ಜಾಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉಪ್ಪಿನಕಾಯಿ ಜಾಡಿ

ಜಾಡಿಯು (ಭರಣಿ, ಕುಪ್ಪಿ, ಕುಪ್ಪಿಗೆ) ಗಡುಸಾದ, ಉರುಳೆಯಾಕಾರದ ಅಥವಾ ಸ್ವಲ್ಪಮಟ್ಟಿಗೆ ಶಂಕುವಿನಾಕಾರದ ಧಾರಕ. ಇದನ್ನು ಸಾಮಾನ್ಯವಾಗಿ ಗಾಜು, ಪಿಂಗಾಣಿ, ಅಥವಾ ಪ್ಲಾಸ್ಟಿಕ್‍ನಿಂದ ತಯಾರಿಸಲಾಗುತ್ತದೆ. ಇದು ಮುಚ್ಚಳ, ತಿರುಪು ಮುಚ್ಚಳ, ಲಗ್ ಮುಚ್ಚಳ, ಕಾರ್ಕ್ ಕೂರಿಗೆ, ರೋಲ್ ಆನ್ ಮುಚ್ಚಳ, ನಿರಿಗೆಯಾಗುವ ಮುಚ್ಚಳ, ಒತ್ತಬೇಕಾದ ಮುಚ್ಚಳ, ಪ್ಲಾಸ್ಟಿಕ್ ಹಿನ್ನೆಗೆ ಸಾಧನ, ಉಷ್ಣದಿಂದ ಮುಚ್ಚಿದ ಮುಚ್ಚಳ ಹೊದಿಕೆ, ಒಳಗಿನ ಮುಚ್ಚಳ, ಬದಲಿಕೆಯನ್ನು ಬಹಿರಂಗಗೊಳಿಸುವ ಪಟ್ಟಿ, ಅಥವಾ ಇತರ ಸೂಕ್ತವಾದ ಸಾಧನದಿಂದ ಮುಚ್ಚಬಹುದಾದ ಅಗಲವಾದ ಬಾಯಿಯನ್ನು ಹೊಂದಿರುತ್ತದೆ. ಆಹಾರಗಳು ಅಥವಾ ಬಾಟಲಿಯ ಕುತ್ತಿಗೆಯಿಂದ ತೆಗೆಯಬಲ್ಲದ್ದಕ್ಕಿಂತ ಹೆಚ್ಚು ದೊಡ್ಡ ಅಥವಾ ಅದರ ಮೂಲಕ ಸುರಿಯಲಾರದಷ್ಟು ಸ್ನಿಗ್ಧವಾಗಿರುವ ಸೌಂದರ್ಯವರ್ಧಕಗಳು, ಔಷಧಿಗಳು, ಮತ್ತು ರಾಸಾಯನಿಕಗಳಂತಹ ಇತರ ಘನಪದಾರ್ಥಗಳನ್ನು ಹಿಡಿದಿಡಲು ಜಾಡಿಗಳನ್ನು ಬಳಸಲಾಗುತ್ತದೆ.[೧] ಜ್ಯಾಮ್, ಸಂರಕ್ಷಿತ ಗರ್ಕಿನ್, ಇತರ ಉಪ್ಪಿನಕಾಯಿಗಳು, ಮಾರ್ಮಲೇಡ್, ಬಿಸಿಲಿನಲ್ಲಿ ಒಣಗಿಸಿದ ಟೊಮೇಟೊಗಳು, ಆಲಿವ್‍ಗಳು, ಹ್ಯಾಲಪೀನೊ ಮೆಣಸಿನಕಾಯಿಗಳು, ಚಟ್ನಿಗಳು, ಸಂರಕ್ಷಿತ ಮೊಟ್ಟೆಗಳು, ಜೇನು, ಮತ್ತು ಇತರ ಅನೇಕ ವೈವಿಧ್ಯಮಯ ಪದಾರ್ಥಗಳನ್ನು ಸಂಗ್ರಹಿಸಿಡಲು ಮತ್ತು ಸಂರಕ್ಷಿಸಿಡಲು ಗಾಜಿನ ಜಾಡಿಗಳನ್ನು ಬಳಸಬಹುದು.

ಉಲ್ಲೇಖಗಳು[ಬದಲಾಯಿಸಿ]

  1. Yam, K. L., "Encyclopedia of Packaging Technology", John Wiley & Sons, 2009, ISBN 978-0-470-08704-6
"https://kn.wikipedia.org/w/index.php?title=ಜಾಡಿ&oldid=889760" ಇಂದ ಪಡೆಯಲ್ಪಟ್ಟಿದೆ