ಟಿ. ಯಲ್ಲಪ್ಪ
ಗೋಚರ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಜನನ, ಜೀವನ
[ಬದಲಾಯಿಸಿ]ತಾಯಪ್ಪ ಯಲ್ಲಪ್ಪ ಇವರು ೨.೧೦.೧೯೭೦ ರಂದು ಜನಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎ.ನಾರಾಯಣ ಪುರದಲ್ಲಿ ಮುನಿಯಮ್ಮ ಹಾಗು ತಾಯಪ್ಪ ಎಂಬ ಕೃಷಿಕಾರ್ಮಿಕ ದಂಪತಿಗಳ ಮಗನಾಗಿ ದಲಿತ ಕುಟುಂಬದಲ್ಲಿ ಜನಿಸಿದರು. ಶಾಲಾ ದಿನಗಳಿಂದಲೇ ಕವಿತಾ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಯಲ್ಲಪ್ಪ ಅನೇಕ ಕಾವ್ಯಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಪ್ರತಿಭಾವಂತರು, ಇವರು ಪ್ರಸ್ತುತ ಬೆಂಗಳೂರಿನ ಕೆ.ಆರ್.ಪುರಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರ ಸಾಹಿತ್ಯ ಕೊಡುಗೆಗಳು
[ಬದಲಾಯಿಸಿ]ಲಲಿತ ಪ್ರಬ೦ಧ
[ಬದಲಾಯಿಸಿ]- ಇಪ್ಪತ್ತೆರಡರ ಅಳಲು
ಕವಿತಾ ಸ೦ಕಲನಗಳು
[ಬದಲಾಯಿಸಿ]- ಕಡಲಿಗೆ ಕಲಿಸಿದ ದೀಪ ಚಿಟ್ಟೆಮತ್ತು ಜೀವಯಾನ
- ನವಿಲಿಗೆ ಬಿದ್ದ ಕತ್ತಲ ಕನಸು
- ಇವರ ಕಡಲಿಗೆ ಕಳಿಸಿದ ದೀಪ ಕೃತಿಯು ANKLETS ಎಂಬ ಶೀರ್ಷಿಕೆಯಲ್ಲಿ ಇಂಗ್ಲಿಷಿಗೆ ಭಾಷಾಂತರಗೊಂಡಿದೆ.
- ಕಣ್ಣ ಪಾಪೆಯ ಬೆಳಕು ಎಂಬ ಕವನ ಸಂಕಲನಕ್ಕೆ ಮುದ್ದಣ ಕಾವ್ಯ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿ ಪುರಸ್ಕಾರಗಳು
[ಬದಲಾಯಿಸಿ]- ಕಡಲಿಗೆ ಕಲಿಸಿದ ದೀಪ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದಿರುವ ಶ್ರೀಯುತರು
- ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ ಹಾಗೂ
- ಚೆನ್ನವೀರ ಕಣವಿ ಕಾವ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.
- ಚಿಟ್ಟೆ ಮತ್ತು ಜೀವಯಾನ ಕೃತಿಗೆ ವೀಚೀ ಕಾವ್ಯ ಪುರಸ್ಕಾರ ಮತ್ತು ಹರಿಹರಶ್ರೀ ಕಾವ್ಯ ಪುರಸ್ಕಾರಗಳು ಲಭಿಸಿದೆ.