ಜಿ.ಕೆ. ಅನಂತಸುರೇಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಿ.ಕೆ. ಅನಂತಸುರೇಶ್
ಜನನ (1967-05-30) ೩೦ ಮೇ ೧೯೬೭ (ವಯಸ್ಸು ೫೬)
ವಾಸಸ್ಥಳಬೆಂಗಳೂರು
ಪೌರತ್ವಭಾರತ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಯಾಂತ್ರಿಕ ಶಾಸ್ತ್ರ
ಸಂಸ್ಥೆಗಳುಭಾರತೀಯ ವಿಜ್ಞಾನ ಸಂಸ್ಥೆ ಭಾರತ
ಅಭ್ಯಸಿಸಿದ ವಿದ್ಯಾಪೀಠಐಐಟಿ ಮದ್ರಾಸ್‌
ಪ್ರಸಿದ್ಧಿಗೆ ಕಾರಣಯಂತ್ರಿಕ ಇಂಜಿನಿಯರಿಂಗ್
ಗಮನಾರ್ಹ ಪ್ರಶಸ್ತಿಗಳುಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ

ಜಿ.ಕೆ. ಅನಂತಸುರೇಶ್ ಅವರ ಪೂರ್ಣ ಹೆಸರು ಗೊಂಡಿ ಕೊಂಡಯ್ಯ ಅನಂತಸುರೇಶ್ ಎಂದಾಗಿದ್ದು, ಅವರು ಒಬ್ಬ ಭಾರತೀಯ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದಾರೆ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು ಇಲ್ಲಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.[೧] ಟೋಪೋಲಜಿ ಆಪ್ಟಿಮೈಸೇಶನ್, ಕಂಪ್ಲೈಂಟ್ ಯಾಂತ್ರಿಕತೆ ಮತ್ತು ಮೈಕ್ರೋ-ಎಲೆಕ್ಟ್ರೋ-ಮೆಕ್ಯಾನಿಕಲ್ ಸಿಸ್ಟಮ್ಸ್ (ಎಮ್.ಇ.ಎಮ್.ಎಸ್) ಕ್ಷೇತ್ರಗಳಲ್ಲಿ ಇವರು ಹೆಸರುವಾಸಿಯಾಗಿದ್ದಾರೆ. ಅವರು ಪ್ರಸ್ತುತ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ (ಎಮ್.ಇ) ವಿಭಾಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಈ ಹಿಂದೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಸೆಂಟರ್ ಆಫ್ ಬಯೋಸಿಸ್ಟಮ್ಸ್ ಸೈನ್ಸಸ್ ಅಂಡ್ ಇಂಜಿನಿಯರಿಂಗ್ (ಬಿ.ಎಸ್.ಎಸ್.ಇ) ಅಧ್ಯಕ್ಷರಾಗಿದ್ದರು. ಅವರು ೨೦೧೦ ರಲ್ಲಿ ಎಂಜಿನಿಯರಿಂಗ್ ವಿಜ್ಞಾನಕ್ಕಾಗಿ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಯನ್ನು ಪಡೆದಿದ್ದಾರೆ.[೨]

ಜೀವನಚರಿತ್ರೆ[ಬದಲಾಯಿಸಿ]

ಅನಂತಸುರೇಶ್ ಅವರು ಐಐಟಿ ಮದ್ರಾಸ್‌ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌‍ನಲ್ಲಿ ಬಿ.ಟೆಕ್ ಮಾಡಿದರು ಮತ್ತು ೧೯೮೯ ಮತ್ತು ೧೯೯೧ ರಲ್ಲಿ ಕ್ರಮವಾಗಿ ಟೊಲೆಡೊ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಎಂಎಸ್ ಪದವಿ ಪಡೆದರು. ಅವರು ೧೯೯೪ ರಲ್ಲಿ ಇವರು ಮಿಚಿಗನ್ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌‍ನಲ್ಲಿ ಪಿಎಚ್‌ಡಿ ಪದವಿಯನ್ನು ಪಡೆದರು. ಅವರು ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪೋಸ್ಟ್-ಡಾಕ್ ಆಗಿದ್ದರು. ಭಾರತಕ್ಕೆ ತೆರಳುವ ಮೊದಲು ಅವರು ೧೯೯೬ ರಿಂದ ೨೦೦೪ ರವರೆಗೆ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದರು. ಪ್ರಸ್ತುತ ಅವರು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಮಲ್ಟಿಡಿಸಿಪ್ಲಿನರಿ ಮತ್ತು ಮಲ್ಟಿ-ಸ್ಕೇಲ್ ಡಿವೈಸ್ ಮತ್ತು ಡಿಸೈನ್ ಲ್ಯಾಬ್ [೩] ಮುಖ್ಯಸ್ಥರಾಗಿದ್ದಾರೆ. ಜಿ.ಕೆ.ಅನಂತಸುರೇಶ್‍ರವರು ಇದುವರೆಗೆ ೧೮ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮತ್ತು ೩೦ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

ಸಹ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "G. K. Ananthasuresh | Department of Mechanical Engineering". Mecheng.iisc.ernet.in. Archived from the original on 2015-06-16. Retrieved 2015-07-25.
  2. "Bhatnagar award for 3 B'lore scientists". Deccanherald.com. 2010-09-26. Retrieved 2015-07-25.
  3. "M2D2 lab, IISc Bangalore". Archived from the original on 21 February 2015. Retrieved 2015-10-12.