ವಿಷಯಕ್ಕೆ ಹೋಗು

ಡಮಾಸ್ಕಸ್ ಗೇಟ್ ರೆಸ್ಟಾರೆಂಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಸಿರಿಯಾದ ಬಾವಾಬೇಟ್ ದಿಮಾಶ್ಕ್ ರೆಸ್ಟಾರೆಂಟ್ (ಡಮಾಸ್ಕಸ್ ಗೇಟ್ ರೆಸ್ಟಾರೆಂಟ್) ಜಗತ್ತಿನ ಅತಿ ದೊಡ್ದ ಊಟದ ಹೋಟೆಲ್ ಎಂದು ಗಿನ್ನಿಸ್ ವಿಶ್ವದಾಖಲೆ ಸ್ಥಾಪಿಸಿದೆ. ಈ ಹೋಟೆಲ್ ನಲ್ಲಿ ೬೦೧೪ ಸೀಟುಗಳಿವೆ.ಸಾವಿರಾರು ಜನರಿಗೆ ಒಮ್ಮೆಗೆ ಆರ್ಡರ್ ಗೆ ತಕ್ಕಂತೆ ಉತ್ತಮ ಗುಣಮಟ್ಟದ ಆಹಾರ ಒದಗಿಸಿವುದು ಕಷ್ಟ.ಆದರೆ ಈ ಹೋಟೆಲ್ ನ ತಿಂಡಿ ತಿನಿಸುಗಳು ರುಚಿಕರವಾಗಿದ್ದು,ಐದು ಸಾವಿರಕ್ಕೂ ಹೆಚ್ಚು ಜನರಿಗೆ ಒಮ್ಮೆಗೇ ಆಹಾರ ಒದಗಿಸುವ ವ್ಯವಸ್ಠೆಗಳಿವೆ. ಈ ಹೋಟೆಲ್ ನ ಒಳಗೆ ೧೮೦೦ ಸಿಬಂದಿಗಳಿದ್ದಾರೆ.೨೬೦೦೦ ಚದರಡಿ ವಿಸ್ತೀರ್ಣದ ಅಡುಗೆ ಕೋಣೆ ಇದೆ.ಇಲ್ಲಿ ಅರಬ್ಬಿ, ಭಾರತೀಯ ಮತ್ತು ಖಾದ್ಯಗಳು ತಯಾರಾಗುತ್ತವೆ.ನೋಡಲು ಕೂಡ ಸುಂದರವಾಗಿರುವ ಈ ಹೋಟೆಲ್ ಒಂದು ಚಲನಚಿತ್ರದ ಸೆಟ್ ನಂತೆ ಕಾಣಿಸುತ್ತದೆ,ಹೋಟೆಲ್ ನ ನಡುವೆ ಸರ್ಚ್ ಲೈಟ್ ಗಳು, ನಕಲಿ ಜಲಪಾತಗಳು,ಕಾರಂಜಿಗಳು,ಗ್ರಾಹಕರಿಗೆ ಅದ್ಬುತ ಅನುಭವ ಕೊಡುತ್ತದೆ.ಈ ಹೋಟೆಲ್ ನಲ್ಲಿ ಸೈರಿಯನ್ ಹಾಗು ಲೆಬನೀಸ್ ಶೈಲಿಯ ಆಹಾರವು ಸಹ ದೊರೆಯುತ್ತದೆ.ಈ ಹೋಟೆಲ್ ೨೦೦೨ರಲ್ಲಿ ಪ್ರಾರಂಭವಾಯಿತು.