ವಿಷಯಕ್ಕೆ ಹೋಗು

ಝೀನರ್‌ ಡಯೋಡ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
17 ವೋಲ್ಟ್‌ನಷ್ಟು ಸ್ಥಗಿತ ವಿದ್ಯುತ್‌ ಬಲದೊಂದಿಗಿನ, ಝೀನರ್ ಡಯೋಡ್‌ ಒಂದರ ವಿದ್ಯುತ್‌ ಪ್ರವಾಹ-ವಿದ್ಯುತ್‌ ಬಲದ ಗುಣಲಕ್ಷಣ ಮುಮ್ಮುಖ ಪಕ್ಷಪಾತಿ (ಧನಾತ್ಮಕ) ದಿಕ್ಕಿನ ಮತ್ತು ಹಿಮ್ಮುಖ ಪಕ್ಷಪಾತಿ (ಋಣಾತ್ಮಕ) ದಿಕ್ಕಿನ ನಡುವಿನ ವಿದ್ಯುತ್‌ ಬಲ ಮಾಪಕದ ಬದಲಾವಣೆಯನ್ನು ಗಮನಿಸಿ.
ಝೀನರ್ ವಿದ್ಯುತ್‌ ಬಲವನ್ನು ಅವಲಂಭಿಸಿರುವ TC
ವಿಶಿಷ್ಟ ಏರ್ಪಾಟುಗಳೊಂದಿಗೆ ತೋರಿಸಲಾಗಿರುವ ಝೀನರ್‌ ಡಯೋಡ್‌. ಹಿಮ್ಮುಖ ವಿದ್ಯುತ್‌ ಪ್ರವಾಹ -i_Z ನ್ನು ತೋರಿಸಲಾಗಿದೆ.
ಝೀನರ್‌ ಡಯೋಡ್‌ ರೂಪರೇಖೆಯ ಸಂಕೇತ

ಝೀನರ್ ಡಯೋಡ್ ಎಂಬುದು ಸಾಮಾನ್ಯ ಡಯೋಡ್‌ನಂತೆಯೇ ಮುನ್ನಡೆಯ ದಿಕ್ಕಿನಲ್ಲಿ ವಿದ್ಯುತ್ ಪ್ರವಾಹಕ್ಕೆ ಅನುವು ಮಾಡಿಕೊಡುವ ಡಯೋಡ್‌ನ ಒಂದು ವಿಧವಾಗಿದೆ. ಒಂದು ವೇಳೆ ವಿದ್ಯುತ್ ಬಲದ ಪ್ರಮಾಣವು (ವೋಲ್ಟ್‌ಗಳಲ್ಲಿ ಅಳತೆ ಮಾಡಿದ ವಿದ್ಯುಚ್ಚಾಲಕ ಬಲದ ಪ್ರಮಾಣ) "ಝೀನರ್ ನೀ ವೋಲ್ಟೇಜ್" ಅಥವಾ "ಝೀನರ್ ವೋಲ್ಟೇಜ್" ಎಂದು ಹೇಳಲಾಗುವ ಸ್ಥಗಿತ ವಿದ್ಯುತ್‌ ಬಲಕ್ಕಿಂತ ಹೆಚ್ಚಿನದಾಗಿದ್ದರೆ, ಹಿಮ್ಮುಖ ದಿಕ್ಕಿನಲ್ಲಿ ವಿದ್ಯುತ್ ಪ್ರವಾಹಕ್ಕೆ ಅನುವು ಮಾಡಿಕೊಡುವುದು ಝೀನರ್ ಡಯೋಡ್‌ನ ಲಕ್ಷಣ. ವಿದ್ಯುತ್ತಿನ ಈ ಗುಣ ಲಕ್ಷಣವನ್ನು ಪತ್ತೆಹಚ್ಚಿದ ಕ್ಲಾರೆನ್ಸ್‌ ಝೀನರ್‌ರವರ ನೆನಪಿಗಾಗಿ ಈ ಸಾಧನಕ್ಕೆ ಅವರ ಹೆಸರನ್ನೇ ಇಡಲಾಗಿದೆ.

ಝೀನರ್ ಡಯೋಡ್ ನ ಕೆಲಸಕಾರ್ಯ

[ಬದಲಾಯಿಸಿ]
  • ಒಂದು ವೇಳೆ ತನ್ನ ಹಿಮ್ಮುಖ ಸ್ಥಗಿತದ ವಿದ್ಯುತ್‌ ಬಲಕ್ಕಿಂತ ಕೆಳಗಿನ ಮಟ್ಟದಲ್ಲಿ ಗಣನೀಯ ಪ್ರಮಾಣದ ವಿದ್ಯುತ್ ಪ್ರವಾಹವು ಹಿಮ್ಮುಖ ಪಕ್ಷಪಾತಿಯಾಗಿದ್ದರೆ, ಅದಕ್ಕೆ ರೂಢಿಗತ ಘನ-ಸ್ಥಿತಿಯ ಡಯೋಡ್‌ ಅನುವು ಮಾಡಿಕೊಡುವುದಿಲ್ಲ. ಹಿಮ್ಮುಖ ಪಕ್ಷ ಪಾತಿಯಾದ ಸ್ಥಗಿತ ವಿದ್ಯುತ್ ಬಲವು ಮಿತಿಮೀರಿದಾಗ, ಹಠಾತ್ ಸ್ಥಗಿತದ ಕಾರಣದಿಂದಾಗಿ ರೂಢಿಗತ ಡಯೋಡ್ ಹೆಚ್ಚಿನ ಪ್ರಮಾಣದ ವಿದ್ಯುತ್ ಪ್ರವಾಹಕ್ಕೆ ಈಡಾಗುತ್ತದೆ.
  • ಈ ವಿದ್ಯುತ್ ಪ್ರವಾಹವನ್ನು ಬಾಹ್ಯ ವಿದ್ಯುನ್ಮಂಡಲ ವ್ಯವಸ್ಥೆಯಿಂದ ನಿಯಂತ್ರಿಸದಿದ್ದಲ್ಲಿ, ಡಯೋಡ್ ಶಾಶ್ವತವಾಗಿ ಹಾಳಾಗುತ್ತದೆ. ಅತೀವ ಪ್ರಮಾಣದ ಮುಮ್ಮುಖ ಪಕ್ಷಪಾತಿ ವಿದ್ಯುತ್ ಪ್ರವಾಹದ ಸಂದರ್ಭದಲ್ಲಿ (ಅಂದರೆ, ಬಾಣದ ಗುರುತಿನ ದಿಕ್ಕಿನಲ್ಲಿ ವಿದ್ಯುತ್ ಪ್ರವಾಹವಿದ್ದಾಗ), ತನ್ನ ಅಂತರ್ನಿರ್ಮಿತ ವಿದ್ಯುತ್ ಬಲ ಹಾಗೂ ಆಂತರಿಕ ಪ್ರತಿರೋಧದ ಸಂಧಿಸ್ಥಾನದಿಂದಾಗಿ ವಿದ್ಯುತ್ ಬಲದಲ್ಲಿನ ಕುಸಿತವನ್ನು ಡಯೋಡ್ ಪ್ರದರ್ಶಿಸುತ್ತದೆ.
  • ಸದರಿ ವಿದ್ಯುತ್‌ ಬಲದ ಕುಸಿತದ ಪ್ರಮಾಣವು ತನ್ನಲ್ಲಿ ಬಳಸಲಾಗಿರುವ ಅರೆವಾಹಕ ಘಟಕಾಂಶ ಮತ್ತು ಅವುಗಳ ಮಿಶ್ರಣದ ಸಾಂದ್ರತೆಗಳ ಮೇಲೆ ಅವಲಂಬಿತವಾಗಿರುತ್ತದೆ. ಸರಿ ಸುಮಾರು ಅದೇ ಗುಣಲಕ್ಷಣಗಳನ್ನು ಝೀನರ್‌ ಡಯೋಡ್‌ ಕೂಡಾ ಹೊಂದಿರುವುದಾದರೂ, ಗಮನಾರ್ಹ ಪ್ರಮಾಣದಲ್ಲಿ ಇಳಿಸಿರುವ ಸ್ಥಗಿತ ವಿದ್ಯುತ್‌ ಬಲವನ್ನು ಹೊಂದುವಂತೆ ಈ ಸಾಧನವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುತ್ತದೆ. ಸದರಿ ವಿದ್ಯುತ್ ಬಲವನ್ನು ಝೀನರ್‌ ವಿದ್ಯುತ್ ಬಲ‌ ಎಂದು ಕರೆಯಲಾಗುತ್ತದೆ.
  • ಹೆಚ್ಚಿನ ಪ್ರಮಾಣದಲ್ಲಿ ಮಿಶ್ರಿತವಾಗಿರುವ ಪಿ-ಎನ್ ಸಂಧಿಸ್ಥಾನವನ್ನು ಝೀನರ್ ಡಯೋಡ್ ಹೊಂದಿರುತ್ತದೆ. ಇದರಿಂದಾಗಿ ಪಿ-ಮಾದರಿಯ ಘಟಕಾಂಶದ ಸಂಯೋಗ ಪಟ್ಟಿಯಿಂದ ಎನ್‌-ಮಾದರಿಯ ಘಟಕಾಂಶದ ವಾಹಕ ಪಟ್ಟಿಗೆ ಎಲೆಕ್ಟ್ರಾನುಗಳು ತೂರಿಕೊಂಡು ಹೋಗಲು ಸಾಧ್ಯವಾಗುತ್ತದೆ. ಪರಮಾಣು ಮಾಪಕದಲ್ಲಿ ಈ ತೂರಿಕೊಂಡು ಹೋಗುವಿಕೆಯು, ಖಾಲಿಯಿರುವ ವಾಹಕ ಪಟ್ಟಿಯ ಸ್ಥಿತಿಗಳಿಗೆ ಸಂಯೋಗ ಪಟ್ಟಿಯ ಎಲೆಕ್ಟ್ರಾನುಗಳ ಸಾಗಾಣಿಕೆಗೆ ಸಂಬಂಧಿಸಿರುತ್ತದೆ.
  • ಈ ಪಟ್ಟಿಗಳ ನಡುವಿನ ಇಳಿಸಿದ ಪ್ರತಿಬಂಧಕತೆಯಿಂದಾಗಿ ಹಾಗೂ ಎರಡೂ ಕಡೆಗಳಲ್ಲಿನ ಹೆಚ್ಚಿನ ಮಟ್ಟದ ಮಿಶ್ರಣಗಳ ಕಾರಣದಿಂದಾಗಿ ನಿರ್ಮಿತವಾಗುವ ಉನ್ನತ ವಿದ್ಯುತ್ ವಲಯಗಳಿಂದಾಗಿ ಇದು ಕಂಡುಬರುತ್ತದೆ. ಒಂದು ನಿಯಂತ್ರಿತ ಕುಸಿತವನ್ನು ಹಿಮ್ಮುಖ ಪಕ್ಷಪಾತಿ ಝೀನರ್ ಡಯೋಡ್‌ ಪ್ರದರ್ಶಿಸುವುದೇ ಅಲ್ಲದೇ, ಝೀನರ್‌ ಡಯೋಡ್‌ನಾದ್ಯಂತ ಝೀನರ್‌ ವಿದ್ಯುತ್‌ ಬಲದ ಮಟ್ಟದಲ್ಲಿ ವಿದ್ಯುತ್‌ ಬಲವನ್ನು ಕಾಪಾಡಿಕೊಳ್ಳುವಂತೆ ವಿದ್ಯುತ್ ಪ್ರವಾಹಕ್ಕೆ ಅನುವು ಮಾಡಿಕೊಡುತ್ತದೆ.
  • ಉದಾಹರಣೆಗೆ, 3.2 Vನಷ್ಟು ಝೀನರ್ ಸ್ಥಗಿತ ವಿದ್ಯುತ್‌ ಬಲದ ಒಂದು ಡಯೋಡ್‌ನಾದ್ಯಂತ, ಅದರ ಝೀನರ್ ವಿದ್ಯುತ್‌ ಬಲಕ್ಕಿಂತ ಹೆಚ್ಚಿನ ಹಿಮ್ಮುಖ ಪಕ್ಷಪಾತಿ ವಿದ್ಯುತ್‌ ಬಲವನ್ನು ಪ್ರಯೋಗಿಸಿದಾಗ 3.2 Vನಷ್ಟು ಪ್ರಮಾಣದ ವಿದ್ಯುತ್ ಬಲದ ಕುಸಿತವನ್ನು ಅದು ಪ್ರದರ್ಶಿಸುತ್ತದೆ. ಆದಾಗ್ಯೂ, ವಿದ್ಯುತ್ ಪ್ರವಾಹವು ಸೀಮಿತವಾಗಿರುತ್ತದೆಯಾದ್ದರಿಂದ ವರ್ಧಕ ಹಂತವೊಂದಕ್ಕಾಗಿ ಆಕರ ವಿದ್ಯುತ್ ಬಲವನ್ನು ಉತ್ಪಾದಿಸಲು ಅಥವಾ ಕಡಿಮೆ-ವಿದ್ಯುತ್ ಪ್ರವಾಹದ ಅನ್ವಯಿಕಗಳಿಗೆ ಅಥವಾ ಉಪಕರಣಗಳಿಗೆ ಬೇಕಾಗುವ ವಿದ್ಯುತ್ ಬಲ ಸ್ಥಿರಕಾರಕ (ವೋಲ್ಟೇಜ್ ಸ್ಟಬಿಲೈಸರ್‌) ವಾಗಿ ಝೀನರ್‌ ಡಯೋಡ್‌ನ್ನು ವಿಶೇಷವಾಗಿ ಬಳಸಲಾಗುತ್ತದೆ.
  • ಸ್ಥಗಿತ ವಿದ್ಯುತ್ ಬಲವನ್ನು ಮಿಶ್ರಣದ ಪ್ರಕ್ರಿಯೆಯಲ್ಲಿ ಹೆಚ್ಚು ನಿಖರವಾಗಿ ನಿಯಂತ್ರಿಸಬಹುದು. 0.05%ರಷ್ಟು ಪ್ರಮಾಣದ ಒಳಗಿನ ಸಹನೀಯ ವ್ಯತ್ಯಾಸಗಳು ಲಭ್ಯವಿವೆಯಾದರೂ, ಅತಿ ವ್ಯಾಪಕವಾಗಿ ಬಳಕೆಯಲ್ಲಿರುವ ಸಹನೀಯ ವ್ಯತ್ಯಾಸಗಳು 5%ರಷ್ಟು ಮತ್ತು 10%ರಷ್ಟು ಆಗಿವೆ. ಇದೇ ತರಹದ ಪರಿಣಾಮವನ್ನು ಉಂಟುಮಾಡುವ ಮತ್ತೊಂದು ಯಾಂತ್ರಿಕ ಕೌಶಲವೆಂದರೆ, ಹಠಾತ್ ಸ್ಥಗಿತದ ಡಯೋಡ್‌ನಲ್ಲಿರುವಂತಹ ಹಠಾತ್ ಪರಿಣಾಮ.
  • ವಾಸ್ತವವಾಗಿ ಎರಡೂ ವಿಧದ ಡಯೋಡ್‌ಗಳು ಒಂದೇ ರೀತಿಯಲ್ಲಿ ನಿರ್ಮಾಣಗೊಂಡಿದ್ದು, ಈ ವಿಧದ ಡಯೋಡ್‌ಗಳಲ್ಲಿ ಎರಡೂ ರೀತಿಯ ಪರಿಣಾಮಗಳಿರುತ್ತವೆ. ಸುಮಾರು 5.6 ವೋಲ್ಟ್‌ಗಳವರೆಗಿನ ಸಿಲಿಕಾನ್‌ ಡಯೋಡ್‌ಗಳಲ್ಲಿ ಝೀನರ್ ಪರಿಣಾಮವು ಪ್ರಬಲವಾದ ಅಥವಾ ನಿಯಂತ್ರಕ ಪರಿಣಾಮವಾಗಿದ್ದು, ಸ್ಪಷ್ಟವಾದ ಋಣಾತ್ಮಕ ಉಷ್ಣತಾ ಗುಣಾಂಕವೊಂದನ್ನು ತೋರಿಸುತ್ತದೆ.
  • 5.6 ವೋಲ್ಟ್‌ಗಳಿಗಿಂತ ಮೇಲಿನ ಸಂದರ್ಭಗಳಲ್ಲಿ ಹಠಾತ್ ಪರಿಣಾಮವು ಪ್ರಬಲ ಅಥವಾ ನಿಯಂತ್ರಕ ಸ್ವರೂಪವನ್ನು ತಾಳುವುದರ ಜೊತೆಗೆ ಧನಾತ್ಮಕ ಉಷ್ಣತಾ ಗುಣಾಂಕವೊಂದನ್ನು ಪ್ರದರ್ಶಿಸುತ್ತದೆ. 5.6 V ಡಯೋಡ್‌ ಒಂದರಲ್ಲಿ ಎರಡೂ ಪರಿಣಾಮಗಳೂ ಒಟ್ಟಿಗೇ ಸಂಭವಿಸುವುದೇ ಅಲ್ಲದೇ ಅವುಗಳ ಉಷ್ಣತಾ ಗುಣಾಂಕಗಳು ಪರಸ್ಪರವಾಗಿ ಒಂದನ್ನೊಂದು ನಾಜೂಕಿನಿಂದ ಹೊಡೆದುಹಾಕಿಕೊಳ್ಳುತ್ತವೆ.
  • ಆದ್ದರಿಂದಲೇ ಉಷ್ಣತಾ ನಿರ್ಣಾಯಕ ಅನ್ವಯಿಕಗಳು ಅಥವಾ ಉಪಕರಣಗಳಲ್ಲಿ 5.6 V ಡಯೋಡ್‌, ಆಯ್ಕೆಗೆ ಬಿಟ್ಟ ಒಂದು ಬಿಡಿಭಾಗವಾಗಿದೆ. 5.6 V‌ಗಿಂತಲೂ ಕಡಿಮೆ ವಿದ್ಯುತ್ ಬಲವನ್ನು ಹೊಂದಿರುವ ಮತ್ತು ಲೆಕ್ಕಕ್ಕೆ ಬಾರದ ಉಷ್ಣತಾ ಗುಣಾಂಕಗಳನ್ನು ಹೊಂದಿರುವ ಉಪಕರಣ ಗಳನ್ನು ಆಧುನಿಕ ತಯಾರಿಕಾ ಕೌಶಲಗಳು ನಿರ್ಮಿಸಿದ್ದರೂ, ಉನ್ನತ ವಿದ್ಯುತ್‌ ಬಲದ ಉಪಕರಣಗಳು ಎದುರಾದಾಗ, ಅವುಗಳ ಉಷ್ಣತಾ ಗುಣಾಂಕವು ಒಮ್ಮಿಂದೊಮ್ಮೆಗೇ ಏರುತ್ತದೆ. ಒಂದು 75 V ಡಯೋಡ್‌, 12 V ಡಯೋಡ್‌ ಹೊಂದಿರುವ ಗುಣಾಂಕದ 10 ಪಟ್ಟು ಗುಣಾಂಕವನ್ನು ಹೊಂದಿರುತ್ತದೆ. ಇಂಥಾ ಎಲ್ಲಾ ಡಯೋಡ್‌ಗಳ ಸ್ಥಗಿತ ವಿದ್ಯುತ್‌ ಬಲವು ಏನೇ ಇರಲಿ, "ಝೀನರ್ ಡಯೋಡ್‌" ಎಂಬ ಆಶ್ರಯನಾಮದ ಅಡಿಯಲ್ಲಿಯೇ ಅವು ಸಾಮಾನ್ಯವಾಗಿ ಮಾರುಕಟ್ಟೆ ಪ್ರವೇಶಿಸುತ್ತವೆ.

ಬಳಕೆಗಳು

[ಬದಲಾಯಿಸಿ]
  • ವಿದ್ಯುತ್‌ ಮಂಡಲವೊಂದರಾದ್ಯಂತ ಇರುವ ವಿದ್ಯುತ್‌ ಬಲವನ್ನು ನಿಯಂತ್ರಿಸಲು ಝೀನರ್ ಡಯೋಡ್‌ಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಹಿಮ್ಮುಖ ಪಕ್ಷಪಾತಿಯಾಗಿರುವ ಸ್ವರೂಪದಲ್ಲಿ ಝೀನರ್ ಡಯೋಡ್‌ನ್ನು ಅಸ್ಥಿರ ವಿದ್ಯುತ್ ಬಲದ ಮೂಲದೊಂದಿಗೆ ಸಮಾನಾಂತರವಾಗಿ ಸಂಪರ್ಕಿಸಿದಾಗ, ಡಯೋಡ್‌ನ ಹಿಮ್ಮುಖ ಸ್ಥಗಿತ ವಿದ್ಯುತ್‌ ಬಲದ ಮಟ್ಟಕ್ಕೆ ವಿದ್ಯುತ್‌ ಬಲವು ಮುಟ್ಟಿದಾಗ ವಹನದ ಮಾಧ್ಯಮವಾಗಿ ಸದರಿ ಝೀನರ್‌ ಡಯೋಡ್‌ ಕಾರ್ಯನಿರ್ವಹಿಸುತ್ತದೆ.
  • ಆ ಒಂದು ಬಿಂದುವಿನಿಂದ ಅಥವಾ ಹಂತದಿಂದ ವಿದ್ಯುತ್‌ ಬಲವು ಅದೇ ಪ್ರಮಾಣದಲ್ಲಿರುವಂತೆ ಅದು ನೋಡಿಕೊಳ್ಳುತ್ತದೆ. ಇಲ್ಲಿ ತೋರಿಸಲಾಗಿರುವ ವಿದ್ಯುನ್ಮಂಡಲದಲ್ಲಿ, UIN ಮತ್ತು UOUT ನಡುವಣ ಇರುವ ವಿದ್ಯುತ್ ಬಲದ ಕುಸಿತವನ್ನು ವಿದ್ಯುತ್ ಪ್ರತಿರೋಧಕ R ಒದಗಿಸುತ್ತದೆ. Rನ ಮೌಲ್ಯವು ಎರಡು ಷರತ್ತುಗಳನ್ನು ಪಾಲಿಸುವಂತೆ ಇರಬೇಕಾಗುತ್ತದೆ. ಅವುಗಳೆಂದರೆ:
  1. D ಮೂಲಕ ಪ್ರವಹಿಸುವ ವಿದ್ಯುತ್ ಪ್ರವಾಹವು Dಯನ್ನು ಹಿಮ್ಮುಖ ಸ್ಥಗಿತದ ಸ್ಥಿತಿಯಲ್ಲಿ ಇರಿಸುವ ಮಟ್ಟದಲ್ಲಿ R ನ ಗಾತ್ರವು ಚಿಕ್ಕದಿರಬೇಕಾಗುತ್ತದೆ. ಈ ವಿದ್ಯುತ್ ಪ್ರವಾಹದ ಮೌಲ್ಯ ಅಥವಾ ಪ್ರಮಾಣವನ್ನು Dಗಾಗಿರುವ ದತ್ತಾಂಶದ ಹಾಳೆಯಲ್ಲಿ ನೀಡಲಾಗಿದೆ. ಉದಾಹರಣೆಗೆ, ಒಂದು 5.6 V 0.5 W ಝೀನರ್ ಡಯೋಡ್‌ ಆಗಿರುವ ಸಾಮಾನ್ಯ BZX79C5V6[] ಉಪಕರಣವು 5 mAನಷ್ಟು ಶಿಫಾರಿತ ಹಿಮ್ಮುಖ ವಿದ್ಯುತ್ ಬಲವನ್ನು ಹೊಂದಿದೆ.
  2. ಒಂದು ವೇಳೆ, ಸಾಕಷ್ಟು ಪ್ರಮಾಣದಲ್ಲಿಲ್ಲದ ವಿದ್ಯುತ್ ಪ್ರವಾಹವು Dಯ ಮೂಲಕ ಪ್ರವಹಿಸಿದಲ್ಲಿ, UOUT ನಿಯಂತ್ರಣಕ್ಕೆ ಸಿಕ್ಕುವುದಿಲ್ಲ ಹಾಗೂ ಅದು ಅತ್ಯಲ್ಪ ಸ್ಥಗಿತ ವಿದ್ಯುತ್‌ ಬಲಕ್ಕಿಂತ ಕಡಿಮೆಯಿರುತ್ತದೆ (ಇದು ವಿದ್ಯುತ್‌ ಬಲ ನಿಯಂತ್ರಕ ಕೊಳವೆಗಳಿಗಿಂತ ವಿಭಿನ್ನವಾಗಿರುತ್ತದೆ. ಈ ಕೊಳವೆಗಳಲ್ಲಿ ಉತ್ಪಾದಿತ ವಿದ್ಯುತ್‌ ಬಲವು ಅತ್ಯಲ್ಪ ವಿದ್ಯುತ್ ಬಲಕ್ಕಿಂತ ಹೆಚ್ಚಿರುತ್ತದೆ ಮತ್ತು UINನಷ್ಟರ ಮಟ್ಟಕ್ಕೆ ಏರಬಲ್ಲದಾಗಿರುತ್ತದೆ). R ನ ಮೌಲ್ಯ ಅಥವಾ ಪ್ರಮಾಣವನ್ನು ಲೆಕ್ಕಹಾಕುವಾಗ, ಈ ಚಿತ್ರದಲ್ಲಿ ತೋರಿಸಿಲ್ಲದ, UOUTಗೆ ಅಡ್ಡಲಾಗಿ ಸಂಪರ್ಕಿಸಲಾಗಿರುವ ಬಾಹ್ಯ ಹೊರೆಯ ಮೂಲಕ ಸಾಗುವ ಯಾವುದೇ ವಿದ್ಯುತ್‌ಗಾಗಿ ಅವಕಾಶವನ್ನು ಕಲ್ಪಿಸಬೇಕಾಗುತ್ತದೆ.
  3. Dಯ ಮೂಲಕ ಹಾದುಹೋಗುವ ವಿದ್ಯುತ್‌ ಪ್ರವಾಹವು ಉಪಕರಣವನ್ನು ನಾಶಗೊಳಿಸದಿರಬೇಕೆಂದರೆ, R ಸಾಕಷ್ಟು ದೊಡ್ಡದಿರಬೇಕಾಗುತ್ತದೆ. Dಯ ಮೂಲಕ ಪ್ರವಹಿಸುವ ವಿದ್ಯುತ್ತು I D ಆಗಿದ್ದು, ಅದರ ಸ್ಥಗಿತ ವಿದ್ಯುತ್ ಬಲ V B ಆಗಿದ್ದರೆ ಮತ್ತು ಅದರ ಗರಿಷ್ಟ ವಿದ್ಯುತ್‌ ಚೆದುರುವಿಕೆಯು P MAX ಆಗಿದ್ದರೆ, ಆಗ ಆಗಬೇಕು.

ಮಾರ್ಗ ಬದಲಿಸುವ ವಿದ್ಯುತ್‌ ಬಲ ನಿಯಂತ್ರಕ

[ಬದಲಾಯಿಸಿ]
  • ಈ ರೀತಿಯಲ್ಲಿ ಬಳಸಿದ ಝೀನರ್ ಡಯೋಡ್‌ನ್ನು ಮಾರ್ಗ ಬದಲಿಸುವ ವಿದ್ಯುತ್‌ ಬಲ ನಿಯಂತ್ರಕ (ಷಂಟ್ ವೋಲ್ಟೇಜ್ ರೆಗ್ಯುಲೇಟರ್) ಎಂದು ಕರೆಯಲಾಗುತ್ತದೆ (ಪ್ರಸಕ್ತ ವಿಷಯದಲ್ಲಿ ಷಂಟ್‌ ಎಂದರೆ, ಸಮಾನಾಂತರವಾಗಿ ಸಂಪರ್ಕಿಸಲ್ಪಟ್ಟಿರುವುದು ಎಂದೂ ಮತ್ತು ವಿದ್ಯುತ್‌ ಬಲ ನಿಯಂತ್ರಕ ಎಂದರೆ ಯಾವುದೇ ಹೊರೆಗೆ ಪ್ರತಿಯಾಗಿ ಸ್ಥಿರವಾದ ವಿದ್ಯುತ್‌ ಬಲವನ್ನು ಉತ್ಪಾದಿಸುವ ಒಂದು ವಿದ್ಯುನ್ಮಂಡಲ ವರ್ಗ ಎಂದೂ ಅರ್ಥ).
  • ಒಂದರ್ಥದಲ್ಲಿ ನೋಡಿದರೆ, ಪ್ರತಿರೋಧಕದ ಮೂಲಕ ಹಾಯುವ ವಿದ್ಯುತ್‌ನ ಒಂದು ಭಾಗವು ಝೀನರ್‌ ಡಯೋಡ್‌ನ ಮೂಲಕ ಪ್ರವಹಿಸಿದರೆ, ಉಳಿದದ್ದು ಹೊರೆಯ ಮೂಲಕ ಸಾಗುತ್ತದೆ. ಈ ರೀತಿಯಾಗಿ, ವಿದ್ಯುತ್‌ ಮೂಲದಿಂದ ಬರುವ ವಿದ್ಯುತ್‌ ಪ್ರವಾಹದ ಕೆಲ ಭಾಗವು ತನ್ನನ್ನು ಬಳಸಿಕೊಂಡು ಅಥವಾ ತಪ್ಪಿಸಿಕೊಂಡು ಹೋಗುವಂತೆ ಮಾಡುವ ಮೂಲಕ ಹೊರೆಯು ಕಾಣುವ ವಿದ್ಯುತ್‌ ಬಲವು ನಿಯಂತ್ರಿಸಲ್ಪಡುವುದರಿಂದ ಅದಕ್ಕೆ ಈ ಹೆಸರು ಬಂದಿದೆ. ಸಾದೃಶ್ಯವಾಗಿ ಹೇಳಬೇಕೆಂದರೆ, ಇದನ್ನು ಟ್ರೇನುಗಳ ಪಥ ಬದಲಾವಣೆಯ ಸ್ಥಾನಗಳಿಗೆ ಹೋಲಿಸಬಹುದು.
  • ಟ್ರಾನ್ಸಿಸ್ಟರ್‌ ಹಂತಗಳಲ್ಲಿ, ಅದರಲ್ಲೂ ವಿಶೇಷವಾಗಿ ಸರಣಿ ಸಂಪರ್ಕಗಳಲ್ಲಿ, ಬೇಸ್‌-ಎಮಿಟರ್ ಸಂಧಿಸ್ಥಾನದೊಂದಿಗೆ ಈ ಉಪಕರಣಗಳು ಮುಖಾಮುಖಿಯಾಗಿ ನಿಲ್ಲಬೇಕಾಗುತ್ತದೆ. ಟ್ರಾನ್ಸಿಸ್ಟರ್‌ PN ಸಂಧಿಸ್ಥಾನದ ತಾಪವ್ಯತ್ಯಾಸದ ಉಷ್ಣತಾ ಗುಣಾಂಕದ ಸಮತೋಲನವನ್ನು ಪರಿಚಯಿಸಲು ಎಚ್ಚರಿಕೆಯಿಂದ ಆಯ್ದ ಹಠಾತ್/ಝೀನರ್ ಬಿಂದುವಿನ ಸುತ್ತ ಕೇಂದ್ರೀಕೃತವಾಗಿರುವ ಉಪಕರಣವೊಂದನ್ನು ಸದರಿ ಟ್ರಾನ್ಸಿಸ್ಟರ್ ಹಂತಗಳಲ್ಲಿ ಬಳಸಬಹುದಾಗಿರುತ್ತದೆ.
  • ಈ ರೀತಿಯ ಬಳಕೆಗೆ ಒಂದು ಉದಾಹರಣೆ ನೀಡಬೇಕೆಂದರೆ DC ಎರರ್ ಆಂಪ್ಲಿಫಯರ್‌ನ್ನು ಪರಿಗಣಿಸಬಹುದು. ಇದನ್ನು ಸ್ಥಿರೀಕೃತ ವಿದ್ಯುತ್ ಸರಬರಾಜು ಮಂಡಲದ ಪರಿಣಾಮ ಮಾಹಿತಿಯ ಸಂಪೂರ್ಣ ಮಂಡಲದ ವ್ಯವಸ್ಥೆ ಒಂದರಲ್ಲಿ ಬಳಸಲಾಗುತ್ತದೆ.

ಇದನ್ನೂ ನೋಡಿರಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]