ಜಿಯ ಮಾನೆಕ್

ವಿಕಿಪೀಡಿಯ ಇಂದ
Jump to navigation Jump to search

ಜಿಯ ಮಾನೆಕ್, 'ಸ್ಟಾರ್ ಪ್ಲಸ್' ಪ್ರಸಾರಮಾಡುತ್ತಿರುವ ಅತ್ಯಂತ ಜನಪ್ರಿಯ ಧಾರಾವಾಹಿ,’ಸಾಥ್ ನಿಭಾನ ಸಾಥಿಯ', ಯಲ್ಲಿ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಜಿಯ ಮಾನೆಕ್', ಭಾರತೀಯ ಟೆಲೆವಿಶನ್ ಬಿತ್ತರಿಸುತ್ತಿರುವ ಸೀರಿಯಲ್ ನ ಪ್ರತಿಭಾನ್ವಿತ ಯುವ ಪ್ರತಿಭೆಗಳಲ್ಲೊಬ್ಬರು. ಅವರು ಬೆಳೆದ ತಾಯಿಯಮನೆಯಲ್ಲಿ ವಿದ್ಯಾಭ್ಯಾಸವನ್ನು ಪಡೆಯಲು ಸಾಧ್ಯವಾಗದಿದ್ದರೂ ಮದುವೆಯಾಗಿ ಬಂದ ಗಂಡನ ಮನೆಯಲ್ಲಿ ತಮ್ಮ ಸಾಮಾನ್ಯ ಜ್ಞಾನ,ಹಾಗೂ ಕುಶಲ ಅಡುಗೆ, ಮತ್ತು ಅತ್ಯುತ್ತಮ ಕಾರ್ಯಾಚರಣೆಗಳಿಂದ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿರುವ ವ್ಯಕ್ತಿ. ಸರಳ, ಮುಗ್ಧ ಮನಸ್ಸಿನ, 'ಗೋಪಿ ಬಹು' ಗಂಡನಮನೆಯಲ್ಲಿ ಪರಿವಾರದ ಸದಸ್ಯರ ಜೊತೆ ಅತ್ಯುತ್ತಮ ಸಂಬಂಧವನ್ನು ಬೆಳೆಸಿ,ಮನೆಯಲ್ಲಿ ಎಲ್ಲರ ಪ್ರೀತಿಪಾತ್ರ ಮೆಚ್ಚಿನ ಸೊಸೆಯ ಪಾತ್ರವನ್ನು ಸೊಗಸಾಗಿ ನಿಭಾಯಿಸಿದ್ದಾರೆ.