ವಿಷಯಕ್ಕೆ ಹೋಗು

ಟಿ.ಎಸ್ ಅಂಬುಜಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟಿ .ಎಸ್ ಅಂಬುಜಾ ಇವರು ಹಾಸ್ಯ ಲೇಖಕಿ ಎನಿಸಿಕೊಂಡಿದ್ದಾರೆ. ೨೭-೨-೧೯೯೫ರಂದು ಮಲ್ಪೆ ರಾಮದಾಸ ಸಾಮಗ ಹಾಗೂ ನಾಗರತ್ನರವರಿಗೆ ಉಡುಪಿಯಲ್ಲಿ ಜನಿಸಿದರು.೧೯೭೫ರಲ್ಲಿ ತಮ್ಮ ಪದವಿ ಶಿಕ್ಷಣವನ್ನು ಪಡೆದರು.ಪತಿಯ ಸಲಹೆಯಂತೆ ಬರೆಯಲು ಪ್ರಾರಂಭಿಸಿದ ಇವರು ತುಷಾರ ಮಾಸಪತ್ರಿಕೆಯ ೧೯೭೭ರ ಜೂನ್ ಸಂಚಿಕೆಯಲ್ಲಿ ಮೊದಲ ಹಾಸ್ಯ ಲೇಖನ ಪ್ರಕಟಿಸಿದರು. ಕನ್ನಡದಲ್ಲಿ ಹಾಸ್ಯ ಲೇಖಕಿಯರು ಬೆರಳೆಣಿಕೆಯಷ್ಟು ಇದ್ದ ಕಾಲದಲ್ಲಿ ಹಾಸ್ಯ ಲೇಖಕಿಯಾಗಿ ಗುರುತಿಸಿಕೊಂಡರು.ಅಲ್ಲದೆ ಸಾಹಿತ್ಯ ದೊಂದಿಗೆ ಸಂಗೀತದಲ್ಲಿ ಸೀನಿಯರ್ ಪದವಿಯನ್ನು ಬಾಲ್ಯದಲ್ಲಿ ಪಡೆದಿದ್ದಾರೆ. ಹೂಯ್ !ಮತ್ತೇನು ವಿಷಯ ಎನ್ನುವ ಮೊದಲ ಕೃತಿಯಲ್ಲಿ ೨೮ ಹಾಸ್ಯಲೇಖನಗಳಿವೆ.. ತಮ್ಮ ಮೊದಲ ಕೃತಿ ಪ್ರಕಟವಾದ ಮೂರನೆ ತಿಂಗಳಲ್ಲಿ ಪ್ರಕಟಗೊಂಡ ಎರಡನೆಯ ಕೃತಿ ನಗು ಮೊಗದ ಸಿರಿಹಾಸ್ಯ ಬರಹಗಳ ಸಂಕಲನ(೧೯೯೭). ಹಾಸ್ಯದ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಆ ಹಂದರದ ನೆಲೆಯಲ್ಲಿ ನಗುವನ್ನು ಉಕ್ಕಿಸುತ್ತಾರೆ.

ಲೇಖನಗಳು

[ಬದಲಾಯಿಸಿ]
  1. ಅಮ್ಮ ನುಡಿದ ಮಾತು ಕೇಳಿ
  2. ಭಯಂಕರ
  3. ರೂರಲ್ ಬ್ಯಾಂಕಿಂಗ್
  4. ರವಿವಾರ ಬಂತಮ್ಮಾ
  5. ಶಾಪಿಂಗ್ ಶಾಪಿಂಗ್
  6. ಅಭಾವ ಚಿಕಿತ್ಸೆ
  7. ಅಮೆರಿಕನ್ನ್ರ ಅರಸಿನ ಕುಂಕುಮ
  1. ರಗ್ಗದ ರಂಗೋಲಿ(೧೯೯೮)
  2. ಮರೆತ ಮಾಣಿಕ್ಯಗಳು
  3. ಹೊಯ್ ಮತ್ತೇನು ವಿಶೇಷ
  4. ಸಾಮಗಾಯಣ

ಕಾದಂಬರಿಗಳು

[ಬದಲಾಯಿಸಿ]
  • ಕನ್ನಡ
  1. ಸ್ನೆಹ ಪ್ರೀತಿ
  2. ಚಿಪ್ಪೊಳಗಿನ ಮುತ್ತು
  3. ಸ್ನೆಹ ಸಂಬಂಧ
  • ಕೊಂಕಣಿ
  1. ಮಾನ್ ಲಾಸ್ತಾನ
  2. ಕೂಗುಳ್ ಗಾಯ್ತನ
  3. ತುಳಸಿ
  4. ದೆವಾಚಿಂ ಭುರ್ಗಿಂ
  5. ಆಜ್ ತಾಕಾ ಫಾಲ್ಯಾ ತುಕಾ

ಪ್ರಶಸ್ತಿಗಳು

[ಬದಲಾಯಿಸಿ]
  1. ಸಂದೇಶ ವಿಶೇಷ ಪ್ರಶಸ್ತಿ
  2. ಉಡುಪಿಯಿಂದ ಗೌರವ ಪ್ರಶಸ್ತಿ
  3. ಕರ್ನಾಟಕ ತುಳು ಸಾಹಿತ್ಯ ಅಕಾದೆಮಿ[]
  4. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾದೆಮಿ[]

ಕೇದಗೆ ಎಂಬ ನಾಟಕವು ತುಳುಕೂಟ ಉಡುಪಿಯಿಂದ ಪ್ರಕಟವಾಗಿರುವುದು.ಸಿರಿತುಪ್ಪೆ ಎಂಬ ೧೦ ರೇಡಿಯೊ ನಾಟಕಗಳ ಸಂಗ್ರಹವನ್ನು ಪ್ರೀತಿ ಪ್ರಕಾಶನದಿಂದ ಪ್ರಕಟಿಸಲಾಗಿದೆ.ತಮ್ಮ ಆತ್ಮಚರಿತ್ರೆಯನ್ನು ರಚಿಸಿದ್ದಾರೆ. ಲೇಖಕಿ ಟ್.ಎಸ್ ಅಂಬುಜಾ ಅವರಿಂದ ರಚಿಸಲ್ಫಟ್ಟಿರುವ ಎರಡು ಹಾಸ್ಯಬರಹಗಳನ್ನು ಉಳಿದ ಕೃತಿಗಳು ಗಂಭೀರ ನೆಲೆಯ ಬರಹಗಳಾಗಿವೆ.ಮಹಿಳೆಯೊಬ್ಬಳು ಹಾಸ್ಯಬರಹಗಳನ್ನು ಬರಯುವಾಗ ಅವಲಳಿಗಿರುವ ಮಿತಿಗಳ ಮಧ್ಯೆಯು ಅವರ ತಮ್ಮತನವನ್ನು ಉಳಿಸಿಕೊಂಡಿದ್ದಾರೆ.ಇದೇ ಇವರ ಬರವಣಿಗೆಯ ವೈಶಿಷ್ಟೈ ಮತ್ತು ಹಿರಿಮೆಯೂ ಆಗಿದ್ದು ,ಆ ಮೂಲಕ ತಮ್ಮ ಸೃಜನಾತ್ಮ್ಕ ಲಹರಿಗಳನ್ನು ಪೂಣಿಸಿ ಹೆಣೆದು ದಕ್ಷಿಣಕನ್ನಡದ ಪ್ರಮುಕ ಸಾಹಿತ್ಯ ಲೇಖಕಿಯಾಗಿದ್ದಾರೆ.

ಉಲ್ಲೇಖ

[ಬದಲಾಯಿಸಿ]
  1. http://www.tuluacademy.org
  2. "ಆರ್ಕೈವ್ ನಕಲು". Archived from the original on 2015-12-22. Retrieved 2015-12-11.