ವಿಷಯಕ್ಕೆ ಹೋಗು

ಜೆನ್ಸಿಯಾನ ಕುಟುಂಬ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೆನ್ಸಿಯಾನ ಕುಟುಂಬ
Gentiana acaulis
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
Gentianaceae

Type genus
Gentiana


ಜೆನ್ಸಿಯಾನ ಕುಟುಂಬಸುಮಾರು 70 ಜಾತಿ ಮತ್ತು 800 ಪ್ರಭೇದಗಳನ್ನೊಳಗೊಂಡ ದ್ವಿದಳ ಸಸ್ಯ ಕುಟುಂಬ. ಸಿಂಪೆಟಲೀ ಗುಂಪಿಗೆ ಸೇರಿದೆ.

ಭೌಗೋಳಿಕ ಹರಡುವಿಕೆ[ಬದಲಾಯಿಸಿ]

ಆಫ್ರಿಕ ಖಂಡವನ್ನುಳಿದು ಮಿಕ್ಕೆಲ್ಲ ಭಾಗಗಳಲ್ಲೊ ಹರಡಿರುವ ಈ ಕುಟುಂಬದ ಸಸ್ಯಗಳು ವಿವಿಧ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯಬಲ್ಲವು. ಉದಾಹರಣೆಗೆ ಸೈಸೆಂಡಿಯ ಫೈಲಿಫಾರ್ಮಿಸ್ ಎಂಬುದು ಮರಳುಗಾಡಿನಲ್ಲಿ ಬೆಳೆದರೆ ಲಿಮ್ನಾಂತಿಯಮ್ ಪಲ್ಟೇಟಮ್ ಎಂಬುದು ನೀರಿನಲ್ಲಿ ಬೆಳೆಯುತ್ತದೆ. ಅಂತೆಯೇ ಜೆನ್ನಿಯಾನ ಮತ್ತು ಎರಿತ್ರಿಯ ಪ್ರಭೇದಗಳು ಹುಲ್ಲುಗಾವಲಿನಲ್ಲಿ ಬೆಳೆಯುತ್ತವೆ.

ಲಕ್ಷಣಗಳು[ಬದಲಾಯಿಸಿ]

ಕುಟುಂಬದಲ್ಲಿ ನೇರವಾಗಿ ಬೆಳೆಯಬಲ್ಲ ಹಾಗೊ ಮೃದು ಕಾಂಡವುಳ್ಳ ವಾರ್ಷಿಕ ಅಥವಾ ದ್ವೈವಾರ್ಷಿಕ ಮೂಲಿಕೆ ಸಸ್ಯಗಳೇ ಹೆಚ್ಚು. ಎತ್ತರವಾಗಿ ಬೆಳೆಯಬಲ್ಲ ದಾರುಮಯ ಸಸ್ಯಗಳು ಅಪರೊಪ. ಏಷ್ಯ ಖಂಡದಲ್ಲಿ ಸಮೃದ್ಧವಾಗಿ ಬೆಳೆಯುವ ಕ್ರಾಫರ್ಡಿಯ ಸಸ್ಯ ಬಳ್ಳಿಯಂತಿದೆ. ಎಲೆಗಳು ಸರಳ ಮಾದರಿಯವು ; ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ನೀರಿನಲ್ಲಿ ಬೆಳೆಯುವ ಸಸ್ಯಗಳಲ್ಲಿ ಮಾತ್ರ ಎಲೆಗಳು ಪರ್ಯಾಯ ರೀತಿಯಲ್ಲಿ ಜೋಡಣೆಯಾಗಿರಬಹುದು. ಅಥವಾ ಎಲೆಗಳೆಲ್ಲ ಒಟ್ಟಾಗಿ ಬೇರಿಂದಲೇ ಹುಟ್ಟಿದಂತೆ ಇರಬಹುದು. ಅಮೆರಿಕದ ಉಷ್ಣ ಪ್ರದೇಶಗಳಿಗೆ ಸೀಮಿತವಾಗಿರುವ ವಾಯ್ರಿಯ ಎಂಬ ಜಾತಿಯ ಸಸ್ಯ ಕೊಳೆತಿನಿಯಾಗಿ (ಸ್ಯಾಪ್ರೂಫೈಟ್) ಬೆಳೆಯುತ್ತದೆ. ಇದರಲ್ಲಿ ಎಲೆಗಳು ಕ್ಷೀಣಗೊಂಡು ಪೊರೆ ರೊಪದ ರಚನೆಗಳಾಗಿ ಮಾರ್ಪಟ್ಟಿವೆ ; ಇದಕ್ಕೆ ಹಸಿರು ಬಣ್ಣವೂ ಇಲ್ಲ ಯಾವ ಪ್ರಭೇದದಲ್ಲೊ ವೃಂತಪರ್ಣಗಳಿಲ್ಲ. ಹೊಗಳು ದ್ವಿಲಿಂಗೆಗಳು; ದ್ವಿಶಾಖೀಯ ಸೈಮೋಸ್ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಕೆಲವೊಮ್ಮೆ ಏಕಶಾಖೀಯವೂ ಆಗಿರಬಹುದು. ಅಪರೂಪಕ್ಕೆ ಹೂಗಳು ಎಲೆಗಳ ಕಂಕುಳಲ್ಲೊ ಕಾಂಡದ ತುದಿಯಲ್ಲೊ ಒಂಟಿಯಾಗಿ ಅರಳಬಹುದು. ಪ್ರತಿ ಹೂವಿನಲ್ಲಿ 4 ಇಲ್ಲವೆ 5 ಪುಷ್ಪಪತ್ರಗಳು, 4-5 ದಳಗಳು, 4-5 ಕೇಸರಗಳು ಮತ್ತು 2 ಕಾರ್ಪೆಲುಗಳಿಂದ ಕೊಡಿದ ಉಚ್ಚಸ್ಥಾನದ ಅಂಡಾಶಯ ಇವೆ. ದಳಗಳು ಗಂಟೆಯಾಕಾರದ ಅಥವಾ ಆಲಿಕೆಯಾಕಾರದ ಸಮೂಹವಾಗಿ ಕೂಡಿಕೊಂಡಿವೆ. ಸ್ವರ್ಶೀಯ ಪ್ರಭೇದದ ದಳಗಳ ಬುಡದಲ್ಲಿ ಜಾಲದಂಥ ಅಂಚುಳ್ಳ ಮಧುಗ್ರಂಥಿಗಳಿವೆ. ಕೇಸರಗಳು ದಳಸಮೂಹದ ಗಂಟಲಭಾಗಕ್ಕೆ ಅಂಟಿಕೊಂಡಿವೆ. ಅಂಡಕೋಶ ಒಂದೇ ಕೋಣೆಯುಳ್ಳದ್ದು. ಒಳಗೆ ಅಸಂಖ್ಯಾತ ಅಂಡಕಗಳುಂಟು. ಕೆಲವು ವೇಳೆ ಅಂಡಕೋಶ ಎರಡು ಕೋಣೆಗಳಾಗಿ ಭಾಗವಾಗಿರುವುದೊ ಉಂಟು. ಫಲ ಸಂಪುಟ ಮಾದರಿಯದು. ಬೀಜಗಳು ಸಣ್ಣ ಗಾತ್ರದವು.

ಉಪಯೋಗಗಳು[ಬದಲಾಯಿಸಿ]

ಹೊಗಳು ಕೀಟಪರಾಗಸ್ಪರ್ಶಕ್ಕೆ ತಕ್ಕಂತೆ ಹಲವಾರು ರೀತಿಗಳಲ್ಲಿ ಮಾರ್ಪಾಟ ಆಗಿವೆ. ಬಣ್ಣ ಬಣ್ಣದ ಆಕರ್ಷಕ ದಳಗಳು, ದಳಸಮೂಹ ಅಥವಾ ಅಂಡಾಶಯದ ಕೆಳಭಾಗದಲ್ಲಿರುವ ಮಧುಗ್ರಂಥಿಗಳು ಕೀಟಪರಾಗಸ್ಪರ್ಶಕ್ಕೆ ಸಹಾಯವಾಗಿರುವ ಕೆಲವು ಸಾಧನಗಳು. ಈ ಕುಟುಂಬದ ಸಸ್ಯಗಳ ಕಾಂಡ ಬೇರೆ ಉಂಟು. ಕಾಶ್ಮೀರ ಮತ್ತು ಹಿಮಾಲಯದಲ್ಲಿ ಬೆಳೆಯುವ ಜೆನ್ಸಿಯಾನ ಕುಟುಂಬ (ಪಾಷಾಣ ಬೇರು) ಎಂಬ ಪ್ರಭೇದದ ಬೇರುಗಳನ್ನು ಹೊಟ್ಟೆನೋವು ಮತ್ತು ಮೂತ್ರಪಿಂಡ ರೋಗಗಳಿಗೆ ಔಷಧಿಯಾಗಿ ಉಪಯೋಗಿಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. Angiosperm Phylogeny Group (2009). "An update of the Angiosperm Phylogeny Group classification for the orders and families of flowering plants: APG III" (PDF). Botanical Journal of the Linnean Society. 161 (2): 105–121. doi:10.1111/j.1095-8339.2009.00996.x.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]