ವಿಷಯಕ್ಕೆ ಹೋಗು

ಜವ್ ಪ್ರತಿಷ್ಠಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಜವ್ ಪ್ರತಿಷ್ಠಾನ

[ಬದಲಾಯಿಸಿ]

- ಪರಿವರ್ತನೆ ನಮ್ಮ ಮಾತು, ಬದಲಾವಣೆಯೆಡೆಗೆ ನಮ್ಮ ನಡಿಗ

ತಮ್ಮ ಸಾಮರ್ಥ್ಯಗಳನ್ನು ಸರಿಯಾಗಿ ಬಳಸಿಕೊಳ್ಳಲು ಮಾರ್ಗದರ್ಶನ ವಿರದ ಈ ದೇಶದ ನವ ಪೀಳಿಗೆಯ ಗತಿಯೇನು? ಎಂಬುದು ತಮ್ಮ ತಮ್ಮ ಹವಾನಿಯಂತ್ರಿತ ಛೆಂಬರ್ಗಳಲ್ಲಿ ಹಾಯಾಗಿ ದುಡಿಯುತ್ತಾ ಇರಬಹುದಾಗಿದ್ದ ಕೆಲವು ದಕ್ಷಿಣ ಭಾರತೀಯ ಉದ್ಯೋಗಿಗಳ ಆಲೋಚನೆಯಾಗಿತ್ತು. ಇಂಥಾ ಅಲೋಚನೆಯ ಫಲವಾಗಿ ಜವ್ ಪ್ರತಿಷ್ಠಾನ, ಕರ್ನಾಟಕ, ಮಹಾರಾಷ್ಟ್ರ ಮತ್ತು ತಮಿಳುನಾಡುಗಳ ಅಸಂಖ್ಯಾತ ಯುವ ಜನರ ಪಾಲಿನ ದಾರಿದೀಪವಾಗುವ ಮಹತ್ತರ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಎಲ್ಲಾ ಕ್ಷೇತ್ರಗಳಲ್ಲಿ ಸಮಗ್ರ ಪ್ರಗತಿಯ ಮಟ್ಟಕ್ಕೆ ಭಾರತವನ್ನು ಬೆಳೆಸುವ ಸದುದ್ದೇಶ ವನ್ನು ಹೊಂದಿರುವ ನಮ್ಮ ಸಂಸ್ಥೆಯು, YOUTH ನಲ್ಲಿರುವ YOU, ವನ್ನು ಪೋಷಿಸಿ, ಬೆಳೆಸುವ, ಎಂದರೆ, ಭಾರತೀಯ ಯುವಕ ಯುವತಿ ಯರಲ್ಲಿ ಸ್ವಂತಿಕೆ ಯನ್ನು ಪ್ರೋತ್ಸಾಹಿಸಿ ಅವರು ತಮ್ಮ ಶಕ್ತಿಗಳನ್ನು ಸಾಕ್ಷಾತ್ಕರಿಸಿ, ಅಬ್ದುಲ್ ಕಲಾಮ್]] ರ 2020ರ ಮುನ್ನೋಟ (Vision 2020) ವನ್ನು ನೆರವೇರಿಸುವಲ್ಲಿ ನೆರವಾಗುವ ಧ್ಯೇಯವನ್ನು ಹೊಂದಿದೆ.

ಮುಂಚಿನಿಂದಲೂ, ಜವ್ ಪ್ರತಿಷ್ಠಾನದ ತತ್ವವನ್ನು ವಿದ್ಯಾರ್ಥಿಗಳು, ಶಿಕ್ಷಕರು, ಕಾರ್ಪೊರೇಟ್ ಉದ್ಯಮಿಗಳು ಮೆಚ್ಚಿಕೊಳ್ಳುತ್ತಲೇ ಬಂದಿದ್ದಾರೆ. ಮೊಟ್ಟ ಮೊದಲನೆಯದಾಗಿ, ಹಿಮಾಚಲ ಪ್ರದೇಶದ ಹಮೀರ್ ಪುರದಲ್ಲಿರುವ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ಼್ ಟೆಕ್ನಾಲಜಿಯಲ್ಲಿ ತನ್ನ ಉದ್ದೇಶಗಳನ್ನು ಹಂಚಿಕೊಂಡಂದಿನಿಂದ ಜವ್ ಹಿಂತಿರುಗಿ ನೋಡಿಲ್ಲ. "ಮರಳಿ ಹಳ್ಳಿಗಳೆಡೆಗೆ- ಹಳ್ಳಿಗಳಲ್ಲಿ ಭಾರತ" ಎಂಬ ತತ್ವದಡಿಯಲ್ಲಿ, ಝವ್ ವ್ಯಕ್ತಿತ್ವ ವಿಕಸನ, ವೃತ್ತಿ ಮಾಗದರ್ಶನ, ಅಣಕು ಸಂದರ್ಶನ ಕಾರ್ಯಾಗಾರಗಳು ಮತ್ತು ಸಂವಾದಗಳನ್ನು ಕರೀರ್ಜ್, ನೀವ್, ಟಸಲ್ 2012, ಪುಸ್ತಕ ದಾನ ಮತ್ತು ಸ್ವೀಕಾರ, ಯುವಾ ನಾಯಕತ್ವ ಕಾರ್ಯಕ್ರಮಗಳ ಮೂಲಕ ನಡೆಸಿಕೊಡುತ್ತದೆ. ಬೆಂಗಳೂರು, ಚಿಕ್ಕಮಗಳೂರು, ಹಾಸನ, ಸರ್ಜಾಪುರ, ದಹನು ಮುಂತಾದ ಊರುಗಳ ಶಾಲಾ ಕಾಲೇಜುಗಳಲ್ಲಿ ಈಗಾಗಲೇ ಇಂಥಾ ಕಾರ್ಯಕ್ರಮಗಳು ನಡೆದಿವೆ. ಈಮೂಲಕ ಜವ್ ನಾಳಿನ ಸಂಘರ್ಷಗಳಿಗೆ ಇಂದಿನ ಎಳೆಯರನ್ನು ಸಜ್ಜುಗೊಳಿಸುವ ಕೆಲಸವನ್ನು ಮಡುತ್ತದೆ. ಹಳ್ಳಿ ಜನರು ದಿನನಿತ್ಯ ಎದುರಿಸುವ ಸವಾಲುಗಳು ಮತ್ತು ಗ್ರಾಮ್ಯ ಬದುಕಿನ ತಲ್ಲಣಗಳನ್ನು ನಗರದ ಯುವಕರು ಸ್ವತಹ ಅನುಭವಿಸಿ ತಿಳಿದುಕೊಳ್ಳಲು ಅವರಿಗಾಗಿ ಇಂಟರ್ನ್ ಷಿಪ್ ಕಾರ್ಯಕ್ರಮಗಳನ್ನು ಸಹ ಪ್ರೋತ್ಸಾಹಿಸುತ್ತದೆ. ತನ್ಮೂಲಕ ಕ್ರಾಂತಿಯೊಂದಕ್ಕೆ ನಾಂದಿ ಹಾಡುವುದು ಜವ್ ನ ಗುರಿಯಾಗಿದೆ. ಮಾರ್ಪಾಡು, ಬದಲಾವಣೆ ಮತ್ತು ಪರಿವರ್ತನೆಯಲ್ಲಿ ನಮ್ಮ ನಂಬಿಕೆ.