ಟಿಪ್ಪಣಿ
ಟಿಪ್ಪಣಿ ಎಂದರೆ ಒಂದು ಪುಸ್ತಕ ಅಥವಾ ದಸ್ತಾವೇಜಿನ ಪುಟದ ಕೆಳಭಾಗದಲ್ಲಿ ಅಥವಾ ಒಂದು ಅಧ್ಯಾಯ, ಸಂಪುಟ ಅಥವಾ ಇಡೀ ಪಠ್ಯದ ಅಂತ್ಯದಲ್ಲಿ ಇರಿಸಲಾದ ಪಠ್ಯದ ಸಾಲು(ಗಳು). ಟಿಪ್ಪಣಿಯು ಮುಖ್ಯ ಪಠ್ಯದ ಬಗ್ಗೆ ಲೇಖಕನ ಹೇಳಿಕೆಗಳು ಅಥವಾ ಪಠ್ಯಕ್ಕೆ ಆಧಾರನೀಡುವ ಸಂದರ್ಭ ಕೃತಿಯ ಉಲ್ಲೇಖಗಳನ್ನು ನೀಡಬಲ್ಲದು.
ಅಡಿಟಿಪ್ಪಣಿಗಳು ಎಂದರೆ ಪುಟದ ಕೆಳಭಾಗದಲ್ಲಿರುವ ಟಿಪ್ಪಣಿಗಳು. ಅಂತ್ಯ ಟಿಪ್ಪಣಿಗಳನ್ನು ಒಂದು ಅಧ್ಯಾಯ, ಸಂಪುಟ ಅಥವಾ ಇಡೀ ಕೃತಿಯ ಕೊನೆಯಲ್ಲಿ ಒಂದು ಪ್ರತ್ಯೇಕ ಶೀರ್ಷಿಕೆಯಡಿ ಸಂಗ್ರಹಿಸಲಾಗಿರುತ್ತದೆ. ಅಡಿಟಿಪ್ಪಣಿಗಳಿಗೆ ಭಿನ್ನವಾಗಿ, ಅಂತ್ಯಟಿಪ್ಪಣಿಗಳು ಮುಖ್ಯ ಪಠ್ಯದ ವಿನ್ಯಾಸವನ್ನು ಬಾಧಿಸದಿರುವ ಅನೂಕೂಲವನ್ನು ಹೊಂದಿರುತ್ತವೆ, ಆದರೆ ಓದುಗರಿಗೆ ಮುಖ್ಯ ಪಠ್ಯ ಮತ್ತು ಅಂತ್ಯ ಟಿಪ್ಪಣಿಗಳ ನಡುವೆ ಹಿಂದೆ ಮುಂದೆ ಹೋಗಿ ಬರುವ ಅನಾನುಕೂಲವನ್ನು ಉಂಟುಮಾಡಬಹುದು.
ಟಿಪ್ಪಣಿಗಳನ್ನು ಸೂಚಿಸಲು ನಕ್ಷತ್ರ ಚಿಹ್ನೆ (*) ಅಥವಾ ಕಠಾರಿ ಗುರುತಿನಂತಹ (†) ಮುದ್ರಣ ಸಾಧನಗಳನ್ನು ಬಳಸಬಹುದು; ಇಂಗ್ಲಿಷ್‍ನಲ್ಲಿ ಈ ಚಿಹ್ನೆಗಳ ಸಾಂಪ್ರದಾಯಿಕ ಕ್ರಮವೆಂದರೆ *, †, ‡, §, |, ¶.[೧]
ಉಲ್ಲೇಖಗಳು
[ಬದಲಾಯಿಸಿ]- ↑ Robert Bringhurst (2005). The Elements of Typographic Style (version 3.1). Point Roberts, WA: Hartley and Marks. pp 68–69. Bringhurst goes on to say “But beyond the ... double dagger, this order is not familiar to most readers, and never was.”