ಟಿ. ವಿ. ಗುರುಮೂರ್ತಿ
ಕನ್ನಡ ಭಾಷೆಯ ಮುಕ್ತ ಮುಕ್ತ ಧಾರಾವಾಹಿಯ 'ಅನಂತಯ್ಯನ ಪಾತ್ರಧಾರಿ', ಎಲ್ಲರಬಾಯಿನಲ್ಲಿ 'ಗುರುಮಾಮ' ಎಂದು ಕರೆಸಿಕೊಳ್ಳುವ, ಟಿ.ವಿ.ಗುರುಮೂರ್ತಿಯವರು, ಒಬ್ಬ ಬ್ಯಾಂಕ್ ನೌಕರ. ತಮ್ಮ ವೃತ್ತಿಗಿಂತಾ ಅಭಿನಯದಲ್ಲಿ ಅವರಿಗಿರುವ ಆಸಕ್ತಿ ಅಪಾರ. ಸ್ಪಂದನದ ಅಧ್ಯಕ್ಷ, ಹಲವಾರು ಸಾಂಸ್ಕೃತಿಕ ಸಂಸ್ಥೆಗಳ ಪದಾಧಿಕಾರಿಯಾಗಿ ಬಿಡುವಿಲ್ಲದ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ೩೦ ವರ್ಷಗಳ ಕಾಲ, ಮೈಸೂರು ಬ್ಯಾಂಕ್ ನ ಕನ್ನಡ ಬಳಗದ ಅಜೀವ ಕಾರ್ಯದರ್ಶಿ, ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು. ಸನ್. ೨೦೧೦ ರಲ್ಲಿ ನಿವೃತ್ತಿಯ ಬಳಿಕವೂ ಅಭಿನಯದಲ್ಲಿನ ನಂಟು ಕಡಿಮೆಯಾಗಿಲ್ಲ. ಮೈಸೂರ್ ಬ್ಯಾಂಕ್ ನಲ್ಲಿ ಕನ್ನಡದ ಬಳಕೆ ಅತಿಕಡಿಮೆಯಗಿದ್ದ ಕಾಲವದು. ನಿರಂತರವಾಗಿ 'ನವರತ್ನ ರಾಜು ಕನ್ನಡ ನಾಟಕ ಸ್ಪರ್ಧೆ', 'ನಾಟಕೋತ್ಸವಗಳು' 'ನಾಟಕಗಳ ಸಿದ್ಧತೆ', 'ಪ್ರಯೋಗಗಳು' ನದೆಯುತ್ತಿರುವುದರಿಂದ ಕನ್ನಡ ವಾತಾವರಣ ನಿರ್ಮಾಣವಾಯಿತು. 'ಅಖಿಲ ಭಾರತೀಯ ದಕ್ಷಿಣ ವಲಯ ಸ್ಪರ್ಧೆ' ಸೇರಿದಂತೆ ಹಲವಾರು ಉತ್ಸವಗಳಲ್ಲಿ 'ಗುರುಮೂರ್ತಿ'ಯವರ ನಟನೆಗೆ, ರಂಗಸಜ್ಜಿಕೆಗೆ, ವೇಷ-ಭೂಷಣಗಳ ವಿನ್ಯಾಸಕ್ಕೆ ಪ್ರಶಸ್ತಿಗಳು ಸಂದಿವೆ.
ಮನೆಯ ವಾತಾವರಣ
[ಬದಲಾಯಿಸಿ]'ಗುರುಮೂರ್ತಿ'ಯವರ ತಂದೆ, ತಿಪಟೂರು ವೆಂಕೋಬರಾವ್ ರವರ ಪ್ರೇರಣೆಯಿಂದಾಗಿ 'ಟೆಲಿವಿಶನ್ ನಲ್ಲಿ ಅಭಿನಯಿಸುವ ಆಸಕ್ತಿ'ಬಂತು. 'ಟಿ.ವಿ.ಗುರುಮೂರ್ತಿ'ಯವರು ನಟಿಸಿದ ಧಾರಾವಾಹಿಗಳು :
- 'ಮಿ.ನಿರುದ್ಯೋಗಿ'
- 'ಒಂದು ಸುಳ್ಳು ಸಂಸಾರಕ್ಕೆ ಮುಳ್ಳು'
- 'ವೆಂಕಟರಮಣ ಗೋವಿಂದ'
ಮೊದಲಾದ 'ಚಂದನದ ಧಾರಾವಾಹಿ'ಗಳಲ್ಲಿ ನಟಿಸಿ ಎಲ್ಲರನ್ನೂ ನಗಿಸಿದ್ದಾರೆ. ಖಾಸಗೀ ವ್ಚಾನೆಲ್ ಗಳಲ್ಲಿ 'ಸಿಲ್ಲಿಲಲ್ಲಿ', 'ಪಾಂಡುರಂಗ ವಿಠಲ', 'ಪಾರ್ವತೀ ಪರಮೇಶ್ವರ', ಮುಂತಾದ ಹಾಸ್ಯ ಧಾರಾವಾಹಿಗಳಲ್ಲಿ ಅವರ 'ಬೋಳುತಲೆಯ ಪಾತ್ರ' ಜನರಿಗೆ ಅತಿಪ್ರಿಯವಾಯಿತು. 'ಚಂದನ ಚಾನೆಲ್' ನಲ್ಲಿ ನಿರ್ಮಿತವಾದ, 'ಅಡಚನೆಗಾಗಿ ಕ್ಷಮಿಸಿ ಧಾರಾವಾಹಿ' ಹೆಚ್ಚು ಶನಿವಾರ, ರವಿವಾರಗಳ ದಿನದಂದು 'ನಿರ್ದೇಶಕ ಮೋಹನ ರಾಂ', ಶೂಟಿಂಗ್ ಇಟ್ಟುಕೊಂಡು ಸಹಕರಿಸಿದರು. 'ಮುಕ್ತಾಮುಕ್ತಾದಲ್ಲಿ ಅನಂತಯ್ಯನ ಪಾತ್ರ'ದಲ್ಲಿ ಬೇಗ ಮರಣಿಸಿದ ಪ್ರಸಂಗ ಕೆಲವು ಅಭಿಮಾನಿಗಳಿಗೆ ನಿರಾಶೆಯನ್ನು ತಂದಿದೆಯೆಂದು ಪತ್ರಿಕೆಗಳು ವರದಿಮಾಡಿದ್ದವು.