ಜಾರ್ಜಸ್ ಲೆಮೈತ್ರೆ
ಜಾರ್ಜಸ್ ಲೆಮೈತ್ರೆ | |
---|---|
ಜನನ | ಚಾರ್ಲೆರೋಯ್, ಬೆಲ್ಜಿಯಂ | ೧೭ ಜುಲೈ ೧೮೯೪
ಮರಣ | 20 June 1966 ಲುವೆನ್ ಬೆಲ್ಜಿಯಂ | (aged 71)
ವಾಸಸ್ಥಳ | ಬೆಲ್ಜಿಯಂ |
ಪೌರತ್ವ | ಬೆಲ್ಜಿಯಂ |
ರಾಷ್ಟ್ರೀಯತೆ | ಬೆಲ್ಜಿಯನ್ |
ಕಾರ್ಯಕ್ಷೇತ್ರ | ಭೌತಶಾಸ್ತ್ರ |
ಸಂಸ್ಥೆಗಳು | ಲುವೆನ್ ವಿಶ್ವವಿದ್ಯಾಲಯ |
ಅಭ್ಯಸಿಸಿದ ವಿದ್ಯಾಪೀಠ | ಲುವೆನ್ ವಿಶ್ವವಿದ್ಯಾಲಯ, ಎಂ. ಐ. ಟಿ |
ಗಮನಾರ್ಹ ಪ್ರಶಸ್ತಿಗಳು | ಎಡ್ಡಿಂಗ್‍ಟನ್ ಪದಕ (೧೯೫೩), ಫ್ರಾಂಕುಯಿ ಪ್ರಶಸ್ತಿ(೧೯೩೪) |
ಜಾರ್ಜಸ್ ಲೆಮೈತ್ರೆ ಬೆಲ್ಜಿಯಂ ದೇಶದ ಪಾದ್ರಿ ಮತ್ತು ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಪ್ರಸಿದ್ಧರಾದ ವಿಙ್ಞಾನಿ. ಪ್ರಪಂಚವು ವಿಸ್ತಾರಗೊಳ್ಳುತ್ತಿದೆ ಎಂದು ಪ್ರತಿಪಾದಿಸಿದ ಮೊದಲಿಗರು.[೧] ಈ ವಿಷಯವನ್ನು ಎಡ್ವರ್ಡ್ ಹಬಲ್ ತದ್ನಂತರ ಸಾಕ್ಷಿಯೊಡನೆ ಕಂಡುಹಿಡಿದರು.ಲೆಮೈತ್ರೆ, ಬಿಗ್ ಬ್ಯಾಂಗ್ ಥಿಯರಿಯನ್ನು[೨] (ಕಾಸ್ಮಿಕ್ ಮೊಟ್ಟೆ)ಯ ವಾದವನ್ನು ಪ್ರತಿಪಾದಿಸಿದಕ್ಕೆ ಪ್ರಸಿದ್ಧರಾಗಿದ್ದಾರೆ.[೩]
ಬಾಲ್ಯ
[ಬದಲಾಯಿಸಿ]ಲೆಮೈತ್ರೆ, ಚಾರ್ಲೆರೋಯ್ ಎಂಬ ಬೆಲ್ಜಿಯಂನ ಪಟ್ಟಣದಲ್ಲಿ ಜನಿಸಿದರು. ೧೭ರ ವಯಸ್ಸಿನಲ್ಲಿಯೇ ಸಿವಿಲ್ ಇಂಜಿನಿಯರಿಂಗ್ ಅಭ್ಯಸಿಸಲು ಶುರು ಮಾಡಿದ ಲೆಮೈತ್ರೆ, ೧೯೧೪ರ ಮೊದಲ ವಿಶ್ವಯುದ್ಧದಲ್ಲಿ ಭಾಗವಹಿಸುವಲೋಸುಗ ಅಧ್ಯಯನವನ್ನು ಮೊಟಕುಗೊಳಿಸಿದರು. ಯುದ್ಧದಲ್ಲಿನ ಶೌರ್ಯಕ್ಕೆ ಬೆಲ್ಜಿಯನ್ ವಾರ್ ಕ್ರಾಸ್ ಪ್ರಶಸ್ತಿಗೆ ಪಾತ್ರರಾದರು.[೪] ಯುದ್ಧದ ನಂತರ ಭೌತಶಾಸ್ತ್ರ ಮತ್ತು ಗಣಿತವನ್ನು ಅಭ್ಯಸಿಸಿದ ಲೆಮೈತ್ರೆ, ಪಾದ್ರಿಯಾಗಲು ತಯಾರಿ ನಡೆಸಿದರು.ಅದರ ಜೊತೆಯಲ್ಲಿಯೇ, ೧೯೨೦ರಲ್ಲಿ ಗಣಿತದಲ್ಲಿ ಡಾಕ್ಟರೇಟ್ ಪಡೆದರು. ೧೯೨೩ರಲ್ಲಿ ಪಾದ್ರಿಯಾಗಿ ಆಯ್ಕೆಯಾದರು.
ಉನ್ನತ ಅಧ್ಯಯನ
[ಬದಲಾಯಿಸಿ]೧೯೨೩ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಖಗೋಳಶಾಸ್ತ್ರವನ್ನು ಓದಲು ತೊಡಗಿದ ಲೆಮೈತ್ರೆ, ಆರ್ಥರ್ ಎಡ್ಡಿಂಗ್‍ಟನ್‍ರ ಸಹವರ್ತಿಯಾದರು. ೧೯೨೪ರಲ್ಲಿ ಹಾರ್ಲೋವ್ ಶೇಪ್ಲಿ ಯವರೊಂದಿಗೆ ನೆಬುಲಾದ ಬಗ್ಗೆ ಸಂಶೋಧನೆ ನಡೆಸಿದ ಲೆಮೈತ್ರೆ, ಎಂ.ಐ.ಟಿಯಲ್ಲಿ ವಿಙ್ಞಾನ ಡಾಕ್ಟರೇಟ್ ಪದವಿ ಪಡೆಯಲು ತೊಡಗಿದರು.
ವೃತ್ತಿ ಬದುಕು
[ಬದಲಾಯಿಸಿ]೧೯೨೫ರಲ್ಲಿ ಬೆಲ್ಜಿಯಂಗೆ ಮರಳಿದ ಲೆಮೈತ್ರೆ, ಲುವೆನ್ ವಿಶ್ವವಿದ್ಯಾಲಯದಲ್ಲಿ ಅರೆಕಾಲಿಕ ಪ್ರಾಧ್ಯಾಪಕರಾದರು. ೧೯೨೭ರಲ್ಲಿ ನೆಬುಲಾದ ಬಗ್ಗೆ ಬೆಲ್ಜಿಯನ್ ಭಾಷೆಯಲ್ಲಿ ಪೇಪರ್ ಮಂಡಿಸಿದ ಲೆಮೈತ್ರೆ, ಪ್ರಪಂಚವು ವಿಸ್ತಾರಗೊಳ್ಳುತ್ತಿದೆ ಎಂದು ಪ್ರತಿಪಾದಿಸಿದರು. [೫] ಆರ್ಥರ್ ಎಡ್ಡಿಂಗ್‍ಟನ್ ಈ ಲೇಖನವನ್ನು ಇಂಗ್ಲೀಷಿಗೆ ಭಾಷಾಂತರಗೊಳಿಸಿದರು.ಈ ಲೇಖನವನ್ನು ಓದಿದ ಆಲ್ಬರ್ಟ್ ಐನ್‍ಸ್ಟೈನ್ ಲೆಮೈತ್ರೆ ವಾದವನ್ನು ವಿರೋಧಿಸಿದರು.
ಆರ್ಥರ್ ಎಡ್ಡಿಂಗ್‍ಟನ್ ೧೯೩೦ರಲ್ಲಿ ಮತ್ತೊಮ್ಮೆ ಲೆಮೈತ್ರೆ ಲೇಖನವನ್ನು ಪ್ರಕಟಿಸಿದಾಅಗ, ಲಂಡನ್ನಿನ ಖಗೋಳ ಅಧ್ಯಯನ ಸಂಘದಲ್ಲಿ ಭಾಷಣಗೈಯ್ಯಲು ಲೆಮೈತ್ರೆಯವರನ್ನು ಆಹ್ವಾನಿಸಲಾಯಿತು. ಈ ಭಾಷಣದಲ್ಲಿ ಕಾಸ್ಮಿಕ್ ಮೊಟ್ಟೆಯ ಸೂತ್ರವನ್ನು ಲೆಮೈತ್ರೆ ಮಂಡಿಸಿದರು. [೬]ಈ ವಾದವನ್ನು ಆರ್ಥರ್ ಎಡ್ಡಿಂಗ್‍ಟನ್, ಆಲ್ಬರ್ಟ್ ಐನ್‍ಸ್ಟೈನ್ ಮೊದಲಾಗಿ ಎಲ್ಲರೂ ಒಪ್ಪಲು ಹಿಂಜರಿದರು. ೧೯೨೭,೧೯೩೨ ಮತ್ತು ೧೯೩೫ ಹೀಗೆ ಮೂರು ಬಾರಿ ಆಲ್ಬರ್ಟ್ ಐನ್‍ಸ್ಟೈನ್ ರನ್ನು ಭೇಟಿ ಮಾಡಿದ ಲೆಮೈತ್ರೆ ೧೯೩೫ರ ಹೊತ್ತಿಗೆ ತಮ್ಮ ವಾದವನ್ನು ಪರಿಪೂರ್ಣವಾಗಿ ತಿಳಿಸಿದರು. ೧೯೩೫ರ ಪ್ರಿನ್ಸ್‍ಟನ್‍ನಲ್ಲಿ ನಡೆದ ಸಮ್ಮೇಳನದಲ್ಲಿ ಐನ್‍ಸ್ಟೈನ್ ಚಪ್ಪಾಳೆ ಸಹಿತವಾಗಿ ಒಪ್ಪಿಗೆಯಿತ್ತರು.ಅಂತರಿಕ್ಷದ ಕಾಸ್ಮಿಕ್ ಕಿರಣಗಳು, ಬೃಹತ್ ವಿಸ್ಫೋಟದ ಪಳೆಯುಳಿಕೆ ಇರಬಹುದೆಂಬ ಲೆಮೈತ್ರೆ ವಾದವನ್ನು ಐನ್‍ಸ್ಟೈನ್ ಬಹುವಾಗಿ ಮೆಚ್ಚಿದರು.
೧೯೩೩ರ ಹೊತ್ತಿಗೆ ಲೆಮೈತ್ರೆ ಅಂತರ್ರಾಷ್ಟ್ರೀಯ ಕೀರ್ತಿ ಪಡೆದರು.[೭]
ಪದವಿ-ಪ್ರಮಾಣ-ಪಾರಿತೋಷಕ
[ಬದಲಾಯಿಸಿ]- ೧೯೩೬ರಲ್ಲಿ ಪಾಂಟಿಫಿಯಲ್ ವಿಙ್ಞಾನ ಅಕಾಡೆಮಿ ಸದಸ್ಯತ್ವ
- ೧೯೩೬ರಲ್ಲಿ ಫ್ರೆಂಚ್ ಖಗೋಳ ಸಂಘದ ಅತ್ಯುನ್ನತ ಪ್ರಶಸ್ತಿ
- ೧೯೪೧ರಲ್ಲಿ ರಾಯಲ್ ವಿಙ್ಞಾನ ಅಕಾಡೆಮಿ ಸದಸ್ಯತ್ವ
- ೧೯೫೧ರಲ್ಲಿ ಪೋಪ್ ೧೨ನೆಯ ಪಯಸ್ ರಿಂದ ಲೆಮೈತ್ರೆ ವಾದದ ಪುಷ್ಟೀಕರಣ[೮]
- ೧೯೫೩ರಲ್ಲಿ ಆರ್ಥರ್ ಎಡ್ಡಿಂಗ್‍ಟನ್ ಪದಕ
- ೧೯೬೪ ರಲ್ಲಿ ಪ್ರೊಫೆಸರ್ ಎಮರಿಟಸ್ ಪದವಿ
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2020-04-06. Retrieved 2018-07-17.
- ↑ https://www.pbs.org/wgbh/aso/databank/entries/dp27bi.html
- ↑ http://articles.adsabs.harvard.edu//full/1967QJRAS...8..294./0000294.000.html
- ↑ "ಆರ್ಕೈವ್ ನಕಲು". Archived from the original on 2011-04-14. Retrieved 2018-07-17.
- ↑ http://www.farrellmedia.com/farrell_tablet.pdf
- ↑ https://web.archive.org/web/20130117044852/http://www.amnh.org/education/resources/rfl/web/essaybooks/cosmic/p_lemaitre.html
- ↑ http://www.springerlink.com/index/10.1007/s10714-011-1213-7
- ↑ https://en.wikipedia.org/wiki/Georges_Lema%C3%AEtre#cite_ref-23