ಡಾಲರಮ
'ಡಾಲರಮ ಒನ್ ಡಾಲರ್ ಶಾಪ್', ಕೆನಡಾದ ಟೊರಾಂಟೋ ನಗರದ, ಡುಂಡಾ ಸ್ಟ್ರೀಟಿನ, ಗ್ರೌಂಡ್ ಫ್ಲೋರ್ ನಲ್ಲೇ ಸ್ಥಾಪಿತವಾಗಿದೆ. ಸ್ವಲ್ಪ ಇನ್ನೂ ಒಳ್ಳೆಯ ವಸ್ತುಗಳನ್ನು ಖರೀದಿಸಲು ೨-೪ ಡಾಲರ್ ಖರ್ಚುಮಾಡಿದರೆ, ಸಿಗುತ್ತವೆ. ಇಲ್ಲ್ಲಿ ಎ-ಝಡ್ ವರೆಗಿನ ಎಲ್ಲಾ ವಸ್ತುಗಳೂ ದೊರೆಯುತ್ತವೆ.'ಡಾಲರಮ ಬಿಝಿನೆಸ್' ಸ್ಥಾಪನೆಯಾಗಿದ್ದು ಸನ್, ೧೯೯೨ ರಲ್ಲಿ; ಲಾರ ರೊಸ್ಸಿಯೆಂಬುವ ಸಿಯಿಒರವರ ದೂರದೃಷ್ಟಿಯಿಂದಾಗಿ ಇದು ಇಂದು ಕೆನಡಾದಾದ್ಯಂತ ಮಂಚೂಣಿಯಲ್ಲಿದೆ. 'ರೊಸ್ಸಿ'ಯವರು, ಚಿಲ್ಲರೆ ಸಾಮಾನುಗಳ ವ್ಯಾಪಾರಿಯಾಗಿ ತಮ್ಮ ಮನೆತನದ ೩ ನೇ ತಲಮಾರಿನ ಬಿಝಿನೆಸ್ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಕೆನಡಾದ ೭೦೦ ಶಾಖೆಗಳು ಬಿರುಸಿನಿಂದ ಈ ಉದ್ಯೋಗವನ್ನು ಮುಂದುವರೆಸಿಕೊಂಡುಹೋಗುತ್ತಿವೆ. ಮುಖ್ಯವಾಗಿ ಈ ಸ್ಟೋರ್ ಗಳು ಗ್ರಾಹಕರ ಆದ್ಯತೆಗಳನ್ನು ಗಮನಿಸಿ ಅತ್ಯಂತ ಸುಲಭದರದಲ್ಲಿ ಉತ್ತಮ ಪರಿಕರಗಳನ್ನು ಒದಗಿಸುವಲ್ಲಿ ಸಾಧ್ಯವಾದ ಪ್ರಯಾಸಮಾಡುತ್ತಿವೆ.
'ಗ್ರಾಹಕರ-ಪ್ರೇಮಿ', ಡಾಲರಮ
[ಬದಲಾಯಿಸಿ]'ಡಾಲರಮದ ಪ್ರಧಾನ ಕಛೇರಿ, 'ಮಾಂಟ್ರಿಯಲ್' ನಲ್ಲಿದೆ. ಸನ್ ೨೦೦೯ ರಿಂದ ಕೆನಡಾದ ಅತಿ ದೊಡ್ಡ ರೀಟೇಲರ್ ಶಾಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೆಮನಡಾದ ಎಲ್ಲಾ ಪ್ರಾಂತ್ಯಗಳಲ್ಲೂ ದಡಾಲರಾಮ ಉಪಶಾಖೆಗಳಿವೆ. ಮಟಾನ್ ನಲ್ಲಿ ಮೊಟ್ಟಮೊದಲ ಶಾಖೆ ತೆರೆಯಲಾಯಿತು. ಆಂಟೇರಿಯೊ ನಲ್ಲಿ ಅತಿ ಹೆಚ್ಚು ಶಾಕೆಗಳಿವೆ. ದಿನಬಳಕೆಯ ವಸ್ತುಗಳು ಸುಲಭವಾಗಿ ಹಾಗೂ ಅಗ್ಗದ ಬೆಲೆಯಲ್ಲಿ ಬಳಕೆದಾರರಿಗೆ ದೊರಕಿಸುವ ಮಹದುದ್ದೇಶದಿಂದ ಈ ಶಾಪ್ ಗಳು ಕಾರ್ಯರಥವಾದವು. ಕೇವಲ ೧ಡಾಲರ್ ಒಳಗೇ ಮತ್ತು ೩ ಡಾಲರ್ ಗಿಂತಾ ಮಿಲಾಗಿ ಹೋಗದಂತೆ, ಬೆಲೆಇರುವ ಸಾಮಾನುಗಳನ್ನು ಶೇಖರಿಸಿ ಇಡಲಾಯಿತು.
ಡಾಲರಮದ ಯಶಸ್ಸಿನ ಗುಟ್ಟು
[ಬದಲಾಯಿಸಿ]ಎಲ್ಲಕ್ಕಿಂತಾ ಮಿಗಿಲಾಗಿ 'ಡಾಲರಮ ಸ್ಟೋರ್' ಗಳು, ಬಳಕೆದಾರರಿಗೆ ಅತಿ ಮುಖ್ಯ ಸ್ಥಳಗಳಲ್ಲಿ, ರೈಲ್ವೆ ಸ್ಟೇಷನ್, ಬಸ್ ನಿಲ್ದಾಣದ ಹತ್ತಿರ, ಪ್ರಮುಖ ಮಾಲ್ ಗಳ ಪ್ರವೇಶದ್ವಾರಗಳಲ್ಲಿ ಗ್ರೌಂಡ್ ಫ್ಲೋರ್ ನಲ್ಲೇ ಇದ್ದು, ಆಫೀಸ್ ನಲ್ಲಿ ದಿನವಿಡೀ ದುಡಿಯುವ ನೌಕರಿಗೆ, ಮಕ್ಕಳು, ಹಿರಿಯರು, ಮಹಿಳೆಯರಿಗೆ ಸುಲಭವಾಗಿ ಸಿಗುವುದರಿಂದ ಅವು ಗ್ರಾಹಕರಿಗೆ ಅತಿಪ್ರಿಯವಾಗುತ್ತವೆ. ಎಲ್ಲಕ್ಕೂ ಸಮೀಪ; ಚಿಕ್ಕ ಊರುಗಳಲ್ಲಿ ಪಟ್ಟಣಗಳಲ್ಲಿ, ಮೆಟ್ರೋಪಾಲಿಟನ್ ವಲಯಗಳಲ್ಲಿ. ಡಾಲರಾಮ ಕೊಳ್ಳುವ ವರ್ಗಕ್ಕೆ ಸಮಾಧಾನಕರವಾದ ವಾತಾವರಣ, ಅತಿಹೆಚ್ಚು ವೈವಿಧ್ಯ ವಸ್ತುಗಳು. ಎಲ್ಲವನ್ನೂ ಒಪ್ಪವಾಗಿ ನಾವೇ ಇಳಿಸಿ, ಎತ್ತಿ, ಹಿಡಿದು ನೋಡಲು ಆಗುವಂತೆ ತೆರೆದ-ಬೀರುಗಳಲ್ಲಿ ಜೋಡಿಸಲಾಗಿದೆ. ೧ ಡಾಲರ್ ನಿಂದ ೩ ಡಾಲರ್ ಒಳಗೆ ನಮಗೆ ಆರಿಸಲು ನಿಬ್ಬೆರಗಾಗುವಷ್ಟು, ಕಸಿವಿಸಿಯಾಗುವಷ್ಟು ವೈವಿಧ್ಯಮಯ ದಿನಬಳಕೆಗೆ ತಕ್ಷಣ ಬೇಕಾಗುವ ವಸ್ತುಗಳು ಎಲ್ಲರನೂ ಮೋಡಿಮಾಡಿವೆ.[೧]
ಸಾಫ್ಟ್ ಡ್ರಿಂಕ್ಸ್ ಒಂದು ಪ್ರಮುಖ ವಸ್ತು
[ಬದಲಾಯಿಸಿ]ಡಾಲರಮದ ಮಾರಾಟದ ವಸ್ತುಗಳಲ್ಲಿ ತಂಪು-ಪಾನೀಯಗಳ ಪಾತ್ರ ಅಧಿಕ. ಅವುಗಳ ವಿವರಗಳು ಹೀಗಿವೆ :
- Coca-Cola Ltd.
- Cott Beverages.
ಕೆಲವು ಡಾಲರಮ ಸ್ಟೋರ್ ಗಳು ವಿಶೇಷವಾಗಿ ಮಾಂಟ್ರಿಯೆಲ್ ನ 'Pierrefonds-Roxboro borough' on 'Des Sources Blvd. & Harwood Blvd', 'Vaudreuil-Dorion', ನಲ್ಲಿ. ಸುಮಾರು 20,000 ಚ. ಅಡಿಗಳಷ್ಟು ದೊಡ್ಡ 'ಶೋರೂಮ್,' ಗಳಿವೆ.
ಈ ೨೯ ಬಹುಮಡಿ ಕಟ್ಟಡದ ಮುಖ್ಯ ದ್ವಾರದ ಆರಂಭದಲ್ಲೇ ಬಹುದೊಡ್ಡ 'ಡಾಲರಮ ಸ್ಟೋರ್ಸ್', ೨೦೧೨ ರ ಆಗಸ್ಟ್, ೧೪ ನೆಯ ತಾರೀಖಿನ ದಿನ, ಬೆಳಿಗ್ಯೆ ೯-೩೦ ಕ್ಕೆ ಶುಭಾರಂಭಮಾಡಲಾಯಿತು. ಈ ಹೊಸ 'ಆಧುನಿಕ ಎಂಪೋರಿಯಂ' ಗೆ ನಗರದ ಹಲವಾರು ಕಡೆಗಳಿಂದ ಬಳಕೆದಾರರು ಭೇಟಿಕೊಡಲು ಆರಂಬಿಸಿದ್ದಾರೆ. ಇವರಲ್ಲಿ ಹೆಚ್ಛಿನವರು ಮಕ್ಕಳು, ಹಾಗೂ ಮಹಿಳೆಯರು.[೨]
'ಡಾಲರಮ ಎಂಪೋರಿಯಂ' ನ, ಅತಿ-ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ
[ಬದಲಾಯಿಸಿ]ಅತಿ ಹೆಚ್ಚಿನ ಮಾಹಿತಿಗಳು ಇಲ್ಲಿ ದೊರೆಯುತ್ತವೆ