ಟೆಗೂಸಿಗ್ಯಾಲ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೆಗೂಸಿಗ್ಯಾಲ್ಪ- ಹಾಂಡುರಾಸ್ ಗಣರಾಜ್ಯದ ರಾಜಧಾನಿ, ಫ್ರ್ಯಾನ್ಸಿಸ್ಕೋ ಮೋರಜಾನ್ ಡಿಪಾರ್ಟ್‍ಮೆಂಟಿನ (ಆಡಳಿತ ವಿಭಾಗ) ಆಡಳಿತ ಕೇಂದ್ರ.

View of Tegucigalpa.

ಹವಾಗುಣ[ಬದಲಾಯಿಸಿ]

ಉ.ಅ.15' ಮತ್ತು ಪ.ರೇ. 86' 30' ಮೇಲೆ ಬೆಟ್ಟಗುಡ್ಡಗಳಿಂದ ಆವೃತವಾಗಿರುವ ಈ ನಗರ ಸಮುದ್ರಮಟ್ಟದಿಂದ 3,200' (975 ಮೀ.) ಎತ್ತರದಲ್ಲಿದೆ. ಜನಸಂಖ್ಯೆ 2,18,510 (1969). ಚಿನ್ನ ಮತ್ತು ಬೆಳ್ಳಿ ಗಣಿಗಾರಿಕೆ ಕೇಂದ್ರವಾಗಿ ಇದು ಬೆಳೆಯತೊಡಗಿತು. ಇದು ಉಷ್ಣವಲಯದಲ್ಲಿದ್ದರೂ ವಾಯುಗುಣ ಹಿತಕರ. ಜೂನಿನ ದೈನಿಕ ಸರಾಸರಿ ಉಷ್ಣತೆ 75ಲಿ ಈ. (24ಲಿ ಅ). ಜನವರಿಯದು 65ಲಿ ಈ. (18ಲಿ ಅ.). ಮೇಯಿಂದ ಅಕ್ಟೋಬರ್ ವರೆಗೆ ಮಳೆಗಾಲ.

ಸಾರಿಗೆ ಸಂಪರ್ಕ[ಬದಲಾಯಿಸಿ]

ರೈಲ್ವೆ ಸಂಪರ್ಕವಿಲ್ಲದ, ಪ್ರಪಂಚದ ಕೆಲವೇ ರಾಜಧಾನಿಗಳ ಪೈಕಿ ಟೆಗೂಸಿಗ್ಯಾಲ್ಪವೂ ಒಂದು. ಟಾನ್ ಕಾನ್ ಟಿನ್ ನಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಪಂಚದ ಇತರ ಭಾಗಗಳೊಡನೆ ಇದಕ್ಕೆ ಸಂಪರ್ಕ ಏರ್ಪಟ್ಟಿದೆ. ದಕ್ಷಿಣ ಹೆದ್ದಾರಿ ಸರ್ವಋತುಗಳಲ್ಲೂ ಬಳಕೆಗೆ ಬರುತ್ತದಾದ್ದರಿಂದ ಪೆಸಿಫಿಕ್ ತೀರದಿಂದ ಮತ್ತು ನೆರೆಯ ಎಲ್ ಸಾಲ್ವಡಾರ್ ಮತ್ತು ನಿಕರಾಗ್ವ ದೇಶಗಳಿಂದ ಇಲ್ಲಿಗೆ ಸರಕು ಸಾಗಿಸಬಹುದು. ಆದರೆ ಉತ್ತರದಿಂದ ಬರುವ ಸರಕುಗಳನ್ನು ಹಡಗುಗಳ ಮೂಲಕ ಪ್ವೆರ್ಟೊ ಕಾರ್ಟಿಸ್ ಗೆ ತಂದು ಅಲ್ಲಿಂದ ರೈಲ್ವೆ ಅಥವಾ ಒಣ ಋತು ರಸ್ತೆಯಲ್ಲಿ ಪಾಟ್ರೆರಿಲೋಸಿಗೂ ಅನಂತರ ಸರ್ವಋತು ರಸ್ತೆಯ ಮೂಲಕ ಟೆಗೂಸಿಗ್ಯಾಲ್ಪಕ್ಕೂ ಸಾಗಿಸಬೇಕಾಗುತ್ತದೆ.

ಪ್ರಮುಖ ಕಟ್ಟಡಗಳು.[ಬದಲಾಯಿಸಿ]

ರಾಷ್ಟ್ರಪತಿ ಭವನ, ಹಾಂಡುರಾಸ್, ಕೇಂದ್ರೀಯ ಬ್ಯಾಂಕು, ವಿಧಾನ ಭವನ, ರಾಷ್ಟ್ರೀಯ ವಿಶ್ವವಿದ್ಯಾಲಯ-ಇವು ಮಲ್ಲೋಲ್ ಸೇತುವೆಯ ಬಳಿ ಇರುವ ಪ್ರಮುಖ ಕಟ್ಟಡಗಳು. ರಾಷ್ಟ್ರದ ಮಹಾವೀರನೊಬ್ಬನ ಹೆಸರಿನ ಮೋರ್ ಸಾನ್ ಉದ್ಯಾನದ ಎದುರಿಗಿನ ಕತೀಡ್ರಲ್ ಆಕರ್ಷಕವಾಗಿದೆ. ಕೈಗಾರಿಕೆಯಲ್ಲಿ ಟೆಗೂಸಿಗ್ಯಾಲ್ಪ ಅಷ್ಟು ಮುಂದುವರಿದಿಲ್ಲ.

ಕೈಗಾರಿಕೆಗಳು[ಬದಲಾಯಿಸಿ]

ಸ್ಥಳೀಯ ಬೇಡಿಕೆಗಳನ್ನು ಪೂರೈಸುವ ಕೆಲವು ಸಣ್ಣಪುಟ್ಟ ಕೈಗಾರಿಕೆಗಳಿವೆ. ಜವಳಿ, ಸಕ್ಕರೆ, ಸಿಗರೇಟ್ ತಯಾರಿಕೆಗಳು ಮುಖ್ಯ ಕೈಗಾರಿಕೆಗಳು.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: