ಜೀನ್ ಪಾಲ್ ಸರ್ಟೆ

ವಿಕಿಪೀಡಿಯ ಇಂದ
Jump to navigation Jump to search
'ಜೀನ್ ಪಾಲ್ ಸರ್ಟೆ'

(೧೯೦೫-೧೯೮೦) Jean-Paul Charles Aymard Sartre (French pronunciation: [saʁtʁ], English: /ˈsɑrt/;

Jean-Paul Sartre
Jean-Paul Sartre FP.JPG
Jean-Paul Sartre
ಜನನ Jean-Paul Charles Aymard Sartre
21 ಜೂನ್ 1905
Paris, France
ಮರಣ 15 ಏಪ್ರಿಲ್ 1980(1980-04-15) (ವಯಸ್ಸು 74)
Paris, France
ಕಾಲಮಾನ 20th-century philosophy
ಪ್ರದೇಶ Western philosophy
ಪರಂಪರೆ Continental philosophy, Existentialism, Phenomenology, Marxism, Hermeneutics, Anarchism
ಮುಖ್ಯ  ಹವ್ಯಾಸಗಳು Metaphysics, epistemology, ethics, consciousness, self-consciousness, literature, political philosophy, ontology
ಅಧ್ಯಯನ ಮಾಡಿದ ಸಂಸ್ಥೆ École normale supérieure
ಗಮನಾರ್ಹ ಚಿಂತನೆಗಳು Bad faith, "existence precedes essence," nothingness, “every consciousness is a non-positional consciousness of itself," situation, Sartrean terminology

(೨೧,ಜೂನ್,೧೯೦೫–೧೫,ಏಪ್ರಿಲ್,೧೯೮೦)

ಜೀನ್ ಪಾಲ್ ಸರ್ಟೆ’ ತಮಗೆ ಘೊಷಿಸಿದ 'ನೋಬೆಲ್ ಪ್ರಶಸ್ತಿ' ಯನ್ನುನಿರಾಕರಿಸಿದರು[ಬದಲಾಯಿಸಿ]

೧೯೬೪ ರ ನೋಬೆಲ್ ಸಾಹಿತ್ಯ ಪ್ರಶಸ್ತಿ’ ಪ್ರಖ್ಯಾತ ಫ್ರೆಂಚ್ ಸಾಹಿತಿ ಮತ್ತು ಅಸ್ತಿತ್ವವಾದಿ, ಚಿಂತಕ ’ಜೀನ್ ಪಾಲ್ ಸರ್ಟೆ ಅವರಿಗೆ ಘೋಷಿಸಲಾಗಿದೆಯಾದರೂ 'ಸರ್ಟೆ' ರವರು, ಅದನ್ನು ತಿರಸ್ಕರಿಸಿದ್ದರು. ಆದರೂ, 'ನೋಬೆಲ್ ಸಾಹಿತ್ಯಪ್ರಶಸ್ತಿ ವಿಜೇತರ ಪಟ್ಟಿ'ಯಲ್ಲಿ ’ಜೀನ್ ಪಾಲ್ ಸರ್ಟೆ’ ಅವರ ಹೆಸರು ದಾಖಲಾಗಿದೆ.

ಜೀನ್ ಪಾಲ್ ಸರ್ಟೆ’ ರವರ ವೃತ್ತಿಜೀವನ[ಬದಲಾಯಿಸಿ]

ಜೀನ್ ಪಾಲ್ ಸರ್ಟೆ’ ರವರ ಅಧ್ಯಯನದ ವಿಷಯ ತತ್ವಶಾಸ್ತ್ರ.’ಜೀನ್ ಪಾಲ್ ಸರ್ಟೆ’ ರವರು ಅಧ್ಯಾಪಕರಾಗಿದ್ದರು. ಎರಡನೆಯ ಮಹಾಯುದ್ಧದ ಸಮಯದಲ್ಲಿ ’ಫ್ರೆಂಚ್ ಸೈನ್ಯದಲ್ಲಿ ಹವಾಮಾನ ತಜ್ಞ’ ರಾಗಿ ಕೆಲಸಮಾಡಿದ ’ಜೀನ್ ಪಾಲ್ ಸರ್ಟೆ’ ಯವರು, ಯುದ್ಧ ಕೈದಿಯಾಗಿ, ಒಂದು ವರ್ಷ ಜರ್ಮನರ ವಶದಲ್ಲಿದ್ದರು. ಯುದ್ಧದ ನಂತರ ಅವರು 'ಮಾಡರ್ನ್ ಟೈಮ್ಸ್,’(Les Temples Modernes) ಎಂಬ ಪತ್ರಿಕೆಯ ಸಂಪಾದಕರಾಗಿ, 'ಪೂರ್ಣಾವಧಿ ಚಿಂತನೆ' ಮತ್ತು 'ಬರವಣಿಗೆ'ಯಲ್ಲಿ ತೊಡಗಿಕೊಂಡಿದ್ದರು. ಖ್ಯಾತ ಮಹಿಳಾವಾದಿ ’ಸಿಮೊನ್ ದ ಬುವಾ’ ರವರು ಸಾರವರ ಸಂಗಾತಿಯಾಗಿ ಜೊತೆಗೆ ವಾಸಿಸುತ್ತಿದ್ದರು.

ಬೀಯಿಂಗ್’ ಅಂಡ್ ನಥಿಂಗ್ ನೆಸ್,' ಜೀನ್ ಪಾಲ್ ಸರ್ಟೆ’ ಯವರ ಪ್ರಮುಖ ಕೃತಿಗಳಲ್ಲೊಂದು[ಬದಲಾಯಿಸಿ]

’ಎಡಪಂಥೀಯ ಬುದ್ಧಿಜೀವಿ’ಯಾದ ಜೀನ್ ಪಾಲ್ ಸರ್ಟೆ ’ನೋಬೆಲ್ ಬಹುಮಾನ’ ಭೂರ್ಶ್ವಾ ಸಮಾಜದ ಪ್ರಶಸ್ತಿ ಎಂದು ನಿರ್ಣಯಿಸಿ, ನಿರಾಕರಿಸಿದರು. ರವರ ಮುಖ್ಯ ಕೃತಿ, ’ಬೀಯಿಂಗ್’ ಅಂಡ್ ನಥಿಂಗ್ ನೆಸ್' ಎಂಬ ವೈಚಾರಿಕ ಗ್ರಂಥ, ಅವರ ಕಾದಂಬರಿಗಳು. 'ಇಂಟಿಮಿಸಿ' ಎನ್ನುವುದು 'ಸಣ್ಣಕಥೆಗಳ ಸಂಕಲನ',

ಜೀನ್ ಪಾಲ್ ಸರ್ಟೆ’ ರವರ ಮತ್ತೊಂದು ಸುಪ್ರಸಿದ್ಧ ಕೃತಿ,’ನಾಸಿಯಾ[ಬದಲಾಯಿಸಿ]

ಜೀನ್ ಪಾಲ್ ಸರ್ಟೆ’ ರವರ ಪ್ರಸಿದ್ಧ ಕಾದಂಬರಿ ’ನಾಸಿಯಾ’(ವಾಕರಿಕೆ ಉಂಟಾಗುವ ಮಾನಸಿಕ ಸ್ಥಿತಿ)ಯ ನಾಯಕ, ಅಂತೋಯ್ನ್ ರಾಕ್ವೆಂಟಿನ್ಏಕಾಂಗಿಯಾಗಿರುವವನು. 'ರಾಕ್ವೆಂಟಿನ್', ಫ್ರಾನ್ಸಿನ 'ಬೋವಿಲೆ'ಯಲ್ಲಿ ಸಂಶೋಧನೆ ಮಾಡುತ್ತಿದ್ದ ವಿದ್ಯಾರ್ಥಿ. ಕಾದಂಬರಿ ಅವನ ದಿನಚರಿಯ ರೂಪದಲ್ಲಿದೆ. ಸಮಾಜದ ಹಲವು ವ್ಯಕ್ತಿಗಳು ಮತ್ತು ಸನ್ನಿವೇಶಗಳು ಅವನಲ್ಲಿ ವಾಕರಿಯ ಭಾವವನ್ನು ಹುಟ್ಟಿಸುತ್ತವೆ. 'ರಾಕ್ವೆಂಟಿನ್' ಗೆ ತನ್ನ ಸಮಸ್ಯೆ, (ದಿನೇ-ದಿನೇ ಹುಚ್ಚುತ್ತಿರುವ ವಾಕರಿಕೆ) ಒಂದು ಅಸ್ತಿತ್ವವಾದೀ ಪ್ರಶ್ನೆಯೆಂದು ಅರಿವಾಗುತ್ತದೆ. ಈ ಕಾದಂಬರಿ ಭೌದ್ಧಿಕವಾದ ಚಿಂತನೆ, ವಿಶ್ಲೇಷಣೆಗಳಿಂದಾಗಿ ಒಂದು ವಿಶಿಷ್ಟವಾದ ಕಾದಂಬರಿಯಾಗಿದೆ. ಅವರ ಕಾದಂಬರಿಗಳು ಅವರ ತಾತ್ವಿಕ ಚಿಂತನೆಯ ಅಭಿವ್ಯಕ್ತಿಗಳಷ್ಟೇ ಆಗಿವೆ. ಆ ಮಟ್ಟಿಗೆ ಅವರ 'ನಾಟಕ'ಗಳು ಹೆಚ್ಚು ಸಹಜವಾಗಿವೆ.

ಸುಪ್ರಸಿದ್ಧ ಸಾಹಿತಿ, ’ಜೀನ್ ಪಾಲ್ ಸರ್ಟೆ’ ರವರ ಸಾಹಿತ್ಯ-ಪ್ರಭಾವ ಗಣನೀಯವಾಗಿತ್ತು[ಬದಲಾಯಿಸಿ]

’ಮಹಾಯುದ್ಧ’ದನಂತರ ಜಗತ್ತಿನ ವಿಚಾರಧಾರೆಯನ್ನು ಬಹಳವಾಗಿ ಪ್ರಭಾವಿಸಿದ ಒಬ್ಬ ವ್ಯಕ್ತಿ,’ಜೀನ್ ಪಾಲ್ ಸರ್ಟೆ

ಸಂಪರ್ಕದ ಕೊಂಡಿ[ಬದಲಾಯಿಸಿ]

[[೧]]

  1. "Sartre's Debt to Rousseau" (PDF). Retrieved 2 March 2010.