ಜಯರಾಮ ಆಳ್ವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:J.A.1.jpg
ಜಯರಾಮ ಆಳ್ವ

ಮುಂಬಯಿನ ಮಾಹಿಮ್ ವಲಯದಲ್ಲಿರುವ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ,ಜಯರಾಮ ಆಳ್ವ, ಕುಮಟಾ ಪ್ರದೇಶದಿಂದ ಬಂದವರು. ಸದಾನಂದ ಶೆಟ್ಟಿಯವರ ತರುವಾಯ ಅಧ್ಯಕ್ಷರಾಗಿ ಬಂದ ಜಯರಾಮ ಆಳ್ವ ರು, ಸಂಘದ ಚಟುವಟಿಕೆಗಳನ್ನು ಹಿಗ್ಗಿಸಿ, ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋದರು. ಯುವ-ಕಾರ್ಯಕರ್ತರನ್ನು ತನ್ನೆಡೆಗೆ ಸೆಳೆದು, ಸಂಘಟಿಸಿ, ಎಲ್ಲರಿಗೂ ಸಮಾನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಲ್ಪಿಸಿದರು.

ವಿದ್ಯಾಭ್ಯಾಸ[ಬದಲಾಯಿಸಿ]

ಜೈರಾಮ ಆಳ್ವರು, ತಮ್ಮ ಊರಿನಲ್ಲಿ ಶಾಲಾ-ಶಿಕ್ಷಣವನ್ನು ಮುಗಿಸಿ ೧೯೭೨ ರಲ್ಲಿ ಬೊಂಬಾಯಿನ ಎಂ.ಡಿ.ಕಾಲೇಜ್ ನಲ್ಲಿ ಬಿ.ಎ.ಪದವಿ (ಎಕೊನಾಮಿಕ್ಸ್) ನಲ್ಲಿ ಗಳಿಸಿ, ನಂತರ ಎಫ್.ಕೆ.ಮೋದಿ ಅಂಡ್ ಕಂಪೆನಿಯಲ್ಲಿ ಆಡಿಟರ್ ಅಸಿಸ್ಟಂಟ್ ಆಗಿ ಸೇವೆಸಲ್ಲಿಸಿದ್ದರು. ೧೯೮೧ ರಲ್ಲಿ ತಾವೇ ಸ್ವಂತವಾಗಿ ಜೆ.ಜೆ.ಮಾಹಿಮ್ ನಲ್ಲಿ ಕನ್ಸೆಲ್ಟೆನ್ಸ್ ಉದ್ಯಮವನ್ನು ಆರಂಭಿಸಿದರು. ೧೯೮೯ ರಲ್ಲಿ ಬ್ಲ್ಯೂ ಡೈಮಂಡ್ ರೆಸ್ಟೋರೆಂಟ್ ಮೂಲಕ, ಹೋಟೆಲ್ ಉದ್ಯಮಕ್ಕೆ ಪಾದಾರ್ಪಣೆಮಾಡಿದರು. ಉದ್ಯೋಗದ ಜೊತೆಗೆ ಅವರಿಗೆ ಮೊದಲಿನಿಂದಲೂ 'ಸಾಹಿತ್ಯ', 'ಸಂಗೀತ', 'ನಾಟಕ', 'ಯಕ್ಷಗಾನ', ಹಾಗೂ ಸಂಘದ ಕಾರ್ಯಕಲಾಪಗಳನ್ನು ನಡೆಸುವ ಆಸಕ್ತಿಯಿತ್ತು. ಮುಂದೆ ಸಂಘದಲ್ಲಿ ಕೆಲಸಮಾಡುವ ವೇಳೆಯಲ್ಲಿ, ಅವರು ತಮ್ಮ ಸಂಘಟನಾತ್ಮಕ ಕೌಶಲ್ಯವನ್ನು ಹೆಚ್ಚಿಸಿಕೊಂಡರು. ಕತೆ-ಕವನಗಳನ್ನು, ನಾಟಕಗಳನ್ನು ಬರೆದ ಸಹೃದಯ-ಕವಿಯೆಂದೂ ಹೆಸರಾದರು.

ಜಯರಾಮ್ ಆಳ್ವರು ಬರೆದ 'ಕಾದಂಬರಿ'-'ಕವಿತೆ'-'ನಾಟಕಗಳು'[ಬದಲಾಯಿಸಿ]

  • ನಿಷ್ಪಾಪಿ ನಗರದಲ್ಲಿ ನಾನು ನೀನು (ಕವನ ಸಂಕಲನ)
  • ತಥಾಗತ (ಕಥಾಸಂಕಲನ)
  • ಮುಸಲ್ಮಾನ
  • ಯುರೇಕ ಯುರೇಕ
  • ಆಸೆ
  • ಅರಣ್ಯದಾಹ ಕಾದಂಬರಿಗಳು
  • 'ನಾಟಕ'ಗಳನ್ನೂ ರಚಿಸಿದ್ದರು.

ಅಭಿನಯ ಸಾಮ್ರಾಜ್ಯ ವೆಂಬ ನಾಟಕ ಸಂಸ್ಥೆಯನ್ನು ಕಟ್ಟಿ, ನಿರ್ದೇಶಕರಾಗಿ, ನಟಾರಾಗಿ, ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿಯನ್ನೂ ಪಡೆದರು.

ಉದಯದೀಪ ವೆಂಬ ದೈನಿಕ-ಪತ್ರಿಕೆಯ ಪಾಲುದಾರರಾಗಿದ್ದರು[ಬದಲಾಯಿಸಿ]

ಈ ಸಂಜೆ ಸುದ್ದಿ ದೈನಿಕದ ಸಂಪಾದಕರಾಗಿಯೂ ಪತ್ರಿಕಾ-ರಂಗದಲ್ಲಿ ದುಡಿದಿದ್ದರು. ೧೯೯೬ ರಲ್ಲಿ, ಮಹಾರಾಷ್ಟ್ರ ಸರ್ಕಾರದ ವಿಶೇಷ ಕಾರ್ಯನಿರ್ವಾಹಕ, ದಂಡಾಧಿಕಾರಿ ಯಾಗಿ ಸೇವೆಸಲ್ಲಿಸಿದ್ದಾರೆ.

ಕರ್ನಾಟಕ ಸಂಘದಲ್ಲಿ ಜೈರಾಮ್ ಆಳ್ವರು ನಿರ್ವಹಿಸಿದ ಹುದ್ದೆಗಳು[ಬದಲಾಯಿಸಿ]

೧೯೮೯-೯೦ ರಲ್ಲಿ ಕರ್ನಾಟಕ ಸಂಘದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. ೧೯೯೦-೯೧ ರಲ್ಲಿ, ಗೌರವ ಸಹ-ಕೋಶಾಧಿಕಾರಿಯಾಗಿ, ೧೯೯೧-೯೨ ರಲ್ಲಿ ಗೌ.ಕೋಶಾಧಿಕಾರಿಯಾಗಿ, ೧೯೯೨-೯೫ ರವರೆಗೆ, ಗೌರವ ಕಾರ್ಯದರ್ಶಿಯಾಗಿ, ಕೊನೆಗೆ,೧೯೯೫-೯೬ ರಲ್ಲಿ, ಆಡಳಿತಸಮಿತಿಯ ಸದಸ್ಯರಾಗಿ, ೧೯೯೬-೨೦೦೧ ರವರೆಗೆ, ಸಂಘದ ಅಧ್ಯಕ್ಷರಾಗಿ, ಸೇವೆ ಸಲ್ಲಿಸಿದ್ದಾರೆ.

ಅವರು ಹಂತ ಹಂತದಲ್ಲಿ ಸಂಘದ ಪದವಿಯ ಮೆಟ್ಟಿಲುಗಳನ್ನು ಮೇಲೇರಿ ಹೋದ ರೀತಿ ಅನನ್ಯ. ಅವರಿಗೆ ಎಲ್ಲ ತರಹದ ತೊಡಕು ಹಾಗೂ ನಿವಾರಣಾ-ರೀತಿಗಳು ಕರಗತವಾಗಿದ್ದರಿಂದ, ಅವರ ಅಧ್ಯಕ್ಷಪದವಿಯ ಸಮಯದಲ್ಲಿ ಕೆಲಸಗಳು ನಿರಾಳವಾಗಿ ರೂಪಿಸಲು ಅನುಕೂಲವಾಯಿತು.

ಪ್ರಶಸ್ತಿಗಳು[ಬದಲಾಯಿಸಿ]

  • ಉದ್ಯೋಗರತ್ನ ಪ್ರಶಸ್ತಿ

ಪರಿವಾರ[ಬದಲಾಯಿಸಿ]

ಪತ್ನಿ ವಿಲಾಸಿನಿ, ಮಕ್ಕಳು-ವಿಜೇತ್, ಸಚೇತ.

ನಿಧನ[ಬದಲಾಯಿಸಿ]

ಜೈರಾಮ ಆಳ್ವರು , ಮಂಗಳವಾರ, ೨೨, ಜೂನ್, ೨೦೧೦ ರಂದು, ಮುಂಜಾನೆ ತೀವ್ರ-ಹೃದಯಾಘಾತದಿಂದ ತಮ್ಮ ತಾಯ್ನಾಡಾದ ಕುಮುಟ ದಲ್ಲಿ ನಿಧನರಾದರು. ಮೃತರಿಗೆ ಕೇವಲ ೫೭ ವರ್ಷವಯಸ್ಸಾಗಿತ್ತು. [Jun 23 2010, Rons Bantwal. Mangalore: Former Mumbai Karnataka Sangh President Jayaram K Alva Dies at 57]