ಟಾರ್ನೆಡೋಗಳು

ವಿಕಿಪೀಡಿಯ ಇಂದ
Jump to navigation Jump to search

ವಾಯುಗೋಳದಲ್ಲಿ ಆಗುವ ಒತ್ತಡ ವ್ಯತ್ಯಾಸದಿಂದ ವಾಯುಚಲನೆವಿಭಿನ್ನ ರೂಪ ತಳೆಯುತ್ತದೆ. ಅತೀ ವೇಗವಾಗಿ ಸುರುಳಿ ರೂಪದಲ್ಲಿ ಸುತ್ತುವ ವಾಯುವೇ ಚಂಡಮಾರುತ ಅಥವಾ ಟಾರ್ನೆಡೋ. ಸಾಮಾನ್ಯವಾಗಿ ಮೋಡ ಆಲಿಕೆಯ ರೂಪದಲ್ಲಿ ಕೆಳಗಿಳಿದು ನೆಲದ ಸಂಪರ್ಕಕ್ಕೆ ಬಂದಾಗ ವಾಯುಗೋಳದಲ್ಲಿ ಕ್ಷೋಭೆ ಉಂಟಾಗಿ ಈ ಸುಳಿಗಾಳಿ ಏರ್ಪಡುತ್ತದೆ. ಇದು ನೀರಿಗೆ ಅಪ್ಪಳಿಸಿದಾಗ ನೀರಿನಲ್ಲಿ ಸುಳಿ ಉಂಟಾಗುತ್ತದೆ. ನೆಲದ ಮೇಲಿನದಕ್ಕಿಂತ ನೀರಿನ ಮೇಲೆ ಅದರ ಪರಿಣಾಮ ತೀವ್ರವಾಗಿರುತ್ತದೆ. ಟಾರ್ನೆಡೋ ಭೂಮಿಯ ಮೇಲೆ ವರ್ತುಲಾಕಾರವಾಗಿ ತಿರುಗುವಾಗ ಆಲಿಕೆಯ ಆಕಾರ ತಳೆಯುತ್ತದೆ. ಕಸಕಡ್ಡಿಗಳು ಅದರಲ್ಲಿ ಸೇರಿಕೊಳ್ಳುತ್ತದೆ. ಮೊದಲು ಸಾಂದ್ರಿತ ಆಲಿಕೆಯಂತೆ ಕಂಡು ಅದು ಕ್ರಮೇಣ ಬಿರುಸಾಗುತ್ತ ಭೂಮಿಯ ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸುತ್ತದೆ. ಕೆಲವೊಮ್ಮೆ ಆಕಾಶದಿಂದ ಹಗ್ಗ ಇಳಿ ಬಿಟ್ಟಂತೆ ಅದು ಕಿರಿದಾಗುತ್ತಾ ಸಾಗುತ್ತದೆ. ಟಾರ್ನೆಡೋದ ಕೇಂದ್ರಭಾಗದಲ್ಲಿ ಭಾಗಶಃ ಶೂನ್ಯಸ್ಥಿತಿ ಉಂಟಾಗುವುದರಿಂದ ಇದರಲ್ಲಿ ಸಿಕ್ಕಿಹಾಕಿಕೊಳ್ಳುವ ವ್ಯಕ್ತಿಗೆ ಕಿವಿ ಮತ್ತು ಎದೆ ಸ್ಪೋಟಿಸಿದ ಅನುಭವವಾಗುತ್ತದೆ. ಭೂಮಟ್ಟದ ಚಂಡಮಾರುತದ ಗಾಳಿಯ ವೇಗವು ಒಮ್ಮೊಮ್ಮೆ ಸೆಕೆಂಡಿಗೆ ೧೨೦-೧೩೫ ಮೀಟರ್ ಆಗಿರಬಹುದು. ಎಂದರೆ ಗಂಟೆಗೆ ೪೩೦ ರಿಂದ ೪೮೦ ಕಿ.ಮೀ. ಬಲವಾದ ಕಟ್ಟಡಗಳ ಬುಡ ಅಲುಗಾಡುವಷ್ಟು. ಆದರೆ ಬಹುತೇಕ ಬಿರುಗಾಳಿಗಳು ದುರ್ಬಲವಾಗಿರುತ್ತದೆ. ಅವುಗಳ ವೇಗದ ತೀವ್ರತೆಯನ್ನು ಅವು ಮಾಡಿದ ಹಾನಿಯನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಬಿರಿಸು ಗಾಳಿಯಿಂದ ಉಂಟಾಗುವ ಹಾನಿಯ ವ್ಯಾಪ್ತಿ ೩ ಕಿ.ಮೀನಿಂದ ೩೦೦ ಕಿ.ಮೀ ವರೆಗೆ ಇರುವುದುಂಟು. ಅನೇಕ ಚಂಡಮಾರುತಗಳು ೧೦೦ ಮೀ ಅಗಲ ಮತ್ತು ೧೫ ಕಿ.ಮೀ ಉದ್ದದ ವ್ಯಾಪ್ತಿಯುಳ್ಳ ಪಥದಲ್ಲಿ ಚಲಿಸಿ ಹಾನಿಯುಂಟುಮಾಡುತ್ತದೆ. ೧೯೭೪ರ ಏಪ್ರಿಲ್ ೩-೪ ರಂದು ಅಮೇರಿಕದಲ್ಲಿ ಟಾರ್ನೆಡೋ ಬಡಿದು ಅಪಾರ ಹಾನಿಯುಂಟು ಮಾಡಿತು.