ಡಕಾಯಿತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಕಾಯಿತಿ ಎಂದರೆ ಐದು ಅಥವಾ ಹೆಚ್ಚು ಮಂದಿ ಒಟ್ಟಾಗಿ ಮಾಡಿದ ಅಥವಾ ಮಾಡಲು ಪ್ರಯತ್ನಿಸಿದ ದರೋಡೆ. ಸುಲಿಗೆ, ದರೋಡೆ, ಡಕಾಯಿತಿ ಇವು ಮೂರೂ ಒಂದು ಗುಂಪಿನ ಅಪರಾಧಗಳು. ಒಬ್ಬ ವ್ಯಕ್ತಿಗೆ ಕ್ಷತಿ ಅಥವಾ ಗಾಸಿಯ ಭಯ ಹುಟ್ಟಿಸಿ, ಅವನು ಯಾವುದೇ ಆಸ್ತಿಯನ್ನು ಅಥವಾ ಪ್ರತಿಭೂತಿಯನ್ನು (ಸೆಕ್ಯೂರಿಟಿ) ಒಪ್ಪಿಸುವಂತೆ ಮಾಡುವುದು ಸುಲಿಗೆ. ಸಾವು, ನೋವು ಅಥವಾ ಆಕ್ರಮ ಪ್ರತಿಬಂಧವನ್ನು (ರಾಂಗ್‍ಫುಲ್ ರಿಸ್ಟ್ರೇಂಟ್) ಉಂಟುಮಾಡಿ ಅಥವಾ ಉಂಟುಮಾಡಲು ಪ್ರಯತ್ನಿಸಿ ಅಥವಾ ತತ್‍ಕ್ಷಣದ ಸಾವು, ನೋವು ಅಥವಾ ಆಕ್ರಮ ಪ್ರತಿಬಂಧದ ಭಯವನ್ನುಂಟುಮಾಡಿ ಅಥವಾ ಉಂಟುಮಾಡಲು ಪ್ರಯತ್ನಿಸಿ ಕಳವು ಅಥವಾ ಸುಲಿಗೆ ಮಾಡುವುದು ದರೋಡೆ ಎನ್ನಬಹುದು. ಅವರೆಲ್ಲರೂ ವಾಸ್ತವವಾಗಿ ದರೋಡೆ ಮಾಡಿರಬಹುದು ಅಥವಾ ಕೆಲವರು ನೇರವಾಗಿ ದರೋಡೆಯ ಕೃತ್ಯ ಎಸಗಿದ್ದು, ಉಳಿದವರು ಅದಕ್ಕೆ ಸಹಾಯ ಮಾಡಿದವರಾಗಿರಬಹುದು. ಡಕಾಯಿತಿಯಲ್ಲಿ ಸಹಾಯಕರನ್ನೂ ಲೆಕ್ಕಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಡಕಾಯಿತಿ ಮಾಡುವಾಗ ಅವರಲ್ಲೊಬ್ಬ ಕೊಲೆ ಮಾಡಿದ ಪಕ್ಷದಲ್ಲಿ ಡಕಾಯಿತರಲ್ಲಿ ಎಲ್ಲರೂ ಕೊಲೆಯ ಅಪರಾಧಕ್ಕೆ ಒಳಗಾಗುತ್ತಾರೆ. ಭಾರತೀಯ ದಂಡಸಂಹಿತೆಯಲ್ಲಿ ಡಕಾಯಿತಿಯನ್ನೂ ಒಂದು ದಂಡಾರ್ಹ ಅಪರಾಧವೆಂದು ಪರಿಗಣಿಸಲಾಗಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಡಕಾಯಿತಿ&oldid=886501" ಇಂದ ಪಡೆಯಲ್ಪಟ್ಟಿದೆ