ಜರ
ಗೋಚರ
ಜರ -ಶ್ರೀಕೃಷ್ಣನ ನಿರ್ಯಾಣಕ್ಕೆ (ಅವತಾರ ಸಮಾಪ್ತಿ)ಗೆನಿಮಿತ್ತನಾದ ಒಬ್ಬ ಬೇಡ. ಈತನನ್ನು ಜರಾ ಎಂದೂ ಕರೆಯುವುದಿದೆ.
ಶ್ರೀ ಕೃಷ್ಣನ ಮಾಯೆ ಮತ್ತು ಬ್ರಹ್ಮನ ಶಾಪಗಳಿಂದ ವ್ಯಾಮೋಹಿತರಾದ ಯಾದವರೆಲ್ಲ ದ್ವಾರಕಾನಗರದಿಂದ ಹೊರಟು ಪ್ರಭಾಸ ಕ್ಷೇತ್ರಕ್ಕೆ ಬಂದು ಮಿತಿಮೀರಿ ಮದ್ಯಪಾನಮಾಡಿ ಪರಸ್ಪರ ಹೋರಾಡಿ ಹತರಾಗುತ್ತಾರಷ್ಟೆ. ಇದರಿಂದ ವ್ಯಸನಗೊಂಡ ಶ್ರೀಕೃಷ್ಣ ತನ್ನ ಅವಸಾನಕಾಲ ಬಂದುದನ್ನರಿತು ಒಂದು ಮರದ ಬಳಿ ಕಾಲುಚಾಚಿ ಮಲಗಿಕೊಂಡು ಸ್ವಸ್ವರೂಪವನ್ನು ಧ್ಯಾನಮಾಡುತ್ತ ಬಾಹ್ಯಪ್ರಜ್ಞೆಯಿಲ್ಲದೆ ಇರುತ್ತಾನೆ. ಮಲಗಿದ ಶ್ರೀಕೃಷ್ಣನ ಕಾಲನ್ನು ದೂರದಿಂದ ನೋಡಿದ ಜರ ಜಿಂಕೆ ಎಂದು ಭ್ರಮಿಸಿ ತಟ್ಟನೆ ಬಾಣ ಬಿಡುತ್ತಾನೆ. ಆ ಬಾಣದೇಟಿನಿಂದ ಶ್ರೀಕೃಷ್ಣನಿಗೆ ಸಾವು ಸಂಭವಿಸುತ್ತದೆ. ಹತ್ತಿರಕ್ಕೆ ಬಂದು ನಿಜವನ್ನರಿತ ಬೇಡ ಶ್ರೀಕೃಷ್ಣನ ಮೊರೆ ಹೋಗುತ್ತಾನೆ. ಸಾಯುವ ಮುನ್ನ ಕೃಷ್ಣ ಅರಿಯದ ಈ ಬೇಡನಿಗೆ ಸದ್ಗತಿಯಾಗುವಂತೆ ಹರಸುತ್ತಾನೆ.
ರಾಮಾಯಣದ ವಾಲಿಯೇ ಬೇಡನ ಜನ್ಮವೆತ್ತಿ ಸೇಡುತೀರಿಸಿಕೊಂಡನೆಂದು ಒಂದು ಕಥೆ ಇದೆ.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: