ವಿಷಯಕ್ಕೆ ಹೋಗು

ಜೈವಿಕನೀತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಸರ ಮತ್ತು ಜೈವಿಕನೀತಿ ದೃಷ್ಟಿಕೋನ

ಧ್ಯೇಯ/ಉದ್ದೇಶ  : ನಾವು ನಮ್ಮ ನಿರಂತರ ಶ್ರಮದಿಂದ, ನಮ್ಮ ಪರಿಸರದ ಶ್ರೇಯೋಭಿವೃದ್ಧಿಗಾಗಿ ಮಹತ್ವಾಕಾಂಕ್ಷಿ ಯೋಜನೆಗಳಿಂದ ನಮ್ಮ ಕಾಯ೯ಕ್ಷೇತ್ರದಲ್ಲಿ ಪರಿಸರ ಮತ್ತ್ತು ಜೈವಿಕನೀತಿಯನ್ನು ಸಮನ್ವಯಗೊಳಿಸುವಿಕೆ. ಮತ್ತು ವಿಶ್ವದ ಸಮಗ್ರ ಜೈವಿಕ ಸಮತೋಲನ ಅಭಿವೃದ್ಧಿಗಾಗಿ, ಪರಿಸರಪೂರಕ ವಿಧಾನಗಳ ಅಳವಡಿಕೆಯೊಂದಿಗೆ ಮಾರುಕಟ್ಟೆ ಅವಶ್ಯಕತೆಯ ಪೂರೈಕೆ.


ಮಾಗ೯ : ಧ್ಯೇಯ / ಉದ್ದೇಶ ಸಾಧನೆಗಾಗಿ

೧. ಸರಿಯಾದ ಸಂಪನ್ಮೂಲಗಳ ಬಳಕೆ, ಅತ್ಯುತ್ತಮ ಪದ್ಧತಿಗಳ ಆಚರಣೆಯಿಂದ ನಿರಂತರ ಶ್ರಮವಹಿಸಿ ಪರಿಸರದ ಮೇಲಿನ ದುಷ್ಪರಿಣಾಮ ನಿಯಂತ್ರಣ. ಗುರುತರವಾದ ಪರಿಸರ ಹಾನಿ ಇದ್ದಲ್ಲಿ ಅಥವಾ ಆಗುವುದಾದಲ್ಲಿ ಲಿಖಿತ ನಿವ೯ಹಣಾ ಪದ್ಧತಿಯನುಸಾರ ಉತ್ಪಾದನಾ ನಿಯಂತ್ರಣ.
೨. ನಮಗೆ ಅನ್ವಯವಾಗುವ ಎಲ್ಲಾ ಕಾನೂನುಗಳಿಗೆ ಬದ್ಧರಾಗಿರುವುದು ಮತ್ತು ಪರಿಸರದ ಬದ್ಧತೆಯನ್ನು ಪ್ರೋತ್ಸಾಹಿಸುವುದು.
೩. ನಮ್ಮಲ್ಲಿ ಬಳಸುವ ಎಲ್ಲಾ ಜೀವಕಣಗಳನ್ನು ಲಿಖಿತವಾಗಿ ಗುರುತಿಸಿ, ಅವುಗಳ ಸುರಕ್ಷಿತ ನಿವ೯ಹಣೆ, ಮಾಪ೯ಡಿಸುವಿಕೆ, ವಿಪತ್ತು ವಿಶ್ಲೇಷಣೆಯಿಂದ ಮಾನವನ ಮತ್ತು ಪರಿಸರದ ಮೇಲಿನ ಪರಿಣಾಮಗಳನ್ನು ತಡೆಯುವ ಖಾತ್ರಿಗೊಳಿಸುವಿಕೆ.
೪. ನಮ್ಮ ಎಲ್ಲಾ ಸಹವತಿ೯ಗಳ ಜೈವಿಕ ನೀತಿ ಮತ್ತು ಪರಿಸರ ಕಾಳಜಿಯನ್ನು ಗಮನಿಸಿ, ಪಾರದಶ೯ಕವಾಗಿ ಪ್ರತಿಕ್ರಿಯಿಸುವುದು.
೫. ನಮ್ಮ ಕಾಯ೯ಕ್ಷೇತ್ರದಲ್ಲಿನ ಸಮುದಾಯದೊಂದಿಗೆ ನಿಕಟ ಸಂಪಕ೯ದಲ್ಲಿರುವುದು.
೬. ನಮ್ಮ ಪೂರೈಕೆದಾರರ, ಗುತ್ತಿಗೆದಾರರ, ಅಧಿಕಾರಿಗಳ, ಗ್ರಾಹಕರ, ಪಾಲುದಾರರ ಮತ್ತು ಸಹವತಿ೯ಗಳ ಪರಿಸರ ಮತ್ತು ಜೈವಿಕನೀತಿಗಳಿಗೆ ಪ್ರೋತ್ಸಾಹ ಮತ್ತು ಅವರೊಂದಿಗೆ ಸಹಕಾರ.
೭. ಹೊಸ ಉತ್ಪನ್ನ, ಹೊಸ ವಿಧಾನಗಳನ್ನು ಅಭಿವೃದ್ಧಿಗೊಳಿಸುವುದು, ಮತ್ತು ಅದರಲ್ಲಿನ ಕಚ್ಚಾವಸ್ತುವಿನಿಂದ ಹಿಡಿದು ತ್ಯಾಜ್ಯ ನಿವ೯ಹಣೆ ಹಂತದವರೆಗಿನ ಪರಿಸರದ ಮೇಲಿನ ಪರಿಣಾಮ, ಜೈವಿಕನೀತಿಯ ಸಮಸ್ಯೆಗಳ ವಿಶ್ಲೇಷಣೆ ನೆಡೆಸುವುದು.
೮. ಪರಿಸರ ನಿವ೯ಹಣೆ ಮತ್ತು ಜೈವಿಕನೀತಿ ಸಮಸ್ಯೆಗಳನ್ನು ನಿಯಮಿತವಾಗಿ ವರದಿ ಮಾಡುವುದು.

_______________________________________________________________________________________________

ಉಲ್ಲೇಖ  : NZ-30 Standard for environmental management

        NZ-31 Standard for data (TBL) for external reporting

______________________________________________________________________________________________