ಟಾಟಾ ಸಮಾಜ ವಿಜ್ಞಾನಗಳ ಸಂಸ್ಥೆ
ಗೋಚರ
ಟಾಟಾ ಸಮಾಜ ವಿಜ್ಞಾನಗಳ ಸಂಸ್ಥೆ (ಟಾಟಾ ಇನ್‍ಸ್ಟಿಟ್ಯೂಟ್ ಆಫ಼್ ಸೋಶಿಯಲ್ ಸಾಯನ್ಸಸ್) ಮುಂಬೈಯಲ್ಲಿರುವ ಬಹು ನಿವೇಶನಗಳ ಸಾರ್ವಜನಿಕ ಸಂಶೋಧನಾ ವಿಶ್ವವಿದ್ಯಾಲಯವಾಗಿದೆ. ಟಿಐಎಸ್ಎಸ್ ಏಷ್ಯಾದ ಅತ್ಯಂತ ಹಳೆಯ ವೃತ್ತಿಪರ ಸಾಮಾಜಿಕ ಸೇವಾಕಾರ್ಯ ಶಿಕ್ಷಣದ ಸಂಸ್ಥೆಯಾಗಿದೆ.[೧] ಇದನ್ನು ೧೯೩೬ರಲ್ಲಿ ಆಗಿನ ಬ್ರಿಟಿಷ್ ಭಾರತದ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಸರ್ ದೊರಾಬ್ಜಿ ಟಾಟಾ ಸಾಮಾಜಿಕ ಸೇವಾಕಾರ್ಯದ ಸ್ನಾತಕ ವಿದ್ಯಾಲಯವಾಗಿ ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಸ್ಥಾಪಿಸಿತು. ೧೯೪೪ರಲ್ಲಿ, ಈ ಸಂಸ್ಥೆಯನ್ನು ಅಧಿಕೃತವಾಗಿ ಟಾಟಾ ಸಮಾಜ ವಿಜ್ಞಾನಗಳ ಸಂಸ್ಥೆ ಎಂದು ಮರುನಾಮಕರಣ ಮಾಡಲಾಯಿತು. ೧೯೬೪ರಲ್ಲಿ, ಭಾರತ ಸರ್ಕಾರವು ವಿಶ್ವವಿದ್ಯಾಲಯ ಅನುದಾನ ಆಯೋಗ ಕಾಯಿದೆ, ೧೯೫೬ರ ೩ನೇ ಪರಿಚ್ಛೇದದಡಿಯಲ್ಲಿ ಟಿಐಎಸ್ಎಸ್‍ನ್ನು ಸ್ವಾಯತ್ತ ವಿಶ್ವವಿದ್ಯಾಲಯವೆಂದು ಘೋಷಿಸಿತು.[೨]
ಉಲ್ಲೇಖಗಳು
[ಬದಲಾಯಿಸಿ]- ↑ "International Social Work: Education". Encyclopedia of Social Work. NASW Press and Oxford University Press. 2018-02-12.
- ↑ Directorate of Printing, Government of India (8 September 1967). "Extraordinary Gazette of India, 1967, No. 916".