ದೂರದರ್ಶಕ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
(ಟೆಲಿಸ್ಕೋಪ್ ಇಂದ ಪುನರ್ನಿರ್ದೇಶಿತ)
Jump to navigation Jump to search
ನೀಸ್ ವೀಕ್ಷಣಾಲಯದಲ್ಲಿ ೫೦ ಸೆ.ಮೀ. ಪ್ರಮಾಣದ ವಕ್ರೀಭವಿಸುವ ದೂರದರ್ಶಕ.

ದೂರದರ್ಶಕ - ದೂರದ ವಸ್ತುಗಳನ್ನು ವೀಕ್ಷಿಸಲೆಂದು ನಿರ್ಮಿತವಾದ ಉಪಕರಣ. ಈ ಹೆಸರು ಸಾಮಾನ್ಯವಾಗಿ ದೃಕ್-ದೂರದರ್ಶಕವನ್ನು ಪ್ರಸ್ತಾಪಿಸುತ್ತದಾದರೂ, ವಿದ್ಯುತ್‌ಕಾಂತೀಯ ವರ್ಣಪಟಲದ ಬಹುತೇಕ ಭಾಗಗಳಿಗೆ ಮತ್ತು ಬೇರೆ ತರಹದ ತರಂಗಗಳಿಗೂ ದೂರದರ್ಶಕಗಳು ಲಭ್ಯವಿವೆ.

ಜಗತ್ತಿನ ದೊಡ್ಡ ದೂರದರ್ಶಕಗಳು[ಬದಲಾಯಿಸಿ]

ಚೀನಾದ ದೊಡ್ಡ ದೂರದರ್ಶಕ ಯೋಜನೆ[ಬದಲಾಯಿಸಿ]

 • 13 Jan, 2017:ಗುರುತ್ವದ ಅಲೆ ಪತ್ತೆಗೆ ಚೀನಾದಿಂದ ಮತ್ತೊಂದು ಯೋಜನೆ;
 • ಚೀನಾ ದೇಶವು ವಿಶ್ವ ಸೃಷ್ಟಿಯ ರಹಸ್ಯ ತಿಳಿಸುವ ಬಿಗ್ ಬ್ಯಾಂಗ್ ಸಿದ್ಧಾಂತದ ಬೆನ್ನುಹತ್ತಿದೆ. ಸೃಷ್ಟಿ ಕಾಲದಲ್ಲಿ ಹೊರಹೊಮ್ಮಿದ ಗುರುತ್ವ ಅಲೆಗಳನ್ನು ಪತ್ತೆ ಹಚ್ಚಲು ಟಿಬೆಟ್‌ನ ಅತಿಎತ್ತರದ ಪ್ರದೇಶದಲ್ಲಿ ದೂರದರ್ಶಕ (ಟೆಲಿಸ್ಕೋಪ್) ನಿರ್ಮಾಣ ಕಾರ್ಯ ಆರಂಭಿಸಿದೆ.

ಯೋಜನೆ ಹೆಸರು: ‘ಎನ್ಗರಿ ನಂ.1’[ಬದಲಾಯಿಸಿ]

 • ಉದ್ದೇಶ: ಬ್ರಹ್ಮಾಂಡದ ಕ್ಷೀಣ ತರಂಗಾಂತರಗಳನ್ನು (ಅಲೆಗಳನ್ನು) ಪತ್ತೆ ಹಚ್ಚುವುದು. ಈ ಮೂಲಕ ಸೃಷ್ಟಿ ಉಗಮದ ರಹಸ್ಯ ತಿಳಿಯುವುದು.
 • ಸ್ಥಳ: ಭಾರತ–ಚೀನಾ–ಟಿಬೆಟ್ ಗಡಿಯ ‘ಎನ್ಗರಿ’ ಪ್ರದೇಶದಲ್ಲಿ ನಿರ್ಮಾಣ
 • ಸ್ಥಳ ಮಹತ್ವ: ಗುರುತ್ವದ ಅಲೆ ಪತ್ತೆಹಚ್ಚಲು ಉತ್ತರ ಗೋಳಾರ್ಧದಲ್ಲಿರುವ ಅತ್ಯುತ್ತಮ ಸ್ಥಳ ‘ಎನ್ಗರಿ’. ಇಲ್ಲಿ ಗಾಳಿ ವಿರಳವಾಗಿದ್ದು, ವಾತಾವರಣದ ತೇವಾಂಶ ಕೂಡಾ ಕಡಿಮೆಯಿರುವುದರಿಂದ ಅಲೆಗಳನ್ನು ಪತ್ತೆ ಹಚ್ಚಲು ಹೆಚ್ಚು ಅವಕಾಶವಿದೆ.
 • ನಿರ್ಮಾಣ ವೆಚ್ಚ: ರೂ.127 ಕೋಟಿ (ಮೊದಲ ಟೆಲಿಸ್ಕೋಪ್)
 • ನಿರ್ಮಾಣ ಅವಧಿ: 5 ವರ್ಷ
 • ಎತ್ತರ: ಸಮುದ್ರಮಟ್ಟದಿಂದ 5000 ಅಡಿ ಎತ್ತರದಲ್ಲಿ ನಿರ್ಮಾಣ

ಹಿನ್ನೆಲೆ[ಬದಲಾಯಿಸಿ]

 • ಗುರುತ್ವದ ಅಲೆ: ಗುರುತ್ವದ ಅಲೆಗಳ ಬಗ್ಗೆ 1915ರಲ್ಲಿ ಮೊಟ್ಟಮೊದಲು ಬೆಳಕು ಚೆಲ್ಲಿದವರು ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್‌. ಸಾಮಾನ್ಯ ಸಾಪೇಕ್ಷ ಸಿದ್ಧಾಂತದಲ್ಲಿ ಗುರುತ್ವದ ಅಲೆಗಳ ಬಗ್ಗೆ ಅವರು ವಿಶ್ಲೇಷಿಸಿದ್ದರು. ಎರಡು ಆಕಾಶಕಾಯಗಳ ಘರ್ಷಣೆಯಿಂದ ಗುರುತ್ವದ ಅಲೆಗಳು ಹೊರಹೊಮ್ಮುತ್ತವೆ ಎಂದು ಸಿದ್ಧಾಂತ ತಿಳಿಸುತ್ತದೆ.
 • ಮೊದಲು ಪತ್ತೆ: 2015ರಲ್ಲಿ ಅಮೆರಿಕದ ಲೈಗೊ (ಲೇಸರ್ ಇಂಟರ್‌ಫೆರೋಮೀಟರ್ ವೇವ್ ಅಬ್ಸರ್ವೇಟರಿ) ಮೊಟ್ಟ ಮೊದಲ ಬಾರಿಗೆ ಗುರುತ್ವದ ಅಲೆಗಳನ್ನು ಪತ್ತೆಹಚ್ಚಿತ್ತು. 130 ಕೋಟಿ ವರ್ಷಗಳ ಹಿಂದೆ ಎರಡು ಕಪ್ಪುರಂಧ್ರಗಳು ಸಮ್ಮಿಲನ ಹೊಂದಿದಾಗ ಉಂಟಾದ ಅಲೆಗಳು ಇವು. ಐನ್‌ಸ್ಟೀನ್‌ ತನ್ನ ಸಿದ್ಧಾಂತ ಮಂಡಿಸಿದ 100 ವರ್ಷಗಳ ಬಳಿಕ ಗುರುತ್ವದ ಅಲೆಗಳನ್ನು ಪತ್ತೆಹಚ್ಚಲಾಗಿತ್ತು.
 • ಸೃಷ್ಟಿ ರಹಸ್ಯ ಅರಿಯುವ ಯತ್ನ: ಬಿಗ್‌ ಬ್ಯಾಂಗ್ ಸಿದ್ಧಾಂತದ ಪ್ರಕಾರ, 1380 ಕೋಟಿ ವರ್ಷಗಳ ಹಿಂದೆ ಜಗತ್ತಿನ ಸೃಷ್ಟಿ ವೇಳೆ ಬಿಡುಗಡೆಯಾದ ಅಲೆಗಳನ್ನು (ಈಗ ಕ್ಷೀಣ ಸ್ವರೂಪದ ಅಲೆಗಳು) ಪತ್ತೆಹಚ್ಚುವುದು ಟಿಬೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಟೆಲಿಸ್ಕೋಪ್ ಉದ್ದೇಶ ಎಂದು ಚೀನಾ ವಿಜ್ಞಾನ ಅಕಾಡೆಮಿ (ಸಿಎಎಸ್‌) ತಿಳಿಸಿದೆ.
 • 2015ರಲ್ಲಿ ಮೊದಲ ಯೋಜನೆ: ಗುರುತ್ವದ ಅಲೆ ಪತ್ತೆ ಹಚ್ಚಲು ಚೀನಾ 2015ರಲ್ಲಿ ಟಿಯಾಂಕ್ವಿನ್‌ನಲ್ಲಿ ಮೊದಲ ಯೋಜನೆ ಆರಂಭಿಸಿತ್ತು. ನಾಲ್ಕು ಹಂತಗಳ ಈ ಯೋಜನೆಯಲ್ಲಿ ಉನ್ನತ ಭೂಕಕ್ಷೆಗೆ ಮೂರು ಉಪಗ್ರಹಗಳನ್ನು ಕಳುಹಿಸಲಾಗುತ್ತದೆ.

[೧] [೨]

[೩]

ನೋಡಿ[ಬದಲಾಯಿಸಿ]

ಗಮನಿಸಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 1. ವಿಶ್ವದ ಅತಿ ಎತ್ತರದ ಟೆಲಿಸ್ಕೋಪ್;ಪಿಟಿಐ;13 Jan, 2017
 2. China To Set Up World's Highest Altitude Telescopes In Tibet World | Press Trust of India | Updated: January 07, 2017 17
 3. China constructing world's highest altitude telescopes in Tibet