ಜೆನಿಲಿಯಾ ಡಿಸೋಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೆನಿಲಿಯಾ ಡಿಸೋಜ
ಜನನ೫/ಆಗಸ್ಟ್/೧೯೮೭
ಮುಂಬಯಿ, ಮಹಾರಾಷ್ಟ್ರ
ರಾಷ್ಟ್ರೀಯತೆಭಾರತ
ಉದ್ಯೋಗನಟಿ

ಪರಿಚಯ[ಬದಲಾಯಿಸಿ]

ಜೆನಿಲಿಯಾ ಡಿಸೋಜ (ಜನನ:೫/ಆಗಸ್ಟ್/೧೯೮೭) ಇವರು ಭಾರತದ ಪ್ರಸದ್ದ ನಟಿಯರಲ್ಲಿ ಒಬ್ಬರು. ಇವರು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮತ್ತು ಬಾಲಿವುಡ್ ಚಿತ್ರಗಳಲ್ಲಿ ತೆರೆಕಂಡರು. ಪಾರ್ಕರ್ ಪೆನ್ನಲ್ಲಿ ಅಮಿತಾಬಚನ್ ಅವರ ಜೊತೆ ಜಾಹಿರಾತು ನಟನೆಗೆ ಆಕರ್ಶಿತರಗಿ, ಮೆಚ್ಚುಗೆಯನ್ನು ಪಡೆದರು. ನಂತರ ೨೦೦೩ರಲ್ಲಿ ಜೆನಿಲಿಯಾರವರು ವ್ರತ್ತಿಜೀವನವನ್ನು ತುಜೆ ಮೇರಿ ಕಸಮ್ ನ ಸಾಧನೆಯೊಂದಿಗೆ ಪ್ರಾರಂಭಿಸಿದರು. ಅದೇ ಸಮಯದಲ್ಲಿ ಇವರು ಬಾಯ್ಸ್ ಎನ್ನುವ ಚಿತ್ರದೊಂದಿಗೆ ಪ್ರಸಿದ್ಧಿಯಾಗಿದ್ದರು. ನಂತರ ೨೦೦೩-೨೦೦೫ರ ಸಮಯದಲ್ಲಿ ಜೆನಿಲಿಯಾ ತೆಲುಗು ಚಿತ್ರರಂಗದಲ್ಲಿ ನಟನೆಯನ್ನು ಮುಂದುವರಿಸಿದರು. ಜೆನಿಲಿಯಾ ಮೊಟ್ಟಮೊದಲಿಗೆ ೨೦೦೬ ರಲ್ಲಿ ರೋಮಾಂಚಕವಾದ ತೆಲುಗು ಚಿತ್ರವಾದ ಬೊಮ್ಮರಿಲ್ಲುಗೆ, ಫಿಲ್ಮ್ ಫೇರ್ ಅವಾರ್ಡನ್ನು ಗಳಿಸಿಕೊಂಡರು. ಇದೇ ಸಿನಿಮಾ ತಮಿಳಿನಲ್ಲಿ ಸಂತೋಷ್ ಸುಬ್ರಹ್ಮಣಿಯಮ್ ಹಾಗೂ ಹಿಂದಿನಲ್ಲಿ ಜಾನು ತು...ಯಾ ಜಾನೆ ನಾ ಎಂದು ಮರು ಚಿತ್ರೀಕರಣಗೊಂಡಿತು. ಅವರು ಉತ್ತಮ ನಟನೆಯಿಂದ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಲೀಡಿಂಗ್ ಆಕ್ಟ್ರೆಸ್ ಆಗಿ ಪ್ರಸಿದ್ಧಿ ಪಡೆದುಕೊಂಡರು. ನಟನೆಯೊಂದಿಗೆ ಅವರು ಜಾಹಿರಾತುವನ್ನು ಕೂಡ ಮಾಡುತ್ತಿದ್ದರು. ಫಾಂಟ್, ವರ್ಜಿನ್ ಮೊಬೈಲ್ ಇಂಡಿಯಾ, ಫಾಸ್ಟ್ ಟ್ರಾಕ್, ಎಲ್.ಜಿ ಮೊಬೈಲ್ಸ್, ಗಾರ್ನಿಯರ್ ಲೈಟ್, ಮಾರ್ಗೊ ಮತ್ತು ಪರ್ಕ್ ಇನ್ ಇಂಡಿಯಾನ ಬ್ರಾಂಡ್ ಅಂಬಾಸಿಡರ್ ಆಗಿ ಕಾರ್ಯನಿರ್ವಹಿಸಿದರು. ಜೆನಿಲಿಯಾರವರ ತಂದೆ ನೀಲ್ ಡಿಸೋಜ, ತಾಯಿ ಜೆನೆಟ್ ಡಿಸೋಜ,ಹಾಗೂ ಇವರ ಸಹೋದರ ನಿಜೆಲ್ ಡಿಸೋಜ. ಜೆನಿಲಿಯಾ ಜನ್ಮಸ್ಥಳ ಮುಂಬಯಿ, ಇವರು ಮಂಗಳೂರು ಕಾಥೋಲಿಕ್ ಕುಟುಂಬದವರು. ಜೆನಿಲಿಯಾವರ ಮಾತೃ ಭಾಷೆ ಕೊಂಕಣಿ. ಜೆನಿಲಿಯಾರವರ ತಾಯಿ ಜೆನೆಟ್ ಡಿಸೋಜರವರು ೨೦೦೪ರಲ್ಲಿ ಮ್ಯಾನೇಜಿಂಗ್ ಆಫ್ ಫಾರ್ಮ ಮಲ್ಟಿನ್ಯಾಷನಲ್ ಕೊಆಪರೇಶನ್ (ಎಂ.ಯನ್.ಸಿ) ನಿಂದ ನಿವೃತ್ತಿಗೊಂಡು ಜೆನಿಲಿಯಾ ಭವಿಷ್ಯತ್ತಿಗೆ ಅರ್ಪಿಸಿದರು. ತಂದೆ ನೀಲ್ ಡಿಸೋಜ ಸೀನಿಯರ್ ಟಾಟ ಕನ್ಸೆಲ್ಟೆನ್ಸಿನ ಆಫೀಸರ್ ಆಗಿದ್ದರು. ಜೆನಿಲಿಯಾರನ್ನು ಪ್ರೀತಿಯಿಂದ ಜೀನು ಎಂದು ಕರೆಯುತ್ತಿದ್ದರು.

ವಿಧ್ಯಾಭ್ಯಾಸ[ಬದಲಾಯಿಸಿ]

ಜೆನಿಲಿಯಾ ಅವರು ಅಪೊಸ್ಟೊಲಿಕ್ ಕಾರ್ಮೆಲ್ ಹೈಸ್ಕೊಲ್ ನಲ್ಲಿ ವಿಧ್ಯಾಭ್ಯಾಸ ಮಾಡಿದರು. ಅವರು ನಂತರ ಸೆಂಟ್ ಆಂಡ್ರೀವ್ಸ್ ವಿಶ್ವವಿಧ್ಯಾಲಯದಲ್ಲಿ ತಮ್ಮ ಬ್ಯಾಚಲರ್ ಡಿಗ್ರೀ ಆಫ್ ಮ್ಯಾನೇಜ್ ಮೆಂಟ್ ಅನ್ನು ಪೂರ್ತಿ ಮಾಡಿದರು. ಇವರು ಈ ಪದವಿ ಅಭ್ಯಾಸಿಸುತ್ತಿರುವಾಗಲೇ ಅವರು ಮೊದಲ ಚಿತ್ರವಾದ ತುಜೆ ತೇರಿ ಕಸಮ್ ನ ಚಿತ್ರದಲ್ಲಿ ನಟಿಸುತ್ತಿದ್ದರು. ಜೊತೆಗೆ ಎಂ.ಯನ್.ಸಿ ವೃತ್ತಿಯಲ್ಲಿ ಆಸಕ್ತಿ ಹೊಂದಿದ್ದರು. ಜೆನಿಲಿಯಾ ಅವರಿಗೆ ಕ್ರೀಡೆ ಮತ್ತು ವಿಧ್ಯಾಭ್ಯಾಸದಲ್ಲಿ ತುಂಬ ಆಸಕ್ತಿ. ಹಾಗೆಯೇ ಅವರು ರಾಜ್ಯಮಟ್ಟದ ಅಥ್ಲೆಟಿಕ್, ಸ್ಫಿಂಕ್ಟರ್ ಹಾಗೂ ರಾಷ್ಟ್ರೀಯ ಮಟ್ಟದ ಫುಟ್ ಬಾಲ್ ಪ್ಲೇಯರ್ ಆಗಿದ್ದರು. ಇವರು ತಮ್ಮ ಚಲನ ಚಿತ್ರರಂಗದೊಂದಿಗೆ, ತಮಿಳಿನ ನೇಟ್ರು, ಇಂಡ್ರು, ನಾಳೈ ಎನ್ನುವ ಮನಿರತ್ನಮ್ ನಿರ್ದೇಶನದ 'ಶೋ'ನಲ್ಲಿ ಒಳಗೊಂಡಿದ್ದರು. ಈ ಶೋನಿಂದ ಬನ್ಯನ್ ಎಂಬ ಸಂಸ್ಧೆಗೆ, [ಮಾನಸಿಕವಾಗಿ ಬಾಧಿಸುತ್ತಿರುವ ಹೆಂಗಸ ಉತ್ತಮ ಬೆಳವಣಿಗೆಗಾಗಿ] ಫಂಡ್ಸನ್ನು ನೀಡುತ್ತಿದ್ದರು. ೨೮ ಮಾರ್ಚ ೨೦೦೯ನಲ್ಲಿ ನಡೆದ ಗ್ರಾಂಡ್ ಫಿನಾಲೆನ ಗ್ಲಾಡ್ರಾಗ್ಸ್ ಮೆಗಾ ಮಾಡೆಲ್ ಹಾಗೂ ಮ್ಯಾನ್ ಹಂಟ್ ನಾ ಜಡ್ಜ್ ಆಗಿದ್ದರು. ೨೦೦೯ ಏಪ್ರಿಲ್ ೫ ರಂದು ಮುಂಬಯಿನಲ್ಲಿ ಅವರು ಬಾಲಿವುಡ್ ನ ಇತರ ನಟ ಹಾಗೂ ನಟಿಯರೊಂದಿಗೆ, ಪ್ಯಾಂಟಲೂನ್ಸ್ ಫೆಮೀನ್ ಮಿಸ್ ಇಂಡಿಯಾ ಎಂಬ ಸಂದರ್ಭದಲ್ಲಿ ಪ್ರದರ್ಶನೆ ಮಾಡಿದರು. ಚಲನ ಚಿತ್ರದೊಂದಿಗೆ ಅವರ ಜೀವನವನ್ನು ಸಮಾಜ ಸೇವೆಯಂಥ ಕಾರ್ಯಗಳಿಗೆ ತೊಡಗಿಸಿಕೊಂಡಿದ್ದರು.

ಹವ್ಯಾಸಗಳು[ಬದಲಾಯಿಸಿ]

ಅಕ್ಟೊಬರ್ ೨೪/೨೦೦೯ ನಲ್ಲಿ ಅವರು ಬಿಗ್ ಸ್ವಿಚ್ ಎಂಬ 'ಶೋ' ಅನ್ನು ಸ್ಲಮ್ ನ ಮಕ್ಕಳ ಜೀವನ ಶೈಲಿಯನ್ನು ಗರಿಷ್ಠ ವೀಕ್ಷರಿಗೆ ತಿಳಿಸಲು ಯು.ಟಿವಿ ಬಿಂದಾಸನಲ್ಲಿ ಪ್ರಾರಂಭಿಸಿದರು. ಜೆನಿಲಿಯಾರವರು ತಮ್ಮ ಜಿವನವನ್ನು ದೇವರಿಗೆ ಅರ್ಪಿಸಿಕೊಂಡಿದ್ದರು. ಅವರು ತುಂಬ ಭಕ್ತಿಯುಳ್ಳವರಾಗಿದ್ದು ಪ್ರತಿ ಭಾನುವಾರ ತಪ್ಪದೇ ಸೆಂಟ್ ಆನ್ಸ್ ಪ್ಯಾರೀಶ್ ನ್ ಚರ್ಚನಲ್ಲಿ ಮಾಸ್ ಗೆ ಹೊಗಿ ಮತ್ತೆ ತಪ್ಪದೇ ರೊಸ್ಸ್ ರಿ ಮಾಡುತ್ತಿದ್ದರು. ಹಾಗೂ ಪ್ರತೀ ಬುಧುವಾರ ತಮ್ಮ ಕುಟುಂಬದೊಂದಿಗೆ ಸೆಂಟ್ ಮೈಕಲ್ ಚರ್ಚನಲ್ಲಿ ನೊವಿಯನ್ ನಲ್ಲಿ ತೊಡಗಿರುತ್ತಿದ್ದರು. ಇವರು ಮೊದಲ ಚಿತ್ರವಾದ ತುಜೆ ಮೇರಿ ಕಸಮ್ ನಿಂದ ಅವರು ರಿತೇಷ್ ಮೂಖರ್ಜಿಯವರೊಂದಿಗೆ ಪ್ರೀತಿಗೆ ಒಳಗಾಗಿದ್ದರು. ಅವರಿಬ್ಬರು ಮದುವೆ ಮಾಡಲು ಬಯಸಿದ ಸಂದರ್ಭದಲ್ಲಿ ರಿತೇಷ್ ದೇಶಮುಖ‍್ ತಂದೆಯಾದ ವಿಲಸ್ರರೊ ದೇಶಮೂಖ್ (ಮಹಾರಾಷ್ಟ್ರದ ಪ್ರಧಾನ ಮಂತ್ರಿ) ನಿಷೇಧವನ್ನು ವ್ಯಕ್ತಪಡಿಸಿದರು. ಕೊನೆಗೆ, ಫೆಬ್ರವರಿ/೩/೨೦೧೨ ನಲ್ಲಿ ಅವರಿಬ್ಬರು ಸಾಂಸಾರಿಕ ಜೀವನಕ್ಕೆ ಕಾಲಿಟ್ಟರು. ಇವರು ರಿಯಾನ್ ಎಂಬ ಮುದ್ದು ಮಗುವಿಗೆ ೨೫ ನವೆಂಬರ್ ೨೦೧೪ ರಲ್ಲಿ ಜನ್ಮ ನೀಡಿದರು. ಜೂನ್/೧/೨೦೧೬ ರಲ್ಲಿ ಎರಡನೇ ಮಗುವಿಗೆ ಜನ್ಮ ನೀಡಿದರು. ಇವರಿಗೆ ತೆಲುಗು ಸಿನಿರಂಗದಲಿ ಅತ್ಯುತ್ತಮ ಆರಂಭಿಕ ನಟಿ ೨೦೦೩ರಲಿ ಸತ್ಯಂ ಅಂಕಿತ ತೆಲುಗು ಸಿನಿಮಗೆ ಪ್ರಶಸ್ತಿ ಲಭಿಸಿತು.[೧][೨]

ಉಲ್ಲೇಖಗಳು[ಬದಲಾಯಿಸಿ]

  1. "Telugu Actress of the Decade (Genelia D'Souza)". MSN Entertainment. MSN. 12 October 2010. p. 34. Retrieved 16 December 2010.
  2. "Telugu CineMaa Awards 2003". Idlebrain. 5 November 2004.