ಜೀವಿಗಳ ವರ್ಗೀಕರಣ
ಜೀವಿಗಳ ವರ್ಗೀಕರಣ ತಿಳಿದಿರುವಂತೆ ಜೀವಿಗಳನ್ನು ೫ ಮುಖ್ಯ ಸಾಮ್ರಾಜ್ಯಗಳನ್ನಾಗಿ ವಿಂಗಡಿಸಲಾಗಿದೆ. ಕಾರಣ ಅಸಂಖ್ಯಾತ ಜೀವಿಗಳ ಅಧ್ಯಯನಕ್ಕೆ ಕ್ರಮಬದ್ದವಾದ ವಿಂಗಡಣೆ ಇಲ್ಲದಿದ್ದಲ್ಲಿ ಅಧ್ಯಯನ ಮಾಡುವುದು ಕಷ್ಟಸಾಧ್ಯವಾಗುತ್ತದೆ..ಆದ್ದರಿಂದ ಜೀವಿಗಳನ್ನು ೫ ಮುಖ್ಯ ಸಾಮಾಜ್ಯಗಳನ್ನಾಗಿ ವಿಂಗಡಿಸಲಾಗಿದೆ. [೧])ಅವುಗಳು, ಮೊನೆರಾ, ಉದಾ: ಬ್ಯಾಕ್ಟೀರಿಯಾ, ಪ್ರೋಟಿಷ್ಟ, ಉದಾ: ಡಯಾಟಮ್ ಹಾಗೂ ಪ್ರೋಟೊಜೋವಾಗಳು, ಮ್ಯಕೋಟಾ ಉದಾ: ಅಣಬೆಗಳು, ರೈಜೋಜೋಮ್, ಯೀಸ್ಟ. ಸಸ್ಯ,ಉದಾ: ಹಸಿರು ಸಸ್ಯಗಳು. ಪ್ರಾಣಿ, ಉದಾ: ಪ್ರಾಣಿಗಳು [೨]
ಮೋನೆರಾ ಸಾಮ್ರಾಜ್ಯದ ಸದಸ್ಯರುಗಳಾದ ಬ್ಯಾಕ್ಟೀರಿಯಾಗಳು ಎಲ್ಲಾ ಸಂಭಾವ್ಯ ಆವಾಸ ಸ್ಥಾನಗಳಲ್ಲೂ ಕಂಡುಬರುತ್ತವೆ. ಇವಿ ಏಕಕೋಶೀಯ ಪ್ರೋಕ್ಯಾರಿಯೋಟ್ ಸೂಕ್ಷ ಜೀವಿಗಳಾಗಿದ್ದು ಪೆಪ್ಟಿಡೋಗ್ಲೆಕಾನಿಂದ ಆಗಿರುವ ಕೋಶಭಿತ್ತಿ ಇದೆ.ಇವುಗಳ ಆಕಾರದ ಆಧಾರದ ಮೇಲೆ ಇವುಗಳನ್ನು ಮೂರು ವಿಭಾಗಗಳಾಗಿ ವರ್ಗೀಕರಿಸಿದೆ. ದಂಡಾಕಾರದ ಬ್ಯಾಕ್ಟೀರಿಯಾಗಳನ್ನು ಬ್ಯಾಸಿಲಸ್ ಎಂದೂ, ಗೋಲಾಕಾರದ ಬ್ಯಾಕ್ಟೀರಿಯಾಗಳನ್ನು ಕಾಕಸ್ ಎಂದೂ ಸುರುಳಿಕಾರದ ಬ್ಯಾಕ್ಟೀರಿಯಾಗಳನ್ನು ಸ್ಪಿರಿಲ್ಲಮ್ ಎಂದೂ ವರ್ಗೀಕರಿಸಿದೆ.[೩]
ಅನುವಂಶಿಕ ವಸ್ತುಗಳು ನ್ಯೂಕ್ಲಿಯಾಯ್ಡಾ ಎಂಬ ಡಿಎನ್ಎ ಘಟಕಗಳಾಗಿ ಕೇಂದ್ರಿಕೃತಗೊಂಡು ಕೋಶದ್ರವ್ಯದಿಂದ ಪ್ರತ್ಐಕಗಂಡ ಬಹುಪಾಲು ಬ್ಯಾಕ್ಟೀರಿಯಾಗಳಲ್ಲಿ ಕನಿಷ್ಠ ಒಂದು ಡಿಎನ್ಎ ಘಟಕವಿರುತ್ತದೆ. ಬ್ಯಾಕ್ಟೀರಿಯಾ ದೇಹವು ಪ್ಲಾಸ್ಮೀಡ್ ಎಂಬ ವೃತ್ತಾಕಾರದ ಹೆಚ್ಚುವರಿ ಡಿಎನ್ಎ ಘಟಕದಿಂದ ಕೂಡಿರುತ್ತದೆ. ಇದರ ದೇಹವು ಕೋಶಪೊರೆಯಿಂದ ಆವೃತ ಗೊಂಡಿದ್ದು ಅವುಗಳ ಹೊರಭಾಗವು ಕೋಶಭಿತ್ತಿಯಿಂದ ಆವರಿಸಿಕೊಂಡಿದೆ.
ಗಾಲ್ಗಿಕಾಯಗಳು ಎಂಡೊಪ್ಲಾಸ್ಟಿಕ್ ರೆಟಿಕ್ಯುಲಮ್, ಮೈಟೋಕಾಂಡ್ರಿಯ ಕ್ಲೋರೋಪ್ಲಾಸ್ಠನಂತಹ ಪೊರೆಯಿಂದ ಆವೃತವಾದ ಕಣದಂಗಗಳು ಇರುವುದಿಲ್ಲ ಬ್ಯಾಕ್ಟೀರಿಯಳು ಸಾಮಾನ್ಯವಾಗಿ ಪಾಲಿಸ್ಯಾಕರೈಡ್ ಗಳ ಪಾಲಿಮರಗಳನ್ನು ಸ್ರವಿಸುವುದರಿಂದ ಕೋಶದ ಹೊರಭಾಗದಲ್ಲಿ ಕ್ಯಾಪ್ಸುಲ್ ನಂತಹ ಪದರವಿರುತ್ತದೆ. ಇವು ಸಾಮಾನ್ಯವಾಗಿ ಬಹುಶರ್ಕರಗಳ ಪಾಲಿಮರ್ ಗಳು.
ಪೋಷಣೆ: ಸ್ವಪೋಷಕ ಬ್ಯಾಕ್ಟೀರಿಯಾಗಳು ಸೌರ ಶಕ್ತಿ ಅಥವ ರಾಸಾಯನಿಕ ಶಕ್ತಿಯನ್ನು ಬಳಸಿಕೊಂಡು ಇಂಗಾಲದ ಡೈ ಆಕ್ಸೆಡ್ ನ್ನು ಅಪಕರ್ಷಿಸುಚ ಮೂಲಕ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ, ಆದ್ದರಿಂದ ಸ್ವಪೋಷಕ ಬ್ಯಾಕ್ಟೀರಿಯಾಗಳು ದ್ಯುತಿ ಸಂಶ್ಲೇಷಕ ಅಥವಾ ರಾಸಾಯನಿಕ ಸಂಶ್ಲೇಷಕ (ನೈಟ್ರೋಸೋಮೋನಾಸ್ ) ಗಳಾಗಿರುತ್ತವೆ.
ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳಲು ಸಾಧ್ಯವಾಗದ ಪರಪೋಷಕ ಬ್ಯಾಕ್ಟೀರಿಯಾ ಬಾಹ್ಯ ಮೂಲವನ್ನು ಅವಲಂಬಿಸಿರುತ್ತದೆ. ಅವುಗಳು, ೧) ಸಹಜೀವನದ ಬ್ಯಾಕ್ಟೀರಿಯಾ ೨)ಪೂತಿ ಜೀವಿ ಬ್ಯಾಕ್ಟೀರಿಯಾ ೩) ಪರಾವಲಂಬಿ ಬ್ಯಾಕ್ಟೀರಿಯಾ
- ಸಂತಾನೋತ್ಪತ್ತಿ; ಅಲೈಂಗಿಕ ಸಂತಾನೋತ್ಪತ್ತಿಯು ಪ್ರಾಥಮಿಕವಾಗಿ ವಿಘಟನೆ, ಬಡ್ಡಿಂಗ್ ಅಥವ ಯುಗಳ ವಿದಳನದ ಮೂಲಕ ನಡೆಯುತ್ತದೆ.
- ವಿಘಟನೆ : ವಿಘಟನೆ ಯಲ್ಲಿ ಪೋಷಕ ಜೀವಿಯ ದೇಹದ ತುಣುಕಿನಿಂದ ಒಂದು ಹೊಸ ಸಂಪೂರ್ಣ ಜೀವಿಯು ಬೆಳೆಯುತ್ತದೆ.
- ಬಡ್ಡಿಂಗ್: ಕೆಲವು ಬ್ಯಾಕ್ಟೀರಿಯಾ ಗಳು ಮೊಳಕೆಯ ಮೂಲಕ ಒಂದು ಮಾತೃ ಮತ್ತು ಜನ್ಯ ಜೀವಕೋಶಗಳನ್ನು ಉತ್ಪತ್ತಿ ಮಾಡುತ್ತವೆ. ಹೀಗೆ ಉತ್ಪತ್ತಿ ಯಾದ ಜನ್ಯ ಜೀವಕೋಶವು ಮಾತೃ ಜೀವಕೋಶಕ್ಕಿಂತ ಚಿಕ್ಕದಾಗಿರುತ್ತದೆ. ಇಂತಹ ಮೊಗ್ಗುಗಳು ಮಾತೃ ಜೀವಕೋಶದಿಂದ ಬೇರ್ಪಟ್ಟು ಸಂಪೂರ್ಣ ಸ್ವತಂತ್ರ ಜೀವಿಗಳಾಗಿ ಬೆಳೆಯುತ್ತವೆ.
ಯುಗಳ ವಿದಳನ: ಸಾದೃಶವಾದ ಎರಡು ಜನ್ಯ ಜೀವಕೋಶಗಳನ್ನು ಉತ್ಪತ್ತಿ ಮಾಡುತ್ತವೆ. ಯುಗಳ ವಿದಳನದ ಸಮಯದಲ್ಲಿ ಡಿಎನ್ಎ ಘಟಕವು ಎರಡಾಗಿ ವಿಭಜಿಸಲ್ಪಡುತ್ತದೆ. ಜೀವಕೋಶದ ಮಧ್ಯದಲ್ಲಿ ಒಂದು ಸಂಕುಚನ ಕಂಡುಬರುತ್ತದೆ. ಈ ಸಂಕುಚನವು ಆಳವಾಗಿ ಜೀವಕೋಶವನ್ನು ಎರಡು ಕೋಶಗಳನ್ನಾಗಿ ವಿಭಜಿಸುತ್ತದೆ. ಇದರಿಂದಾಗಿ ಎರಡು ಹೊಸ ಜನ್ಯ ಕೋಶಗಳು ರಚನೆಯಾಗುತ್ತವೆ.
ಉಲ್ಲೇಖಗಳು
[ಬದಲಾಯಿಸಿ]- ↑ Harper, Douglas. "Taxonomy". Online Etymology Dictionary. Retrieved April 18, 2011.
- ↑ The Swedish botanist Carl Linnaeus is regarded as the father of taxonomy, as he developed a system known as Linnaean classification for categorization of organisms and binomial nomenclature for naming organisms.
- ↑ Kubitschek HE (1 January 1990). "Cell volume increase in Escherichia coli after shifts to richer media". J. Bacteriol. 172 (1): 94–101. PMC 208405. PMID 2403552.