ಡಾಕ್ ಆವೃತ್ತಿ
ಡಾಕ್ ಆವೃತ್ತಿ ಎಂದರೆ ಭಾರತದಲ್ಲಿ ಮೊಫ್ಯುಸಿಲ್ ಪ್ರದೇಶಗಳಿಗೆ (ಅಂದರೆ ಪ್ರಮುಖ ಮಹಾನಗರಗಳ ಹೊರಗಿನ ಸ್ಥಳಗಳಿಗೆ) ವಿತರಿಸಲು ಇತರ ಆವೃತ್ತಿಗಳಿಗಿಂತ ಮುಂಚೆಯೇ ಪ್ರಕಟವಾಗುವ ಪತ್ರಿಕೆಯ ಆವೃತ್ತಿ. [೧] ಶಶಿ ತರೂರ್ ಅವರು ೧೯೬೦ ರಲ್ಲಿ "ನಿನ್ನೆಯ ಸುದ್ದಿ ಇಂದಿನ ದಿನಾಂಕದೊಂದಿಗೆ" ಎಂದು ಡಾಕ್ ಆವೃತ್ತಿಯ ಕುರಿತು ಹೇಳಿಕೆ ನೀಡಿದ್ದಾರೆ.[೨] ಅಗರ್ವಾಲ್ ಅವರು "ಸಿಟಿ ಎಡಿಷನ್" ಗಿಂತ ಭಿನ್ನವಾದ ದೂರದ ಸ್ಥಳಗಳಿಗಾಗಿ ಮಾಡಲ್ಪಡುವ ಡಾಕ್ ಆವೃತ್ತಿಯ ಜವಾಬ್ದಾರಿ ಸುದ್ದಿ ಸಂಪಾದಕರದ್ದಾಗಿದೆ" ಎಂದು ಹೇಳುತ್ತಾರೆ.[೩] ನಖ್ವಿ ಅವರ ಪ್ರಕಾರ "ಪತ್ರಿಕೆಗಳಲ್ಲಿ ಡಾಕ್ ಆವೃತ್ತಿ, ನಗರ ಆವೃತ್ತಿ ಮತ್ತು ಸಿಟಿ ಆವೃತ್ತಿಯಂತಹ ಹಲವು ಆವೃತ್ತಿಗಳಿವೆ".[೪] ಅಲೆನ್ಸ್ ಇಂಡಿಯನ್ ಮೇಲ್ (೧೮೫೧) ತನ್ನ ಪತ್ರಿಕೆಗಳಲ್ಲಿ, "ಒಮ್ಮೆ ಬರುವ ಸುದ್ದಿಯು ಬೆಳಗಿನ ಆವೃತ್ತಿಗಿಂತ ಬಹಳ ವಿಭಿನ್ನವಾಗಿದೆ" ಎಂದು ತನ್ನನ್ನು ವರ್ಣಿಸಿಕೊಳ್ಳುತ್ತದೆ.[೫]
ವ್ಯುತ್ಪತ್ತಿಶಾಸ್ತ್ರ
[ಬದಲಾಯಿಸಿ]ಹಾಬ್ಸನ್-ಜಾಬ್ಸನ್ ಭಾಷೆಯಲ್ಲಿ ಡಾಕ್ ಎಂದು ಉಚ್ಚರಿಸಲಾಗುವ ಪದವು ಒಂದು ಆಂಗ್ಲೋ-ಇಂಡಿಯನ್ ಪದವಾಗಿದ್ದು, ಹಿಂದೂಸ್ತಾನಿ ಮತ್ತು ಮರಾಠಿಯಲ್ಲಿ ಡಾಕ್ ಅಂದರೆ ಅಂಚೆ ಎಂದರ್ಥ.[೬] ಹ್ಯಾಂಡ್‌ಬುಕ್ ಆಫ್ ಅಡ್ವರ್ಟೈಸಿಂಗ್ ಮೀಡಿಯಾ ಅಂಡ್ ಪಬ್ಲಿಕ್ ರಿಲೇಶನ್ಸ್, ಡಾಕ್ ಆವೃತ್ತಿಗೆ ವಿಷಯ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಪತ್ರಿಕಾ ಸಮ್ಮೇಳನಗಳನ್ನು ಮುಂಚಿತವಾಗಿಯೇ ನಿಗದಿಪಡಿಸಬೇಕು ಎಂದು ಸಲಹೆ ನೀಡುತ್ತದೆ.[೭]
ಉಲ್ಲೇಖಗಳು
[ಬದಲಾಯಿಸಿ]- ↑ "Medium for the Masses: How India's Local Newspapers Are Winning Rural Readers". India Knowledge@Wharton. University of Pennsylvania: Wharton School of the University of Pennsylvania. 2010-01-14. Retrieved 19 February 2012.
- ↑ Tharoor, Shashi (2010-11-01). "WHAT THE HACK!". www.outlookindia.com. New Delhi: The Outlook Group. Archived from the original on 5 January 2013. Retrieved 19 February 2012.
- ↑ Vir Bala Aggarwal (1 January 2006). Essentials Of Practical Journalism. Concept Publishing Company. pp. 19–. ISBN 978-81-8069-251-2. Retrieved 20 February 2012.
- ↑ Hena Naqvi (1 January 2007). Journalism And Mass Communication. Upkar Prakashan. pp. 173–. ISBN 978-81-7482-108-9. Retrieved 20 February 2012.
- ↑ Allen's Indian mail, and register of intelligence for British and foreign India, China, and all parts of the East. 1851. pp. 607–. Retrieved 20 February 2012.
- ↑ Henry Yule; A. C. Burnell; William Crooke (11 January 1996). A glossary of colloquial Anglo-Indian words and phrases: Hobson-Jobson. Curzon Press. pp. 930–. ISBN 978-0-7007-0321-0. Retrieved 20 February 2012.
- ↑ Deepak Gupta (2005). Handbook Of Advertising Media And Public Relations. Mittal Publications. pp. 452–. ISBN 978-81-7099-987-4. Retrieved 20 February 2012.