ಟಲೆಮಕಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಟಲೆಮಕಸ್ - ಗ್ರೀಕ್ ಪೌರಾಣಿಕ ವ್ಯಕ್ತಿ. ಓಡೀಸೀಯಸ್ ಮತ್ತು ಪೆನಲಪೀ ಇವರ ಮಗ.

ನೆಸ್ಟರ್ ನಿಂದ ತೆರಳುತ್ತಿರುವ ಟಲೆಮಕಸ್

ಈತ ಮಗುವಾಗಿದ್ದಾಗ ಓಡಿಸೀಯಸ್ ಟ್ರಾಯ್ ನಗರಕ್ಕೆ ಹೋಗಿದ್ದ. ತನ್ನ ಇಪ್ಪತ್ತರ ಪ್ರಾಯದಲ್ಲಿ ಟಲೆಮಕಸ್ ತಂದೆಯ ಬಗ್ಗೆ ಮಾಹಿತಿ ಸಂಗ್ರಹಿಸುವ ಸಲುವಾಗಿ ಪೈಲೊಸ್ ಮತ್ತು ಸ್ಪಾರ್ಟಾ ಪಟ್ಟಣಗಳಿಗೆ ಹೋದ. ಅಲ್ಲಿಂದ ಹಿಂತಿರುಗಿ ಮನೆಗೆ ಬರುವ ಹೊತ್ತಿಗೆ ತಂದೆ ಊರಿಗೆ ಬಂದಿದ್ದ. ತಂದೆಮಕ್ಕಳಿಬ್ಬರೂ ಸೇರಿಕೊಂಡು, ಯೂಮೀಯಸ್ ಮತ್ತು ಫಿಲಯಟೆಸ್ ಇವರ ಸಹಾಯದಿಂದ, ಪೆನಲಪೀಯನ್ನು ಪ್ರೇಮಿಸಿ ಬಂದವರನ್ನು ಕೊಂದರು. ತಂದೆಯ ಮರಣಾನಂತರ ಸಂಪ್ರದಾಯದಂತೆ ಟಲೆಮಕಸ್ ಸರ್ಸಿ (ಕ್ಯಾಲಿಪ್ಯೆ) ಎಂಬಾಕೆಯನ್ನು ವಿವಾಹವಾದ.


Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಟಲೆಮಕಸ್&oldid=1085529" ಇಂದ ಪಡೆಯಲ್ಪಟ್ಟಿದೆ