ಜಿ.ಶಿವಪ್ಪ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಡಾ. ಜಿ.ಶಿವಪ್ಪ, ಕರ್ನಾಟಕ ರಾಜ್ಯದಲ್ಲಿ ಸಾಮಾಜಿ ಅರಿವು ಮೂಡಿಸುವ ದಿಶೆಯಲ್ಲಿ ಶ್ರಮಿಸುತ್ತಿದ್ದಾರೆ. ಶಿವಪ್ಪ, ಅಸ್ಪೃಶ್ಯತೆ ನಿವಾರಣೆಗೆ ಸಮಾನ ಮನಸ್ಕರ ವೇದಿಕೆ ರಚಿಸಿ,ಸತತವಾಗಿ ಹೋರಾಡುತ್ತಿರುವ ಸಮಾಜ ಸುಧಾರಕರಲ್ಲೊಬ್ಬರು. ಡಾ.ಜಿ. ಶಿವಪ್ಪ, ಸಹ ಪ್ರಾಧ್ಯಾಪಕ, ಇತಿಹಾಸ ವಿಭಾಗ, ಮಹಿಳಾ ಸರಕಾರಿ ಕಾಲೇಜು, ಕೋಲಾರ. ಶಿವಪ್ಪ ತಮ್ಮ ಆಂದೋಳನವನ್ನು ಮುಳಬಾಗಲು ತಾಲೂಕಿನಲ್ಲಿ ಸವರ್ಣೀಯರ ಮನೆಗೆ ದಲಿತರ ಗೃಹಪ್ರವೇಶ ಮಾಡಿಸುವ ಮೂಲಕ, ಸಮಾಜ ಸುಧಾರಣೆಗೆ ಚಾಲನೆನೀಡಿದರು. ಇದರ ಬಳಿಕ, ದೇವಸ್ಥಾನಗಳಲ್ಲಿ ದಲಿತರು ಸಾಮೂಹಿಕವಾಗಿ ಪ್ರವೇಶಮಾಡಲು ಪ್ರೋತ್ಸಾಹಿಸಿ ತಮ್ಮ ಚಳವಳಿಯನ್ನು ಮುಂದುವರಿಸಿದರು. ಕರ್ನಾಟಕ ರಾಜ್ಯದಾದ್ಯಂತ ಅಸ್ಪೃಶ್ಯತಾ ನಿವಾರಣಾ ಚಳವಳಿಯನ್ನು ವಿಸ್ತರಿಸಲು ಚಿಂತನೆಯನ್ನು ಮುಂದುವರೆಸಿದರು.
ಶಿವಪ್ಪನವರ ಮನಸ್ಸಿನ ಮೇಲೆ ಆದ ಪರಿಣಾಮ
[ಬದಲಾಯಿಸಿ]ಡಾ. ಶಿವಪ್ಪ, ದಲಿತ ಸ್ನೇಹಿತರ ಜತೆ ಪರಿಚಯಸ್ಥರ ಮನೆಗಳಿಗೆ ಹಾಗೂ ದೇವಸ್ಥಾನಗಳಿಗೆ ಹೋದಾಗ ಅವರ ಜೊತೆಯಲ್ಲಿ ಬಂದಿದ್ದ ಗೆಳೆಯರು ದೇವಸ್ಥಾನದ ಹೊರಗೆ, ನ್ಮತ್ತು ಮನೆಗಳ ಹೊರಗೆ ನಿಲ್ಲುತ್ತಿದ್ದ ವಿಷಯ ಅವರಿಗೆ ಸರಿಬರಲಿಲ್ಲ. ಮನುಷ್ಯರಾಗಿ ವಿದ್ಯಾವಂತರಾದ ಅವರ ಗೆಳೆಯರ ಬಗ್ಗೆ ಅವರಿಗೆ ಕಾಳಜಿಯಾಯಿತು. ಹೀಗೆ ಸ್ವಾಭಿಮಾನಕ್ಕಾಗಿ ದಲಿತರ ಗೃಹ ಪ್ರವೇಶ ಚಳವಳಿ ಅನಿವಾರ್ಯವಾಗಿದೆ.
ಮುಳಬಾಗಿಲಿನಲ್ಲಿ
[ಬದಲಾಯಿಸಿ]ಮುಳಬಾಗಲಿನ 'ಸ್ವಗ್ರಾಮ' ಎಂ.ಗೊಲ್ಲಹಳ್ಳಿಯಲ್ಲಿ ಜುಲೈ ೧೩ ರಂದು ತಮ್ಮ ತಂದೆ ಗಟ್ಟಪ್ಪಸ್ವಾಮಿ ಪುಣ್ಯತಿಥಿಯ ದಿನದಂದು ದಲಿತ ತತ್ತ್ವಪದ ಗಾಯಕರನ್ನು ಗೃಹ ಪ್ರವೇಶ ಮಾಡಿಸಿಕೊಂಡು, ತಮ್ಮ ಮನೆಯಿಂದಲೇ ಚಳವಳಿಯನ್ನು ಪ್ರಾರಂಭಿಸಿದರು. ಚಳವಳಿಯಲ್ಲಿ ತಮ್ಮ ಸಹಭಾಗಿತ್ವವನ್ನು ನೀಡಿದ ಮಹನೀಯರು :
- ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್
- ರಾಜ್ಯ ಮುಖ್ಯ ಚುನಾವಣಾಧಿಕಾರಿ ಪಿ. ಶ್ರೀನಿವಾಸಾಚಾರಿ
- ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಡಾ. ಕೆ. ವಿ.ತ್ರಿಲೋಕಚಂದ್ರ
ಬದಲಾದ ಸಮಾಜ
[ಬದಲಾಯಿಸಿ]ಮುಳಬಾಗಲು ಮತ್ತು ಕೋಲಾರ ತಾಲ್ಲೂಕಿನ ಹಲವು ಗ್ರಾಮಗಳ ಸವರ್ಣೀಯರು ತಮ್ಮ ಮನೆಗಳಿಗೆ ದಲಿತರನ್ನು ಸ್ವಾಗತಿಸಿ, ಆತಿಥ್ಯ ನೀಡಿ, ಬದಲಾವಣೆಗೆ ಸ್ಪಂದಿಸಿದ್ದಾರೆ.
ಪ್ರಶಸ್ತಿ
[ಬದಲಾಯಿಸಿ]- ವಿಜಯ ಕರ್ನಾಟಕ ದಿನಪತ್ರಿಕೆ ದಾಖಲಿಸಿರುವ, ೨೦೧೪ ರ ೧೫ ಸಾಧಕರ ಪಟ್ಟಿಯಲ್ಲಿ ಡಾ. ಜಿ. ಶಿವಪ್ಪವರೊಬ್ಬರು.[೧]