ಟೋಪಿ ಬೇಕಾ ಆಟ

ವಿಕಿಪೀಡಿಯ ಇಂದ
Jump to navigation Jump to search

ಟೋಪಿ ಆಟ

ಆಡಲು ಬೇಕಾಗುವ ವಸ್ತುಗಳು – ಟೋಪಿ ಅಥವಾ ಏನಾದರೂ ಬಟ್ಟೆ/ವಸ್ತು

ಆಟದ ವಿವರಣೆ

ಈ ಆಟವು ಹೊರಾಂಗಣದಲ್ಲೂ ಒಳಾಂಗಣದಲ್ಲೂ ಆಡಬಹುದಾದ ಆಟ. ಓಡಾಡಲು ಸ್ವಲ್ಪ ಜಾಗವಿದ್ದರೆ ಸಾಕು ಆಟವನ್ನಾಡಬಹುದು. ಚಿಕ್ಕ ಮಕ್ಕಳಿಗೆ ಅತಿ ಪ್ರಿಯವಾದ ಈ ಆಟ ಎಲ್ಲರಿಗೂ ಆಡಲು ಅನುಕೂಲಕರವಾದುದಾಗಿರುತ್ತದೆ.

ಆಡುವ ವಿಧಾನ

·        ಮೊದಲಿಗೆ ಆಟಗಾರರೆಲ್ಲಾ ವೃತ್ತಾಕಾರದಲ್ಲಿ ಕುಳಿತು ತಲೆ ತಗ್ಗಿಸಿ ಕಣ್ಣು ಮುಚ್ಚಿರುತ್ತಾರೆ

·        ಆಟಗಾರರು ಆಯ್ದ ಒಬ್ಬಾತ ಟೋಪಿಯನ್ನು ಹಿಡಿದು ಉಳಿದ ಆಟಗಾರರಿಗೆ ಸುತ್ತು ಬರುತ್ತಾ “ಟೋಪಿ ಬೇಕಾ ಟೋಪಿ “ ಎಂದು ಹಾಡುತ್ತಾರೆ.

·        ಅದಕ್ಕೆ ಆಟಗಾರರೆಲ್ಲ “ಎಂಥಾ ಟೋಪಿ “ ಎಂದು ಕೇಳುತ್ತಾರೆ.ಅವಾಗ ಆತ “ಚಿನ್ನದ ಟೋಪಿ” ಎಂದು ಹೇಳುತ್ತಾನೆ.

·        ಆಟಗಾರರು ಎಷ್ಟು ರುಪಾಯಿ ಎಂದು ಕೇಳಿದಾಗ “ನೂರು ರುಪಾಯಿ “ಎಂದು ಉತ್ತರಿಸುತ್ತಾರೆ.

·        ಆಮೇಲೆ ಆಟಗಾರರು ಅತೀಕಡಿಮೆ ಬೆಲೆಯನ್ನು ಹೇಳುವವರೆಗೂ “ಬೇಡ ಬೇಡ “ ಎನ್ನುತ್ತಾರೆ.

·        ಟೋಪಿ ಮಾರುವಾತ  ಬೆಲೆ ಕಡಿಮೆ ಮಾಡುತ್ತಾ ಹೋಗುತ್ತಾನೆ.

·        ಬೆಲೆ ಕಡಿಮೆ ಆದಾಗ ಆಟಗಾರರು “ಬೇಕು ಬೇಕು “ ಎನ್ನುತ್ತಾರೆ.

·        ಟೋಪಿ ಮಾರುವಾತ  ಟೋಪಿಯನ್ನು ಒಬ್ಬ ಆಟಗಾರನ ಹಿಂದೆ ಹಾಕಬೇಕು, ಇದನ್ನರಿತ ಆಟಗಾರ ಟೋಪಿಯನ್ನು ತೆಗೆದು ಆತನನ್ನು ಓಡಿಸುತ್ತಾ ವೃತ್ತಕ್ಕೆ ಸುತ್ತಬೇಕು.

·        ಓಡಿಸಿ ಆತನನ್ನು ಹಿಡಿದಲ್ಲಿ ಮತ್ತೆ ಪುನಃ ಅದೇ ಆಟಗಾರ ಟೋಪಿ ಮಾರುವವನಾಗಬೇಕು.ಇಲ್ಲವಾದಲ್ಲಿ ಯಾರ ಹಿಂದೆ ಟೋಪಿ ಹಾಕಲ್ಪಟ್ಟಿತ್ತೊ ಆತ ಟೋಪಿ ಮಾರುವಾತನಾಗುತ್ತಾನೆ.

·        ಹೀಗೇ ಆಟ ಮುಂದುವರಿಯುತ್ತದೆ

ಮಾಹಿತಿ ಸಂಗ್ರಹಣೆ – ಕೌಸಲ್ಯ ಕೆ ಎನ್

                      ಆಲಂಬ ಮಾಲೂರು