ಟಿದ್ದಾರೆ.

ಅಧ್ಯಕ್ಷ ಬರಾಕ್ ಒಬಾಮ ಅಭಿನಂದನೆ

[ಬದಲಾಯಿಸಿ]

ಅಮೆರಿಕದ ವೈದ್ಯಕೀಯ ನಿರ್ದೇಶಕರಾಗಿ ಆಯ್ಕೆಯಾದ ಮೊದಲ ಭಾರತೀಯ ಮೂಲದ ವ್ಯಕ್ತಿ, 'ಡಾ|| ವಿವೇಕ್ ಮೂರ್ತಿ,'ಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಅಭಿನಂದಿಸಿದ್ದಾರೆ. ವಿವೇಕ್ ಮೂರ್ತಿ,'ಅಮೆರಿಕ ಪ್ರಜೆಗಳಿಗೆ ಆರೋಗ್ಯ ವರ್ಧನೆಗಾಗಿ ಎಲ್ಲಾ ವರ್ಗದ ಜನರ ಹಿತಕ್ಕಾಗಿ ಕೆಲಸಮಾಡುವರಿದ್ದಾರೆ.[]

ಉಲ್ಲೇಖಗಳು

[ಬದಲಾಯಿಸಿ]
  1. "'ಭಾರತೀಯ ಮೂಲದ ವಿವೇಕ್ ಅಮೆರಿಕ ವೈದ್ಯಕೀಯ ನಿರ್ದೇಶಕ,'ಕನ್ನಡ ಪ್ರಭ, ಡಿಸೆಂಬರ್,೧೬,೨೦೧೪". Archived from the original on 2016-03-04. Retrieved 2014-12-16.
  2. 'Meet Vivek Murthy: The Controversial Surgeon General,' Dec 15, 2014, By VERONICA STRACQUALURSI via WORLD NEWS
  3. Mass. doctor Vivek Murthy OK’d as surgeon general,Views on guns, advocacy led to Senate delay, DECEMBER 15, 2014, Nation,
  4. ಪ್ರಜಾವಾಣಿ, 24, April, 2015, ಅಮೆರಿಕದ ಸರ್ಜನ್ ಜನರಲ್‌ ಹುದ್ದೆಗೇರಿದ ಅತಿ ಕಿರಿಯ ವೈದ್ಯ,ಕನ್ನಡಿಗ ಮೂರ್ತಿ ಪ್ರಮಾಣ
  5. "'The Paul and Daisy Soros fellowships for new Americans', Spring, 1998 fellows". Archived from the original on 2015-07-25. Retrieved 2014-12-18.
  6. 'rediff.com, June 13, 2015 US Surgeon General Vivek H Murthy, India Abroad, person-of-the-year-2014
  7. Profile: Vivek H. Murthy, America’s Youngest Ever Surgeon General wsj, 2014/12/16

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]