ಡಾ.ರಾಜಕುಮಾರ್: ದಿ ಇನ್ಮಿಟಬಲ್ ಆಕ್ಟರ್ ವಿಥ್ ಗೋಲ್ಡನ್ ವಾಯ್ಸ್ಹೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ.ರಾಜಕುಮಾರ್: ದಿ ಇನ್ಮಿಟಬಲ್ ಆಕ್ಟರ್ ವಿಥ್ ಗೋಲ್ಡನ್ ವಾಯ್ಸ್ ಬಂಗಾರದ ಮನುಷ್ಯ ಅ.ನಾ.ಪ್ರಹ್ಲಾದ ರಾವ್ ಅವರು ಬರೆದಿರುವ ಡಾ.ರಾಜ್‍ಕುಮಾರ್ ಅವರ ಜೀವನಚರಿತ್ರೆ. ಬಂಗಾರದ ಮನುಷ್ಯ ಪುಸ್ತಕ ಸುಮಾರು ೨೨೦ ಪುಟಗಳಿಂದ ಕೂಡಿದ್ದು, ಡಾ.ರಾಜಕುಮಾರ್ ಅವರ ಜೀವನ ಸಾಧನೆಯನ್ನು ಪ್ರತಿಬಿಂಬಿಸುವ ಕೃತಿಯಾಗಿದೆ. ಈ ಪುಸ್ತಕ ೫ ಆವೃತ್ತಿಗಳನ್ನು ಕಂಡಿದೆ. ಈ ಪುಸ್ತಕವು ಡಾ.ರಾಜ್‍ಕುಮಾರ್ ಅಭಿನಯದ ಸುಮಾರು ೧೦೦ ಚಿತ್ರಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ. ಡಾ.ರಾಜ್‍ಕುಮಾರ್ ಅಭಿನಯದ ಚಿತ್ರಗಳು, ಸಾಮಾಜಿಕವಾಗಿ ಅವರು ನೀಡಿದ ಕೊಡುಗೆಯ ಬಗ್ಗೆ ಈ ಪುಸ್ತಕ ಉಪಯುಕ್ತ ಮಾಹಿತಿಯನ್ನು ಒಳಗೊಂಡಿದೆ. ಈ ಪುಸ್ತಕ 'ಡಾ.ರಾಜಕುಮಾರ್: ದಿ ಇನ್ಮಿಟಬಲ್ ಆಕ್ಟರ್ ವಿಥ್ ಗೋಲ್ಡನ್ ವಾಯ್ಸ್ ಇಂಗ್ಲಿಷ್ ಭಾಷೆಗೆ ಭಾಷಾಂತರಗೊಂಡಿದೆ. ಇಂಗ್ಲಿಷ್ ಪುಸ್ತಕ ಅಮೆರಿಕದ್ ನ್ಯೂಜಸಿ೯ ನಗರದಲ್ಲಿ ಬಿಡುಗಡೆಗೊಂವಿತು. ಈ ಪುಸ್ತಕ ಬರೆದಿರುವ ಅ.ನಾ.ಪ್ರಹ್ಲಾದ ರಾವ್ ಕನ್ನಡದ ಪದಬಂಧ ಲೇಖಕರು.ಇವರು 40,೦೦೦ ಪದಬಂಧಗಳನ್ನು ರಚಿಸಿದ್ದು, 2015 ಹಾಗೂ 2016 ಲಿಮ್ಕಾ ಪುಸ್ತಕದಲ್ಲಿ ಇವರ ಹೆಸರು ದಾಖಲೆಯಾಗಿದೆ. ಡಾ.ರಾಜಕುಮಾರ್ ಜೀವನ ಹಾಗೂ ಸಾಧನೆ ಕುರಿತು ಅ.ನಾ.ಪ್ರಹ್ಲಾದರಾವ್ ಬರೆದ ಬಂಗಾರದ ಮನುಷ್ಯ ಅತ್ಯಂತ ಜನಪ್ರಿಯ ಪುಸ್ತಕ. ೨೨೦ ಪುಟಗಳ ಈ ಪುಸ್ತಕ ಡಾ.ರಾಜಕುಮಾರ್ ಅವರಿಂದಲೇ ಈ ಪುಸ್ತಕ ಪ್ರಶಂಸೆಗೆ ಒಳಗಾಯಿತು. ಈ ಪುಸ್ತಕದ ಇಂಗ್ಲಿಷ್ ಅನುವಾದ 'ರಾಜಕುಮಾರ್ ದಿ ಇನ್ಮಿತಟಬಲ್ ಆಕ್ಟರ್ ವಿಥ್ ಗೋಲ್ಡನ್ ವಾಯ್ಸ್' ಅಮೆರಿಕದ ನ್ಯೂಜಸಿ೯ಯಲ್ಲಿ ಬಿಡುಗಡೆ ಆಯಿತು. ಇದು ಡಾ.ರಾಜಕುಮಾರ್ ಅವರನ್ನು ಕುರಿತಾದ ಮೊದಲ ಇಂಗ್ಲಿಷ್ ಪುಸ್ತಕವೇ ಅಲ್ಲದೆ, ದೇಶದ ಹೊರಗಡ ಬಿಡುಗಡೆ ಆದ ಡಾ.ರಾಜಕುಮಾರ್ ಕುರಿತಾದ ಮೊದಲ ಪುಸ್ತಕವೂ ಹೌದು. ಈ ಪುಸ್ತಕದಲ್ಲಿ ಡಾ.ರಾಜಕುಮಾರ್ ಚಲನಚಿತ್ರಗಳ ಬಗ್ಗೆ ವಿವರಗಳಷ್ಟೆ ಅಲ್ಲದೆ, ಅವರ ಸಾಮಾಜಿಕ ಬದುಕು ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಯ ವಿವರಗಳನ್ನು ದಾಖಲಿಸಲಾಗಿದೆ. ಕನ್ನಡ ಪುಸ್ತಕ. ೨೦೦೬ರಲ್ಲಿ ಅಮೆರಿಕದ ವಾಷಿಂಗ್ಟನ್ ನಗರದಲ್ಲಿ ನಡೆದ ಅಕ್ಕ ಸಮ್ಮೇಳನ, ೨೦೦೬ರಲ್ಲಿ ಕುವ್ಯತ್ ಕನ್ನಡ ಸಮ್ಮೇಳನದಲ್ಲಿ ಬಿಡುಗಡೆಗೊಂಡಿತು. ಇಂಗ್ಲಿಷ್ ಪುಸ್ತಕ ಬೆಂಗಳೂರಿನಲ್ಲಿ ಶ್ರೀಮತಿ ಪಾವ೯ತಮ್ಮ ರಾಜಕುಮಾರ್ ಅವರಿಂದ ಬಿಡುಗಡೆಗೊಂಡಿತಲ್ಲದೆ, ಲಂಡನ್ ನಗರದಲ್ಲಿ ೨೦೦೮ರ ಆಗಸ್ಟ್ ತಿಂಗಳಿನಲ್ಲಿ ನಡೆದ ಕನ್ನಡ ಸಮ್ಮೇಳನದಲ್ಲಿ ಅಲ್ಲಿನ ಸೆನೆಟರ್ ಬಿಡುಗಡೆ ಮಾಡಿದರು