ಜಾರ್ಜ್ ಪೀಬಾಡಿ ಗೂಚ್
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಜಾರ್ಜ್ ಪೀಬಾಡಿ ಗೂಚ್ (21 ಅಕ್ಟೋಬರ್ 1873 – 31 ಆಗಸ್ಟ್ 1968) ಒಬ್ಬ ಇಂಗ್ಲಿಷ್ ಇತಿಹಾಸಕಾರ. ಲಂಡನಿನಲ್ಲಿ 1873ರ ಅಕ್ಟೋಬರ್ 21ರಂದು ಈತನ ಜನನ. ಈಟನ್, ಲಂಡನಿನ ಕಿಂಗ್ಸ್ ಕಾಲೇಜ್ ಮತ್ತು ಕೇಂಬ್ರಿಜಿನ ಟ್ರಿನಿಟಿ ಕಾಲೇಜ್ಗಳಲ್ಲಿ ಈತ ಶಿಕ್ಷಣ ಪಡೆದ. ಅನಂತರ ಬರ್ಲಿನ್ ಮತ್ತು ಪ್ಯಾರಿಸ್ಗಳಲ್ಲೂ ಅಧ್ಯಯನ ಮುಂದುವರಿಸಿದ. ಈತ ಲಿಬರಲ್ ಪಕ್ಷದ ಅಭ್ಯರ್ಥಿಯಾಗಿ ಕಾಮನ್ಸ್ ಸಭೆಗೆ ಆಯ್ಕೆ ಹೊಂದಿದ್ದ; 1906-1910ರಲ್ಲಿ ಬಾತ್ ಕ್ಷೇತ್ರದ ಮತ್ತು 1913ರಲ್ಲಿ ರೀಡಿಂಗ್ ಕ್ಷೇತ್ರದ ಪ್ರತಿನಿಧಿಯಾಗಿದ್ದ. 1911 ರಿಂದ ಕಾಂಟೆಂಪೊರರಿ ರಿವ್ಯೂ ಎಂಬ ಮಾಸಪತ್ರಿಕೆಯ ಸಹ ಸಂಪಾದಕನಾಗಿ ಕೆಲಸ ಮಾಡಿದ. 1922-25ರ ಅವಧಿಯಲ್ಲಿ ಈತ ಇತಿಹಾಸ ಸಂಘದ ಮತ್ತು 1933-36ರಲ್ಲಿ ರಾಷ್ಟ್ರೀಯ ಶಾಂತಿ ಸಮಿತಿಯ ಅಧ್ಯಕ್ಷನಾಗಿದ್ದ. ಗೂಚ್ ತನ್ನ ಕಾಲದ ಜರ್ಮನಿಯ ಇತಿಹಾಸವನ್ನು ಆಳವಾಗಿ ಅಭ್ಯಸಿಸಿದ್ದ. ಅದರ ಬಗ್ಗೆ ಅಧಿಕಾರಯುತವಾಗಿ ಮಾತನಾಡಲು ಅರ್ಹತೆಯಿದ್ದ ವ್ಯಕ್ತಿಯೀತ. ಕೇಂಬ್ರಿಜ್ ಹಿಸ್ಟೊರಿ ಆಫ್ ಬ್ರಿಟಿಷ್ ಫಾರಿನ್ ಪಾಲಿಸಿ, ಬ್ರಿಟಿಷ್ ಡಾಕ್ಯುಮೆಂಟ್ಸ್ ಆನ್ ದಿ ಆರಿಜಿನ್ಸ್ ಆಫ್ ವಾರ್ 1893-1914. ಇವುಗಳಿಗೆ ಅವನು ಅನುಕ್ರಮವಾಗಿ 1922-23 ಮತ್ತು 1926-38ರಲ್ಲಿ ಸಹ ಸಂಪಾದಕನಾಗಿದ್ದ. ಈತ ಜರ್ಮನಿ, ಇಂಗ್ಲೇಂಡ್, ಫ್ರಾನ್ಸ್, ಮತ್ತು ಆಧುನಿಕ ಯುರೋಪ್ ಇತಿಹಾಸಕ್ಕೆ ಸಂಬಂಧಿಸಿದಂತೆ ಅನೇಕ ಗ್ರಂಥಗಳನ್ನು ಬರೆದಿದ್ದಾನೆ. ಜರ್ಮನಿ ಅಂಡ್ ದಿ ಫ್ರೆಂಚ್ ರೆವೊಲ್ಯೂಷನ್, ಫ್ರಾಂಕೊ-ಜರ್ಮನ್ ರಿಲೇಷನ್ಸ್ 1871-1914, ಇಂಗ್ಲಿಷ್ ಡೆಮೊಕ್ರಾಟಿಕ್ ಐಡಿಯಾಸ್ ಇನ್ ದಿ ಸೆವೆನ್ಟೀನ್ತ್ ಸೆಂಚುರಿ, ಕೋಟ್ರ್ಸ್ ಅಂಡ್ ಕ್ಯಾಬಿನೆಟ್ಸ್, ಮೇರಿಯ ತೆರಿಸ ಅಂಡ್ ಅದರ್ ಸ್ಟಡೀಸ್, ದಿ ಸೆಕೆಂಡ್ ಎಂಪೈರ್ - ಇವು ಈತನ ಕೆಲವು ಕೃತಿಗಳು.
ಇವನಿಗೆ 1939ರಲ್ಲಿ ‘ಕಂಪ್ಯಾನ್ಯನ್ ಆಫ್ ಆನರ್’ ಮತ್ತು 1963ರಲ್ಲಿ ‘ಆರ್ಡರ್ ಆಫ್ ಮೆರಿಟ್’ ಎಂಬ ಪದವಿಗಳು ಲಭಿಸಿತು. 1963 ಆಗಸ್ಟ್ 31ರಂದು ಲಂಡನಿನ್ನಲ್ಲಿ ನಿಧನವಾದ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Hansard 1803–2005: contributions in Parliament by George Peabody Gooch