ಜಾನ್ ಜಾಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾನ್ ಜಾಲಿ (1857-1933). ಐರ್ಲೆಂಡಿನ ವಿಖ್ಯಾತ ಭೂವಿಜ್ಞಾನಿ.

ಭೂವಿಜ್ಞಾನಕ್ಕೆ ಈತನ ಕೊಡುಗೆಗಳು[ಬದಲಾಯಿಸಿ]

  • ಭೂ ಮೇಲ್ತೊಗಟೆ ತೇಲುತ್ತಿದೆ ಮತ್ತು ಅದರ ಮಂದ ಖಂಡಪ್ರದೇಶದಲ್ಲಿ 31 ಕಿ.ಮೀ.ಎಂಬುದಾಗಿ ಮೊತ್ತಮೊದಲಿಗೆ ತಿಳಿಸಿದಾತ.
  • ಖಂಡಗಳ ಅಲೆತವನ್ನು ಕುರಿತು ತನ್ನದೇ ಆದ ಭೂ ಜಾರುವಿಕೆ ಎಂಬ ಮತ್ತೊಂದು ವಾದವನ್ನು ಪ್ರತಿಪಾದಿಸಿ ಅಲೆತವಿರುವುದು ನಿಜವೆಂಬುದಾಗಿ ವಾದಿಸಿದ. ತೇಲುವ ಭೂಖಂಡ ಎಂಬ ಪ್ರಬುದ್ಧ ಪ್ರಬಂಧವನ್ನು ಬರೆದಿದ್ದಾನೆ.
  • ಭೂಮಿಯ ವಯೋಮಿತಿಯನ್ನು 1899ರಲ್ಲಿ ನಿರ್ಣಯಿಸಿದ. ಈತನ ಅಂದಾಜಿನ ಪ್ರಕಾರ ಅದು 90 ದಶಲಕ್ಷ ವರ್ಷಗಳು. ಭೂಮಿಯ ವಯಸ್ಸನ್ನು ಶೋಧಿಸಲು ಈತ ಒಂದು ಸುಲಭ ಮಾರ್ಗ ಸೂಚಿಸಿದ. ಸಮುದ್ರಗಳಲ್ಲಿರುವ ಲವಣ ಮೊತ್ತವನ್ನು ನದಿಗಳು ಅವಕ್ಕೆ ವಾರ್ಷಿಕವಾಗಿ ಪೂರೈಸುವ ಲವಣಾಂಶದಿಂದ ಭಾಗಿಸಿದಾಗ ದೊರೆಯುವ ಲಬ್ಧವೇ ಭೂಮಿಯ ವಯಸ್ಸು. ಆದರೆ ಇತ್ತೀಚಿನ ಸಂಶೋಧನೆಯಿಂದ ಈ ಭಾಗಲಬ್ಧ ಸಮುದ್ರಗಳ ವಯಸ್ಸನ್ನು ಕೊಡಬಲ್ಲುದೇ ವಿನಾ ಭೂಮಿಯ ವಯಸ್ಸನ್ನಲ್ಲ ಎಂದು ವೇದ್ಯವಾಗಿದೆ.
  • ವಿಕಿರಣತೆ ಹಾಗೂ ಭೂ ಮೇಲ್ಮೈ ಶಾಸ್ತ್ರಕ್ಕೂ ಇರುವ ಸಮನ್ವಯತೆಯನ್ನು ಜಾಲಿ ವಾದಿಸಿದ್ದಾನೆ.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: