ಜೇನಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
A statue representing Janus Bifrons in the Vatican Museums


ರೋಮ್‌ನ ಪುರಾಣ ಸಂಗ್ರಹದಲ್ಲಿ, ಜೇನಸ್ (ಅಥವಾ ಇಯೇನಸ್) ಪ್ರವೇಶದ್ವಾರಗಳು, ಬಾಗಿಲುಗಳು, ದ್ವಾರಮಾರ್ಗಗಳು, ಆರಂಭಗಳು ಮತ್ತು ಅಂತ್ಯಗಳ ದೇವತೆ. ಆಧುನಿಕ ಸಂಸ್ಕೃತಿಯಲ್ಲಿ ಅವನ ಅತ್ಯಂತ ಎದ್ದುಕಾಣುವ ಉಳಿಕೆಗಳು ಅವನ ಸ್ವನಾಮಕಗಳಾಗಿವೆ: ಹೊಸ ವರ್ಷವನ್ನು ಪ್ರಾರಂಭಿಸುವ ಜ್ಯಾನ್ಯುವರಿ, ಮತ್ತು ದ್ವಾರಗಳು ಹಾಗೂ ಹಜಾರಗಳ ಕಾವಲುಗಾರನಾದ ಜ್ಯಾನಿಟರ್. ಅವನನ್ನು ಹಲವುವೇಳೆ ವಿರುದ್ಧ ದಿಕ್ಕುಗಳನ್ನು ನೋಡುತ್ತಿರುವಂತೆ ಎರಡು ಮುಖಗಳು ಅಥವಾ ತಲೆಗಳನ್ನು ಹೊಂದಿರುವಂತೆ ಚಿತ್ರಿಸಲಾಗುತ್ತದೆ.

"https://kn.wikipedia.org/w/index.php?title=ಜೇನಸ್&oldid=401314" ಇಂದ ಪಡೆಯಲ್ಪಟ್ಟಿದೆ