ವಿಷಯಕ್ಕೆ ಹೋಗು

ಜಿಬ್ರಾಲ್ಟರ್ ಪಾಯಿಂಟ್ ಲೈಟ್ ಹೌಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಿಬ್ರಾಲ್ಟರ್ ಪಾಯಿಂಟ್ ಲೈಟ್ ಹೌಸ್

'ಲೈಟ್ ಹೌಸ್ ಕಟ್ಟಡ' ಕ್ಕೆ, 'ಜಿಬ್ರಾಲ್ಟರ್ ಪಾಯಿಂಟ್ ಲೈಟ್ ಹೌಸ್',[] ಎಂಬ ಹೆಸರು ಬಂದಿದೆ. ಇದು ಟೊರಾಂಟೋನಗರದ ಐಲೆಂಡ್ ನಲ್ಲಿ, ಸರೋವರದ ದಡದಲ್ಲಿ ನಿರ್ಮಿಸಲ್ಪಟ್ಟಿದೆ. ೧೮೦೮ ರಲ್ಲಿ ಪೂರ್ಣಗೊಂಡಿತು. ಲೇಕ್ ಪರಿಸರದಲ್ಲಿ ನಿರ್ಮಾಣಗೊಂಡ ಸರೋವರಗಳಲ್ಲಿ ಅತಿ ಪುರಾತನವಾದದ್ದು.

ಲೈಟ್ ಹೌಸ್ ಶುರುವಾದದ್ದು

[ಬದಲಾಯಿಸಿ]

೧೮೦೩ ರಲ್ಲಿ ಕಟ್ಟುವ ಕೆಲಸ ಆರಂಭ. ನಾವಿಕರ ಉಪಯೋಗಕ್ಕೆ ಬಂದದ್ದು ೧೮೦೮ ರಲ್ಲಿ. ೫೨ ಅಡಿ ಎತ್ತರ, ೧೯೩೨ ರಲ್ಲಿ ಅದರ ಎತ್ತರವನ್ನು ೮೨ ಅಡಿ ಎತ್ತರಕ್ಕೆ ಏರಿಸಲಾಯಿತು. ಕೆಳಗಿನಿಂದ ೨.೧ ಮೀ ವ್ಯಾಸದಿಂದ ಆರಂಭವಾಗಿ ಲೈಟ್ ಹೌಸ್ ತುದಿಯಲ್ಲಿ ೭ ಮೀ. ವ್ಯಾಸವಿದೆ. ಕ್ವೀನ್ ಸ್ಟನ್ ಕ್ವೇರಿ ಯಲ್ಲಿ ಕಲ್ಲುಗಳು ತಯಾರಾಗಿ ಇಲ್ಲಿಗೆ ತರಲಾಯಿತು. ಮುಂದೆ ಹೆಚ್ಚುವರಿ ನಿರ್ಮಾಣ ಕಾರ್ಯಕ್ಕೆ ಕಿಂಗ್ ಸ್ಟನ್ ಕಲ್ಲುಗಳು ಬಳಸಲ್ಪಟ್ಟವು. ೧೮೩೨ ರಲ್ಲಿ ಮರದ ಮುಟ್ಟುಗಳಿಂದ ತಯಾರುಮಾಡಿದ್ದು, ನಂತರ ಸ್ಟೀಲ್ ನಿಂದ,ಈ ಲೈಟ್ ಹೌಸ್ ಕೆಲಸ ಸಂಪನ್ನವಾಯಿತು. ನಾವಿಕರಿಗೆ ದಿಕ್ದರ್ಶನಕ್ಕೆ ತಿಮಿಂಗಿಲದ ಸ್ಪರ್ಮ್ ಆಯಿಲ್ ಬಳಸುತ್ತಿದ್ದರು. ೧೮೬೩ ರಲ್ಲಿ, ಕಲ್ಲಿದ್ದಲಿನ ಬಳಕೆ, ೧೯೧೬-೧೭ ರಲ್ಲಿ ವಿದ್ಯುತ್ಛಕ್ತಿಯ ಬಳಕೆಯಾಯಿತು. ೧೯೪೫ ರಲ್ಲಿ ಅದನ್ನು ಪುನರ್ವ್ಯವಸ್ಥಿತಗೊಳಿಸಲಾಯಿತು.

ಇತಿಹಾಸಕ್ಕೆ ಸಾಕ್ಷಿ

[ಬದಲಾಯಿಸಿ]

೧೯೫೮ ರಲ್ಲಿ ಮೆಟ್ರೊ ಪಾರ್ಕ್ಸ್ ಸ್ವಾಮಿತ್ವವನ್ನು ವಹಿಸಿಕೊಂಡಮೇಲೆ ಮತ್ತೆ ದುರಸ್ತಿಕಾರ್ಯ ೧೯೬೧-೬೨ ರಲ್ಲಿ ಜರುಗಿತು. ಮೊದಲು ಲೈಟ್ ಹೌಸ್ ಸರೋವರದ ದಡದಲ್ಲಿತ್ತು. ಬರಬರುತ್ತಾ ಅಲ್ಲೆಲ್ಲಾ ಮರಳು ತುಂಬಿ ಮುಂಭಾಗ ಕಾಣಿಸದಷ್ಟು ಮರಳು ಲೈಟ್ ಹೌಸ್ ನ ಕೆಲಸಕ್ಕೆ ಅಡಚಣೆಯುಂಟಾಯಿತು. ಹಾಗಾಗಿ ಅದನ್ನು ೧೦೦ ಮೀ. ಒಳಗೆ ಸಾಗಿಸಲಾಗಿದೆ. ಇಂದಿನ ಯುಗದಲ್ಲಿ 'ಲೈಟ್ ಹೌಸ್' ಬಳಕೆ ಇಲ್ಲ. ಅದನ್ನು ಮುಚ್ಚಲಾಗಿದೆ. ಆದರೂ ಸರೋವರದಲ್ಲಿ ನಾವೆಗಳಲ್ಲಿ ಬರುವ ನಾವಿಕರಿಗೆ ಟೊರಾಂಟೋನಗರದ ಸರೋವರಗಳ ದಡದಲ್ಲೇ ಇದ್ದು ಅದರ 'ಸಂಪರ್ಕ ಇತಿಹಾಸಕ್ಕೆ ಸಾಕ್ಷಿ'ಯಾಗಿ ಇಂದಿಗೂ ಇದೆ.

ಉಲ್ಲೇಖಗಳು

[ಬದಲಾಯಿಸಿ]
  1. "Gibraltar Point Lighthouse". Archived from the original on 2014-10-29. Retrieved 2014-07-31.