ಟೆಲ್ ಎಲ್ ಅಮಾರ್ನ
ಟೆಲ್ ಎಲ್ ಅಮಾರ್ನ | |
---|---|
العمارنة | |
ಪೂರ್ವ ಹೆಸರುಗಳು | El-Amarna, Tell el-Amarna |
ಸ್ಥಳ | Minya Governorate, ಈಜಿಪ್ಟ್ |
ಪ್ರಾಂಥ | Upper Egypt |
ನಿರ್ದೇಶಾಂಕ | 27°39′42″N 30°54′20″E / 27.66167°N 30.90556°E |
ಪ್ರಕಾರ | Settlement |
ಇತಿಹಾಸ | |
ವಾಸ್ತು ಶಿಲ್ಪಿ | Akhenaten |
ಸ್ಥಾಪಿತ | Approximately 1346 BC |
ಕಾಲಘಟ್ಟ | Eighteenth dynasty of Egypt, Roman Empire |
ಟೆಲ್ ಎಲ್ ಅಮಾರ್ನಕ್ರಿ. ಪೂ. ಸು. 1375ರಲ್ಲಿ ಈಜಿಪ್ಟಿನ ದೊರೆ 4ನೆಯ ಆಮೆನ್ ಹೋಟೆಪ್ (ಆಖೆನಾಟನ್) ಕಟ್ಟಿಸಿದ ರಾಜಧಾನಿ ಆಖೆನಾಟನ್ ನಗರದ ಅವಶೇಷಗಳ ನಿವೇಶನ.
ಕೈರೋದ ದಕ್ಷಿಣಕ್ಕೆ 190 ಮೈ. ದೂರದಲ್ಲಿ ನೈಲ್ ನದಿಯ ಪೂರ್ವತೀರದಲ್ಲಿದೆ. ಸೂರ್ಯದೇವತೆಯನ್ನು (ಅಟಾನ್) ಆರಾಧಿಸುವ ಹೊಸ ಮತವೊಂದರ ಪ್ರವರ್ತಕನಾದ ಆಮೆನ್ ಹೋಟೆಪ್, ಅದಕ್ಕೆ ಅನುಗುಣವಾಗಿ ತನ್ನ ಹೆಸರನ್ನು ಆಖೆನಾಟನ್ ಎಂದು ಬದಲಾಯಿಸಿಕೊಂಡು, ರಾಜಧಾನಿಯನ್ನು ತೀಬ್ಸಿನಿಂದ ಅಮಾರ್ನಕ್ಕೆ ಬದಲಾಯಿಸಿದ. ಆತನ ಹೊಸ ರಾಜಧಾನಿಗೂ ಆಖೆನಾಟನ್ ಎಂದು ಹೆಸರಾಯಿತು. ಅಲ್ಲಿ ಅವನು 15 ವರ್ಷಗಳ ಕಾಲ ಆಡಳಿತ ನಡೆಸಿ ಮರಣಹೊಂದಿದ. ಜನ ಮತ್ತೆ ಹಳೆಯ ಮತದ ಅನುಯಾಯಿಗಳಾದರು. ಮತ್ತೆ ತೀಬ್ಸ್ ರಾಜಧಾನಿಯಾಯಿತು. ಹೊಸ ರಾಜಧಾನಿ ಪಾಳುಬಿತ್ತು.
ಐತಿಹಾಸಿಕ ಮಹತ್ವ
[ಬದಲಾಯಿಸಿ]ಈ ಪ್ರದೇಶದಲ್ಲಿ ಈಚೆಗೆ ನಡೆದ ಉತ್ಕನನಗಳಲ್ಲಿ ಅರಮನೆಗಳ. ದೇವಾಲಯಗಳ, ವಸತಿಗಳ ಅವಶೇಷಗಳೂ ಮೂರ್ತಿಶಿಲ್ಪಗಳೂ ದೊರಕಿವೆ. ಅನೇಕ ಭಿತ್ತಿಚಿತ್ರಗಳು ಮತ್ತು ಅಲಂಕೃತ ಹಜಾರಗಳನ್ನು ಒಳಗೊಂಡ ಇಲ್ಲಿಯ ಅರಮನೆಯ ಮತ್ತು ಗ್ರಂಥಾಗಾರದ ಅವಶೇಷಗಳು ಬಹಳ ಪ್ರಸಿದ್ದವಾದವು. ಆ ಕಾಲದ ಪಟ್ಟಣಗಳ ವಿನ್ಯಾಸ, ಕಟ್ಟಡ ರಚನೆ, ಶಿಲ್ಪ ಮತ್ತು ಚಿತ್ರಕಲೆಗಳಿಗೆ ಅಮಾರ್ನ ಒಂದು ಒಳ್ಳೆಯ ನಿದರ್ಶನ. ಕ್ಯೂನಿಫಾರಂ ಲಿಪಿಯಲ್ಲಿ ಬರೆಯಲಾದ ಸು. 300 ಜೇಡಿಮಣ್ಣಿನ ಫಲಕಗಳು ಇಲ್ಲಿಯ ಗ್ರಂಥಾಗಾರದಲ್ಲಿ ಸಿಕ್ಕೆವೆ. ಬ್ಯಾಬಿಲೋನಿಯ, ಅಸ್ಸೀರಿಯ ಮತ್ತು ಈಜಿಪ್ಟನ ಬೇರೆ ಬೇರೆ ಭಾಗಗಳ ಅಧಿಕಾರಿಗಳು ಆಖೆನಾಟನ್ ಮತ್ತು ಆತನ ತಂದೆಗೆ ಬರೆದ ಪತ್ರಗಳು ಇವು. ಆಗಿನ ಕಾಲದ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಯ ಬಗ್ಗೆ ಇವು ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತವೆ. ಈಜಿಯನ್ ಪ್ರದೇಶಗಳೊಡನೆ ಈಜಿಪ್ಟು ಹೊಂದಿದ್ದ ಸಂಪರ್ಕದ ಅರಿವು ಇಲ್ಲಿ ದೊರಕಿಸುವ ವರ್ಣಚಿತ್ರಗಳಿಂದ ಉಂಟಾಗುತ್ತದೆ. ಆ ಕಾಲದ ಮೂರ್ತಿಶಿಲ್ಪ ನೈಜ ಸರಳ ಸೌಂದರ್ಯದಿಂದ ಕೂಡಿದ್ದು. ಅದರಲ್ಲಿ ಈಜಿಪ್ಟಿನ ಪರಂಪರಾಗತ ಶೈಲಿಯನ್ನು ಕಡೆಗಣಿಸಲಾಗಿದೆ. ಅಮಾರ್ನದ ಚಿತ್ರಗಳಿಗೆ ಈಜಿಪ್ಟಿನ್‍ಯ ಚಿತ್ರಕಲೆಯ ಇತಿಹಾಸದಲ್ಲಿ ವಿಶಿಷ್ಟ ಸ್ಥಾನವುಂಟು.
ಅಮಾರ್ನದ ಬಳಿ ಬಂಡೆಗಲ್ಲಿನಲ್ಲಿ ಕೊರೆದ ಸಮಾಧಿಗಳೂ ಪತ್ತೆಯಾಗಿವೆ. ಸೂರ್ಯದೇವನ ಮುಖ್ಯ ಅರ್ಚಕ ಮೆರಿ-ರಾ ಎಂಬಾತನ ಸಮಾಧಿ ಇವುಗಳಲ್ಲಿ ಒಂದು, ಕಾಪ್ಟ್ ಜನ (ಪ್ರಾಚೀನ ಈಜಿಪ್ಷಿಯನರ ವಂಶಜರು; ಮುಖ್ಯವಾಗಿ ಕಾಪ್ಟಿಕ್ ಚರ್ಚಿನವರು) ಈ ಸಮಾಧಿಗಳಲ್ಲಿ ವಾಸಮಾಡುತ್ತಿದ್ದರು. ಅವರು ಇಲ್ಲಿಯ ಒಂದು ಸಮಾಧಿಯನ್ನು ಚರ್ಚ್ ಆಗಿ ಪರಿವರ್ತಿಸಿಕೊಂಡಿದ್ದರು. ಉತ್ಖನನದಲ್ಲಿ ಗುರುತಿಸಲಾದ ಒಂದು ಮನೆ ಒಬ್ಬ ಶಿಲ್ಪಿಯದು. ಅದರಲ್ಲಿ ಅನೇಕ ಮುಖವಾಡಗಳು ದೊರಕಿವೆ. ಆಖೆನಾಟನನ ರಾಣಿ ನೆಫರ್‍ಟಿಟಿಯ ಮುಖವಾಡ ಅವುಗಳಲ್ಲಿ ಒಂದು. ಅದು ಆ ಕಾಲದ ಶಿಲ್ಪಕಲಾ ಚಾತುರ್ಯದ ಉತ್ತಮ ನಿದರ್ಶನ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- The University of Cambridge's Amarna Project
- Amarna Art Gallery Shows just a few, but stunning, examples of the art of the Amarna period.
- M.A. Mansoor Amarna Collection
- The Amarna3D Project 3D visualisation of the city developed by Paul Docherty.