ಜಾನ್ ನ್ಯೂಲ್ಯಾಂಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಾನ್ ನ್ಯೂಲ್ಯಾಂಡ್

ಜಾನ್ ನ್ಯೂಲ್ಯಾಂಡ್


ಹುಟ್ಟು: 26 November 1837 Lambeth, Surrey, ಇಂಗ್ಲೆಂಡ್ ಮರಣ: 29 July 1898 (aged 60)

ಲೋಯರ್ ಕ್ಲಾಪ್ಟನ್, ಮಿಡ್ಲ್ ಸೆಕ್ಸ್ , ಇಂಗ್ಲೆಂಡ್.

ನಾಗರೀಕತ್ವ: ಬ್ರಿಟೀಶ್.

ಕ್ಞೇತ್ರ: ವಿಶ್ಲೇಷಣಾತ್ಮಕ ರಸಾಯನ ಶಾಸ್ತ್ರ,

ಖ್ಯಾತಿ: ಆವರ್ತಕ ಕೋಷ್ಟಕ, ಲಾ ಆಫ್ ಆಕ್ಟೇವ್ಸ್.

ಪ್ರಶಸ್ತಿ: ಡ್ಯಾವಿ ಮೆಡಲ್.

ಜಾನ್ ಅಲೆಕ್ಸಾಂಡರ್ ಇವರು ಇಂಗ್ಲೆಂಡ್ ನ ಲೆಂಬೆತ್ ಪ್ರದೇಶದ ವೆಸ್ಟ್ ಸ್ಕ್ವೇರ್ ನಲ್ಲಿ ಕ್ರಿ..ಶ.೧೮೩೭ ನವೆಂಬರ್ ೨೬ ರಂದು ಹುಟ್ಟಿದರು ಹಾಗೂ ೧೮೯೮ ಜುಲ್ಯೆ ೨೯ ರಂದು ಮರಣ ಹೊಂದಿದರು. ಒಟ್ಟು ಅರವತ್ತು ವರುಷ ಜೀವಿಸಿದರು. ಇವರ ತಂದೆ ಸ್ಕಾಟಿಶ್ ನವರು,ತಾಯಿ ಇಟಲಿಯವರು. ತಂದೆಯ ಮಾರ್ಗದರ್ಶನದಲ್ಲಿ ಮನೆಯಲ್ಲೇ ಅಭ್ಯಸಿಸಿ ನಂತರ ರಾಯಲ್ ಕಾಲೆಜ್ ಆಫ್ ಕೆಮಿಸ್ಟ್ರಿ ಯಲ್ಲಿ ರಸಾಯನ ಶಾಸ್ತ್ರವನ್ನು ಅಧ್ಯಯನ ಮಾಡಿದರು. ಸಾಮಾಜಿಕ ಸೇವೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಸ್ವಯಂಪ್ರೇರಿತರಾಗಿ ೧೮೬೦ ರಲ್ಲಿ ಗ್ಯಾರಿಬಾಲ್ಡಿ ಯವರ ಜೊತೆ ಸೇರಿ ಇಟಲಿಯ ಏಕೀಕರಣಕ್ಕೆ ಶ್ರಮಿಸಿದರು. ತದನಂತರ ಲಂಡನ್ ಗೆ ಹಿಂತಿರುಗಿ ೧೮೬೪ ರಲ್ಲಿ ರಸಾಯನ ಶಾಸ್ತ್ರದ ವಿಶ್ಲೇಶಕರಾಗಿ ಕೆಲಸವನ್ನು ಆರಂಭಿಸಿದರು. ೧೮೬೮ ರಲ್ಲಿ ಲಂಡನ್ ನ ಜೇಮ್ಸ್ ಡಂಕನ್ ರ ಸಕ್ಕರೆ ಪರಿಶ್ಕರಣ ಘಟಕದಲ್ಲಿ ಮುಖ್ಯ ರಾಸಾಯನಿಕ ತಜ್ಞರಾಗಿ,ವಿಶ್ಲೇಶಕರಾಗಿ ಕಾರ್ಯ ನಿರ್ವಹಿಸಿದರು.ತದನಂತರ ಲಂಡನ್ ಗೆ ಹಿಂತಿರುಗಿ ತಮ್ಮ ಬೆಂಜಮಿನ್ ನೊಂದಿಗೆ ರಾಸಾಯನಿಕ ವಿಶ್ಲೇಶಕರಾಗಿ ಕಾರ್ಯ ನಿರ್ವಹಿಸಿದರು.

Periodic Table(ಆವರ್ತಕ ಕೋಷ್ಟಕ) ದ ಪರಿಕಲ್ಪನೆಯನ್ನು ನೀಡಿದವರಲ್ಲಿ John Newlands ಮೊದಲಿಗರು.ರಾಸಾಯನಿಕ ಮೂಲಧಾತುಗಳನ್ನು ಹಾಗು ಇವುಗಳಿಗೆ ಸಂಬಂಧಿಸಿದ ಪರಮಾಣು ದ್ರವ್ಯರಾಶಿಗಳನ್ನು ಕೋಷ್ಟಕದ ರೂಪದಲ್ಲಿ ಪಟ್ಟಿಮಾಡಿದವರಲ್ಲಿ ಇವರು ಮೊದಲಿಗರು.೧೮೬೫ ರಲ್ಲಿ ಜೋಹಾನ್ ವುಲ್ಫಗ್ಯಾಂಗ್(Johan Wolfgang) ರ " ತ್ರಿವಳಿಗಳು"(Triads) ಮತ್ತು Jean-Baptiste Dumas ರ "Families of Similar Eliments" ಲೇಖನಗಳನ್ನು ತಮ್ಮ "Law of Octaves" ನಲ್ಲಿ ಪ್ರಕಡಟಿಸಿದರು. ಜೊತೆಗೆ ಎಲ್ಲ ರಾಸಾಯನಿಕ ಮೂಲಧಾತುಗಳನ್ನು ಕ್ರಮವಾಗಿ ಹೈಡ್ರೋಜನ್ ನಿಂದ ಥೋರಿಯಂ ವರೆಗೆಜೋಡಿಸಿ ಎಂಟು ಗುಂಪುಗಳಾಗಿ ವಿಂಗಡಿಸಿ ಪಟ್ಟಿ ಮಾಡಿದರು.

NO NO NO NO NO NO NO NO
H1 F8 Cl15 Co&Ni22 Br29 Pd36 I42 Pt&Ir50
Li2 Na9 K16 Cu23 Rb30 Ag37 Cs44 Os51
G3 Mg10 Ca17 Zn24 Sr31 Cd38 Ba&V45 Hg52
Bo4 Al11 Cr18 Y25 Ce&La33 U40 Ta46 Tl53
C5 Si12 Tl19 In26 Zr32 Sn39 W47 Pb54
N6 P13 Mn20 As27 Di&Mo34 Sb41 Nb48 Bi55
O7 S14 Fe21 Se28 Ro&Ru35 Te43 Au49 Th56



ಇವರ ಈ ಆಕ್ಟೇವ್ಸ್ ಕೋಷ್ಟಕದಲ್ಲಿ ಅಂದಿನ ದಿನದವರೆಗೆ ಬಳಕೆಯಲ್ಲಿದ್ದ ರಾಸಾಯನಿಕ ಮೂಲಧಾತುಗಳನ್ನು ಆಯಾ ರಾಸಾಯನಿಕ ಮೂಲಧಾತುಗಳ ಪರಮಾಣು ತೂಕವನ್ನು ಆಧರಿಸಿ ಪಟ್ಟಿಮಾಡಿದ್ದಾರೆ ಹಾಗು ಅನುಕ್ರಮವಾಗಿ ಅವುಗಳನ್ನುತೋರಿಸಲು ಅಥವಾ ಸೂಚಿಸಲು ಸಾಂಖೀಕರಿಸಿದ್ದಾರೆ. ಅವಧಿಗಳನ್ನು(periods) ಕೋಷ್ಟಕದಲ್ಲಿ ಇಳಿಮುಖವಾಗಿ ಅವುಗಳ ಸಮೂಹದೊಂದಿಗೆ(Groups) ಪಟ್ಟಿಮಾಡಿದ್ದಾರೆ. ಈ ಕೋಷ್ಟಕದಲ್ಲಿ ಅಂದಿನವರೆಗೆ ಕಂಡುಹಿಡಿಯದ ರಾಸಾಯನಿಕ ಧಾತುಗಳಅಪೂರ್ಣತೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಉದಾ: ಜರ್ಮೇನಿಯಂ(Germanium). ಜಾನ್ ನ್ಯೂಲ್ಯಾಂಡ್ ಈ ಜರ್ಮೇನಿಯಂ(Germanium) ಬಗ್ಗೆ ಮುಂದಾಲೋಚಿಸಿ ಹೇಳಿದ್ದರೆಂಬುದು ಇಲ್ಲಿ ಗಮನಾರ್ಹ.

ಇವರ" Law of Octaves" ಬಗ್ಗೆ ಇವರ ಸಮಕಾಲೀನರು ಅಪಹಾಸ್ಯ ಮಾಡಿದರು, ರಾಸಾಯನಿಕ ಸಂಘ ಸಂಸ್ಥೆಯವರು ಇವರ ಈ ಪ್ರಯತ್ನವನ್ನು ಸ್ವೀಕರಿಸಲಿಲ್ಲ.Dmitri Mendeleev ಮತ್ತು Lothar Meyer ತಮ್ಮ "discovery' of the periodic table" ಗೆ ೧೮೮೭ ರಲ್ಲಿ ರಾಯಲ್ ಸೊಸ್ಯೆಟಿ(Royal Society) ಯಿಂದ ಡೇವಿ ಮೆಡಲ್(Davy Medal) ಪಡೆಯುತ್ತಾರೆ. ಇದೆ ವಿಷಯಕ್ಕೆ ಸಂಬಂಧಿಸಿದಂತೆ ಈ ಮುಂಚೆಯೆ ಕೆಲಸ ಮಾಡಿದ್ದ ಜಾನ್ ನ್ಯೂಲ್ಯಾಂಡ್ ರವರು ಹೋರಾಡಿ ತಾವೂ ರಾಯಲ್ ಸೊಸ್ಯೆಟಿ ಯಿಂದ Davy Medal ಪಡೆಯುತ್ತಾರೆ.

ಜಾನ್ ನ್ಯೂಲ್ಯಾಂಡ್ ರವರು ತಮ್ಮ ಅರವತ್ತು ವರುಷಗಳ ಅಂತ್ಯದಲ್ಲಿ ಶಸ್ತ್ರ ಚಿಕಿತ್ಸೆಯ ತೊಡಕುಗಳಿಂದಾಗಿ Lower Clapton ನ ಅವರ ಮನೆಯಲ್ಲಿ ಮರಣವನ್ನಪ್ಪುತ್ತಾರೆ ಹಾಗು West Norwood Cemetry ನಲ್ಲಿ ಇವರ ದೇಹವನ್ನು ಸಮಾಧಿಮಾಡಲಾಯಿತು. ನಂತರ ಇವರ ಕಾರ್ಯಗಳನ್ನು ಇವರ ತಮ್ಮ ಬೆಂಜಮಿನ್ ಮುಂದುವರೆಸಿದರು.