ಜಿಪ್ಸಿ ಭಾಷೆ
ರೋಮಾನಿ romani čhib | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
— | |
ಪ್ರದೇಶ: | — | |
ಒಟ್ಟು ಮಾತನಾಡುವವರು: |
c. 1.5 ಮಿಲಿಯನ್ (SIL Ethnologue) | |
ಭಾಷಾ ಕುಟುಂಬ: | Indo-European ಇಂಡೋ ಇರಾನಿಯನ್ ಇಂಡೋ ಆರ್ಯನ್ ಪಶ್ಚಿಮ ಇಂಡೋ ಆರ್ಯನ್ ಭಾಷೆಗಳು ರೋಮಾನಿ | |
ಭಾಷೆಯ ಸಂಕೇತಗಳು | ||
ISO 639-1: | ಯಾವುದೂ ಇಲ್ಲ | |
ISO 639-2: | rom
| |
ISO/FDIS 639-3: | variously: rmn – Balkan Romani rml – Baltic Romani rmc – Carpathian Romani rmf – Finnish Kalo rmo – Sinte Romani rmy – Vlax Romani rmw – Welsh-Romani |
ಜಿಪ್ಸಿ ಭಾಷೆ: ಇಂಡೊ-ಆರ್ಯನ್ ಭಾಷಾವರ್ಗಕ್ಕೆ ಸೇರಿದ ಇದನ್ನು ರೋಮನಿ ಭಾಷೆಯೆಂದೂ ಕರೆಯುತ್ತಾರೆ. ಇದು ಹೆಸರೇ ತಿಳಿಸುವಂತೆ ಜಿಪ್ಸಿ ಜನರ ಭಾಷೆ. ಭಾರತದಿಂದ ಈಜಿಪ್ಟಿನ ಕಡೆಗೆ ಜಿಪ್ಸಿಗಳು ಹೋದರೆಂಬುದು ಈ ಭಾಷೆ ಯಾವ ವರ್ಗಮೂಲಕ್ಕೆ ಸೇರಿದುದು ಎಂಬುದರಿಂದ ಖಚಿವಾಗುತ್ತದೆ. ಸುಮಾರು ಕ್ರಿ.ಶ. ಮೊದಲನೆಯ ಶತಮಾನದ ಪೂರ್ವದಲ್ಲಿ ಭಾರತದ ಆರ್ಯಭಾಷೆಗಳು ಧ್ವನಿ ಮತ್ತು ವ್ಯಾಕರಣಾತ್ಮಕ ಸಂಗತಿಗಳಲ್ಲಿ ಪರಿವರ್ತನೆಗೊಂಡಂತೆ ಈ ಭಾಷೆಯೂ ಪರಿವರ್ತನೆ ಹೊಂದಿತು.
ಚರಿತ್ರೆ
[ಬದಲಾಯಿಸಿ]ಈ ಭಾಷೆಯ ಮೂಲವನ್ನು ಕುರಿತು ಅನೇಕ ಭಾಷಾವಿಜ್ಞಾನಿಗಳು ವಿವಾದಾತ್ಮಕ ವಿಚಾರಗಳನ್ನು ಮಂಡಿಸಿದ್ದುಂಟು. ಇವರಲ್ಲಿ ಕೆಲವರು ಈ ಭಾಷೆ ನೈಋತ್ಯ ದಿಕ್ಕಿಗೆ ಸಂಬಂಧಿಸಿದುದು, ಅದರಲ್ಲಿಯೂ ವಿಶೇಷವಾಗಿ ದಾರ್ದಿಕ್ ಗುಂಪಿಗೆ ಸೇರುತ್ತದೆಯೆಂದೂ ಇದರಲ್ಲಿ ಹಿಂದುಕುಷ್ ಮತ್ತು ಕಾಶ್ಮೀರಿಯ ಪ್ರಮುಖ ಉಪಭಾಷೆಗಳು ಸೇರುತ್ತವೆಯೆಂದೂ ಅಭಿಪ್ರಾಯಪಡುತ್ತಾರೆ. ಶಿಷ್ಟ ಭಾಷೆಗಳಾಗಿ ಉಳಿದುಕೊಂಡು ಬಂದ ಇವು ಪ್ರಾಚೀನ ಸಂಸ್ಕøತದಿಂದ ಶ, ಸ, ಷ ಮತ್ತು ರಕಾರಯುಕ್ತ ವ್ಯಂಜನಗಳನ್ನು ಉಳಿಸಿಕೊಂಡಿವೆ. ಜಿಪ್ಸಿ ಭಾಷೆಗಳಲ್ಲಿಯೂ ಇವು ಕಂಡುಬರುತ್ತವೆ. ಮತ್ತೆ ಕೆಲವರು ಹಿಂದಿ ಭಾಷೆಯನ್ನು ಪ್ರತಿನಿಧಿಸುವ ಮಧ್ಯಭಾರತದ ಕೆಲವು ಉಪಭಾಷೆಗಳ ಗುಂಪಿಗೆ ಜಿಪ್ಸಿ ಭಾಷೆ ಸೇರುತ್ತದೆಂದು ಹೇಳುವುದುಂಟು. ಈ ಭಾಷೆಗಳಲ್ಲಿ ಉಂಟಾದ ಧ್ವನಿಪರಿವರ್ತನೆಗಳಿಗೆ ರೋಮನಿ ಭಾಷೆಯಲ್ಲಿನ ಆರಂಭದ ಧ್ವನಿಪರಿವರ್ತನೆಗಳು ಹೋಲುವುದುಂಟು. ಅಶೋಕನ ಕಾಲದ ಮಧ್ಯಭಾರತದ ಉಪಭಾಷೆಗಳಲ್ಲಿ ಉಂಟಾದ ಬದಲಾವಣೆಗಳು ಈ ಭಾಷೆಗಳಲ್ಲಿ ಕಂಡುಬರುವುದಿಲ್ಲ. ಆದುದರಿಂದ ಇದು ಈ ಭಾಷೆಗಳಿಂದ ತನ್ನ ಸಂಬಂಧವನ್ನು ಈ ಕಾಲದಲ್ಲಿಯೇ ಕಡಿದುಕೊಂಡಿರಬೇಕು. ಜಿಪ್ಸಿಮನುಷ್ಯ ಎಂಬ ಅರ್ಥವುಳ್ಳ, ಆಗ್ನೇಯ ಐರೋಪ್ಯ ಪದವಾದ ರೋಮ್, ಆರ್ಮೆನಿಯದ ರೋಮನಿಯ ಲೋಮ್, ಪ್ಯಾಲೆಸ್ಟೈನಿನ ರೋಮನಿಯ ಡೋಮ್ ಶಬ್ದಗಳು ಸಂಸ್ಕೃತದ ಡೊಂಬ ಪದಕ್ಕೆ ಸರಿಸಮಾನವಾಗಿವೆ. ಈ ಶಬ್ದದಿಂದ ಭಾರತದ ಡೋಮ್ ಪದ ಹುಟ್ಟಿದೆ. ಮುಖ್ಯ ಉಪಭಾಷೆಯನ್ನಾಡುವ ಅಲೆಮಾರಿ ಜನರ ಗುಂಪೊಂದು ಕ್ರಿ.ಶ. 3ನೆಯ ಶತಮಾನಾರ್ಧದ ಪೂರ್ವದಲ್ಲಿಯೇ ಪಂಜಾಬ್ ಇಲ್ಲವೆ ಪೇಷಾವರ್ ಜಿಲ್ಲೆಗಳ ಕಡೆಗೆ ವಲಸೆ ಹೋಗಿರಬೇಕು. ಅಲ್ಲಿ ಸುಮಾರು 9ನೆಯ ಶತಮಾನದವರೆಗೆ ನೆಲೆ ನಿಂತು, ಅನಂತರ ಏಷ್ಯ, ಯೂರೋಪ್ ಮತ್ತು ಅಮೆರಿಕ ಖಂಡಗಳ ಕಡೆಗೆ ಹರಡಿದಂತೆ ತೋರುತ್ತದೆ.[೧]
ಜಿಪ್ಸಿಗಳು ಪ್ರತ್ಯೇಕ ತಂಡಗಳಾಗಿ ಕಾಲಕಾಲಕ್ಕೆ ಭಾರತವನ್ನು ಬಿಟ್ಟುಹೋದರೋ ಇಲ್ಲವೆ ಎಲ್ಲರೂ ಒಂದೇ ಗುಂಪಾಗಿ ವಲಸೆ ಹೋದರೋ ಹೇಳಲು ಸಾಧ್ಯವಿಲ್ಲ. ಅದರಂತೆಯೇ ಇವರು ಆಡುವ ಭಾಷೆಗಳಲ್ಲಿ ಎದ್ದು ಕಾಣಿಸುವ ಭೇದಗಳು ಮೂಲದಲ್ಲಿ ಇದ್ದವೋ ಇಲ್ಲವೋ ಎಂಬುದನ್ನೂ ಹೇಳಲು ಸಾಧ್ಯವಿಲ್ಲ. ಆದರೆ ಈಗಿನ ಭಾಷೆಗಳಲ್ಲಿ ಸಾಮಾನ್ಯವಾಗಿ ಮೂರು ಪ್ರಭೇದಗಳು ಕಂಡುಬರುತ್ತವೆ. ಏಷ್ಯಾಟಿಕ್, ಆರ್ಮೇನಿಯನ್ ಮತ್ತು ಐರೋಪ್ಯ. ಸಂಸ್ಕøತದ ಮಹಾಪ್ರಾಣಗಳೆಲ್ಲ ಇವೆಲ್ಲವುಗಳಲ್ಲಿ ಎದ್ದುಕಾಣಿಸುತ್ತವೆ. ಏಷ್ಯಾಟಿಕ್ ಪಂಗಡಕ್ಕೆ ಸೇರಿದ ಕೆಲವು ಭಾಷೆಗಳಲ್ಲಿ ಅಲ್ಪಪ್ರಾಣಗಳೇ ಹೆಚ್ಚಾಗಿ ಕಂಡುಬಂದರೆ, ಕೆಲವು ಮಹಾಪ್ರಾಣಗಳನ್ನೂ ತೋರಿಸುತ್ತವೆ. ಐರೋಪ್ಯ ಪಂಗಂಡಕ್ಕೆ ಸೇರಿದ ಭಾಷೆಗಳಲ್ಲಿ ಮಹಾಪ್ರಾಣಗಳು ಕಾಣಿಸಿಕೊಳ್ಳುತ್ತವೆ. ಐರೋಪ್ಯದ ರೋಮನಿಗೆ ಸೇರುವ ಭಾಷೆಗಳಲ್ಲಿ ಪರಸ್ಪರ ಭೇದಗಳು ಸ್ಪಷ್ಟವಾಗಿದೆ. ಇವುಗಳ ಸುತ್ತಮುತ್ತಲಿನ ಭಾಷೆಗಳ ಸಂಪರ್ಕದಿಂದ ಈ ಭೇದಗಳು ಉಂಟಾಗಿರಬೇಕು. ಈ ದೃಷ್ಟಿಯಿಂದ ಇವು ಭಾರತದ ಭಾಷೆಗಳಿಂದ ಒಮ್ಮೆಲೇ ಬೇರೆಯಾಗಿವೆ.
ಧ್ವನಿಪದ್ಧತಿ
[ಬದಲಾಯಿಸಿ]ಸ್ವರಪದ್ಧತಿ ಸಂಸ್ಕøತ ಸ್ವರಪದ್ಧತಿಯಂತೆಯೇ ಇದೆ. ಪ್ರಾಕೃತದಲ್ಲಿ ಸಂಸ್ಕøತದ ಐ ಮತ್ತು ಔಗಳು ಅನುಕ್ರಮವಾಗಿ ಏ ಮತ್ತು ಓ ಗಳಿಗೆ ಬದಲಾಗುವಂತೆ ಇಲ್ಲಿಯೂ ಬದಲಾಗುತ್ತವೆ. ಉದಾ : ತೈಲ-ತೇಲ, ಮೌಲ್ಯಂ-ಮೂಲ. ಒಮ್ಮೊಮ್ಮೆ ಅ > ಏ ಮತ್ತು ಆ > ಅ ಆಗುವುದುಂಟು. ಉದಾ : ಮರತೆ-ಮೆರೆಲ್, ರಕ್ಷತಿ-ರಖೇಲ್, ಮಾನುಷ-ಮನುಶ್ ಇತ್ಯಾದಿ.
ವ್ಯಂಜನ ವ್ಯವಸ್ಥೆ
[ಬದಲಾಯಿಸಿ]ವ್ಯಂಜನಗಳನ್ನು ಕುರಿತು ಹೇಳುವುದಾದರೆ, ಈ ಭಾಷೆಯಲ್ಲಿ ಕೇವಲ ಅಲ್ಪಪ್ರಾಣಗಳೇ ಇವೆ. ಸ್ವರಮಧ್ಯ ವ್ಯಂಜನಗಳು ದುರ್ಬಲಗೊಳ್ಳುತ್ತವೆ. ತಾಲವ್ಯ ಧ್ವನಿಗಳು ಲೋಪಗೊಳ್ಳುತ್ತವೆ. ಮೂರ್ಧನ್ಯ ಧ್ವನಿಗಳು ರ ಆಗುತ್ತವೆ. ಔಷ್ಠ್ಯಗಳು ಒಮ್ಮೊಮ್ಮೆ ವಕಾರವಾಗುತ್ತವೆ; ದಂತವ್ಯಗಳು ಲಕಾರವಾಗುತ್ತವೆ. ಈ ಬದಲಾವಣೆಗಳು ಪ್ರಮುಖವಾಗಿ ಐರೋಪ್ಯ ಮತ್ತು ಆರ್ಮೇನಿಯ ಭಾಷಾಗುಂಪುಗಳಲ್ಲಿ ಕಂಡುಬರುತ್ತವೆ. ಕೆಲವು ಉದಾಹರಣೆಗಳನ್ನು ನೋಡಬಹುದು.
ಸಂಸ್ಕೃತ | ರೋಮನಿ |
---|---|
ಯೂಕಾ | ಜುವ್ |
ಸೂಜಿ | ಸುವ್ |
ಕೀಟಃ | ಕಿರಿ |
ಯುವತಿ | ಜುವೆಲ್ |
ಆಗತಃ | ಅಲೋ |
ವಿಜನತಿ | ಬೆನೆಲ್ |
ಪಿಬತಿ | ಪಿಏಲ್ |
ಹೃದಯಂ | ಯಿಲೋ |
ನಾಮಪದ ರೂಪಗಳು
[ಬದಲಾಯಿಸಿ]ಸಂಸ್ಕೃತ ವ್ಯಾಕರಣದ ಲಕ್ಷಣಗಳು ಈ ಭಾಷೆಗಳಲ್ಲಿ ಉಳಿದುಬಂದಿವೆ. ನಾಮಗಳು ಸಾಮಾನ್ಯವಾಗಿ ಪ್ರಕೃತ ನಾಮಪದ್ಧತಿಯನ್ನು ಅನುಸರಿಸುತ್ತವೆ.
ಸಂಸ್ಕೃತ | ಪ್ರಾಕೃತ | ರೋಮನಿ |
---|---|---|
ಚೋರಃ | ಚೋರೋ | ಚೋರ್ |
ಚೋರಂ | ಚೋರಂ | ಚೋರ್ |
ಚೋರಸ್ಯ | ಚೋರಸ್ಸ | ಚೋರೆಸ್ |
ಚೋರಾಃ | ಚೋರಾ | ಚೋರ್ |
ಚೋರಾಣಾಂ | ಚೋರಣಂ | ಚೋರೇನ್ |
ಕ್ರಿಯಾ ಪದ ಪದ್ಧತಿ
[ಬದಲಾಯಿಸಿ]ಕ್ರಿಯಾಪದಗಳ ಪದ್ಧತಿ ಸಾಮಾನ್ಯವಾಗಿ ಸಂಸ್ಕೃತ ಪದ್ಧತಿಯಂತೆಯೇ ಇದ್ದು, ವರ್ತಮಾನಕಾಲ, ಆಜ್ಞಾರ್ಥ ಮತ್ತು ಕೃದಂತಗಳು ಉಳಿದುಕೊಂಡು ಬಂದಿವೆ. ಭೂತಕೃದಂತಾವ್ಯಯಗಳು ಮಾತ್ರ ಸಹಾಯಕ ಕ್ರಿಯಾಪದಗಳೊಡನೆ ರೂಪಗೊಳ್ಳುತ್ತವೆ.
ಪ್ರ .ಪು./ವ. ಕಾಲ | ದ್ವಿ .ಪು./ ಕಾಲ | ತೃ .ಪು./ - |
---|---|---|
ರಕ್ಷಾಮಿ(ಸಂ) | ರಕ್ಷಸಿ(ಸಂ) | ರಕ್ಷತಿ(ಸಂ) |
ರಖವ್(ರೋ) | ರಖೇಸ್(ರೋ) | ರಖೇಲ್(ರೋ) |
ಕೃದಂತಾವ್ಯಯ
[ಬದಲಾಯಿಸಿ]ಭೂತ ಕೃದಂತಾವ್ಯಯ ರೂಪಗಳು ಪ್ರಾಕೃತದ ರೂಪಗಳಿಗೆ ಸಮೀಪವಾಗಿವೆ.
ಸಂಸ್ಕೃತ | ಪ್ರಾಕೃತ | ರೋಮನಿ |
---|---|---|
ವೃತಃ | ವುತೋ | ಮುಲೋ |
ಗತಃ | ಗಓ | ಗೇಲೋ |
ಸಂಖ್ಯೆಗಳು
[ಬದಲಾಯಿಸಿ]ಜಿಪ್ಸಿ ಭಾಷೆ ಸಂಸ್ಕೃತದ 1-6, 10-20, 100 ಅಂಕಿಗಳನ್ನು ಉಳಿಸಿಕೊಂಡಿದೆ. ಆದರೆ 7, 8, 9 ಮತ್ತು ಉಳಿದ ಅಂಕಿಗಳನ್ನು ಏಷ್ಯಾಟಿಕ್ ಪಂಗಡದ ಭಾಷೆಗಳು ಪರ್ಷಿಯನ್ ಭಾಷೆಯಿಂದ ಐರೋಪ್ಯ ಭಾಷೆಗಳು ಗ್ರೀಕಿನಿಂದ ಎರವಲಾಗಿ ತೆಗೆದುಕೊಂಡಿವೆ.
ಅಂಕಿಗಳು | ಹಿಂದಿ | ರೋಮನಿ | ಡೊಮರಿ[೨] | ಲೊಮಾವೆರೆನ್ | ಪರ್ಷಿಯನ್ | |
---|---|---|---|---|---|---|
೧ | ek | ekh, jekh | yika | yak, yek | yak, yek | |
೨ | do | duj | dī | lui | du, do | |
೩ | tīn | trin | tærən | tərin | se | |
೪ | cār | štar | štar | išdör | čahār | |
೫ | pāñc | pandž | pandž | pendž | pandž | |
೬ | che | šov | šaš | šeš | šaš, | šeš |
೭ | sāt | ifta | xaut | haft | haft | |
೮ | āţh | oxto | xaišt | hašt | hašt | |
೯ | nau | inja | na | nu | nuh, | noh |
೧೦ | das | deš | des | las | dah | |
೨೦ | bīs | biš | wīs | vist | bist | |
೧೦೦ | sau | šel | saj | saj | sad |
ಜಿಪ್ಸಿ ಭಾಷೆಯಲ್ಲಿ ಎರವಲಾಗಿ ಬಂದಿರುವ ಶಬ್ದಗಳು ಅಧಿಕ ಪರಿಮಾಣದಲ್ಲಿವೆ. ಅವರ ಅಲೆಮಾರಿ ವೃತ್ತಿಯೇ ಇದಕ್ಕೆ ಮೂಲಕಾರಣವಾಗಿರಬೇಕು. ವಿಶೇಷವಾಗಿ ಪರ್ಷಿಯನ್, ಆರ್ಮೇನಿಯನ್, ಗ್ರೀಕ್, ರೂಮೇನೀಯನ್, ಬಲ್ಗೇರಿಯನ್, ಜರ್ಮನ್, ಫ್ರೆಂಚ್ ಮತ್ತು ಇಂಗ್ಲಿಷ್ ಶಬ್ದಗಳು ಹೇರಳವಾಗಿ ಕಂಡುಬರುತ್ತವೆ. ಜಿಪ್ಸಿಗಳ ಮೂಲನಿವಾಸಿಗಳು ಈ ದೇಶದಲ್ಲಿ ನಿಂತು ಮುಂದೆ ಸಾಗಿರಬಹುದೆಂಬ ಮಾತು ಇದರಿಂದ ಸ್ಪಷ್ಟವಾಗುತ್ತದೆ. ಎರವಲಾಗಿ ಬಳಸಿದ ಶಬ್ದಗಳ ರೂಪಗಳು ಇವರು ಅಲೆದಾಡಿದ ಸಮಯವನ್ನು ಗುರುತಿಸಲು ಸಹಾಯಕವಾಗುತ್ತವೆ.
ಉಲ್ಲೇಖ
[ಬದಲಾಯಿಸಿ]- ↑ http://www2.arnes.si/~eusmith/Romany/glossary.html
- ↑ "ಆರ್ಕೈವ್ ನಕಲು" (PDF). Archived from the original (PDF) on 2019-04-21. Retrieved 2018-11-30.