ಟಿ.ಪಿ.ಅಶೋಕ
Jump to navigation
Jump to search
ಟಿ.ಪಿ.ಅಶೋಕ ಇವರು ೧೯೫೫ ಅಗಸ್ಟ ೨೬ರಂದು ನಂಜನಗೂಡಿನಲ್ಲಿ ಜನಿಸಿದರು. ಸಾಗರದ ಲಾಲ ಬಹಾದ್ದೂರ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಪ್ರಜಾವಾಣಿ ಹಾಗು ಮಯೂರ ಪತ್ರಿಕೆಗಳಲ್ಲಿ ಅನೇಕ ವಿಮರ್ಶಾ ಲೇಖನಗಳನ್ನು ಬರೆದಿದ್ದಾರೆ. ಸಂಸ್ಕೃತಿ, ಪರಂಪರೆ ಹೊಂದಿದ ಸ್ಥಳೀಯ ಸಾಹಿತ್ಯ, ವಿಭಿನ್ನ ಭೌಗೋಳಿಕ ಪ್ರದೇಶಗಳ ಸಾಹಿತ್ಯವನ್ನು ಪರಿಪೂರ್ಣವಾಗಿ ಅಧ್ಯಯನ ಮಾಡಿದಾಗ ಸಮಗ್ರತೆಯ ದೃಷ್ಟಿಕೋನ ನಮ್ಮಲ್ಲಿ ಮೂಡುತ್ತದೆ ಎಂದು ಖ್ಯಾತ ವಿಮರ್ಶಕರಾದ ಟಿ.ಪಿ.ಅಶೋಕ್‍ರವರು ಹೇಳಿದ್ದಾರೆ.
ಕೃತಿಗಳು[ಬದಲಾಯಿಸಿ]
ವಿಮರ್ಶೆ[ಬದಲಾಯಿಸಿ]
- ನವ್ಯ ಕಾದಂಬರಿಯ ಪ್ರೇರಣೆಗಳು
- ಹೊಸ ಹೆಜ್ಜೆ ಹೊಸ ಹಾದಿ
- ಸಾಹಿತ್ಯ ಸಂಪರ್ಕ
- ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು
- ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಆಧುನೀಕರಣದ ಪ್ರಕ್ರಿಯೆ
- ಕಥನ ಭಾರತಿ
- ಕೃತಿ ಜಗತ್ತು
ಅನುವಾದ[ಬದಲಾಯಿಸಿ]
- ರಿಕ್ತ ರಂಗಭೂಮಿ (ಮೂಲ ರಶಿಯನ್:ಗ್ರೊಟೊವ್‍ಸ್ಕಿ)
- ವಾಸ್ತವವಾದ
- ಫಾದರ್ ಸೆರ್ಗಿಯಸ್ (ಮೂಲ ರಶಿಯನ್:ಟಾಲ್‍ಸ್ಟಾಯರ ಕಿರುಕಾದಂಬರಿ)
- ಓವರ್ ಕೋಟ್(ಮೂಲ ರಶಿಯನ್: ನಿಕೊಲಾಯ್ ಗೊಗೊಲ್ ಇವರ ನೀಳ್ಗತೆ)
ಸಂಪಾದನೆ[ಬದಲಾಯಿಸಿ]
ಕಥಾ ಸಂಕಲನ[ಬದಲಾಯಿಸಿ]
ಪ್ರಶಸ್ತಿ[ಬದಲಾಯಿಸಿ]
- ಸಾಹಿತ್ಯಸಂಪರ್ಕ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಹಾಗು ವಿ.ಎಂ.ಇನಾಮದಾರ ಸ್ಮಾರಕ ಬಹುಮಾನ
- ಕಥನ ಭಾರತಿ ವಿಮರ್ಶಾಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.