ವಿಷಯಕ್ಕೆ ಹೋಗು

ಜಾನಿ ವಾಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

(೧೫ ಮೇ, ೧೯೨೩-೨೯ ಜುಲೈ, ೨೦೦೩)


ಭಾರತದ ಹಿಂದಿ ಚಿತ್ರರಂಗದಲ್ಲಿ ಹಾಸ್ಯನಟ, ಸುಮಾರು ೩೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕನಟನಾಗಿ ನಟಿಸಿ ಎಲ್ಲರ ಅಚ್ಚುಮೆಚ್ಚಾಗಿದ್ದ, ಜಾನಿವಾಕರ್, ರವರ ಮನೆಯ ಹೆಸರು, ಬದ್ರುದ್ದೀನ್ ಜಮಾಲುದ್ದಿನ್ ಕಾಝಿ ಯೆಂದು. ಜನಿಸಿದ್ದು, ಇಂದೂರ್ ನಲ್ಲಿ, ತಂದೆ ಗಿರಣಿಯ ಕಾರ್ಮಿಕ. ತಂದೆಯವರು ಕೆಲಸಮಾಡುತ್ತಿದ್ದ ಗಿರಣಿ ಮುಚ್ಚಿದ್ದರಿಂದ ಅವರು ಬೊಂಬಾಯಿಗೆ ಬರಬೇಕಾಯಿತು. ೧೫ ಜನ ಸದಸ್ಯರ ತುಂಬು ಸಂಸಾರದ ಹೊರೆಯನ್ನು ನಿಭಾಯಿಸಲು ತಂದೆಯವರಿಗೆ ವಿಪರೀತ ಕಷ್ಟವಾಗಿತ್ತು. ೫ ಜನ ಸದಸ್ಯರು ಚಿಕ್ಕವರಾಗಿದ್ದಾಗಲೇ ಮೃತಪಟ್ಟರು.

ಬೊಂಬಾಯಿನ ಬಿ.ಇ.ಎಸ್.ಟಿ.ಯಲ್ಲಿ ಬಸ್ ಕಂಡಕ್ಟರ್ ಆಗಿ ಸೇವೆಸಲ್ಲಿಸಿದರು

[ಬದಲಾಯಿಸಿ]

ಬದ್ರುದ್ದೀನ್, ಹಲವೆಡೆ ನೌಕರಿಗಾಗಿ ಅಲೆದು ಅನೇಕ ಕಡೆ ಸಿಕಸಿಕ್ಕ ನೌಕರಿಗಳನ್ನು ಪ್ರಯತ್ನಿಸಿದರು. ಅವರು ಬೊಂಬಾಯಿನಲ್ಲಿ ಬಸ್ ಕಂಡಕ್ಟರ್ಆಗಿ ಕೆಲಸಮಾಡಿದರು. ('Bombay Electric Supply and Transport Undertaking' '(B.E.S.T. Buses) ದಾದರ್ ಮುಖ್ಯ ಶಾಖೆಯಲ್ಲೇ ಹಲವಾರು ವರ್ಷಗಳಕಾಲ ನೌಕರಿಮಾಡಿದರು. ಕೆಲವುವೇಳೆ ಬೇರೆ ಬೇರೆ ಉಪನಗರಗಳ ಕಡೆ ಬಸ್ ರೂಟ್ ಗಳಲ್ಲಿ ಹೋಗಿದ್ದಾರೆ ಸಹಿತ.