ಟೈಟ್ರೇಷನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಸಾಯನಶಾಸ್ತ್ರದಲ್ಲಿ ಒಂದು ದ್ರಾವಣದಲ್ಲಿ ಕರಗಿರುವ ರಾಸಾಯನಿಕದ ಪ್ರಮಾಣ ಎಷ್ಟೆಂದು ಕಂಡುಹಿಡಿಯುವುದಕ್ಕೆ ಟೈಟ್ರೇಷನ್ ಎಂಬ ಪ್ರಯೋಗವನ್ನು ಬಳಸುತ್ತಾರೆ [೧]. "ಎ" ಎಂಬ ದ್ರಾವಣಕ್ಕೆ ನಿಧಾನವಾಗಿ ಇನ್ನೊಂದು ದ್ರಾವಣ "ಬಿ" ಎಂಬುದನ್ನು ಬೆರೆಸುತ್ತಾ ಎಷ್ಟು ಪ್ರಮಾಣದ "ಬಿ" ದ್ರಾವಣವನ್ನು ಬೆರೆಸಿದಾಗ ಎರಡೂ ದ್ರಾವಣಗಳು ಪರಸ್ಪರ ಪ್ರತಿಸ್ಪಂದಿಸುತ್ತವೆ ಎಂದು ಗಮನಿಸಿ ತನ್ಮೂಲಕ "ಎ" ಎಂಬ ದ್ರಾವಣದ ತೀಕ್ಷ್ಣತೆಯನ್ನು ಕಂಡುಹಿಡಿಯಲಾಗುತ್ತದೆ. ಟೈಟ್ರೇಷನ್ ಉಪಕರಣವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಮೇಲಿರುವ ಕೊಳವೆಯಾಕಾರದ ಉಪಕರಣವು ಬ್ಯೂರೆಟ್ (burette). ಇದರಲ್ಲಿ "ಬಿ" ದ್ರಾವಣವನ್ನು ತುಂಬಿಸಲಾಗುತ್ತದೆ. ಕೆಳಗಿರುವ ಫ್ಲಾಸ್ಕಿನಲ್ಲಿ "ಎ" ದ್ರಾವಣವನ್ನು ಇಟ್ಟುಕೊಳ್ಳಲಾಗುತ್ತದೆ. ಬ್ಯೂರೆಟ್ ಉಪಕರಣದಿಂದ ಸ್ಟಾಪ್ ಕಾಕ್ ಎಂಬ ತಿರುಪನ್ನು ಬಳಸಿ ಹನಿಹನಿಯಾಗಿ "ಬಿ" ದ್ರಾವಣವನ್ನು ಫ್ಲಾಸ್ಕಿಗೆ ಬೀಳಿಸುತ್ತಾ ದ್ರಾವಣಗಳು ಪ್ರತಿಸ್ಪಂದಿಸಿದವೇ ಎಂದು ಗಮನಿಸುತ್ತಾ ಟೈಟ್ರೇಷನ್ ಸಾಗುತ್ತದೆ. ಉದಾಹರಣೆಗೆ ಫ್ಲಾಸ್ಕಿನಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ದ್ರಾವಣ ಇದೆ ಎಂದುಕೊಳ್ಳಿ. ಬ್ಯೂರೆಟ್ಟಿನಲ್ಲಿ ನಮಗೆ ಈಗಾಗಲೇ ಎಷ್ಟು ತೀಕ್ಷ್ಣವಾದುದೆಂದು ತಿಳಿದಿರುವ ಸೋಡಿಯಮ್ ಹೈಡ್ರಾಕ್ಸೈಡ್ () ದ್ರಾವಣವನ್ನು ತುಂಬಿಸಲಾಗಿದೆ. ಇವುಗಳ ಪರಸ್ಪರ ಪ್ರತಿಸ್ಪಂದನೆಯನ್ನು ಹೀಗೆ ಬರೆಯಬಹುದು.

ಟೈಟ್ರೇಷನ್ ಉಪಕರಣ

ಯಾವಾಗ ಪ್ರತಿಸ್ಪಂದನೆ ಉಂಟಾಗುತ್ತದೋ ಆಗ ಮತ್ತು ಇವುಗಳ ಅಣುಗಳ ಸಂಖ್ಯೆ ಒಂದೇ ಆಗಿರಬೇಕು. ಈ ಘಟ್ಟದಲ್ಲಿ ಫ್ಲಾಸ್ಕಿನಲ್ಲಿರುವ ಎಷ್ಟು ಎಂಬುದನ್ನು ನಾವೆಷ್ಟು ದ್ರಾವಣವನ್ನು ಕೆಳಗೆ ಬಿಟ್ಟೆವು ಎಂಬುದರೊಂದಿಗೆ ಅದರ ತೀಕ್ಷ್ಣತೆಯಿಂದ (concentration) ಗುಣಿಸಿ ಲೆಕ್ಕ ಹಾಕಬಹುದು. ತೀಕ್ಷ್ಣತೆಯು 0.5 ಮೋಲ್/ಲೀಟರ್ ಇದೆಯೆಂದು ಭಾವಿಸಿ. ಈ ದ್ರಾವಣದ 0.025 ಲೀಟರ್ ಕೆಳಗೆ ಬಿದ್ದಾಗ ಪ್ರತಿಸ್ಪಂದನೆ ಉಂಟಾಯಿತು ಎಂದು ಭಾವಿಸಿ. ಆದ್ದರಿಂದ ಫ್ಲಾಸ್ಕಿನಲ್ಲಿ 0.00125 ಮೋಲ್ ಗಳಿಷ್ಟಿದೆ ಎಂದು ಲೆಕ್ಕ ಹಾಕಬಹುದು.

ಉಲ್ಲೇಖಗಳು[ಬದಲಾಯಿಸಿ]

  1. "ಡಾರ್ಟ್ ಮೌತ್ ಕಾಲೇಜ್. ಟೈಟ್ರೇಷನ್ ಎಂದರೇನು?". Archived from the original on 2015-12-31. Retrieved 2015-12-22.